ದಕ್ಷಿಣ ಆಫ್ರಿಕಾದಲ್ಲೂ ಶೈನ್.. 14 ವರ್ಷದ ಸೂರ್ಯವಂಶಿ ಆರ್ಭಟಕ್ಕೆ ವಿಶ್ವವೇ ಸಲಾಂ..!

ಅಂಡರ್ 19 ತಂಡದ ನಾಯಕ ವೈಭವ್ ಸೂರ್ಯವಂಶಿ ಆರ್ಭಟಕ್ಕೆ ದಾಖಲೆಗಳು ಪೀಸ್ ಪೀಸ್ ಆಗ್ತಿವೆ. ಈ ಹಿಂದೆ ಇಂಗ್ಲೆಂಡ್ ಆಸ್ಟ್ರೇಲಿಯಾದಲ್ಲಿ ದರ್ಬಾರ್ ನಡೆಸಿದ್ದ ವೈಭವ್, ಇದೀಗ ಸೌತ್ ಆಫ್ರಿಕಾದಲ್ಲೂ ಶೈನ್ ಆಗ್ತಿದ್ದಾರೆ. 14 ವರ್ಷದ ಸೂರ್ಯವಂಶಿ ಆರ್ಭಟಕ್ಕೆ ಇಡೀ ವಿಶ್ವವೇ ಸಲಾಂ ಹೊಡೆತಿದೆ.

author-image
Ganesh Kerekuli
Viabhav Suryavamshi
Advertisment
  • ವಿಜಯ್​ ಹಜಾರೆಯಲ್ಲಿ ವೈಭವ್ ಆರ್ಭಟ​..!
  • ಬೌಂಡರಿ ಸಿಕ್ಸರ್​ಗಳ ಸುರಿಮಳೆ, ವೈಭವ್​ ಸ್ಫೋಟ​..!
  • ಇಂಗ್ಲೆಂಡ್, ಆಸಿಸ್​​​​​​ನಲ್ಲೂ ಸೂರ್ಯವಂಶಿ ಶೈನಿಂಗ್..!

ವೈಭವ್​ ಸೂರ್ಯವಂಶಿ.. ಈ ಯಂಗ್ ಸೆನ್ಸೇಷನ್​ನತ್ತ ವಿಶ್ವ ಕ್ರಿಕೆಟ್​ ಜಗತ್ತು ಮತ್ತೆ ಮತ್ತೆ ತಿರುಗಿ ನೋಡ್ತಿದೆ. ವೈಭವ್​ ಸೂರ್ಯವಂಶಿಯ ಆರ್ಭಟಕ್ಕೆ ದಿಗ್ಗಜರೇ ಶಾಕ್​ ಆಗಿದ್ದಾರೆ. ಈತನ ಅಬ್ಬರದ ಬ್ಯಾಟಿಂಗ್​ಗೆ ಕ್ರಿಕೆಟ್ ಅಭಿಮಾನಿಗಳು ಫಿದಾ ಆಗಿದ್ದಾರೆ. ಕಳೆದ ವರ್ಷ ಭಾರತೀಯ ಕ್ರಿಕೆಟ್​ನಲ್ಲಿ ವೈಭವ್ ಮೇನಿಯಾ ಆಗಿತ್ತು. ಇದೀಗ ಹೊಸ ವರ್ಷದಲ್ಲೂ ಸೂರ್ಯವಂಶಿ ಶೈನ್ ಆಗ್ತಿದ್ದಾರೆ.

ಆಫ್ರಿಕನ್ನರನ್ನ ಭರ್ಜರಿ ಬೇಟೆಯಾಡಿದ ವೈಭವ್..!

ಸೌತ್ ಆಫ್ರಿಕಾ ಅಂಡರ್​​​​ 19 ವಿರುದ್ಧ ನಡೆಯುತ್ತಿರುವ ಯೂತ್ ಓಡಿಐ ಟೂರ್ನಿಯಲ್ಲಿ, ವೈಭವ್ ಬ್ಯಾಟಿಂಗ್​ನಲ್ಲಿ ಜಬರ್​ದಸ್ತ್ ಪ್ರದರ್ಶನ ನೀಡ್ತಿದ್ದಾರೆ. ಮೊದಲ ಪಂದ್ಯದಲ್ಲಿ ಫೇಲ್ ಆಗಿದ್ದ ವೈಭವ್, 2ನೇ ಏಕದಿನ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ರು. ಇದೀಗ 3ನೇ ಏಕದಿನ ಪಂದ್ಯದಲ್ಲಿ ವೈಭವ್, ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ವೈಭವ್ ಸೂರ್ಯವಂಶಿ ಬ್ಯಾಟಿಂಗ್​ಗೆ ಆಫ್ರಿಕನ್ನರೇ ಮನಸೋತಿದ್ದಾರೆ. 

