/newsfirstlive-kannada/media/media_files/2025/12/19/jasprit-bumrah-2025-12-19-13-20-58.jpg)
ಭಾರತ-ಸೌತ್​ ಆಫ್ರಿಕಾ ನಡುವಿನ ಟಿ20 ಸರಣಿಯ ಫೈನಲ್​ ಫೈಟ್​ಗೆ ವೇದಿಕೆ ಸಜ್ಜಾಗಿದೆ. ಇಬ್ಬನಿಯ ಕಾಟದಿಂದ 4ನೇ ಪಂದ್ಯ ರದ್ದಾಗಿದ್ರಿಂದ ಅಹ್ಮದಾಬಾದ್​​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರೋ ಇಂದಿನ ಪಂದ್ಯದ ಮೇಲೆ ಕುತೂಹಲ ಹೆಚ್ಚಾಗಿದೆ. ಸರಣಿ ಗೆಲುವಿನ ಮೇಲೆ ಟೀಮ್​ ಇಂಡಿಯಾದ ಕಣ್ಣಿದ್ರೆ, ಸರಣಿ ಸಮಭಲ ಸಾಧಿಸಲು ಸೌತ್​​​ ಆಫ್ರಿಕಾ ಶತ ಪ್ರಯತ್ನ ನಡೆಸಲಿದೆ. ಇದ್ರ ನಡುವೆ ಟೀಮ್​ ಇಂಡಿಯಾ ವೇಗಿ ಜಸ್​​ಪ್ರಿತ್​ ಬೂಮ್ರಾ ಕಮ್​ಬ್ಯಾಕ್ ಟೀಮ್​ ಇಂಡಿಯಾ ಕ್ಯಾಂಪ್​ನಲ್ಲಿ ಹೊಸ ಪ್ರಶ್ನೆಯನ್ನ ಹುಟ್ಟಿಸಿದೆ.
ಹರ್ಷಿತ್​ ರಾಣಾ ಡ್ರಾಪ್..?
ವೈಯಕ್ತಿಕ ಕಾರಣ ನೀಡಿ ಧರ್ಮಶಾಲಾದಲ್ಲಿ ನಡೆದ 3ನೇ ಟಿ20 ಪಂದ್ಯದಿಂದ ಹೊರಗುಳಿದಿದ್ದ ಜಸ್​ಪ್ರಿತ್ ಬೂಮ್ರಾ ತಂಡಕ್ಕೆ ವಾಪಾಸ್ಸಾಗಿದ್ದಾರೆ. ಕಮ್​​ಬ್ಯಾಕ್​ ಮಾಡಿರೋ ಬೂಮ್ರಾಗೆ ಪ್ಲೇಯಿಂಗ್​ ಇಲೆವೆನ್​ನಲ್ಲಿ ಚಾನ್ಸ್​ ನೀಡಬೇಕಾ ಅನ್ನೋ ಚರ್ಚೆ ಸದ್ಯ ನಡೀತಿದೆ. ಬೂಮ್ರಾ ಅಲಭ್ಯತೆಯಲ್ಲಿ ಚಾನ್ಸ್​ ಗಿಟ್ಟಿಸಿಕೊಂಡಿದ್ದ ಹರ್ಷಿತ್​ ರಾಣಾ ಮಿಂಚಿನ ಪ್ರದರ್ಶನ ನೀಡಿದ್ರು. ಆರಂಭದಲ್ಲೇ ಅಟ್ಯಾಕ್​ ಮಾಡಿದ್ದ ಹರ್ಷಿತ್​, ಕ್ವಿಂಟನ್​ ಡಿ ಕಾಕ್, ಡೆವಾಲ್ಡ್​ ಬ್ರೆವಿಸ್​ ವಿಕೆಟ್​ ಎಗರಿಸಿದ್ರು. ಬೂಮ್ರಾ ಕಮ್​​ಬ್ಯಾಕ್​ ಮಾಡಿದ ಮಾತ್ರಕ್ಕೆ, ಬೊಂಬಾಟ್​ ದಾಳಿ ಸಂಘಟಿಸಿದ್ದ ಹರ್ಷಿತ್​ ರಾಣಾನ ಡ್ರಾಪ್​ ಮಾಡೋದು ಸರಿನಾ? ಅನ್ನೋದು ಸದ್ಯದ ಪ್ರಶ್ನೆಯಾಗಿದೆ.
