/newsfirstlive-kannada/media/post_attachments/wp-content/uploads/2025/02/ROHIT.jpg)
T20 ವಿಶ್ವಕಪ್​ ಟೂರ್ನಿಗೆ ಕೌಂಟ್​​ಡೌನ್​​ ಆರಂಭವಾಗಿದೆ. ಅಸಲಿ ಯುದ್ಧಕ್ಕೂ ಮುನ್ನ ಟೀಮ್​ ಇಂಡಿಯಾ ಆನ್​ಫೀಲ್ಡ್​ನಲ್ಲಿ ಕೊನೆಯ ಟಿ20 ಪಂದ್ಯವನ್ನಾಡಿ ಮುಗಿಸಿದೆ. ತವರಿನಲ್ಲಿ ನಡೀತಾ ಇರೋ ಪ್ರತಿಷ್ಟೆಯ ಸಮರದಲ್ಲಿ ಹಾಲಿ ಚಾಂಪಿಯನ್​ ಪಟ್ಟವನ್ನ ಉಳಿಸಿಕೊಳ್ಳೋಕೆ ಮೆನ್​ ಇನ್​ ಬ್ಲ್ಯೂ ಪಡೆ ಆತ್ಮವಿಶ್ವಾಸದಿಂದ ಸಜ್ಜಾಗಿದೆ.
ಆರ್ಷ್​​ದೀಪ್​ ಗೇಮ್ ಚೇಂಜರ್​
ಮಹತ್ವದ ಟೂರ್ನಿಗೆ ಕೆಲವೇ ದಿನಗಳಷ್ಟು ಬಾಕಿ ಉಳಿದಿವೆ. ಟೂರ್ನಿಯ ಬಗ್ಗೆ ಪ್ರಿಡಿಕ್ಷನ್​ಗಳು ಆಫ್​ ದ ಫೀಲ್ಡ್​ನಲ್ಲಿ ಜೋರಾಗಿ ನಡೆದಿವೆ. 2024ರಲ್ಲಿ ಟೀಮ್​ ಇಂಡಿಯಾದ ಸುದೀರ್ಘ ಕೊರಗನ್ನ ನೀಡಿಗಿ ಟ್ರೋಫಿ ಗೆಲ್ಲಿಸಿದ್ದ ನಾಯಕ ರೋಹಿತ್​ ಶರ್ಮಾ ಕೂಡ ಟೂರ್ನಿ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಎಡಗೈ ವೇಗಿ ಆರ್ಷ್​​ದೀಪ್ ಸಿಂಗ್ ಈ ಬಾರಿ ಭಾರತ ತಂಡದ​ ಮ್ಯಾಚ್​ ವಿನ್ನರ್​ ಆಗ್ತಾರೆ ಎಂದಿದ್ದಾರೆ. ಅಭಿಷೇಕ್​ ಶರ್ಮಾ, ಜಸ್​ಪ್ರಿತ್ ಬೂಮ್ರಾ, ಹಾರ್ದಿಕ್​ ಪಾಂಡ್ಯ, ಸೂರ್ಯಕುಮಾರ್​ ಯಾದವ್​ ಎಲ್ಲರನ್ನ ಸೈಡ್​ಲೈನ್​ ಮಾಡಿ ಹಿಟ್​​ಮ್ಯಾನ್​ ಹೀಗೆ ಹೇಳಿರೋದಕ್ಕೆ ಕಾರಣಗಳೂ ಇವೆ.
