Advertisment

T20 ಸರಣಿಗೂ ಟೀಮ್​ ಇಂಡಿಯಾ ಪ್ರಕಟ.. ಸ್ಟಾರ್​ ಆಲ್​ರೌಂಡರ್ ಔಟ್​..!

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಜೊತೆಗೆ ಟಿ20 ಸರಣಿಗೂ ಟೀಮ್​ ಇಂಡಿಯಾ ಪ್ರಕಟವಾಗಿದೆ. 2026ರ ಟಿ20 ವಿಶ್ವಕಪ್​ಗೆ ಕ್ಲೀಯರ್​ ಕಟ್​ ಪ್ಲಾನ್​ ಹೊಂದಿರೋ ಸೆಲೆಕ್ಷನ್​ ಕಮಿಟಿ ಪರ್ಫೆಟ್​ ತಂಡವನ್ನ ಸೆಲೆಕ್ಟ್​ ಮಾಡಿದೆ. ಕಾಂಗರೂಗಳ ಬೇಟೆಗೆ ಟೀಮ್​ ಇಂಡಿಯಾದ ಟಿ20 ಟೀಮ್​ ಹೇಗಿದೆ?

author-image
Ganesh Kerekuli
Shivam dube team india new jursey (1)
Advertisment

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಜೊತೆಗೆ ಟಿ20 ಸರಣಿಗೂ ಟೀಮ್​ ಇಂಡಿಯಾ ಪ್ರಕಟವಾಗಿದೆ. 2026ರ ಟಿ20 ವಿಶ್ವಕಪ್​ಗೆ ಕ್ಲೀಯರ್​ ಕಟ್​ ಪ್ಲಾನ್​ ಹೊಂದಿರೋ ಸೆಲೆಕ್ಷನ್​ ಕಮಿಟಿ ಪರ್ಫೆಟ್​ ತಂಡವನ್ನ ಸೆಲೆಕ್ಟ್​ ಮಾಡಿದೆ. ಕಾಂಗರೂಗಳ ಬೇಟೆಗೆ ಟೀಮ್​ ಇಂಡಿಯಾದ ಟಿ20 ಟೀಮ್​ ಹೇಗಿದೆ?

Advertisment

ಇಂಡೋ-ಆಸಿಸ್​​ ಏಕದಿನ ಸರಣಿ ಅಕ್ಟೋಬರ್​ 19ರಿಂದ ಆರಂಭವಾಗಲಿದ್ರೆ ಟಿ20 ಸರಣಿ ಅಕ್ಟೋಬರ್​​ 29ರಿಂದ ಆರಂಭವಾಗಲಿದೆ. ಮುಂದಿನ ಫೆಬ್ರವರಿ ಅಥವಾ ಮಾರ್ಚ್​ನಲ್ಲಿ ಸೌತ್​ ಆಫ್ರಿಕಾದಲ್ಲಿ ನಡೆಯೋ ಟಿ20 ವಿಶ್ವಕಪ್​​ ದೃಷ್ಟಿಯಿಂದ ಆಸ್ಟ್ರೇಲಿಯಾದಲ್ಲಿ ನಡೆಯೋ 5 ಪಂದ್ಯಗಳ ಸರಣಿ ಟೀಮ್​ ಇಂಡಿಯಾ ಪಾಲಿಗೆ ಮಹತ್ವದ್ದಾಗಿದೆ. ಟಫ್​ ಕಂಡಿಷನ್ಸ್​ನಲ್ಲಿ ಬಲಿಷ್ಟ ತಂಡದೆದುರಿನ ಸರಣಿ ಮೆನ್​ ಇನ್​ ಬ್ಲ್ಯೂ ಪಡೆಗೆ ಸಿದ್ಧತೆಗೆ ಹೆಚ್ಚು ನೆರವಾಗಲಿದೆ. ಹೀಗಾಗಿ ವಿಶ್ವಕಪ್​ ಕ್ಲೀಯರ್​​ ಕಟ್​​ ಪ್ಲಾನ್​ ಹೊಂದಿರೋ ಸೆಲೆಕ್ಷನ್​​ ಕಮಿಟಿ ಪರ್ಫೆಕ್ಟ್​ ತಂಡವನ್ನ ಸೆಲೆಕ್ಟ್​ ಮಾಡಿದೆ. 

ಇದನ್ನೂ ಓದಿ: ಗಿಲ್ ಯುಗ ಆರಂಭ.. ODI ಪಟ್ಟ ಕಟ್ಟುವ ಮೊದಲು ರೋಹಿತ್ ಜೊತೆ ನಡೆದಿದ್ದೇನು?

