/newsfirstlive-kannada/media/post_attachments/wp-content/uploads/2025/01/GOUTHAM_GAMBHIR.jpg)
ವಿರಾಟ್​ ಕೊಹ್ಲಿ-ರೋಹಿತ್​ ಶರ್ಮಾ.. ಟೀಮ್​ ಇಂಡಿಯಾ ಈ ದಿಗ್ಗಜರ ಭವಿಷ್ಯ ಮತ್ತೆ ಚರ್ಚೆಗೆ ಬಂದಿದೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ರೋಹಿತ್​ ಶರ್ಮಾ ಸೂಪರ್​​ ಹಿಟ್​ ಪರ್ಫಾಮೆನ್ಸ್​ ನೀಡಿದ್ರು. ಮೊದಲ 2 ಪಂದ್ಯ ಫೇಲಾದ್ರೂ 3ನೇ ಮ್ಯಾಚ್​ನಲ್ಲಿ ವಿರಾಟ್​ ಕೊಹ್ಲಿ ಇಂಪ್ರೆಸ್ಸಿವ್​ ಆಟವಾಡಿದ್ರು. ಇವರಿಬ್ಬರ ಸ್ಥಾನ ಸೇಫ್​​ ಇಲ್ಲ. ರೋ-ಕೊ ಜೋಡಿಗೆ ಬಿಸಿಸಿಐ ಬಾಸ್​ಗಳು ಕಂಡೀಷನ್​ ಹಾಕಿದ್ದಾರೆ.
ರೋ-ಕೊ ಜೋಡಿಗೆ ಬಿಸಿಸಿಐ ಬಾಸ್​ಗಳ ಕಂಡಿಷನ್​
ಈಗಲ್ಲ.. ಕೊಹ್ಲಿ-ರೋಹಿತ್​ ವಿಶ್ವಕಪ್​​ ಕನಸು ನನಸಾಗಬೇಕಂದ್ರೆ ವಿಜಯ್​ ಹಜಾರೆ ಟೂರ್ನಿಯಲ್ಲಿ ಆಡಲೇಬೇಕು ಅಂತಾ ನಾವು 2 ತಿಂಗಳ ಹಿಂದೆಯೇ ಹೇಳಿದ್ವಿ. ಈ ವಿಚಾರದಲ್ಲೂ ಬಿಸಿಸಿಐ ಈಗಲೂ ಪಟ್ಟು ಸಡಿಲಿಸ್ತಿಲ್ಲ. ಟೀಮ್​ ಇಂಡಿಯಾ ಒನ್​ ಡೇ ಟೀಮ್​ನಲ್ಲಿ ಸ್ಥಾನ ಬೇಕಂದ್ರೆ ಡೊಮೆಸ್ಟಿಕ್​ ಸೀಸನ್​ನಲ್ಲಿ ವಿಜಯ್​ ಹಜಾರೆ ಟೂರ್ನಿಯನ್ನ ಆಡಲೇಬೇಕು ಎಂದು ಮತ್ತೆ ಬಿಸಿಸಿಐ ಬಾಸ್​ಗಳು ಕಟ್ಟಾಜ್ಞೆ ಹೊರಡಿಸಿದ್ದಾರೆ. ಬಿಸಿಸಿಐ ಆದೇಶಕ್ಕೆ ಹಿಟ್​ಮ್ಯಾನ್​ ರೋಹಿತ್​ ಮಣಿದಿದ್ದಾರೆ.
ಇದನ್ನೂ ಓದಿ: IPL ಹರಾಜಿನ ಕಣದಲ್ಲಿ ಬಿಗ್ ಸ್ಟಾರ್ಸ್..! ಯಾರಿಗೆ ಕೈಹಿಡಿಯಲಿದೆ ಅದೃಷ್ಟ..?
