Advertisment

ಗಿಲ್ ಕ್ಯಾಪ್ಟನ್ಸಿ ಕನಸಿಗೆ ಕೊಕ್ಕೆ.. ಮುಳ್ಳಾಗಿದ್ದು ಯಾರು..?

ಇಂಡೋ-ಆಫ್ರಿಕಾ ಟಿ20 ಸರಣಿಗೆ ಆರಂಭಕ್ಕೆ ಕೌಂಟ್​ಡೌನ್​ ಆರಂಭವಾಗಿದೆ. ಮೊದಲ ಚುಟುಕು ಪಂದ್ಯಕ್ಕೆ ಕಟಕ್​ನ ಬಾರಾಬತಿ ಸ್ಟೇಡಿಯಂ ಸಜ್ಜಾಗಿದೆ. ಇದೇ ಪಂದ್ಯದೊಂದಿಗೆ ಶುಭ್​ಮನ್ ಗಿಲ್​ ಕಮ್​ಬ್ಯಾಕ್​ಗೂ ವೇದಿಕೆ ರೆಡಿಯಾಗಿದೆ. ಈ ಕಮ್​​ಬ್ಯಾಕ್​ ಸರಣಿಗೆ ಗಿಲ್​ ಪಾಲಿಗೆ ಅಗ್ನಿಪರೀಕ್ಷೆಯ ಕಣವಾಗಿ ಮಾರ್ಪಟ್ಟಿದೆ.

author-image
Ganesh Kerekuli
Shubman Gill
Advertisment

ಸೌತ್​ ಆಫ್ರಿಕಾ ಎದುರಿನ ಮೊದಲ ಟೆಸ್ಟ್​ ಪಂದ್ಯದಲ್ಲಿ ಇಂಜುರಿಗೆ ತುತ್ತಾಗಿದ್ದ ಶುಭ್​ಮನ್​ ಗಿಲ್​ ಕಂಪ್ಲೀಟ್​ ಫಿಟ್ ಆಗಿದ್ದಾರೆ. ಫಿಟ್​ & ಫೈನ್​​ ಆಗಿರೋ ಗಿಲ್​ 3 ವಾರಗಳ ಬಳಿಕ ಫೀಲ್ಡ್​ಗೆ ಮರಳೋಕೆ ಸಜ್ಜಾಗಿದ್ದಾರೆ. ಅಖಾಡಕ್ಕೆ ಇಳಿಯೋಕೂ ಮುನ್ನ ಜಿಮ್​ನಲ್ಲಿ ಬೆವರಿಳಿಸಿ, ನೆಟ್ಸ್​ನಲ್ಲಿ ಭರ್ಜರಿ ಸಮರಾಭ್ಯಾಸ ನಡೆಸಿ ಚುಟುಕು ಯುದ್ಧಕ್ಕೆ ಸಜ್ಜಾಗಿದ್ದಾರೆ. ಈ ಸರಣಿ ಗಿಲ್​ ಪಾಲಿಗೆ ಡು ಆರ್​ ಡೈ ಕಣ.. ಸೌತ್​ ಆಫ್ರಿಕಾ ಸರಣಿಯಲ್ಲಿ ಸಾಮರ್ಥ್ಯ ಪ್ರೂವ್​ ಮಾಡಿ ಸ್ಥಾನ ಸೇಫ್​ ಮಾಡಿಕೊಳ್ಳಬೇಕಿದೆ. 