/filters:format(webp)/newsfirstlive-kannada/media/post_attachments/wp-content/uploads/2024/10/ARSHDEEP-SING.jpg)
ಟಿ20 ಫಾರ್ಮೆಟ್​​ನಲ್ಲಿ ಆರ್ಷ್​​ದೀಪ್​ ಸಿಂಗ್ ವಿಶ್ವ ಕ್ರಿಕೆಟ್​​ನ ಮಾನ್​ಸ್ಟರ್​​ ಜಸ್​​ಪ್ರೀತ್​ ಬೂಮ್ರಾನೇ ಸೈಡ್​ ಹೊಡೆದಿದ್ದಾರೆ. ಟಿ20 ಫಾರ್ಮೆಟ್​ನಲ್ಲಿ ಟೀಮ್​ ಇಂಡಿಯಾ ಪರ ಹೈಯೆಸ್ಟ್​​ ವಿಕೆಟ್​ ಟೇಕರ್​​​ ಪಟ್ಟದಲ್ಲಿ ಆರ್ಷ್​​ದೀಪ್​ ಸಿಂಗ್​ ಮೆರೆದಾಡ್ತಿದ್ದಾರೆ. ವೇಗವಾಗಿ 100 ವಿಕೆಟ್​ ಕಬಳಿಸಿದ ವಿಶ್ವದ ಮೊದಲ ವೇಗಿ ಎಂಬ ಹೆಗ್ಗಳಿಕೆ ಕೂಡ ಆರ್ಷ್​​​ದೀಪ್ ಸಿಂಗ್​. ಆಡಿರೋ 75 ಪಂದ್ಯಗಳಲ್ಲಿ 113 ವಿಕೆಟ್​ ಕಬಳಿಸಿರೋ ಆರ್ಷ್​​​ದೀಪ್​ ಸಿಂಗ್​, ಕನ್ಸಿಸ್ಟೆಂಟ್​​ ಆಟದಿಂದಲೇ ಎದುರಾಳಿಗಳಲ್ಲಿ ನಡುಕ ಹುಟ್ಟಿಸಿದ್ದಾರೆ.
2024ರ ವಿಶ್ವಕಪ್​ ಟೂರ್ನಿಯಲ್ಲಿ ಟೀಮ್​ ಇಂಡಿಯಾ ಟ್ರೋಫಿ ಗೆಲ್ಲೋದ್ರಲ್ಲಿ ಆರ್ಷ್​​ದೀಪ್​ ಸಿಂಗ್​ ಪಾತ್ರ ಮಹತ್ವದ್ದು. ಟೂರ್ನಿಯಲ್ಲಿ ಆಡಿದ 8 ಪಂದ್ಯಗಳಲ್ಲೇ 17 ವಿಕೆಟ್​ ಬೇಟೆಯಾಡಿ ಆರ್ಷ್​​ದೀಪ್​ ಆರ್ಭಟಿಸಿದ್ರು. ಬ್ಯಾಟರ್ಸ್​ಗೆ ಸಖತ್​ ಕಾಟ ಕೊಟ್ಟಿದ್ದ ಪಂಜಾಬ್​ ಪುತ್ತರ್​, ಕೇವಲ 7.16ರ ಎಕಾನಮಿಯಲ್ಲಿ ರನ್​ ಬಿಟ್ಟುಕೊಟ್ಟಿದ್ರು.
ಟಿ20 ಕ್ರಿಕೆಟ್​​ನಲ್ಲಿ ಪವರ್​​ ಪ್ಲೇ ಬ್ಯಾಟ್ಸ್​ಮನ್​ಗಳಿಗೆ ಸ್ವರ್ಗ. ಆದ್ರೆ, ಇದೇ ಪವರ್​​​ ಪ್ಲೇನಲ್ಲಿ ಬ್ಯಾಟ್ಸ್​ಮನ್​ಗಳನ್ನ ಬಗ್ಗಬಡಿಯೋ ಚಾಲಾಕಿ ಆರ್ಷ್​​​ದೀಪ್​ ಸಿಂಗ್​.! ನ್ಯೂ ಬಾಲ್​ ಹಿಡಿದು ದಾಳಿಗಿಳಿಯೋ ಆರ್ಷ್​​ದೀಪ್​ ಸಿಂಗ್​ ಪವರ್​​ ಪ್ಲೇನಲ್ಲೇ ಎದುರಾಳಿಗಳಿಗೆ ಪವರ್​ಫುಲ್​ ಪಂಚ್​ ಕೊಡ್ತಾರೆ. ಪವರ್​​ ಪ್ಲೇನಲ್ಲಿ ಅತಿ ಹೆಚ್ಚು ವಿಕೆಟ್​ ಬೇಟೆಯಾಡಿದ ದಾಖಲೆ ಹೊಂದಿರೋ ಆರ್ಷ್​ದೀಪ್​ ಒಟ್ಟು 43 ವಿಕೆಟ್​ ಉರುಳಿಸಿದ್ದಾರೆ.
