/newsfirstlive-kannada/media/media_files/2026/01/09/virat-kohli-5-2026-01-09-10-46-48.jpg)
ಇಂಡೋ-ನ್ಯೂಜಿಲೆಂಡ್​​ ಒನ್​ ಡೇ ಸರಣಿಗೆ ದಿನಗಣನೆ ಶುರುವಾಗಿದೆ. ಮಹತ್ವದ ಸರಣಿಗೆ ಟೀಮ್​ ಇಂಡಿಯಾದ ಸ್ಪೆಷಲ್​ ಸಿದ್ಧತೆ ಇಂದಿನಿಂದ ಆರಂಭವಾಗಲಿದೆ. ಎಲ್ಲರಿಗಿಂತ ಮೊದಲೇ ಕಿಂಗ್​ ಕೊಹ್ಲಿ ಅಭ್ಯಾಸದ ಅಖಾಡಕ್ಕೆ ರಾಯಲ್​ ಎಂಟ್ರಿ ಕೊಟ್ಟಿದ್ದಾರೆ. ಹೊಸ ವರ್ಷ, ಹೊಸ ಹುರುಪಿನೊಂದಿಗೆ ಅಖಾಡಕ್ಕಿಳಿಯಲು ವಿರಾಟ್​ ರೆಡಿಯಾಗಿದ್ದಾರೆ.
2026ರಲ್ಲಿ ಟೀಮ್​ ಇಂಡಿಯಾದ ಮೊದಲ ಟಾಸ್ಕ್​​ಗೆ ಕೌಂಟ್​​ಡೌನ್​ ಆರಂಭವಾಗಿದೆ. ನ್ಯೂಜಿಲೆಂಡ್​ ವಿರುದ್ಧದ ಏಕದಿನ ಸರಣಿಯೊಂದಿಗೆ ಮೆನ್​ ಇನ್​ ಬ್ಲ್ಯೂ ಪಡೆ ಹೊಸ ವರ್ಷವನ್ನ ಆರಂಭಿಸೋಕೆ ಸಜ್ಜಾಗಿದೆ. 3 ಪಂದ್ಯಗಳ ಸರಣಿಗೆ ಸಿದ್ಧತೆಯ ಭಾಗವಾಗಿ ಟೀಮ್​ ಇಂಡಿಯಾ ಮ್ಯಾನೇಜ್​ಮೆಂಟ್,​ ಸ್ಪೆಷಲ್​ ಪ್ಲ್ಯಾನ್​ ರೂಪಿಸಿದೆ. ವಡೋದರಾದಲ್ಲಿ ಸ್ಪೆಷಲ್​ ಕ್ಯಾಂಪ್​ ಆಯೋಜನೆ ಮಾಡಿದ್ದು, ಟೀಮ್​ ಇಂಡಿಯಾ ಆಟಗಾರರೆಲ್ಲಾ ಇಂದಿನಿಂದ ಕ್ಯಾಂಪ್​ನಲ್ಲಿ ಭಾಗಿಯಾಗಲಿದ್ದಾರೆ. ಎಲ್ಲರಿಗಿಂತ ಒಂದು ದಿನ ಮೊದಲೇ ವಿರಾಟ್​ ಕೊಹ್ಲಿ ಕ್ಯಾಂಪ್​ಗೆ ರಾಯಲ್​ ಎಂಟ್ರಿ ಕೊಟ್ಟಿದ್ದಾರೆ.
ಇದನ್ನೂ ಓದಿ: ಇಂದಿನಿಂದ WPL: ಮಂದಾನ vs ಕೌರ್..! ಹೇಗಿದೆ ಬೆಂಗಳೂರು ಸೇನೆ..?
/filters:format(webp)/newsfirstlive-kannada/media/media_files/2025/12/06/kohli-2025-12-06-10-02-51.jpg)
ವಡೋದರಾಕ್ಕೆ ಕಿಂಗ್​ ಕೊಹ್ಲಿ ರಾಯಲ್ ಎಂಟ್ರಿ
ವಿಜಯ್​ ಹಜಾರೆ ಟೂರ್ನಿಯಲ್ಲಿ 2 ಪಂದ್ಯಗಳನ್ನಾಡಿದ ಬಳಿಕ ವಿದೇಶಕ್ಕೆ ಹಾರಿದ್ದ ವಿರಾಟ್​ ಕೊಹ್ಲಿ, ನಿನ್ನೆ ಮುಂಬೈಗೆ ವಾಪಾಸ್ಸಾದ್ರು. ಲಂಡನ್​ನಿಂದ ಮುಂಬೈಗೆ ಬಂದಿಳಿದ ವಿರಾಟ್​ ಕೊಹ್ಲಿ ಮನೆಗೆ ತೆರಳಿದ್ರು. ಆದ್ರೆ, ಮತ್ತೆ ಕೆಲವೇ ಗಂಟೆಗಳ ಅಂತರದಲ್ಲಿ ಏರ್​​ಪೋರ್ಟ್​​ಗೆ ವಾಪಾಸ್ಸಾದ ಕೊಹ್ಲಿ, ವಡೋದರಾ ಫ್ಲೈಟ್​ ಏರಿದ್ರು. ನ್ಯೂಜಿಲೆಂಡ್​ ಸರಣಿಯನ್ನ ಗಂಭೀರವಾಗಿ ಪರಿಗಣಿಸಿರೋ ವಿರಾಟ್​, ಒಂದು ದಿನ ಮೊದಲೇ ವಡೋದರಾ ತಲುಪಿದ್ದಾರೆ. ವಡೋದಾರಾಗೆ ಕಿಂಗ್​ ರಾಯಲ್​ ಎಂಟ್ರಿ ಕೊಡ್ತಿದ್ದಂತೆ ಅಭಿಮಾನಿಗಳು ಮುತ್ತಿಗೆ ಹಾಕಿದ್ದಾರೆ.