Advertisment

ಆಸ್ಟ್ರೇಲಿಯಾದಲ್ಲಿ ಶೈನ್​ ಆಗದ ಶುಭ್​ಮನ್​

ಉಪನಾಯಕನ ಪಟ್ಟವನ್ನ ಗಿಟ್ಟಿಸಿಕೊಂಡು ಟಿ20 ಫಾರ್ಮೆಟ್​ಗೆ ಕಮ್​ಬ್ಯಾಕ್​ ಮಾಡಿದ ಗಿಲ್​ ಇಂಪ್ರೆಸ್ಸಿವ್​ ಪರ್ಫಾಮೆನ್ಸ್​ ನೀಡುವಲ್ಲಿ ವಿಫಲರಾಗಿದ್ದಾರೆ. ಏಷ್ಯಾಕಪ್​ ಟೂರ್ನಿಯಲ್ಲಿ ಕೇವಲ 21.17ರ ಸರಾಸರಿಯಲ್ಲಿ ಗಿಲ್​ ರನ್​ಗಳಿಸಿದ್ರು. ಕಳೆದ ಆಸಿಸ್​ ಪ್ರವಾಸದಲ್ಲಿ ಶುಭ್​ಮನ್​ ಗಿಲ್​ 5 ಪಂದ್ಯಗಳನ್ನಾಡಿ ಕೇವಲ 132 ರನ್​ಗಳಿಸಿದ್ರು. ಗಿಲ್​ ಬ್ಯಾಟಿಂಗ್​ ಅಪ್ರೋಚ್​ ಕೂಡ ಅದ್ಭುತ ಅನ್ನುವಂತಿರಲಿಲ್ಲ. ಇದೀಗ ಸೌತ್​ ಆಫ್ರಿಕಾ ವಿರುದ್ಧವೂ ಸಾಧಾರಣ ಪ್ರದರ್ಶನ ನೀಡಿದ್ರೆ ಗಿಲ್​ ಸ್ಥಾನಕ್ಕೆ ಕುತ್ತು ಬರೋದ್ರಲ್ಲಿ ಅನುಮಾನವಿಲ್ಲ.

ಇದನ್ನೂ ಓದಿ: ಮ್ಯಾಕ್ಸಿ, ಫಾಫ್, ರಸೆಲ್, ಅಶ್ವಿನ್! IPL ಸಹವಾಸವೇ ಬೇಡ ಅಂತಿರೋದ್ಯಾಕೆ..?

Gambhir and Gill

ಟೀಮ್ ಇಂಡಿಯಾದಲ್ಲಿ ಓಪನರ್​ ಸ್ಥಾನದ ಮೇಲೆ ಹಲವು ಆಟಗಾರರ ಕಣ್ಣಿದೆ. ಸದ್ಯ ಅಭಿಷೇಕ್​ ಶರ್ಮಾ ಒಂದು ಸ್ಥಾನವನ್ನ ಭದ್ರ ಪಡಿಸಿಕೊಂಡಿದ್ರೆ, ಇನ್ನೊಂದು ಸ್ಥಾನಕ್ಕೆ ಮೂವರ ನಡುವೆ ಪೈಪೋಟಿ ನಡೀತಿದೆ. ಈ ಫೈಟ್​ನಲ್ಲಿ ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್​ನ ಹಿಂದಿಕ್ಕಿ ಗಿಲ್​ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಸಾಧಾರಣ ಪರ್ಫಾಮೆನ್ಸ್​ ನೀಡ್ತಿರೋ ಗಿಲ್​ಗೆ ಹೋಲಿಸಿದ್ರೆ, ಸಂಜು ಸ್ಯಾಮ್ಸನ್​, ಜೈಸ್ವಾಲ್ ಬೆಟರ್​ ಟ್ರ್ಯಾಕ್​ ರೆಕಾರ್ಡ್​ ಹೊಂದಿದ್ದಾರೆ. ಅಗ್ರೆಸ್ಸಿವ್ ಆರಂಭ ಒದಗಿಸೋ ಸಾಮರ್ಥ್ಯ ಇವರಿಗಿದೆ. ಒಂದು ವೇಳೆ ಸರಣಿಯಲ್ಲಿ ಗಿಲ್​ ಫೇಲ್​ ಆದ್ರೆ ಸೆಲೆಕ್ಷನ್​ ಕಮಿಟಿ ಕಣ್ಣು ಜೈಸ್ವಾಲ್, ಸಂಜುವಿನ ಮೇಲೆ ಬೀಳಲಿದೆ.

