ಅಯ್ಯರ್ ಮಾಡಿದ ಒಂದೇ ಒಂದು ಪ್ರಮಾದ.. ಏಷ್ಯಾ ಕಪ್ ಟೂರ್ನಿಯಲ್ಲಿ ಚಾನ್ಸ್​ ಸಿಗಲಿಲ್ಲ..!

ಏಷ್ಯಾ ಕಪ್ ತಂಡದಲ್ಲಿ ಶ್ರೇಯಸ್​ ಅಯ್ಯರ್​ಗೆ ಚಾನ್ಸ್ ನೀಡದೇ ಇರೋದು ಭಾರೀ ಚರ್ಚೆಗೆ ಕಾರಣವಾಗಿತ್ತು. ಇದೀಗ ಯಾಕೆ ಅಯ್ಯರ್​​ ಅವರನ್ನು ಬಿಸಿಸಿಐ ದೂರ ಇಟ್ಟಿದೆ ಅನ್ನೋದಕ್ಕೆ ಕಾರಣ ರಿವೀಲ್ ಆಗಿದೆ.

author-image
Ganesh Kerekuli
ಚಾಂಪಿಯನ್ಸ್​ ಟ್ರೋಫಿ ಎಫೆಕ್ಟ್.. ಶ್ರೇಯಸ್​ ಅಯ್ಯರ್​ಗೆ ಬಿಸಿಸಿಐ ಭರ್ಜರಿ ಗಿಫ್ಟ್..!
Advertisment

ಏಷ್ಯಾ ಕಪ್ ತಂಡದಲ್ಲಿ ಶ್ರೇಯಸ್​ ಅಯ್ಯರ್​ಗೆ ಚಾನ್ಸ್ ನೀಡದೇ ಇರೋದು ಭಾರೀ ಚರ್ಚೆಗೆ ಕಾರಣವಾಗಿತ್ತು. ಇದೀಗ ಯಾಕೆ ಅಯ್ಯರ್​​ ಅವರನ್ನು ಬಿಸಿಸಿಐ ದೂರ ಇಟ್ಟಿದೆ ಅನ್ನೋದಕ್ಕೆ ಕಾರಣ ರಿವೀಲ್ ಆಗಿದೆ. 

ಕಾರಣ ಹೀಗಿದೆ.. 

ಏಷ್ಯಾ ಕಪ್‌ನಲ್ಲಿ ಟೀಂ ಇಂಡಿಯಾ ಪರ ಆಡಲು ಅಯ್ಯರ್​​ ಬಯಸಿದ್ದರು. ಅದೇ ಕಾರಣಕ್ಕೆ ದುಲೀಪ್ ಟ್ರೋಫಿಯಲ್ಲಿ ಪಶ್ಚಿಮ ವಲಯದ ನಾಯಕತ್ವ ವಹಿಸುವ ಪ್ರಸ್ತಾಪವನ್ನು ಅಯ್ಯರ್ ತಿರಸ್ಕರಿಸಿದರು. ಪರಿಣಾಮ ಬಿಸಿಸಿಐ ಶಾರ್ದೂಲ್ ಠಾಕೂರ್​ಗೆ ನಾಯಕತ್ವದ ಜವಾಬ್ದಾರಿ ನೀಡಿತು. ಅಯ್ಯರ್​ ಅವರು ನೋ ಎಂದ ಕಾರಣಕ್ಕೆ ಏಷ್ಯಾಕಪ್​ ತಂಡದಲ್ಲಿ ಕೈಬಿಡಲಾಯಿತು ಎಂಬ ಮಾಹಿತಿ ಲಭ್ಯವಾಗಿದೆ. 

ಇದನ್ನೂ ಓದಿ:ಗಿಲ್​​ಗೆ ಕಾಡ್ತಿದ್ಯಾ ಸ್ನೇಹಿತನಿಗೆ ಆದ ಸಂಕಷ್ಟದ ಭಯ..?

ಅಯ್ಯರ್ ಪಶ್ಚಿಮ ವಲಯದ ಭಾಗವಾಗಿದ್ದಾರೆ. ಆದರೆ ಅವರು ತಂಡದ ನಾಯಕರಲ್ಲ. ದುಲೀಪ್ ಟ್ರೋಫಿಯಲ್ಲಿ ತಂಡವನ್ನು ಮುನ್ನಡೆಸಲು ಅಯ್ಯರ್ ನಿರಾಕರಿಸಿದರು. ಇದೇ ಕಾರಣಕ್ಕೆ ಟೀಂ ಇಂಡಿಯಾದಲ್ಲಿ ಸ್ಥಾನ ಸಿಗಲಿಲ್ಲ. 

ವರದಿಗಳ ಪ್ರಕಾರ.. ಪಶ್ಚಿಮ ವಲಯ ಆಯ್ಕೆ ಸಮಿತಿಯು ತಂಡದ ನಾಯಕತ್ವ ವಹಿಸುವ ಪ್ರಸ್ತಾಪವನ್ನು ತಿರಸ್ಕರಿಸಿದ್ದು ನಿಜ. ನಂತರ ಮುಂಬೈನ ಮುಖ್ಯ ಆಯ್ಕೆದಾರರೂ ಆಗಿರುವ ಸಮಿತಿಯ ಅಧ್ಯಕ್ಷ ಸಂಜಯ್ ಪಾಟೀಲ್ , ಠಾಕೂರ್ ಅವರನ್ನು ಪಶ್ಚಿಮ ವಲಯದ ನಾಯಕತ್ವ ವಹಿಸುವಂತೆ ಕೇಳಿಕೊಂಡರು. ಠಾಕೂರ್ ಈ ಅವಕಾಶವನ್ನು ಸಂತೋಷದಿಂದ ಸ್ವೀಕರಿಸಿದರು ಎನ್ನಲಾಗಿದೆ. 

ಇದನ್ನೂ ಓದಿ:ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪೂಜಾರ ಗುಡ್​ಬೈ..

ಅಯ್ಯರ್​ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಅವಕಾಶ ಸಿಗಲಿಲ್ಲ. ಐಪಿಎಲ್ 2025ರಲ್ಲಿ ಅಯ್ಯರ್ ಅದ್ಭುತ ಪ್ರದರ್ಶನ ನೀಡಿದರು. ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿ ತಮ್ಮ ತಂಡವನ್ನು ಫೈನಲ್‌ಗೆ ಕೊಂಡೊಯ್ದರು. ಇದರ ಹೊರತಾಗಿಯೂ ಅವರು ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾದರು. ಐಪಿಎಲ್‌ನಲ್ಲಿ 17 ಪಂದ್ಯಗಳಲ್ಲಿ 50.33ರ ಸರಾಸರಿಯಲ್ಲಿ 604 ರನ್ ಗಳಿಸಿದ್ದರು.

ಇದನ್ನೂ ಓದಿ: ಬ್ರ್ಯಾಂಡ್‌ಗಳ ಪಾಲಿನ ಹೊಸ ಕೊಹ್ಲಿ ಆಗ್ತಾರಾ ಶುಭ್​ಮನ್..?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Shreyas Iyer
Advertisment