ಹೊಸ ವರ್ಷ, ಹೊಸ ಹುರುಪು, ಹಳೆಯ ಗುರಿ
ಹೊಸ ವರ್ಷ, ಹೊಸ ಹುರುಪು.. ಆದ್ರೆ, 2027ರ ವಿಶ್ವಕಪ್ ಆಡಬೇಕು ಅನ್ನೋ ಅದೇ ಹಳೆಯ ಗುರಿಯನ್ನ ವಿರಾಟ್​ ಕೊಹ್ಲಿ ಬೆನ್ನತ್ತಿದ್ದಾರೆ. 2025ರ ಕ್ಯಾಲೆಂಡರ್​ ವರ್ಷವನ್ನ ಹೈ ನೋಟ್​ನಲ್ಲಿ ಎಂಡ್​ ಮಾಡಿದ ವಿರಾಟ್​ ಕೊಹ್ಲಿ, ಹೊಸ ವರ್ಷವನ್ನ ಭರ್ಜರಿಯಾಗಿ ಆರಂಭಿಸೋಕೆ ಪಣತೊಟ್ಟಿದ್ದಾರೆ. ಸದ್ಯ ವಿರಾಟ್​ ಕೊಹ್ಲಿ ಗುಡ್​ ಟಚ್​ನಲ್ಲಿದ್ದಾರೆ. ಅದೇ ಟಚ್​​​ ಕಾಯ್ದುಕೊಳ್ಳೋ ಉದ್ದೇಶದಿಂದಲೇ ಇಂದಿನಿಂದಲೇ ಅಭ್ಯಾಸದ ಕಣಕ್ಕೆ ಧುಮುಕಲಿದ್ದಾರೆ.
ಇದನ್ನೂ ಓದಿ: RCBನಲ್ಲಿ ಪವರ್​ ಹಿಟ್ಟರ್ಸ್.. ಸಿಂಹಿಣಿಯರು ಯುದ್ಧಕ್ಕೆ ರೆಡಿ..!
/filters:format(webp)/newsfirstlive-kannada/media/media_files/2025/12/03/virat-kohli-1-2025-12-03-16-07-28.jpg)
15 ಪಂದ್ಯಗಳಲ್ಲಿ 50ಕ್ಕೂ ಅಧಿಕ ರನ್​ ಸಾಧನೆ
ನ್ಯೂಜಿಲೆಂಡ್​​ ವಿರಾಟ್​​ ಕೊಹ್ಲಿ ಪಾಲಿನ ಒನ್​ ಆಫ್​ ದ ಫೇವರಿಟ್​​ ಎದುರಾಳಿ. ಬ್ಲ್ಯಾಕ್​ ಕ್ಯಾಪ್ಸ್​​ ಎದುರಾದಾಗೆಲ್ಲಾ ಕಿಂಗ್​ ಕೊಹ್ಲಿ ಬ್ಯಾಟ್​ ಭರ್ಜರಿಯಾಗಿ ಘರ್ಜಸಿದೆ. ಕಿವೀಸ್​ ಕಿವಿ ಹಿಂಡಿ ಸೆಂಚುರಿ, ಹಾಫ್​​ ಸೆಂಚುರಿಯಲ್ಲಿ ಸಲೀಸಾಗಿ ಚಚ್ಚಿ ಬಿಸಾಕಿದ್ದಾರೆ. ಆಡಿದ 33 ಪಂದ್ಯಗಳಲ್ಲೇ 15 ಪಂದ್ಯದಲ್ಲಿ 50ಕ್ಕೂ ಅಧಿಕ ರನ್​ ಸಾಧನೆ ಮಾಡಿದ್ದಾರೆ. ಈ ಪೈಕಿ 6 ಸೆಂಚುರಿಯಾದ್ರೆ, 9 ಹಾಫ್​​ ಸೆಂಚುರಿಗಳು.