Advertisment

ಆ ಕನಸಿಗೂ ಕೊಕ್ಕೆ..!

ಟೆಸ್ಟ್​ ಹಾಗೂ ಒನ್​ ಡೇ ಕ್ಯಾಪ್ಟನ್​ ಆಗಿರೋ ಶುಭ್​ಮನ್​ ಗಿಲ್​ ಭವಿಷ್ಯದ ಟಿ20 ತಂಡದ ನಾಯಕ ಎಂದೇ ಬಿಂಬಿತವಾಗಿದ್ದಾರೆ. ಸೆಲೆಕ್ಷನ್​ ಕಮಿಟಿ ಹಾಗೂ ಟೀಮ್ ಮ್ಯಾನೇಜ್​ಮೆಂಟ್​ ಕೂಡ ವರ್ಷದಿಂದ ಟಿ20 ಸೆಟಪ್​ನಿಂದ ಹೊರಗುಳಿದಿದ್ದ ಗಿಲ್​ನ ಕರೆ ತಂದಿದ್ದಲ್ಲದೇ ಉಪನಾಯಕತ್ವವನ್ನೂ ನೀಡಿದೆ. ಭವಿಷ್ಯದ ತ್ರಿ ಫಾರ್ಮೆಟ್​​ ಕ್ಯಾಪ್ಟನ್​ ಮಾಡೋಕೆ ಬಿಸಿಸಿಐ ಕೂಡ ರೆಡಿಯಾಗಿದೆ. ಆದ್ರೆ, ಗಿಲ್​ ಪರ್ಫಾಮೆನ್ಸ್​ ಮೇಲೆ ಅಂತಿಮ ನಿರ್ಧಾರ ನಿಂತಿದೆ. ಗಿಲ್​ ಪರ್ಫಾಮ್​ ಮಾಡಿ ಪ್ರೂವ್​ ಮಾಡಿದ್ರೆ ಮಾತ್ರ ಟಿ20 ಮಾದರಿಯಲ್ಲೂ ನಾಯಕತ್ವ ಒಲಿಯಲಿದೆ. 

ಇದನ್ನೂ ಓದಿ: ಮೊದಲ ಟಿ-20 ಪಂದ್ಯ.. ಬಲಿಷ್ಠ ಟೀಂ ಇಂಡಿಯಾದಲ್ಲಿ ಯಾರಿಗೆಲ್ಲ ಸ್ಥಾನ..?

Suryakumar_Gill_IndvsAus

ಶುಭ್​ಮನ್​ ಗಿಲ್​ನ​ ಟಿ20 ಫಾರ್ಮೆಟ್​​ನ ಕ್ಯಾಪ್ಟನ್​ ಮಾಡೋದಕ್ಕೆ ಈಗಾಗಲೇ ಹಲವರ ವಿರೋಧವಿದೆ. 2 ಫಾರ್ಮೆಟ್​ಗಳಲ್ಲಿ ತಂಡವನ್ನ ಮುನ್ನಡೆಸ್ತಾ ಶುಭ್​ಮನ್​ ಗಿಲ್​ಗೆ ಟಿ20 ನಾಯಕತ್ವವನ್ನೂ ನೀಡಿದ್ರೆ, ವರ್ಕ್​​ಲೋಡ್​​ ಮ್ಯಾನೇಜ್​ಮೆಂಟ್​​ ಮಾಡೋದು ಹೇಗೆ ಎಂಬ ಪ್ರಶ್ನೆಯಿದೆ. ವರ್ಕ್​ಲೋಡ್​ ಮ್ಯಾನೇಜ್​ಮೆಂಟ್​ ದೃಷ್ಟಿಯಿಂದ ಗಿಲ್​ನ ಟಿ20 ಫಾರ್ಮೆಟ್​ನಿಂದ ಹೊರಗಿಡಬೇಕು ಅನ್ನೋದು ಹಲವರ ವಾದವಾಗಿದೆ. ಸೌತ್​​ ಆಫ್ರಿಕಾ ಸರಣಿಯಲ್ಲಿ ಫೇಲ್​ ಆದ್ರೆ, ಇದನ್ನೆ ನೆಪವಾಗಿಸಿಕೊಂಡಿ ಸೈಡ್​ಲೈನ್​ ಮಾಡೋ ಸಾಧ್ಯತೆಯನ್ನ ತಳ್ಳಿ ಹಾಕುವಂತಿಲ್ಲ. 

