/newsfirstlive-kannada/media/media_files/2025/12/17/cameron-green-2025-12-17-11-29-49.jpg)
ಐಪಿಎಲ್.. ಇದು ಇಂಡಿಯನ್ ಪೈಸಾ ಲೀಗ್. ಇಲ್ಲಿ ಲಕ್ಷಕ್ಕೆ ಬೆಲೆನೇ ಇಲ್ಲ.. ಇಲ್ಲೇನಿದ್ರೂ ಕೋಟಿ ಕೋಟಿಯದ್ದೇ ಮಾತು. ಇದು ಆಸ್ಟ್ರೇಲಿಯಾ ತಂಡದ ಯುವ ಆಲ್​ರೌಂಡರ್ ಕ್ಯಾಮರೂನ್ ಗ್ರೀನ್ ವಿಚಾರದಲ್ಲೂ ಪ್ರೂವ್ ಆಗಿದೆ. ಗ್ರೀನ್ ಖರೀದಿಸಲು ನಾ ಮುಂದು ತಾ ಮುಂದು ಅಂತ ಹರಾಜಿನಲ್ಲಿ ಜಿದ್ದಿಗೆ ಬಿದ್ದಿದ್ದ ಫ್ರಾಂಚೈಸಿಗಳು ಕೋಟಿ ಕೋಟಿ ಹಣ ಖರ್ಚು ಮಾಡಲು ಮುಂದಾಗಿತ್ತು. ಕೊನೆಗೆ ಗ್ರೀನ್ 25.20 ಕೋಟಿ ರೂಪಾಯಿಗೆ ಕಿಂಗ್ ಖಾನ್ ಮಾಲಿಕತ್ವದ ಕೊಲ್ಕತ್ತಾ ನೈಟ್​ರೈಡರ್ಸ್​ ಪಾಲಾದ್ರು.
ಮಿನಿ ಹರಾಜಿಗೂ ಮುನ್ನ ಆಸಿಸ್ ಆಲ್​ರೌಂಡರ್ ಕ್ಯಾಮರೂನ್ ಗ್ರೀನ್​​ಗೆ ಸಿಕ್ಕಾಪಟ್ಟೆ ಸೌಂಡ್ ಮಾಡಿದ್ರು. ಭಾರೀ ಡಿಮ್ಯಾಂಡ್ ಕ್ರಿಯೇಟ್ ಮಾಡಿದ್ದ ಗ್ರೀನ್ ಮೇಲೆ ಎಲ್ಲಾ ಫ್ರಾಂಚೈಸಿಗಳ ಕಣ್ಣಿತ್ತು. ಅದ್ರಲ್ಲೂ ಪ್ರಮುಖವಾಗಿ ಕೊಲ್ಕತ್ತಾ ನೈಟ್​ರೈಡರ್ಸ್​​ ಪರ್ಸ್​​ನಲ್ಲಿ 64.30 ಕೋಟಿ ರೂಪಾಯಿ ಬ್ಯಾಲೆನ್ಸ್ ಇದ್ದಿದ್ದರಿಂದ​ ಗ್ರೀನ್​ನ​​ ಖರೀಸಲೇಬೇಕು ಅಂತ ಪಣತೊಟ್ಟಿತ್ತು. ಅಂದುಕೊಂಡಂತೆ ಕೆಕೆಆರ್​ ಗ್ರೀನ್​​​ನ ಸಕ್ಸಸ್​​​ಫುಲ್ ಬಿಡ್​​ ಮಾಡಿತು. ​​
ಇದನ್ನೂ ಓದಿ:ರಜತ್ ಪಾಟಿದಾರ್​ ಆಪ್ತ ಗೆಳೆಯ.. RCB ಖರೀದಿಸಿದ ​ಮಂಗೇಶ್ ಯಾದವ್ ಯಾರು?