55.23ರ ಸರಾಸರಿಯಲ್ಲಿ ರನ್​ ಕೊಳ್ಳೆ
ನ್ಯೂಜಿಲೆಂಡ್​ ವಿರುದ್ಧದ ಪಂದ್ಯಗಳಲ್ಲಿ ಅಕ್ಷರಶಃ ಘರ್ಜನೆ ನಡೆಸಿರೋ ವಿರಾಟ್​​ ಕೊಹ್ಲಿ, ರನ್​​ ಹೊಳೆಯನ್ನೇ ಹರಿಸಿದ್ದಾರೆ. 33 ಇನ್ನಿಂಗ್ಸ್​ಗಳಲ್ಲಿ ಬರೋಬ್ಬರಿ 55.23ರ ಸರಾಸರಿಯಲ್ಲಿ ರನ್​ ಕೊಳ್ಳೆ ಹೊಡೆದಿದ್ದಾರೆ. ಒಟ್ಟಾರೆ, 1657 ರನ್​ಗಳನ್ನ ವಿರಾಟ್​ ಕೊಹ್ಲಿ ಗಳಿಸಿದ್ದು, 148 ಬೌಂಡರಿಗಳನ್ನ ಬಾರಿಸಿ ಬೌಲರ್​ಗಳ ಬೆಂಡೆತ್ತಿದ್ದಾರೆ.
/filters:format(webp)/newsfirstlive-kannada/media/media_files/2025/10/25/virat-kohli-1-2025-10-25-15-03-19.jpg)
ದಾಖಲೆಗಳ ಸರದಾರ ವಿರಾಟ್​ ಕೊಹ್ಲಿಯ ಕಣ್ಣು ಇದೀಗ ದಾಖಲೆಯ ಮೇಲೆ ಬಿದ್ದಿದೆ. ನ್ಯೂಜಿಲೆಂಡ್​ ವಿರುದ್ಧ 3 ಪಂದ್ಯಗಳ ಸರಣಿಯಲ್ಲಿ ರನ್​ ಮಷೀನ್​ ರಣಾರ್ಭಟ ನಡೆಸಿದ್ರೆ, ಏಕದಿನ ಕ್ರಿಕೆಟ್​ನಲ್ಲಿ 15 ಸಾವಿರ ರನ್​ ಪೂರೈಸೋ ಅವಕಾಶ ವಿರಾಟ್​ ಕೊಹ್ಲಿಗಿದೆ. ಸದ್ಯ ವಿರಾಟ್​ ಕೊಹ್ಲಿ, ಒನ್​ ಡೇ ಕ್ರಿಕೆಟ್​ನಲ್ಲಿ 14,557 ರನ್​ಗಳಿಸಿದ್ದಾರೆ. 15 ಸಾವಿರ ರನ್​ ಪೂರೈಸಲು ಇನ್ನು, 443 ರನ್​​ಗಳು ಬೇಕಿವೆ.
2027ರ ವಿಶ್ವಕಪ್​ ಆಡೋ ಗುರಿ ಹೊಂದಿರೋ ಕೊಹ್ಲಿ ಪಾಲಿಗೆ ಮುಂದಿನ ಎಲ್ಲಾ ಸರಣಿಗಳು ಡು ಆರ್​ ಡೈ. ವಿರಾಟ್ ಕೊಹ್ಲಿ​ ವಿರುದ್ಧ ಮ್ಯಾನೇಜ್​ಮೆಂಟ್​ ವಲಯದಲ್ಲಿ ಮಸಲತ್ತು ನಡೀತಿವೆ ಎಂಬ ಸ್ಟ್ರಾಂಗ್​ ಸುದ್ದಿ ಇರೋದ್ರಿಂದ, ಒಂದು ವೈಫಲ್ಯ ಕೂಡ ಕೊಹ್ಲಿಯ ಕನಸಿಗೆ ಮುಳ್ಳಾಗಬಹುದು. ಈ ನ್ಯೂಜಿಲೆಂಡ್​ ಸರಣಿ ಮಾತ್ರವಲ್ಲ.. ಫೀಲ್ಡ್​ಗಿಳಿದಾಗೆಲ್ಲಾ ಗುಡ್​ ಪರ್ಫಾಮೆನ್ಸ್​ ನೀಡಲೇಬೇಕಿದೆ.
ಇದನ್ನೂ ಓದಿ: 647 ಕ್ವಿಂಟಲ್ ಮಾದಲಿ, 19 ಲಕ್ಷ ರೊಟ್ಟಿ! ಗವಿ ಜಾತ್ರೆಗೆ ಬಂದ ಭಕ್ತರ ಸಂಖ್ಯೆ ಎಷ್ಟು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us