/newsfirstlive-kannada/media/media_files/2025/08/12/gill-17-2025-08-12-08-53-40.jpg)
ಟೀಮ್​ ಇಂಡಿಯಾ ಆಟಗಾರರಿಗೆ ಬಿಸಿಸಿಐ ಬಾಸ್​​ಗಳ ಭಯ ಕಾಡ್ತಿದ್ಯಾ? ಅಭದ್ರತೆ ಆಟಗಾರರನ್ನ ಆವರಿಸಿದ್ಯಾ? ಹೀಗೊಂದು ಪ್ರಶ್ನೆ ಎದ್ದಿದೆ. ಪ್ರಶ್ನೆಯ ಹುಟ್ಟಿಗೆ ಕಾರಣ ಗಿಲ್​, ಸಂಜು ಸ್ಯಾಮ್ಸನ್​, ರಿಂಕು ಸಿಂಗ್​ ಹಾಗೂ ಜಿತೇಶ್​ ಶರ್ಮಾ!
ಟೀಮ್​ ಇಂಡಿಯಾ ಆಟಗಾರರಿಗೆ ‘ಬಾಸ್​​ಗಳ ಭಯ’!
ಟೀಮ್​ ಇಂಡಿಯಾದಲ್ಲಿ ಆಟಗಾರರೇ ಸುಪ್ರೀಂ ಅನ್ನೋ ಕಾಲವೊಂದಿತ್ತು. ಆದ್ರೀಗ ಆ ಕಾಲ ಬದಲಾಗಿದೆ. ಈಗೇನಿದ್ರೂ ಟೀಮ್​ ಮ್ಯಾನೇಜ್​ಮೆಂಟ್​​ ಹಾಗೂ ಬಿಸಿಸಿಐ ಬಾಸ್​​ಗಳೇ ಸುಪ್ರೀಂ. ಬಾಸ್​​ಗಳ ಭಯ, ಸ್ಥಾನ ಕಳೆದುಕೊಳ್ಳುವ ಆತಂಕ ಆಟಗಾರರನ್ನ ಆವರಿಸಿದೆ. ಟೀಮ್​ ಇಂಡಿಯಾದ ಕೆಲ ಆಟಗಾರರ ಇತ್ತೀಚಿನ ನಡೆಯೇ ಇದನ್ನ ಸಾರಿ ಸಾರಿ ಹೇಳ್ತಿದೆ.
ಆಪ್ತ ಇಶಾನ್​ ಕಿಶನ್​​ ಘಟನೆಯಿಂದ ಎಚ್ಚೆತ್ತ ಗಿಲ್
ಟೀಮ್​ ಇಂಡಿಯಾದ ಖಾಯಂ ಆಟಗಾರನಾಗಿದ್ದ ಕಿಶನ್​​ ಈಗ ಸೈಡ್​​​ಲೈನ್​ ಆಗಿರೋ ಕಥೆ ನಿಮಗೆ ಗೊತ್ತು. ಡೊಮೆಸ್ಟಿಕ್​ ಕ್ರಿಕೆಟ್​ ಆಡು ಅಂದ್ರೆ ಅನಾರೋಗ್ಯದ ನೆಪ ಕಿಶನ್​​ಗೆ ದೇಶಿ ಕ್ರಿಕೆಟ್​ನಿಂದ ದೂರ ಉಳಿದಿದ್ರು. ಪರಿಣಾಮ ಬಾಸ್​​ಗಳ ಕೆಂಗಣ್ಣಿಗೆ ಗುರಿಯಾದ ಕಿಶನ್​ಗೆ ಟೀಮ್​ ಇಂಡಿಯಾ ಡೋರ್​ ತೆಗೆದು ವರ್ಷಗಳೇ ಉರುಳಿದ್ವು.
ಇದನ್ನೂ ಓದಿ: ಬ್ರ್ಯಾಂಡ್‌ಗಳ ಪಾಲಿನ ಹೊಸ ಕೊಹ್ಲಿ ಆಗ್ತಾರಾ ಶುಭ್​ಮನ್..?
