/newsfirstlive-kannada/media/media_files/2025/09/04/rohit-sharma-1-2025-09-04-19-41-47.jpg)
ಕಳೆದೊಂದು ತಿಂಗಳಿಂದ ರೋಹಿತ್ ಶರ್ಮಾ ಭವಿಷ್ಯದ ಚರ್ಚೆ ಜೋರಾಗಿ ನಡೆದಿತ್ತು. ಬಿಸಿಸಿಐ ಸೈಡ್ಲೈನ್ ಮಾಡೋ ಪ್ಲಾನ್ ಮಾಡ್ತಿದ್ರೆ, ನಾನು ವಿಶ್ವಕಪ್ ಆಡಿಯೇ ರಿಟೈರ್ ಆಗೋದು ಅಂತಾ ರೋಹಿತ್ ಸವಾಲ್ ಎಸೆದಿದ್ದಾರೆ. ಫಿಟ್ನೆಸ್ ಬಗ್ಗೆ ಪ್ರಶ್ನೆ ಮಾಡಿವರಿಗೆ ಅಗ್ನಿಪರೀಕ್ಷೆ ಗೆದ್ದು ಆನ್ಸರ್ ಕೊಟ್ಟಿದ್ದಾರೆ. ಫುಲ್ ಸ್ಲಿಮ್ ಅಂಡ್ ಟ್ರಿಮ್ ಆಗಿ ಎಲ್ಲರ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ:EVM ಬೇಡ, ಬ್ಯಾಲೆಟ್ ಪೇಪರ್ಗೆ ಆದ್ಯತೆ ನೀಡಿ - ಚುನಾವಣಾ ಆಯೋಗಕ್ಕೆ ಸರ್ಕಾರ ಶಿಫಾರಸು
ಫಿಟ್ನೆಸ್ ಬಗ್ಗೆ ಪ್ರಶ್ನೆ ಮಾಡಿವರಿಗೆಲ್ಲಾ ಟೀಮ್ ಇಂಡಿಯಾ ಒಡಿಐ ಕ್ಯಾಪ್ಟನ್ ರೋಹಿತ್ ಶರ್ಮಾ ಮುಟ್ಟಿ ನೋಡಿಕೊಳ್ಳುವಂತಾ ಆನ್ಸರ್ ಕೊಟ್ಟಿದ್ದಾರೆ. ಸ್ಲಿಮ್ ಅಂಡ್ ಟ್ರಿಮ್ ರೋಹಿತ್ ಶರ್ಮಾ ಕಂಡು ಫ್ಯಾನ್ಸ್ ಬಾಯ ಮೇಲೆ ಬೆರಳಿಟ್ಟಿದ್ದಾರೆ. ದೇಹದ ತೂಕದ ಕಾರಣಕ್ಕೆ ಅಂದು ಟ್ರೋಲ್ ಮಾಡಿದ್ದವರೆಲ್ಲಾ ಇಂದು ಹಾಡಿ ಹೊಗಳ್ತಿದ್ದಾರೆ. ಫಿಟ್ನೆಸ್ ಮಾನದಂಡವನ್ನಿಟ್ಟುಕೊಂಡು ರೋಹಿತ್ಗೆ ಕೊಕ್ ಕೊಡೋ ಲೆಕ್ಕಾಚಾರದಲ್ಲಿದ್ದ ಬಿಸಿಸಿಐ ಇದೀಗ ಪೇಚಿಗೆ ಸಿಲುಕಿದೆ.
5 ನಿಮಿಷದಲ್ಲಿ ಟೆಸ್ಟ್ ಪಾಸ್
ವಿಶ್ವಕಪ್ ಆಡೋ ಕನಸು ಕಾಣ್ತಿರೋ ರೋಹಿತ್ ಪಾಲಿಗೆ ಹೊಸದಾಗಿ ಪರಿಚಯಿಸಿರೋ ಬ್ರೊನ್ಕೋ ಟೆಸ್ಟ್ ಪಾಸ್ ಮಾಡೋ ಸವಾಲು ಎದುರಾಗಿತ್ತು. 2 ದಿನಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ರೋಹಿತ್ ಶರ್ಮಾ ಕಠಿಣ ಟೆಸ್ಟ್ನ ಸುಲಭಕ್ಕೆ ಪಾಸ್ ಮಾಡಿದ್ದಾರೆ. 1200 ಮೀಟರ್ ಶಟಲ್ನ ರನ್ನ ಕೇವಲ 5 ನಿಮಿಷದಲ್ಲಿ ಮುಗಿಸಿ ಟೆಸ್ಟ್ ಪಾಸ್ ಮಾಡಿದ್ದಾರೆ. ರೋಹಿತ್ ಈ ಟೆಸ್ಟ್ ಪಾಸಾಗಲ್ಲ ಎಂದಿದ್ದವರಿಗೆಲ್ಲಾ ಖಡಕ್ ಆನ್ಸರ್ ಕೊಟ್ಟಿದ್ದಾರೆ.