/filters:format(webp)/newsfirstlive-kannada/media/media_files/2025/11/03/rohit_sharma_1-2025-11-03-08-42-11.jpg)
2027ರ ವಿಶ್ವಕಪ್​ ಆಡಲೇಬೇಕು ಅಂತಾ ಪಣತೊಟ್ಟಿರೋ ರೋಹಿತ್​ ಶರ್ಮಾ ಹಗಲುರಾತ್ರಿ ಶ್ರಮ ಪಡ್ತಿದ್ದಾರೆ. ಇಷ್ಟಪಟ್ಟಿದ್ದನ್ನೆಲ್ಲಾ ತ್ಯಜಿಸಿ ಕಠಿಣ ವರ್ಕೌಟ್​ ನಡೆಸ್ತಾ ಇರೋ ಹಿಟ್​ಮ್ಯಾನ್​ ಆಸ್ಟ್ರೇಲಿಯಾ ಪ್ರವಾಸದ ಬಳಿಕ ಮತ್ತೆ 5 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಫಿಟ್​ನೆಸ್​​ ಜೊತೆಗೆ ಫಾರ್ಮ್​ ಉಳಿಸಿಕೊಳ್ಳಲು ಭರ್ಜರಿ ಅಭ್ಯಾಸವನ್ನೂ ನಡೆಸ್ತಿದ್ದಾರೆ. ಇದ್ರ ನಡುವೆ ಬಿಸಿಸಿಐ ಬಾಸ್​ಗಳ ಸವಾಲನ್ನ ರೋಹಿತ್​ ಸ್ವೀಕರಿಸಿದ್ದಾರೆ. ವಿಜಯ್​ ಹಜಾರೆ ಆಡಲು ಮುಂದಾಗಿರೋ ಹಿಟ್​ಮ್ಯಾನ್​, ಈಗಾಗಲೇ ಮುಂಬೈ ಕ್ರಿಕೆಟ್​ ಅಸೋಸಿಯೇಷನ್​ಗೆ ಮಾಹಿತಿ ನೀಡಿದ್ದಾರೆ. ಇದ್ರೊಂದಿಗೆ ವಿಶ್ವಕಪ್​ ಆಡೋಕೆ ಸರ್ವ ತ್ಯಾಗಕ್ಕೂ ನಾನು ರೆಡಿ ಅನ್ನೋ ಸಂದೇಶ ರವಾನಿಸಿದ್ದಾರೆ.
ರೋಹಿತ್​ ಶರ್ಮಾ ವಿಜಯ್​​ ಹಜಾರೆ ಆಡೋದು ಕನ್​ಫರ್ಮ್​ ಆಗಿದೆ. ಆದ್ರೆ, ವಿರಾಟ್​ ಕೊಹ್ಲಿ ವಿಜಯ್​ ಹಜಾರೆ ಆಡ್ತಾರಾ.? ಇಲ್ವಾ.? ಅನ್ನೋದು ಸದ್ಯ ದೊಡ್ಡ ಪ್ರಶ್ನೆಯಾಗಿದೆ. ಈವರೆಗೂ ವಿರಾಟ್​ ಕೊಹ್ಲಿ ದೆಹಲಿ ಕ್ರಿಕೆಟ್​ ಅಸೋಸಿಯೇಶನ್​ಗೆ ಯಾವುದೇ ಮಾಹಿತಿಯನ್ನ ನೀಡಿಲ್ಲ. ಹೀಗಾಗಿ ಕೊಹ್ಲಿ ಮುಂದಿನ ನಡೆ ಏನು ಅನ್ನೋದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ:‘ನಾವು ರೆಡಿ ಇಲ್ಲ..’ ಕೋಚ್ ಗಂಭೀರ್ ಸ್ಫೋಟಕ ಹೇಳಿಕೆ..!
/filters:format(webp)/newsfirstlive-kannada/media/media_files/2025/10/26/kohli_rohit_aus-2025-10-26-12-39-16.jpg)
ಇತ್ತೀಚೆಗೆ ವಿರಾಟ್​ ಕೊಹ್ಲಿಯ ನಡೆಯೇ ನಿಗೂಢವಾಗಿದೆ. ಆಸಿಸ್​ ಪ್ರವಾಸದ ಮೊದಲ ಪಂದ್ಯಗಳಲ್ಲಿ ಔಟ್​ ಆದ ಬಳಿಕ ಯಾರ ಕಣ್ಣಿಗೂ ಕಾಣದೇ ಮಾಯವಾಗ್ತಿದ್ದ ಕೊಹ್ಲಿ, ಕೊನೆಯ ಪಂದ್ಯ ಮುಗಿದ ಬಳಿಕ ಆದ್ಯಾವಾಗ ಕಾಂಗರೂ ನಾಡಿನಿಂದ ಲಂಡನ್​ ಹೋದ್ರೂ ಅನ್ನೋದು ಯಾರಿಗೂ ಗೊತ್ತಾಗ್ಲಿಲ್ಲ. ಸದಾ ಕಾಲ ಕುಟುಂಬದ ಜೊತೆಗಿರಲು ಬಯಸ್ತಿರೋ ಕೊಹ್ಲಿ ಕ್ರಿಕೆಟ್​ ವಿಜಾರದಲ್ಲಿ ನಿಗೂಢವಾದ ಹೆಜ್ಜೆಯನ್ನ ಇಡ್ತಿದ್ದಾರೆ. ಆಸಿಸ್​ ಪ್ರವಾಸಕ್ಕೂ ಮುನ್ನ ಇಂಗ್ಲೆಂಡ್​ ಕನಿಷ್ಟ ಅಭ್ಯಾಸವನ್ನಾದ್ರೂ ನಡೆಸಿದ್ರು. ಆದ್ರೆ, ಈಗ ಅದ್ರ ಸುಳಿವೂ ಇಲ್ಲ. ಹೀಗಾಗಿ ಕೊಹ್ಲಿ ವಿಜಯ್​ ಹಜಾರೆ ಆಡ್ತಾರೋ.? ಅಥವಾ ಸೌತ್​ ಆಫ್ರಿಕಾ ವಿರುದ್ಧದ ಏಕದಿನ ಸರಣಿ ಬಳಿಕ ಗುಡ್​ ಬೈ ಹೇಳಿ ಶಾಕ್​ ಕೊಡ್ತಾರೋ.? ಅನ್ನೋ ಪ್ರಶ್ನೆ ಅಭಿಮಾನಿಗಳ ವಲಯದಲ್ಲಿದೆ.