ಇದನ್ನೂ ಓದಿ: ಇಂದಿನಿಂದ WPL: ಮಂದಾನ vs ಕೌರ್..! ಹೇಗಿದೆ ಬೆಂಗಳೂರು ಸೇನೆ..?

Vaibhav Suryavamshi

ವಿಜಯ್​ ಹಜಾರೆಯಲ್ಲಿ ವೈಭವ್ ಆರ್ಭಟ

ವಿಜಯ್​ ಹಜಾರೆ ಟೂರ್ನಿಯಲ್ಲೂ ವೈಭವ್​ ಸೂರ್ಯವಂಶಿ ಅಬ್ಬರ ನಡೆಸಿದ್ರು. ಅರುಣಾಚಲ ಪ್ರದೇಶ ವಿರುದ್ಧದ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್​​ ನಡೆಸಿದ್ದ ವೈಭವ್​, ಕೇವಲ 36 ಎಸೆತಗಳಲ್ಲಿ ಶತಕ ಪೂರೈಸಿ ಸಂಭ್ರಮಿಸಿದ್ರು. ಈ ಮೂಲಕ ಅತಿ ಚಿಕ್ಕ ವಯಸ್ಸಿಗೆ ಲಿಸ್ಟ್ ಎ ಕ್ರಿಕೆಟ್ ನಲ್ಲಿ ಶತಕ ಸಿಡಿಸಿದ ಬ್ಯಾಟ್ಸ್​ಮನ್​ ಎಂಬ ದಾಖಲೆ ಬರೆದಿದ್ರು. ಬೌಲರ್​ಗಳನ್ನ ಹಿಗ್ಗಾಮುಗ್ಗಾ ಬೆಂಡೆತ್ತಿದ ವೈಭವ್​ ಸೂರ್ಯವಂಶಿ 15 ಭರ್ಜರಿ ಸಿಕ್ಸರ್​, 16 ಬೊಂಬಾಟ್​ ಬೌಂಡರಿ ಬಾರಿಸಿದ್ರು. 86 ಎಸೆತಗಳಲ್ಲಿ ಒಟ್ಟಾರೆ 190 ರನ್​ ಬಾರಿಸಿದ್ರು. ಜಸ್ಟ್​ 10 ರನ್​ ಅಂತರದಲ್ಲಿ ಡಬಲ್​ ಸೆಂಚುರಿ ಮಿಸ್​ ಮಾಡಿಕೊಂಡಿದ್ರು. 

ವೈಭವ್​ ಸೂರ್ಯವಂಶಿಯ ದರ್ಬಾರ್​ ದುಬೈನಲ್ಲೂ ನಡೆದಿತ್ತು, ಅಂಡರ್​ 19 ಏಷ್ಯಾಕಪ್​ ಟೂರ್ನಿಯ ಮೊದಲ ಪಂದ್ಯದಲ್ಲಿ ರಣಭಯಂಕರ ಇನ್ನಿಂಗ್ಸ್​ ಕಟ್ಟಿದ್ರು. ಯುಎಇ ಬೌಲರ್​ಗಳ ಬೌಲಿಂಗ್​ ದಾಳಿಯನ್ನ ಚಿಂದಿ ಉಡಾಯಿಸಿದ್ದ ಸೂರ್ಯವಂಶಿ, ಕೇವಲ 56 ಎಸೆತಗಳಲ್ಲೇ ವೈಭವ್​ ಸೂರ್ಯವಂಶಿ ಶತಕ ಸಿಡಿಸಿ ಅಬ್ಬರಿಸಿದ್ರು. 95 ಎಸೆತ ಎದುರಿಸಿ 9 ಬೌಂಡರಿ, 14 ಭರ್ಜರಿ ಸಿಕ್ಸರ್​ ಚಚ್ಚಿದ ವೈಭವ್​ ಬರೋಬ್ಬರಿ 171 ರನ್​ಗಳ ಬೊಂಬಾಟ್​ ಇನ್ನಿಂಗ್ಸ್​ ಕಟ್ಟಿದ್ರು. 

ಇದನ್ನೂ ಓದಿ: ವಡೋದರಾಕ್ಕೆ ಕಿಂಗ್ ರಾಯಲ್ ಎಂಟ್ರಿ.. ಹೊಸ ದಾಖಲೆ ಮೇಲೆ ಕೊಹ್ಲಿ ಕಣ್ಣು..!