ಒಂದು ತಿಂಗಳಲ್ಲಿ 20 KG ತೂಕ ಇಳಿಸಿದ ರೋಹಿತ್
ರೋಹಿತ್ ಶರ್ಮಾ ಈ ಟೆಸ್ಟ್ನ ಪಾಸ್ ಮಾಡಿರೋದ್ರ ಹಿಂದೆ ಕಠಿಣ ಶ್ರಮವಿದೆ. ಶತಯಗತಾಯ ಏಕದಿನ ವಿಶ್ವಕಪ್ ಆಡೋಕೆ ಪಣ ತೊಟ್ಟಿರುವ ರೋಹಿತ್, ಮಹದಾಸೆಯನ್ನ ಈಡೇರೆಸಿಕೊಳ್ಳಲು ಪಡ್ತಿರೋ ಪರಿಶ್ರಮ ಅಷ್ಟಿಷ್ಟಲ್ಲ. ಫಿಟ್ನೆಸ್ ಕಾರಣ ನೀಡಿ ಬಿಸಿಸಿಐ ಸೈಡ್ಲೈನ್ ಮಾಡೋಕೆ ನೋಡಿದ್ರೆ, ಬಾಸ್ಗಳಿಗೆ ಸವಾಲು ಹಾಕಿರೋ ರೋಹಿತ್ ಬರೋಬ್ಬರಿ 20 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ. ಐಪಿಎಲ್ ಅಂತ್ಯದ ವೇಳೆ 95 ಕೆಜಿ ಇದ್ದ ದೇಹದ ತೂಕವನ್ನ ಈಗ ರೋಹಿತ್ 75 ಕೆಜಿಗೆ ಇಳಿಸಿದ್ದಾರೆ. ಒಂದು ತಿಂಗಳದಲ್ಲಿ ಅಂತರದಲ್ಲಿ ಮಾಡಿರೋ ಸಾಧನೆಯಿದು.
ಇದನ್ನೂ ಓದಿ:ಧೋನಿ vs ಶಾರುಖ್ ಖಾನ್! ಕೊನೆಯಲ್ಲಿ ಗೆದ್ದಿದ್ದು ತಲಾ..!
/filters:format(webp)/newsfirstlive-kannada/media/media_files/2025/08/07/virat-kohli-rohit-sharma-1-2025-08-07-18-25-55.jpg)
ದಿನಕ್ಕೆ 4 ಗಂಟೆ ಜಿಮ್ನಲ್ಲಿ ವರ್ಕೌಟ್
ಐಪಿಎಲ್ ಅಂತ್ಯದ ಬಳಿಕ ರಿಲ್ಯಾಕ್ಸ್ ಮೂಡ್ಗೆ ಜಾರಿದ್ದ ರೋಹಿತ್ ಶರ್ಮಾ ವಿದೇಶಕ್ಕೆ ಹಾರಿದ್ರು. ಕುಟುಂಬದ ಜೊತೆಗೆ ಜಾಲಿ ಟ್ರಿಪ್ ಮುಗಿಸಿ ಬರೋದ್ರೋಳಗೆ ರೋಹಿತ್ಗೆ ಏಕದಿನದಿಂದ ಕೊಕ್ ಕೊಡೋ ಚರ್ಚೆ ನಡೆದಿತ್ತು. ಆಗಲೇ ಎಚ್ಚೆತ್ತು ಕೊಂಡ ಹಿಟ್ಮ್ಯಾನ್, ಗೆಳೆಯ ಅಭಿಷೇಕ್ ನಾಯರ್ ಗರಡಿಗೆ ತೆರಳಿದ್ರು. ಅಭಿಷೇಕ್ ನಾಯರ್ ಮಾರ್ಗದರ್ಶನದಲ್ಲಿ ಸಿದ್ಧತೆ ಆರಂಭಿಸಿದ ರೋಹಿತ್ ಫಿಟ್ನೆಸ್ ಮೇಲೆ ಹೆಚ್ಚು ಫೋಕಸ್ ಮಾಡಿದ್ರು. ದೇಹದ ತೂಕ ಇಳಿಸಿಕೊಳ್ಳೋಕೆ ಪ್ರತಿನಿತ್ಯ 4 ಗಂಟೆಗಳ ಕಠಿಣ ವರ್ಕೌಟ್ ಮಾಡಿ ಬೆವರಿಳಿಸಿದ್ರು.