ಇದನ್ನೂ ಓದಿ: ಈ ಸ್ಟಾರ್​ ಆಟಗಾರನ ಮೇಲೆ ಫ್ಯಾನ್ಸ್ ಬೇಸರ.. ಅಷ್ಟಕ್ಕೂ ಆಗಿದ್ದೇನು..?
ಬೂಮ್ರಾ ಖದರ್​ ಮಾಯವಾಯ್ತಾ..?
ಟಿ20 ಫಾರ್ಮೆಟ್​​ನ ಬಿರುಗಾಳಿ ಬೌಲರ್​​ ಎಂದೇ ಖ್ಯಾತಿ ಪಡೆದಿದ್ದ ಜಸ್​​​ಪ್ರಿತ್​ ಬೂಮ್ರಾ ಖದರ್​ ಈಗ ಮಾಯವಾಗಿದೆ. ವೈಟ್​ಬಾಲ್​ ಫಾರ್ಮೆಟ್​ನಲ್ಲಿ ಬೂಮ್ರಾ ರಿಧಮ್​ ಕಳೆದುಕೊಂಡಂತೆ ಕಾಣ್ತಿದ್ದಾರೆ. ಈ ಸೌತ್​ ಆಫ್ರಿಕಾ ಸರಣಿಯೇ ಇದಕ್ಕೆ ಬೆಸ್ಟ್​ ಎಕ್ಸಾಂಪಲ್​.! ಲುಂಗಿ ಎನ್​ಗಿಡಿ, ಆರ್ಷ್​​ದೀಪ್​ ಸಿಂಗ್​, ಶಿವಂ ದುಬೆ , ಹರ್ಷಿತ್​ ರಾಣಾ ಇವರೆಲ್ಲರಿಗಿಂತ ಕಳಪೆ ಪ್ರದರ್ಶನವನ್ನ ಜಸ್​​ಪ್ರಿತ್​ ಬೂಮ್ರಾ ನೀಡಿದ್ದಾರೆ.
ಸೌತ್​ ಆಫ್ರಿಕಾ ಸರಣಿಯಲ್ಲಿ ಬೂಮ್ರಾ
ಸೌತ್​ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ 2 ಪಂದ್ಯಗಳನ್ನಾಡಿರೋ ಬೂಮ್ರಾ, 7 ಓವರ್​ ಬೌಲಿಂಗ್​ ಮಾಡಿದ್ದಾರೆ. ಕೇವಲ 2 ವಿಕೆಟ್​ ಕಬಳಿಸಿದ್ದು, 8.86ರ ಎಕಾನಮಿಯಲ್ಲಿ ರನ್​ ಬಿಟ್ಟುಕೊಟ್ಟಿದ್ದಾರೆ. ಕಳೆದ ಏಷ್ಯಾಕಪ್​ ಟೂರ್ನಿಯಲ್ಲೂ ಬೂಮ್ರಾ ಬೌಲಿಂಗ್​ ಅಷ್ಟಕಷ್ಟೆ. ದುಬೈನಲ್ಲಿ ದರ್ಬಾರ್​ ನಡೆಸ್ತಾರೆ ಅನ್ನೋ ಅಪಾರ ನಿರೀಕ್ಷೆಯಿಟ್ಟಿದ್ದ ಫ್ಯಾನ್ಸ್​ಗೆ ಸಾಧಾರಣ ಪ್ರದರ್ಶನ ನೀಡಿ ನಿರಾಸೆ ಮೂಡಿಸಿದ್ರು. 5 ಪಂದ್ಯ ಬೌಲಿಂಗ್​ ಮಾಡಿದ ಬೂಮ್ರಾ ಕೇವಲ 7 ವಿಕೆಟ್​ ಉರುಳಿಸಿದ್ರು. ಯುಎಇ ಬೌಲರ್​ ಜುನೈದ್​ ಸಿದ್ಧಕಿ ಅನ್ನೋ ಯುವ ವೇಗಿಯೇ 3 ಪಂದ್ಯಕ್ಕೆ 9 ವಿಕೆಟ್​ ಕಬಳಿಸಿದ ಟೂರ್ನಮೆಂಟ್​ನಲ್ಲಿ ಬೂಮ್ರಾ ಸಾಧನೆ ಸಾಧಾರಣವಲ್ಲದೇ ಮತ್ತೇನು?