ABHISHEK_GILL

ಸೂರ್ಯನೇ ನಾಯಕ.. ಶುಭ್​​ಮನ್​​​​​​​​​​​ ಉಪ ನಾಯಕ..!

ಸೂರ್ಯಕುಮಾರ್ ನಾಯಕತ್ವದಲ್ಲೇ ಟೀಮ್ ಇಂಡಿಯಾ ಕಾಂಗೂರು ಬೇಟೆಗೆ ಇಳಿಯುತ್ತಿದೆ. T20 ಫಾರ್ಮೆಟ್​ನಲ್ಲಿ ಸತತ ವೈಫಲ್ಯ ಅನುಭವಿಸ್ತಾ ಇರೋದ್ರಿಂದ ಸೂರ್ಯಕುಮಾರ್​ ಯಾದವ್​​ ನಾಯಕತ್ವಕ್ಕೆ ಕುತ್ತು ಬಂದಿದೆ ಎನ್ನಲಾಗಿತ್ತು. ಆಸ್ಟ್ರೇಲಿಯಾ ಪ್ರವಾಸದಲ್ಲೇ ಶುಭ್​​​ಮನ್​ ಗಿಲ್​ಗೆ ಟಿ20 ತಂಡದ ಸಾರಥ್ಯವನ್ನೂ ನೀಡಲಾಗುತ್ತೆ ಎಂದು ವರದಿಯಾಗಿತ್ತು. ಆದ್ರೆ, ಸೆಲೆಕ್ಷನ್​ ಕಮಿಟಿ ಸೂರ್ಯಕುಮಾರ್​ನೇ ನಾಯಕನಾಗಿ ಮುಂದುವರೆಸಿದೆ. ಉಪನಾಯಕನಾಗಿ ಶುಭ್​ಮನ್​ ಗಿಲ್​ ಮುಂದುವರೆದಿದ್ದಾರೆ.  

Advertisment

ಡೇರ್​ ಡೆವಿಲ್​ ಬ್ಯಾಟರ್​​ ಅಭಿಷೇಕ್​ ಶರ್ಮಾ ಆರಂಭಿಕನ ಸ್ಥಾನವನ್ನ ಉಳಿಸಿದ್ದಾರೆ. ಯಶಸ್ವಿ ಜೈಸ್ವಾಲ್​ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಮತ್ತೊಮ್ಮೆ ಫೇಲ್​ ಆಗಿದ್ದಾರೆ. ಏಷ್ಯಾಕಪ್​​ ಫೈನಲ್​​ನಲ್ಲಿ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ನೀಡಿದ್ದ ತಿಲಕ್ ವರ್ಮಾ ಕೂಡ ಸ್ಥಾನ ಉಳಿಸಿಕೊಂಡಿದ್ದಾರೆ. 

ಇದನ್ನೂ ಓದಿ: ಇವತ್ತು ಮತ್ತೊಂದು ಹೈವೋಲ್ಟೇಜ್ ಕದನ.. ಮಹಿಳಾ ವಿಶ್ವಕಪ್​ನಲ್ಲೂ ನೋ ಹ್ಯಾಂಡ್​ಶೇಕ್..!

HARDHIK_PANDYA_GILL

ಸಂಜು ಮತ್ತು ಜಿತೇಶ್ ಶರ್ಮಾಗೆ ಮಣೆ

ಆಸ್ಟ್ರೇಲಿಯಾ ಎದುರಿನ 5 ಪಂದ್ಯಗಳ ಟಿ20 ಸರಣಿಯಲ್ಲಿ ಫಸ್ಟ್ ಚಾಯ್ಸ್ ವಿಕೆಟ್ ಕೀಪರ್ ಆಗಿ ಸಂಜು ಸ್ಯಾಮ್ಸನ್ ಮುಂದುವರಿದಿದ್ದಾರೆ. ರಿಷಭ್​​​​ ಪಂತ್ ಇಂಜುರಿಯ ಲಾಭ ಜಿತೇಶ್ ಶರ್ಮಾಗೆ ಸಿಕ್ಕಿದೆ. ಜಿತೇಶ್​ ಶರ್ಮಾ ಬ್ಯಾಕ್ ಆಫ್ ವಿಕೆಟ್​ ಕೀಪರ್​ ಆಗಿ ಕಾಣಿಸಿಕೊಂಡಿದ್ದಾರೆ. ಇಂಜುರಿಗೆ ತುತ್ತಾಗಿರುವ ಹಾರ್ದಿಕ್ ಪಾಂಡ್ಯ, ಆಸ್ಟ್ರೇಲಿಯಾ ಪ್ರವಾಸದಿಂದ ಹೊರಬಿದ್ದಿದ್ದಾರೆ. ಇದೇ ಕಾರಣಕ್ಕೆ ನಿತಿಶ್ ಕುಮಾರ್​ ರೆಡ್ಡಿ ಬದಲಿ ಆಟಗಾರನಾಗಿ ಟಿ20 ತಂಡಕ್ಕೆ ಕಮ್​ಬ್ಯಾಕ್ ಮಾಡಿದ್ದಾರೆ. ಏಷ್ಯಾಕಪ್​​​ನಲ್ಲಿ ಕಮಾಲ್ ಮಾಡಿದ್ದ ಶಿವಂ ದುಬೆಗೆ, ನಿರೀಕ್ಷೆಯಂತೆಯೇಆಸ್ಟ್ರೇಲಿಯಾ ಟಿಕೆಟ್ ಸಿಕ್ಕಿದೆ.