ನೋ ಕಾಂಪ್ರಮೈಸ್.. ಕಟ್ಟುನಿಟ್ಟಿನ ಡಯಟ್
ಕೇವಲ ವರ್ಕೌಟ್ ಮಾತ್ರವಲ್ಲ.. ಕಠಿಣ ಡಯಟ್ ಕೂಡ ರೋಹಿತ್ ಮಾಡಿದ್ರು. ರೋಹಿತ್ ಶರ್ಮಾ ಒಬ್ಬ ಫೂಡಿ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರವೇ. ತೂಕ ಇಳಿಸಿಕೊಳ್ಳೋ ಈ ಪ್ರಯತ್ನದಲ್ಲಿ ರೋಹಿತ್ ಕಾಂಪ್ರಮೈಸ್ ಆಗಲೇ ಇಲ್ಲ. ತನ್ನಿಷ್ಟ ಆಹಾರಗಳಿಗೆ ಬ್ರೇಕ್ ಹಾಕಿದ್ರು. ಕಳೆದೊಂದು ತಿಂಗಳ ಕಠಿಣ ಡಯಟ್ ಫಾಲೋ ಮಾಡ್ತಿರೋ ಹಿಟ್ಮ್ಯಾನ್, ದಾಲ್ ಚಾವಲ್, ವಡಾ ಪಾವ್, ಬಟರ್ ಚಿಕನ್, ಸೀ ಫುಡ್ ಕರೀಸ್, ಬಿರಿಯಾನಿ, ಕ್ಯಾಲೋರಿ ಹೆಚ್ಚಿರೋ ಮಿಲ್ಸ್ ಹಾಗೂ ಫ್ರೈಡ್ ಸ್ನಾಕ್ಸ್ಗಳ ಸೇವನೆ ಬಿಟ್ಟಿದ್ದಾರೆ.
ಇದನ್ನೂ ಓದಿ:ಕ್ಯಾಪ್ಟನ್ ಕೌರ್ ಹಿಂದಿಕ್ಕಿದ ಕನ್ನಡತಿ ಶ್ರೇಯಾಂಕ.. ಸ್ಮೃತಿ ಮಂದಾನ ಬಿಟ್ಟರೆ ಇವರೇ ಯುವರಾಣಿ!
ಕಠಿಣ ಪರಿಶ್ರಮ ಪಟ್ಟ ರೋಹಿತ್ ಶರ್ಮಾ ಸ್ಲಿಮ್ ಅಂಡ್ ಟ್ರಿಮ್ ಆಗಿದ್ದಲ್ಲದೇ ಫಿಟ್ನೆಸ್ ಅಗ್ನಿಪರೀಕ್ಷೆಯನ್ನೂ ಗೆದ್ದಿದ್ದಾರೆ. ಸದ್ಯಕ್ಕೆ ಮುಂಬರೋ ಆಸ್ಟ್ರೇಲಿಯಾ ಟೂರ್ನಲ್ಲಿ ಆಡೋದಕ್ಕೆ ಲೈನ್ ಕ್ಲೀಯರ್ ಆಗಿದೆ. 2027 ಒನ್ ಡೇ ವಿಶ್ವಕಪ್ ಆಡಬೇಕಂದ್ರೆ ಅಲ್ಲಿಯವರೆಗೂ ಫಿಟ್ನೆಸ್ ವಿಚಾರದಲ್ಲಿ ರೋಹಿತ್ ಎಚ್ಚರಿಕೆಯಿಂದ ಇರಬೇಕಿದೆ.
ಇದನ್ನೂ ಓದಿ:ಬಿಗ್ಬಾಸ್ಗೆ ಮತ್ತೆ ಹೋಗ್ತಾರಂತೆ ರಾಕೇಶ್ ಅಡಿಗ..! VIDEO
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