ಇದೀಗ ಗಿಲ್​ಗೆ ದುಲೀಪ್​ ಟ್ರೋಫಿ ಟೂರ್ನಿ ಆಡುವಂತೆ ಸೂಚಿಸಲಾಗಿದೆ. ನಾರ್ಥ್​​​ ಝೋನ್​ ತಂಡಕ್ಕೆ ನಾಯಕನನ್ನಾಗಿಯೂ ಮಾಡಲಾಗಿದೆ. ಗಿಲ್​ಗೆ ಅನಾರೋಗ್ಯದ ಸಮಸ್ಯೆ ಎದುರಾಗಿದೆ. ಗಿಲ್​ ದುಲೀಪ್​ ಟ್ರೋಫಿ ಆಡೋಕೆ ರೆಡಿಯಾಗಿದ್ದಾರೆ. ಎಲ್ಲಿ ಗೆಳೆಯನಿಗೆ ಆದ ಸ್ಥಿತಿ ನನಗೆ ಎದುರಾಗಿಬಿಡುತ್ತೋ ಅನ್ನೋ ಭಯವೇ ಇದಕ್ಕೆ ಕಾರಣ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ,
ವಿಪರೀತ ಜ್ವರ ಇದ್ರೂ ಆಟ ಬಿಡ್ತಿಲ್ಲ ಸಂಜು
ಆಡಿದ ಕೊನೆಯ 10 ಇಂಟರ್​ನ್ಯಾಷನಲ್​ ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್​ 3 ಸೆಂಚುರಿ ಸಿಡಿಸಿ ಮಿಂಚಿದ್ದಾರೆ. ಹಾಗಿದ್ರೂ ಏಷ್ಯಾಕಪ್​ ತಂಡಕ್ಕೆ ಗಿಲ್​ ಕಮ್​ಬ್ಯಾಕ್​ ಮಾಡಿದ ಬಳಿಕ ಸಂಜುಗೆ ಓಪನರ್​ ಸ್ಥಾನದಿಂದ ಕೊಕ್​ ಕೊಡಲಾಗಿದೆ. ರಿಷಭ್​ ಪಂತ್​ ಇಂಜುರಿಗೆ ತುತ್ತಾಗಿರೋದ್ರಿಂದ ವಿಕೆಟ್​ ಕೀಪರ್​ ಆಗಿ ಸ್ಥಾನ ಸಿಕ್ಕಿದೆ. ಪಂತ್​ ವಾಪಾಸ್ಸಾದ ಮೇಲೆ ಸ್ಥಾನ ಉಳಿಯಬೇಕಂದ್ರೆ, ಏಷ್ಯಾಕಪ್​ನಲ್ಲಿ ಅಬ್ಬರಿಸಬೇಕಿದೆ. ಇದಕ್ಕಾಗಿ ಎಂತಾ ಕಠಿಣ ಹೋರಾಟಕ್ಕೂ ರೆಡಿಯಾಗಿದ್ದಾರೆ.
ಇದನ್ನೂ ಓದಿ:ಟೀಮ್ ಇಂಡಿಯಾದಲ್ಲಿ ಬೆಸ್ಟ್ ಫಿನಿಶರ್ ಇಲ್ವಾ.. ತಂಡಕ್ಕೆ ಬೇಕಿದೆ ಆ ಒಬ್ಬ ಆಟಗಾರ
ಸಂಜು ಸ್ಯಾಮ್ಸನ್​​ ಕೇರಳ ಪ್ರೀಮಿಯರ್​ ಲೀಗ್​​ ಆಡ್ತಿದ್ದಾರೆ. ಏಷ್ಯಾಕಪ್​ಗೆ ಸಿದ್ಧತೆಯ​​ ದೃಷ್ಟಿಯಿಂದ ಈ ಲೀಗ್​ ಅನ್ನ ಸಂಜು ಸ್ಯಾಮ್ಸನ್​​ ಸೀರಿಯಸ್ಸಾಗಿ ತೆಗೆದುಕೊಂಡಿದ್ದಾರೆ. ಎಷ್ಟರಮಟ್ಟಿಗೆ ಅಂದ್ರೆ ಜ್ವರದ ನಡುವೆಯೂ ಪಂದ್ಯವನ್ನಾಡ್ತಿದ್ದಾರೆ. ಅದಾನಿ ತ್ರಿವೇಂದ್ರಮ್​ ವಿರುದ್ಧದ ಪಂದ್ಯಕ್ಕೂ ಮುನ್ನ ಜ್ವರದಿಂದಾಗಿ ಸಂಜು ಸ್ಯಾಮ್ಸನ್​ ಆಸ್ಪತ್ರೆಗೆ ಸೇರಿದ್ರು. ಆಸ್ಪತ್ರೆಗೆ ಬಂದು ಪಂದ್ಯವನ್ನಾಡಿದ ಸಂಜು, ಪಂದ್ಯದ ಅಂತ್ಯದ ಬಳಿಕ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಎಲ್ಲರಿಗಿಂತ ಮೊದಲೆ ದುಬೈಗೆ ಹಾರಿದ ಜಿತೇಶ್​
ಆರ್​​ಸಿಬಿಯ ವಿಕೆಟ್​ ಕೀಪರ್​ ಜಿತೇಶ್​​ ಶರ್ಮಾಗೆ ಏಷ್ಯಾಕಪ್​ ತಂಡದಲ್ಲಿ ಸ್ಥಾನ ಸಿಕ್ಕಿದೆ. ಐಪಿಎಲ್​ನಲ್ಲಿ ಅಬ್ಬರಿಸಿ ತಂಡಕ್ಕೆ ಎಂಟ್ರಿ ನೀಡಿರೋ ಜಿತೇಶ್​ ಶರ್ಮಾ, ಏಷ್ಯಾಕಪ್​ ಅಖಾಡದಲ್ಲಿ ಸಾಮರ್ಥ್ಯ ನಿರೂಪಿಸಬೇಕಿದೆ. ಸ್ಥಾನ ಉಳಿಸಿಕೊಳ್ಳೋ ಸರ್ಕಸ್​ಗೆ ಬಿದ್ದಿರೋ ಜಿತೇಶ್​ ಶರ್ಮಾ ಎಲ್ಲರಿಗಿಂತ ಮುನ್ನವೇ ದುಬೈಗೆ ಹಾರಿದ್ದಾರೆ. ಅಲ್ಲಿನ ಪ್ಲೇಯಿಂಗ್​ ಕಂಡೀಷನ್ಸ್​ಗೆ ಹೊಂದಿಕೊಂಡು ಅಭ್ಯಾಸ ನಡೆಸಿ ಟೂರ್ನಿಗೆ ಸಿದ್ಧವಾಗೋದು ಜಿತೇಶ್​ ಶರ್ಮಾ ಪ್ಲಾನ್.!