Advertisment

ಇಬ್ಬರು ಸ್ಪೆಷಲಿಸ್ಟ್ ಸ್ಪಿನ್ನರ್ಸ್..!

ಏಷ್ಯಾಕಪ್​​ನಲ್ಲಿ ಮಿಸ್ ಆಗಿದ್ದ ಆಲ್​​ರೌಂಡರ್ ವಾಷಿಂಗ್ಟನ್ ಸುಂದರ್, ಟಿ20 ತಂಡಕ್ಕೆ ಮತ್ತೆ ಕಮ್​ಬ್ಯಾಕ್ ಮಾಡಿದ್ದಾರೆ. ಲೆಫ್ಟ್​ ಆರ್ಮ್​ ಸ್ಪಿನ್ನರ್​ ಅಕ್ಷರ್​ ಪಟೇಲ್ ಕೂಡ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಏಷ್ಯಾಕಪ್​ ಗೆಲುವಿನ ಹಿಂದಿನ ಹೀರೋಗಳಾದ ಕುಲ್​ದೀಪ್ ಯಾದವ್, ವರುಣ್ ಚಕ್ರವರ್ತಿ ತಂಡದಲ್ಲಿ ಉಳಿದುಕೊಂಡಿದ್ದಾರೆ. ಸ್ಪೆಷಲಿಸ್ಟ್​ ಸ್ಪಿನ್ನರ್​ಗಳಿಗೆ ಆಸ್ಟ್ರೇಲಿಯಾದಲ್ಲಿ ಬಿಗ್ ಚಾಲೆಂಜ್ ಎದುರಾಗಲಿದೆ.

ಇದನ್ನೂ ಓದಿ:ನಾಯಕತ್ವದಿಂದ ರೋಹಿತ್​ಗೆ ಗೇಟ್​ಪಾಸ್; ​​ಪಾಂಡ್ಯ, ಪಂತ್​ ಔಟ್, ಜಡೇಜಾಗೂ ಅನ್ಯಾಯ

Surya kumar yadav (7)

ಏಕದಿನ ಫಾರ್ಮೆಟ್​​ನಲ್ಲಿ ರೆಸ್ಟ್ ಪಡೆದಿರುವ ಬೂಮ್ರಾ, ಟಿ20ಯಲ್ಲಿ ಅಖಾಡಕ್ಕಿಳಿಯಲಿದ್ದಾರೆ. ಏಷ್ಯಾಕಪ್​​ನಲ್ಲಿ ಕಣಕ್ಕಿಳಿದ ಜಸ್​ಪ್ರೀತ್ ಬೂಮ್ರಾ, ಅರ್ಷ್​ದೀಪ್ ಸಿಂಗ್, ಹರ್ಷಿತ್ ರಾಣಾ, ಟಿ20 ತಂಡದಲ್ಲಿ ಸ್ಥಾನ ಪಡೆದಿರುವ ತ್ರಿವಳಿ ವೇಗಿಗಳಾಗಿದ್ದಾರೆ. ಆದ್ರೆ, ಆಸ್ಟ್ರೇಲಿಯಾದಂತ ಸ್ವಿಂಗ್ & ಸೀಮ್ ಕಂಡೀಷನ್ಸ್​ನಲ್ಲಿ  5 ಟಿ20 ಪಂದ್ಯಗಳನ್ನಾಡಲಿದೆ. ಈ ದೀರ್ಘಕಾಲದ ಸರಣಿಗೆ ಕೇವಲ ಮೂವರು ವೇಗಿಗಳನ್ನಷ್ಟೇ ಸೆಲೆಕ್ಟ್​ ಮಾಡಿರೋದು ತಂಡಕ್ಕೆ ಹಿನ್ನಡೆಯಾಗುತ್ತಾ ಎಂಬ ಪ್ರಶ್ನೆ ಹುಟ್ಟಿದೆ. 

Advertisment

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Suryakumar Yadav profile Surya kumar Yadav T20I team IND vs AUS India vs Australia
Advertisment
Advertisment
Advertisment