ದಿಗ್ಗಜರಿಗೆ ಹೆಡ್ಕೋಚ್ ‘ಗಂಭೀರ’ ಎಚ್ಚರಿಕೆ ಕೊಟ್ರಾ.?
ವೈಯಕ್ತಿಕ ಪ್ರದರ್ಶನಗಳ ಮೇಲೆ ಎಲ್ಲಾ ನಿಂತಿಲ್ಲ ಅನ್ನೋದನ್ನ ನಾನು ಯಾವಾಗಲೂ ನಂಬುತ್ತೇನೆ. ವೈಯಕ್ತಿಕ ಪ್ರದರ್ಶನಗಳಿಂದ ನಾನು ಖುಷಿ ಪಟ್ಟಿದ್ದೇನೆ. ಅದರಿಂದ ಖುಷಿಯಾಗಿಯೂ ಇರುತ್ತೇನೆ. ಆದ್ರೆ, ಅಂತಿಮವಾಗಿ ನಾನು ಸರಣಿಯನ್ನ ಸೋತೆವು. ಅದು ಮುಖ್ಯವಾದ ವಿಚಾರ. ಕೋಚ್ ಆಗಿ ಸರಣಿ ಸೋಲನ್ನ ನಾನು ಎಂದಿಗೂ ಸಂಭ್ರಮಿಸಲ್ಲ. ಆಟಗಾರನಾಗಿ ನಾನು ವೈಯಕ್ತಿಕ ಪ್ರದರ್ಶನಗಳನ್ನ ಮೆಚ್ಚುತ್ತೇನೆ. ಆದ್ರೆ ಕೋಚ್ ಆಗಿ ಒಂದು ಸರಣಿ ಸೋಲನ್ನ ಸಂಭ್ರಮಿಸದಿರುವುದು ನನ್ನ ನೈತಿಕ ಜವಾಬ್ದಾರಿ. ದೇಶವಾಗಲಿ ಅಥವಾ ಒಬ್ಬರಾಗಲಿ ಯಾವುದೇ ಕಾರಣಕ್ಕೂ ಸರಣಿ ಸೋಲನ್ನ ಸಂಭ್ರಮಿಸಬಾರದು. ಯಾಕಂದ್ರೆ ನಾವು ದೇಶವನ್ನ ಪ್ರತಿನಿಧಿಸುತ್ತಾ ಇದ್ದೀವಿ- ಗೌತಮ್ ಗಂಭೀರ್, ಹೆಡ್ ಕೋಚ್
ಕೊಹ್ಲಿ-ರೋಹಿತ್​ ಗುರಿಯಾಗಿಸಿಯೇ ಗಂಭೀರ್​ ಈ ಸ್ಟೇಟ್​ಮೆಂಟ್ ಮಾಡಿದ್ದು ಅನ್ನೋದ್ರಲ್ಲಿ ಯಾವುದೇ ಅನುಮಾನ ಬೇಡ. ಇದ್ರ ಬೆನ್ನಲ್ಲೇ ಬಿಸಿಸಿಐ ಬಾಸ್​ಗಳು ವಿಜಯ್​​ ಹಜಾರೆ ಆಡಲೇಬೇಕು ಎಂದು ಮತ್ತೆ ಫರ್ಮಾನು ಹೊರಡಿಸಿದ್ದಾರೆ. ಕೊಹ್ಲಿ ಹಾಗೂ ರೋಹಿತ್​ ವಿಶ್ವಕಪ್​ ಸ್ಥಾನ ಫಿಕ್ಸ್​​ ಆಗಿಲ್ಲ ಅನ್ನೋದೇ ಇದರರ್ಥ. ಆಡಬೇಕು, ಪರ್ಫಾಮ್​ ಮಾಡಬೇಕು, ಸ್ಥಾನ ಉಳಿಸಿಕೊಳ್ಳಬೇಕು. ಸದ್ಯ ರೋ-ಕೊ ಮುಂದಿರೋದು ಇದೊಂದೇ ದಾರಿ.
ಇದನ್ನೂ ಓದು: ಜಡೇಜಾಗೆ CSK ನಂಬಿಕೆ ದ್ರೋಹ.. ಓರ್ವ ಸ್ಟಾರ್​​ಗಾಗಿ ಈ ಮಟ್ಟಕ್ಕೆ ಇಳಿಯಿತಾ ಫ್ರಾಂಚೈಸಿ..?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us