Vaibhav_Suryavanshi

14 ವರ್ಷಕ್ಕೇ ವೈಭವ್​ ಸೂರ್ಯವಂಶಿಗೆ ಶತಕ ಸರದಾರ ಪಟ್ಟ ದಕ್ಕಿದೆ. ಎಲ್ಲಾ ಮಾದರಿಯಲ್ಲೂ ಸೆಂಚುರಿ ಬಾರಿಸಿ ಸೈ ಎನಿಸಿಕೊಂಡಿದ್ದಾರೆ. ಸೈಯ್ಯದ್ ಮುಷ್ತಾಕ್ ಅಲಿ T20 ಟೂರ್ನಿಯಲ್ಲಿ ಮಹಾರಾಷ್ಟ್ರ ವಿರುದ್ಧ ದಾಖಲೆಯ ಶತಕ ಸಿಡಿಸಿದ್ರು. ಕ್ರಿಕೆಟ್ ಕಾಶಿ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಮಹಾರಾಷ್ಟ್ರ ಬೌಲರ್​ಗಳನ್ನ ಚಚ್ಚಿದ ವೈಭವ್, ಕೇವಲ 58 ಎಸೆತಗಳಲ್ಲಿ ಶತಕ ಸಿಡಿಸಿ ಮಿಂಚಿದ್ರು.  

ದೋಹಾದಲ್ಲಿ ನಡೆದ ಏಷ್ಯಾಕಪ್ ರೈಸಿಂಗ್ ಸ್ಟಾರ್ T20 ಟೂರ್ನಿಯಲ್ಲೂ, ವೈಭವ್ ಶರವೇಗದ ಶತಕ ಸಿಡಿಸಿದ್ರು. ಇನ್ನು, ಐಪಿಎಲ್​ನಲ್ಲಿ ಮೊಹಮ್ಮದ್ ಸಿರಾಜ್, ಇಶಾಂತ್ ಶರ್ಮಾ, ಪ್ರಸಿದ್ಧ್ ಕೃಷ್ಣ, ರಶೀದ್ ಖಾನ್​ರಂತಹ ಅಂತರಾಷ್ಟ್ರೀಯ ಆಟಗಾರರ ಬೌಲಿಂಗ್​ ಧೂಳಿಪಟ ಮಾಡಿ 35 ಎಸೆತಕ್ಕೆ ಶತಕ ಸಿಡಿಸಿದ್ದನ್ನ ಇತಿಹಾಸ ಎಂದಿಗಾದರೂ ಮರೆಯೋಕೆ ಸಾಧ್ಯಾನಾ.?

ಇಂಗ್ಲೆಂಡ್, ಆಸಿಸ್​​​​​​ನಲ್ಲೂ ಸೂರ್ಯವಂಶಿ ಶೈನಿಂಗ್

ಇಂಗ್ಲೆಂಡ್​ ಎದುರು ಯೂತ್ ODI, ಆಸ್ಟ್ರೇಲಿಯಾ ಎದುರು ಯೂತ್​ ಟೆಸ್ಟ್​ನಲ್ಲೂ ಎಡಗೈ ಬ್ಯಾಟರ್ ವೈಭವ್  ಸೆಂಚುರಿ ಬಾರಿಸಿದ್ರು. ಚಿಕ್ಕ ವಯಸ್ಸಿಗೆ ಶತಕದ ಮೇಲೆ ಶತಕ ಸಿಡಿಸ್ತಾ ಇರೋ ಸೂರ್ಯವಂಶಿ ಶೈನ್ ಆಗ್ತಿದ್ದಾರೆ. ಸದ್ಯ ಬ್ಯಾಟಿಂಗ್​​ ಹಾಗೇ ಕ್ಯಾಪ್ಟನ್​ಶಿಪ್​ನಲ್ಲೂ ಮಿಂಚ್ತಿರೋ ವೈಭವ್, ಆದಷ್ಟು ಬೇಗ ಟೀಮ್ ಇಂಡಿಯಾಕ್ಕೆ ಎಂಟ್ರಿ ಕೊಡಲಿ ಅನ್ನೋದೇ ಎಲ್ಲಾ ಕ್ರಿಕೆಟ್ ಅಭಿಮಾನಿಗಳ ಆಶಯ. 

ಇದನ್ನೂ ಓದಿ: ಯಶ್‌ಗೆ ಗಜ ಕೇಸರಿ ಯೋಗ, ಟಾಕ್ಸಿಕ್ ಸಾವಿರಾರು ಕೋಟಿ ಬಾಚುವುದರಲ್ಲಿ ಡೌಟು ಇಲ್ಲ ಎಂದ ಕೆ.ಮಂಜು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.  

Cricket news in Kannada Vaibhav Suryavanshi
Advertisment