ರಿಂಕು ಸಿಂಗ್​​ಗೂ ಶುರುವಾಗಿದೆ ನಡುಕ
ಏಷ್ಯಾಕಪ್​ಗೆ ಜಿತೇಶ್​ ಶರ್ಮಾ ಎಂಟ್ರಿ ರಿಂಕು ಸಿಂಗ್​ ಟೆನ್ಶನ್​ ಹೆಚ್ಚಿಸಿದೆ. ಇಷ್ಟು ದಿನ ಖಾಯಂ ಸ್ಥಾನಿಯಾಗಿದ್ದ ರಿಂಕು ಸಿಂಗ್​ಗೆ ಇದೀಗ ಪ್ಲೇಯಿಂಗ್​ ಇಲೆವೆನ್​ನಿಂದ ಹೊರಬೀಳೋ ಆತಂಕ ಆವರಿಸಿದೆ. ಕಳೆದ ಕೆಲ ಪಂದ್ಯಗಳಲ್ಲಿ ನೀಡಿದ ಇನ್​​​​ಕನ್ಸಿಸ್ಟೆಂಟ್​ ಪ್ರದರ್ಶನ, ಐಪಿಎಲ್​ನ ವೈಫಲ್ಯದಿಂದ ಹೊರಬರೋಕೆ ರಿಂಕು ಸಿಂಗ್​ ಸರ್ಕಸ್​ ಮಾಡ್ತಿದ್ದಾರೆ. ಯುಪಿ ಟಿ20 ಲೀಗ್​ನಲ್ಲಿ ಆಡ್ತಿರೋ ರಿಂಕು ಕಠಿಣ ಪರಿಶ್ರಮ ಪಡ್ತಿದ್ದಾರೆ. ಸ್ಫೋಟಕ ಸೆಂಚುರಿ ಸಿಡಿಸಿ ಮ್ಯಾನೇಜ್​ಮೆಂಟ್​ಗೆ ಪರೋಕ್ಷವಾಗಿ ಮತ್ತೊಂದು ಚಾನ್ಸ್​ ಕೊಡಿ ಎಂಬ ಸಂದೇಶ ನೀಡಿದ್ದಾರೆ.
ಕಳೆದ ಒಂದು ವರ್ಷದಲ್ಲಿ ಟೀಮ್​ ಇಂಡಿಯಾಗೆ ಹಲವು ಆಟಗಾರರು ಬಂದಿದ್ದಾರೆ. ಹೋಗಿದ್ದಾರೆ. ಯಾರ ಸ್ಥಾನವೂ ಭದ್ರವಾಗಿಲ್ಲ. ಈ ಸ್ಥಾನದ ಅಭದ್ರತೆಯೇ ಆಟಗಾರರ ಟೆನ್ಶನ್​ಗೆ ಕಾರಣವಾಗಿದ್ದು, ಅದಕ್ಕಾಗಿ ಇಷ್ಟೆಲ್ಲಾ ಸರ್ಕಸ್​ ಮಾಡ್ತಿದ್ದಾರೆ. ಈ ಸರ್ಕಸ್​ಗೆ ಸಕ್ಸಸ್​​​ ಸಿಗುತ್ತಾ? ಕಾದು ನೋಡೋಣ.
ಇದನ್ನೂ ಓದಿ: ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪೂಜಾರ ಗುಡ್​ಬೈ..
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us