/filters:format(webp)/newsfirstlive-kannada/media/media_files/2025/09/18/jasprit-bumrah-2025-09-18-09-17-35.jpg)
ಶಿವಂ ದುಬೆ ಬೆಸ್ಟ್
ಅಚ್ಚರಿ ಅನಿಸಿದ್ರು ಇದು ಸತ್ಯ. 2025ರ ಕ್ಯಾಲೆಂಡರ್​​ ವರ್ಷದಲ್ಲಿ ಅಲ್ಲೊಂದು ಇಲ್ಲೊಂದು ಓವರ್​ ಬೌಲಿಂಗ್​ ಮಾಡೋ ಟೀಮ್​ ಇಂಡಿಯಾ ಆಲ್​​ರೌಂಡರ್​ ಶಿವಂ ದುಬೆ, ಜಸ್​​ ಪ್ರಿತ್​ ಬೂಮ್ರಾಗಿಂತ ಉತ್ತಮ ಪ್ರದರ್ಶನ ನೀಡಿದ್ದಾರೆ. ವಿಕೆಟ್​ ಕಬಳಿಕೆಯಲ್ಲಿ ಬೂಮ್ರಾಗಿಂತ ದುಬೆ ಉತ್ತಮ ಸರಾಸರಿಯನ್ನ ಹೊಂದಿದ್ದಾರೆ.
2025ರಲ್ಲಿ T20I ಪರ್ಫಾಮೆನ್ಸ್​
2025ರಲ್ಲಿ 25.3 ಓವರ್ಸ್​​​ ಬೌಲಿಂಗ್ ಮಾಡಿರೋ ಶಿವಂ ದುಬೆ 12 ವಿಕೆಟ್ಸ್​ ಬೇಟೆಯಾಡಿದ್ದಾರೆ. ಇದೇ 12 ವಿಕೆಟ್​ ಕಬಳಿಸಲು ಜಸ್​ಪ್ರಿತ್​ ಬೂಮ್ರಾ 37.1 ಓವರ್​ ಬೌಲಿಂಗ್​ ಮಾಡಿದ್ದಾರೆ. ದುಬೆ 17.91ರ ಸರಾಸರಿ ಹೊಂದಿದ್ರೆ, ಬೂಮ್ರಾ 23 ಆಗಿದೆ.
ಭಾರತದ ಆತಿಥ್ಯದಲ್ಲೇ ನಡೆಯೋ ಟಿ20 ವಿಶ್ವಕಪ್ ಟೂರ್ನಿಗೆ ಉಳಿದಿರೋದು ಕೆಲವೇ ಕೆಲವು ಪಂದ್ಯಗಳು ಮಾತ್ರ. ಇಂದಿನ ಪಂದ್ಯವೂ ಸೇರಿ ಒಟ್ಟು 6 ಪಂದ್ಯಗಳು ಮಾತ್ರ ಬಾಕಿ ಉಳಿದಿದ್ದು, ಅದಕ್ಕೂ ಮುನ್ನ ಬೂಮ್ರಾ ಫಾರ್ಮ್​​​​ ಟೀಮ್​ ಇಂಡಿಯಾ ಮ್ಯಾನೇಜ್​ಮೆಂಟ್​ಗೆ ಹೊಸ ತಲೆವೋವು ತಂದಿಟ್ಟಿದೆ. ಎದುರಾಳಿ ತಂಡಕ್ಕೆ ಭಯಕ್ಕೆ ಕಾರಣವಾಗಿದ್ದ ಬೂಮ್ರಾ ಇದೀಗ ಟೀಮ್​ ಇಂಡಿಯಾದ ಭಯಕ್ಕೆ ಕಾರಣವಾಗಿಬಿಟ್ಟಿದ್ದಾರೆ. ಇಂದಿನ ಪಂದ್ಯದಲ್ಲಾದ್ರೂ ಬೂಮ್ರಾ ರೈಟ್​ ಟ್ರ್ಯಾಕ್​ಗೆ ಮರಳ್ತಾರಾ.? ಕಾದು ನೋಡೋಣ.
ಇದನ್ನೂ ಓದಿ: ಸಾವಿನಲ್ಲೂ ಸಾರ್ಥಕತೆ.. ಅಂಗಾಂಗ ದಾನ ಮಾಡಿ ಬೆಳಕಾದ ಯುವಕ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us