/filters:format(webp)/newsfirstlive-kannada/media/media_files/2025/12/16/green-2025-12-16-15-24-29.jpg)
ಕೊಲ್ಕತ್ತಾ ನೈಟ್​ರೈಡರ್ಸ್​ ತಂಡದ ಮಿನಿ ಹರಾಜಿಗೂ ಮುನ್ನ, ವೆಸ್ಟ್ ಇಂಡೀಸ್​​ನ ಸ್ಟಾರ್ ಆಲ್​ರೌಂಡರ್ ಌಂಡ್ರೆ ರಸನ್​ರನ್ನ ತಂಡದಿಂದ ರಿಲೀಸ್ ಮಾಡಿತ್ತು. ಕಳೆದ ಐಪಿಎಲ್ ಸೀಸನ್​​ನಲ್ಲಿ ರಸೆಲ್, ಬ್ಯಾಡ್ ಪರ್ಫಾಮೆನ್ಸ್ ನೀಡಿದ್ರು. ಈ ಬಾರಿ ಪವರ್ ಹಿಟ್ಟರ್ ರಸಲ್​ರನ್ನ ಕೆಕೆಆರ್​​, ರೀಟೇನ್ ಮಾಡಿಕೊಳ್ಳಲಿಲ್ಲ. ರಸೆಲ್ ಸ್ಥಾನಕ್ಕೆ ಮತ್ತೊಬ್ಬ ಆಟಗಾರನನ್ನ ಹುಡುಕುತ್ತಿದ್ದ ಕೆಕೆಆರ್​ಗೆ ಯುವ ಆಲ್​ರವಂಡರ್ ಕ್ಯಾಮ್ ಗ್ರೀನ್ ಸಿಕ್ಕಿದ್ರು. ​
ಗ್ರೀನ್ ಐಪಿಎಲ್ ಸೀಸನ್-19 ಮಿನಿ ಹರಾಜಿನಲ್ಲಿ ದಾಖಲೆಯ ಮೊತ್ತಕ್ಕೆ ಸೇಲ್ ಆಗಿದ್ದಾರೆ. 25.20 ಕೋಟಿಗೆ ಮಾರಾಟವಾಗಿರುವ ಗ್ರೀನ್ ತಮ್ಮದೇ ದೇಶದ ಆಟಗಾರನ ದಾಖಲೆಯನ್ನ ಬ್ರೇಕ್ ಮಾಡಿದ್ದಾರೆ. 2024ರಲ್ಲಿ ಎಡಗೈ ವೇಗಿ ಮಿಚ್ಚೆಲ್ ಸ್ಟಾರ್ಕ್ 24.75 ಕೋಟಿ ರೂಪಾಯಿಗೆ ಕೊಲ್ಕತ್ತಾ ನೈಟ್​ರೈಡರ್ಸ್​ ತಂಡದ ಪಾಲಾಗಿದ್ರು. ಅದೇ ವರ್ಷ ಪ್ಯಾಟ್ ಕಮ್ಮಿನ್ಸ್ 20.50 ಕೋಟಿ ರೂಪಾಯಿಗೆ ಸನ್​ರೈಸರ್ಸ್ ಹೈದ್ರಾಬಾದ್ ತಂಡಕ್ಕೆ ಸೇಲಾಗಿದ್ರು. ಆದ್ರೀಗ ಗ್ರೀನ್ ಇಬ್ಬರನ್ನೂ ಸೈಡ್ ಹೊಡೆದಿದ್ದಾರೆ.
ಇದನ್ನೂ ಓದಿ: ಇದೇ ಆರ್​ಸಿಬಿ ದೊಡ್ಡ ಗುಣ.. ತಂಡಕ್ಕೆ ಕೆಲಸ ಮಾಡಿದ ಹುಡುಗನ ಬಿಟ್ಟುಕೊಡಲಿಲ್ಲ..!
ಆಸಿಸ್ ಯುವ ಆಲ್​ರೌಂಡರ್​​​ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇತ್ತು ಅನ್ನೋದು ಹರಾಜಿನಲ್ಲಿ ಕಂಡುಬಂತ್ತು. ಮುಂಬೈ ಇಂಡಿಯನ್ಸ್ ಬಿಡ್ ಆರಂಭಿಸಿದ್ದೇ ತಡ ರಾಜಸ್ಥಾನ್ ರಾಯಲ್ಸ್ ಮತ್ತು ಕೊಲ್ಕತ್ತಾ ನೈಟ್​ರೈಡರ್ಸ್​ ಗ್ರೀನ್ ಖರೀದಿಗೆ, ಪೈಪೋಟಿ ಮೇಲೆ ಪೈಪೋಟಿ ನಡೆಸಿತ್ತು. ರಾಜಸ್ಥಾನ್ ರಾಯಲ್ಸ್​ ಬಿಡ್​ನಿಂದ ಹೊರ ಹೋದ ಬಳಿಕ, ಚೆನ್ನೈ ಸೂಪರ್​ಕಿಂಗ್ಸ್ ಗ್ರೀನ್ ಖರೀದಿಗೆ ಎಂಟ್ರಿ ನೀಡಿತ್ತು. ಕೊನೆಗೆ ಪಟ್ಟುಬಿಡದ ಕೆಕೆಆರ್, ಆಸಿಸ್​​ ಆಲ್​ರೌಂಡರ್​​ನನ್ನ ಖರೀದಿಸಲು ಯಶಸ್ವಿಯಾಯ್ತು.