Advertisment

ವರ್ಕ್​​ಲೋಡ್​​ ಮ್ಯಾನೇಜ್​ಮೆಂಟ್​ ಮಾತ್ರವಲ್ಲ.. ಗಿಲ್​ ಎಂಟ್ರಿಯಿಂದ ಟಿ20 ಟೀಮ್​ನ ಬ್ಯಾಲೆನ್ಸ್​ ಕೂಡ ತಪ್ಪಿದೆ. ಓಪನರ್​ ಸಂಜು ಸ್ಯಾಮ್ಸನ್​ ಮಿಡಲ್​ ಆರ್ಡರ್​ನಲ್ಲಿ ಬ್ಯಾಟಿಂಗ್​ ಮಾಡುವಂತಾಗಿದೆ. ಮಿಡಲ್​ ಆರ್ಡರ್​ ಬ್ಯಾಟರ್ಸ್​ ಬೆಂಚ್​ ಕಾಯುವಂತಾಗಿದೆ. ಇನ್ನು, ಅಗ್ರೆಸ್ಸಿವ್​ ಇಂಟೆಂಟ್​ನೊಂದಿಗೆ ಬ್ಯಾಟಿಂಗ್​ ಆರಂಭಿಸ್ತಾ ಇದ್ದ ಟೀಮ್​ ಇಂಡಿಯಾದ ಅಪ್ರೋಚ್​ ಕೂಡ ಬದಲಾಗಿದೆ. 
ತವರಿನಲ್ಲಿ ನಡೆಯೋ 2026ರ ಪ್ರತಿಷ್ಟಿತ ವಿಶ್ವಕಪ್​ ಟೂರ್ನಿಗೂ ಮುನ್ನ ಟೀಮ್​ ಇಂಡಿಯಾ 2 ಸರಣಿಗಳನ್ನ ಮಾತ್ರ ಆಡಲಿದೆ. ಅದ್ರಲ್ಲಿ ಒಂದು ಸೌತ್​ ಆಫ್ರಿಕಾ ಸರಣಿ. ವಿಶ್ವಕಪ್​ಗೆ ಈ ಸರಣಿಯಿಂದಲೇ ಅಧಿಕೃತ ಸಿದ್ಧತೆ ಆರಂಭಿಸ್ತಾ ಇರೋದ್ರಿಂದ ಗಿಲ್​ ಪಾಲಿಗೆ ಈ ಸರಣಿ ಮೋಸ್ಟ್​ ಇಂಪಾರ್ಟೆಂಟ್​. ಈ ಸರಣಿಯಲ್ಲಿ ಇಂಪ್ರೆಸ್ಸಿವ್​ ಪ್ರದರ್ಶನ ನೀಡಿದ್ರೆ ಸ್ಥಾನ ಸೇಫ್​.! ಇಲ್ಲಿದಿದ್ರೆ, 2024ರಂತೆ 2026ರ ವಿಶ್ವಕಪ್​​ನಲ್ಲೂ ಸ್ಥಾನ ವಂಚಿತರಾಗಬೇಕಾಗುತ್ತದೆ. 

ಇದನ್ನೂ ಓದಿ: ಮಂಕಾದ ಸೂರ್ಯ.. ಗ್ರಹಣ ಬಿಡದಿದ್ದರೆ ಪಟ್ಟ ಒಂದೇ ಅಲ್ಲ, ತಂಡದಿಂದಲೇ ಕಿಕ್​ ಔಟ್!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Shubman Gill Captaincy Shubman Gill style Shubman Gill Ind vs SA
Advertisment
Advertisment
Advertisment