/newsfirstlive-kannada/media/media_files/2025/10/25/rohit-sharma-3-2025-10-25-15-26-45.jpg)
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯನ್ನು ಭಾರತ 2-1 ಅಂತರದಿಂದ ಸೋತಿದೆ. ಈ ಸರಣಿಯಲ್ಲಿ ರೋಹಿತ್ ಶರ್ಮಾ ( Rohit Sharma), ಅದ್ಭುತವಾಗಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇದಕ್ಕಾಗಿ ರೋಹಿತ್ ಶರ್ಮಾ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ರೋಹಿತ್ ಶರ್ಮಾ ಟೆಸ್ಟ್ ಮತ್ತು ಟಿ 20 ಅಂತರರಾಷ್ಟ್ರೀಯ ಪಂದ್ಯಗಳಿಂದ ನಿವೃತ್ತರಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೂ ಮೊದಲು, ಹಿಟ್‌ಮ್ಯಾನ್ ಏಕದಿನ ಪಂದ್ಯಗಳಿಂದಲೂ ನಿವೃತ್ತಿ ಹೊಂದುವ ವರದಿಗಳು ಬಂದವು. ಇದೀಗ ರೋಹಿತ್ ಪ್ರದರ್ಶನ ವಿಮರ್ಶಕರ ಮೌನಗೊಳಿಸಿದೆ.
/filters:format(webp)/newsfirstlive-kannada/media/media_files/2025/10/26/kohli_rohit_aus-2025-10-26-12-39-16.jpg)
ರೋಹಿತ್ ಶರ್ಮಾ ನಿವೃತ್ತಿ ಯಾವಾಗ?
ರೋಹಿತ್ ಶರ್ಮಾ ಅವರ ಬಾಲ್ಯದ ತರಬೇತುದಾರ ದಿನೇಶ್ ಲಾಡ್, ಹಿಟ್‌ಮ್ಯಾನ್ ನಿವೃತ್ತಿಯ ಬಗ್ಗೆ ಮಾತನ್ನಾಡಿದ್ದಾರೆ. ಸಿಡ್ನಿ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಇನ್ನಿಂಗ್ಸ್ ನೆನಪಿಸಿಕೊಂಡ ಲಾಡ್, ‘ರೋಹಿತ್ ಟೀಮ್ ಇಂಡಿಯಾವನ್ನು ಗೆಲುವಿನತ್ತ ಕೊಂಡೊಯ್ಯೋದನ್ನ ನೋಡಿ ತುಂಬಾ ಸಂತೋಷ ಆಯಿತು. ರೋಹಿತ್ 2027ರ ಏಕದಿನ ವಿಶ್ವಕಪ್ ಆಡುವ ನಿರ್ಧಾರ ತೆಗೆದುಕೊಂಡಿದ್ದಾರೆ. ಆ ನಂತರವೇ ನಿವೃತ್ತಿ ಹೊಂದುತ್ತಾರೆ ಎಂದು ಲಾಡ್ ಹೇಳಿದ್ದಾರೆ.
/filters:format(webp)/newsfirstlive-kannada/media/media_files/2025/10/24/rohit_sharma_aus-2025-10-24-15-24-11.jpg)
ಸಚಿನ್ ಮಾತು ನಿಜವಾಯಿತು..
ರೋಹಿತ್ ಶರ್ಮಾರ ಬಾಲ್ಯದ ತರಬೇತುದಾರ ಕೊಹ್ಲಿಯನ್ನು ಹೊಗಳಿದರು. ಕೊಹ್ಲಿ ಯಾವುದೇ ಪರಿಸ್ಥಿತಿಯಲ್ಲಿಯೂ ಯಶಸ್ವಿಯಾಗಬಲ್ಲ ಆಟಗಾರ. ಅವರ ಆಟವನ್ನು ನೋಡಿ ಖುಷಿ ಆಯಿತು. ರೋಹಿತ್ ಮತ್ತು ವಿರಾಟ್ ಭವಿಷ್ಯದಲ್ಲಿ ಅವರ ದಾಖಲೆಗಳನ್ನು ಮುರಿಯುತ್ತಾರೆ ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದರು. ಇದು ನಿಜವೆಂದು ಸಾಬೀತಾಗುತ್ತಿದೆ ಎಂದು ದಿನೇಶ್ ಲಾಡ್ ಹೇಳಿದರು.
ಆಸ್ಟ್ರೇಲಿಯಾ ವಿರುದ್ಧದ ಮೊದಲ ಎರಡು ಏಕದಿನ ಪಂದ್ಯಗಳಲ್ಲಿ ಭಾರತ ಸೋತಿತು. ಮೂರನೇ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ಕೊಹ್ಲಿ ಪಂದ್ಯ ಗೆಲ್ಲುವ ಇನ್ನಿಂಗ್ಸ್ ಆಡಿದರು. ರೋಹಿತ್ 125 ಎಸೆತಗಳಲ್ಲಿ ಅಜೇಯ 121 ರನ್ ಗಳಿಸಿದರು.
ಇದನ್ನೂ ಓದಿ:ODI ಸರಣಿ ಸೋಲಿಗೆ ಕಾರಣ ಗಿಲ್​.. ಅಸಲಿ ಸತ್ಯ ಇಲ್ಲಿದೆ..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us