ಕ್ಯಾಮರೂನ್ ಗ್ರೀನ್​​ಗೆ ಸಿಕ್ಕಾಪಟ್ಟೆ ಬೇಡಿಕೆಗೆ ಕಾರಣ ಇದೆ. ಮೊದಲಿಗೆ ಗ್ರೀನ್ 26 ವರ್ಷದ ಯುವ ಕ್ರಿಕೆಟಿಗ. ಟಿ-20 ಕ್ರಿಕೆಟ್​​ ಯಂಗ್​ಸ್ಟರ್ಸ್​ ಗೇಮ್ ಆಗಿರೋದ್ರಿಂದ ಗ್ರೀನ್ ಈ ಫಾರ್ಮೆಟ್​​​ಗೆ ಪರ್ಫೆಕ್ಟ್ ಆಗಿ ಸೂಟ್ ಆಗ್ತಾರೆ. ಗ್ರೀನ್ ಟಿ-20 ಕ್ರಿಕೆಟ್​​ನಲ್ಲಿ 160ಕ್ಕಿಂತ ಹೆಚ್ಚು ಬ್ಯಾಟಿಂಗ್ ಸ್ಟ್ರೈಕ್​ರೇಟ್ ಹೊಂದಿದ್ದಾರೆ. ಪವರ್​ ಪ್ಲೇ ಮತ್ತು ಡೆಥ್ ಓವರ್​ಗಳಲ್ಲಿ ಗ್ರೀನ್ ಡಿಸ್ಟ್ರಕ್ಟೀವ್ ಬ್ಯಾಟ್ಸ್​ಮನ್. ಗ್ರೀನ್ 4 ಓವರ್ ಬೌಲ್ ಮಾಡಬಲ್ಲ ಬೌಲರ್. ಜೊತೆಗೆ ಅದ್ಭುತ ಫೀಲ್ಡರ್​​ ಕೂಡ ಆಗಿರುವ ಗ್ರೀನ್, ಥ್ರಿ ಡೈಮ್ಶೆನಲ್ ಪ್ಲೇಯರ್. ಹಾಗಾಗಿ ಗ್ರೀನ್​ಗೆ ಫುಲ್ ಡಿಮ್ಯಾಂಡ್ ಕ್ರಿಯೇಟ್ ಆಗಿದ್ದು.
ಇದನ್ನೂ ಓದಿ: ಬಲಿಷ್ಠ ತಂಡ ಕಟ್ಟಿದ RCB ಫ್ರಾಂಚೈಸಿ.. ತಂಡದ ಆಟಗಾರರ ಸಂಪೂರ್ಣ ಲಿಸ್ಟ್​..!
ಕೆಕೆಆರ್ ಮುಂಬರುವ ಐಪಿಎಲ್​​ನಲ್ಲಿ ಪವರ್​ಹಿಟ್ಟರ್ ಌಂಡ್ರೆ ರಸಲ್​ರನ್ನ ಮಿಸ್ ಮಾಡಿಕೊಳ್ಳೋದಿಲ್ಲ. ರಸಲ್ ಸ್ಥಾನವನ್ನ ತುಂಬಲು ನೈಟ್​ರೈಡರ್ಸ್​ ತಂಡಕ್ಕೆ ಎಂಟ್ರಿ ಕೊಟ್ಟಿರೋ ಗ್ರೀನ್, ರಸಲ್​ರಂತೆ ಅಭಿಮಾನಿಗಳನ್ನ ರಂಜಿಸಲು ಮುಂದಾಗಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us