ಆರಂಭಿಕ ಓವರ್​​​ಗಳಲ್ಲಿ ಮಾತ್ರವಲ್ಲ.. ಡೆತ್​ ಓವರ್​ಗಳಲ್ಲೂ ಆರ್ಷ್​​ದೀಪ್​ ಸಿಂಗ್ ಅದೇ ಜೋಷ್​​ನಲ್ಲಿ ಬೌಲಿಂಗ್​ ಮಾಡ್ತಾರೆ. ಆರ್ಷ್​​ದೀಪ್​ ಅಕ್ಯುರೇಟ್​​ ಬೌಲಿಂಗ್​ ಎದುರಾಳಿಗಳ ಒತ್ತಡವನ್ನ ಮತ್ತಷ್ಟು ಹೆಚ್ಚಿಸಿದೆ. 16ರಿಂದ 20ರವರೆಗಿನ ಓವರ್​ಗಳಲ್ಲಿ ರನ್​ಗಳಿಕೆಗೆ ಕಡಿವಾಣ ಹಾಕಿರೋ ಆರ್ಷ್​​ದೀಪ್​ 48 ವಿಕೆಟ್​ ಉರುಳಿಸಿದ್ದಾರೆ.
ಆರ್ಷ್​​​ದೀಪ್​ ಸಿಂಗ್​ ಟಿ20 ಫಾರ್ಮೆಟ್​ನಲ್ಲಿ ಅತಿ ಹೆಚ್ಚು ಸಕ್ಸಸ್​​​ ಕಂಡಿರೋದಕ್ಕೆ ಎಡಗೈ ಬೌಲಿಂಗ್​ ಪ್ರಮುಖ ಕಾರಣ. ಇದೇ ಆರ್ಷ್​​​ದೀಪ್​ಗೆ ಅಡ್ವಾಂಟೇಜ್​ ಆಗಿರೋದು.! ಅದ್ರಲ್ಲೂ ಮುಖ್ಯವಾಗಿ ಎಡಗೈ ಬ್ಯಾಟ್ಸ್​ಮನ್​ಗಳ ಎದುರು ಆರ್ಷ್​​ದೀಪ್ ಮತ್ತಷ್ಟು ಎಫೆಕ್ಟಿವ್​ ಆಗಿ ಬೌಲಿಂಗ್​ ಮಾಡಿದ್ದಾರೆ. 13.36ರ ಎವರೇಜ್​ನಲ್ಲಿ ವಿಕೆಟ್​ ಉರುಳಿಸಿದ್ದಾರೆ. ಈ ಎಲ್ಲಾ ಕಾರಣದಿಂದಲೇ ರೋಹಿತ್​ ಶರ್ಮಾ, ಆರ್ಷ್​​ದೀಪ್​ ಮ್ಯಾಚ್​ ವಿನ್ನರ್​​ ಆಗ್ತಾರೆ ಎಂದು ಭವಿಷ್ಯ ನುಡಿದಿರೋದು. ಹಿಟ್​ಮ್ಯಾನ್​ ಭವಿಷ್ಯ ನಿಜವಾಗುತ್ತಾ.? ಕಾದು ನೋಡೋಣ.
ಇದನ್ನೂ ಓದಿ: ಒರಾಕಲ್ ಕಂಪನಿಯಲ್ಲಿ 20-30 ಸಾವಿರ ಉದ್ಯೋಗಿಗಳಿಗೆ ಲೇ ಆಫ್ : ಮುಂದುವರಿದ ಟೆಕ್ ಕಂಪನಿಗಳ ಲೇ ಆಫ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us