Advertisment

ಜಡೇಜಾಗೆ CSK ನಂಬಿಕೆ ದ್ರೋಹ.. ಓರ್ವ ಸ್ಟಾರ್​​ಗಾಗಿ ಈ ಮಟ್ಟಕ್ಕೆ ಇಳಿಯಿತಾ ಫ್ರಾಂಚೈಸಿ..?

IPL ಇತಿಹಾಸದಲ್ಲೇ ಬಹುಶಃ ಮೆಗಾ ಡೀಲ್ ಅಂದ್ರೆ ಇದೇನೇ ಇರಬಹುದು. 18 ಕೋಟಿ ರೂ ಆಟಗಾರರಿಗಾಗಿ ಜಿದ್ದಿಗೆ ಬಿದ್ದಿದ್ದ 2 ಫ್ರಾಂಚೈಸಿಗಳು ಎಲ್ಲವನ್ನೂ ಸುಗಮವಾಗಿ ಅಂತ್ಯಗೊಳಿಸಿದೆ. ಕೆಲವೇ ಗಂಟೆಗಳಲ್ಲಿ ಆಟಗಾರರ ಡೀಲ್ ಫೈನಲ್ ಆಗಲಿದೆ. ಒಬ್ಬ ಆಟಗಾರನಿಗೋಸ್ಕರ ಲಾಯಲ್ ಆಗಿದ್ದ ಮತ್ತೊಬ್ಬನ್ನ ಬಲಿ ಪಡೆದಿದೆ.

author-image
Ganesh Kerekuli
Ravidnra Jadeja
Advertisment
  • ಚೆನ್ನೈ ಸೂಪರ್​ಕಿಂಗ್ಸ್​ ತಂಡದಿಂದ ಜಡೇಜಾ ಬಹುತೇಕ ಔಟ್..?
  • ಜಡೇಜಾಗೆ ನಂಬಿಕೆ ದ್ರೋಹ ಮಾಡಿತಾ ಸಿಎಸ್​​ಕೆ ಫ್ರಾಂಚೈಸಿ..?
  • 2022ರಲ್ಲಿ ನಾಯಕತ್ವ ಕೊಟ್ಟು ಕಿತ್ತುಕೊಂಡಿತಾ ಸೂಪರ್​​ಕಿಂಗ್ಸ್​..?

ಚೆನ್ನೈ ಸೂಪರ್​ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್​ ಫ್ರಾಂಚೈಸಿಗಳ ಮೆಗಾ ಡೀಲ್, ಬಹುತೇಕ ಫಿಕ್ಸ್ ಆದಂತೆ ಕಾಣುತ್ತದೆ. ಸಂಜು ಸ್ಯಾಮ್ಸನ್​​ಗಾಗಿ ಪಟ್ಟು ಹಿಡಿದಿದ್ದ ಸಿಎಸ್​ಕೆ ಕೊನೆಗೆ ಅಂದುಕೊಂಡಿದ್ದನ್ನ ಸಾಧಿಸಿದೆ. ಮತ್ತೊಂದೆಡೆ ಆರ್​ಆರ್​ ಫ್ರಾಂಚೈಸಿ, ಅಸಮಾಧಾನಿತ ಸಂಜು ಸ್ಯಾಮ್ಸನ್​ನ ಟ್ರೇಡ್ ಮಾಡಿ ಇಬ್ಬರು ಮಸ್ತ್ ಆಲ್​ರೌಂಡರ್​ಗಳನ್ನ ತನ್ನ ತೆಕ್ಕೆಗೆ ಪಡೆದುಕೊಂಡಿದೆ. ಇಲ್ಲಿ ಪ್ರಶ್ನೆ ಎದುರಾಗಿರೋದು ಆಟಗಾರರ ಟ್ರೇಡಿಂಗ್ ಅಲ್ಲ.

Advertisment

ಜಡೇಜಾ ಬಹುತೇಕ ಔಟ್..?

13 ವರ್ಷಗಳ ಕಾಲ ಚೆನ್ನೈ ಸೂಪರ್​ಕಿಂಗ್ಸ್ ತಂಡದಲ್ಲಿ ಆಡಿದ್ದ ಆಲ್​ರೌಂಡರ್ ರವೀಂದ್ರ ಜಡೇಜಾಗೆ, ಇದೀಗ ಫ್ರಾಂಚೈಸಿ ಬದಲಿಸುವ ಕಾಲ ಬಂದಿದೆ. ಸಿಎಸ್​​ಕೆ ತಂಡದ ಗನ್ ಪ್ಲೇಯರ್ ಎನಿಸಿಕೊಂಡಿದ್ದ ಜಡ್ಡು, ಇದೀಗ ಫ್ರಾಂಚೈಸಿಗೆ ಬೇಡವಾಗಿದ್ದಾರೆ. ಸದ್ಯ ಸಿಎಸ್​​​ಕೆ ಮತ್ತು ಆರ್​ಆರ್​ ಫ್ರಾಂಚೈಸಿ, ಪ್ಲೇಯರ್ ಟ್ರೇಡಿಂಗ್​ನಲ್ಲಿ ಜಡೇಜಾರನ್ನ ರಾಜಸ್ಥಾನಕ್ಕೆ ಕೊಟ್ಟು ಸಂಜು ಸ್ಯಾಮ್ಸನ್​​ರನ್ನ ಚೆನ್ನೈಗೆ ಕರೆತರುತ್ತಿದೆ. ಇನ್ನು ಕೆಲವೇ ಗಂಟೆಗಳಲ್ಲಿ ಅಧಿಕೃತ ನಿರ್ಧಾರ ಹೊರಬೀಳಲಿದೆ.

ಇದನ್ನೂ ಓದಿ: ICC ODI Ranking: ರೋಹಿತ್​​ ನಂಬರ್​​ 1; ಕೊಹ್ಲಿಗೆ ಎಷ್ಟನೇ ಸ್ಥಾನ ಗೊತ್ತಾ?

Jadeja_Sanju_Samson_ipl_2026_csk

ರವೀಂದ್ರ ಜಡೇಜಾ ಚೆನ್ನೈ ಸೂಪರ್​ಕಿಂಗ್ಸ್​ ತಂಡದ 3D ಪ್ಲೇಯರ್ ಆಗಿದ್ರು. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್​​ನಲ್ಲಿ ಜಡ್ಡುರನ್ನ, ಮೀರಿಸೋ ಆಟಗಾರನೇ ಇರಲಿಲ್ಲ. ದಶಕಕ್ಕಿಂತ ಹೆಚ್ಚು ಕಾಲ ಸಿಎಸ್​​ಕೆ ತಂಡಕ್ಕೆ ಜಡೇಜಾ, ನಿಸ್ವಾರ್ಥ ಸೇವೆ ಸಲ್ಲಿಸಿದ್ರು. ಆದ್ರೂ ಚೆನ್ನೈ ಫ್ರಾಂಚೈಸಿ, ಜಡೇಜಾ ಸೇವೆಗೆ ಕಿಂಚಿತ್ತೂ ಬೆಲೆ ಕೊಡಲಿಲ್ಲ. ಕೇವಲ ಬ್ಯುಸಿನಿಸ್​​​ಗಾಗಿ ಫ್ರಾಂಚೈಸಿ ನಡೆಸುತ್ತಿರುವ ಸಿಎಸ್​​ಕೆ, ಲಾಯಲ್ ಆಟಗಾರನನ್ನ ಕಳೆದುಕೊಂಡಿದೆ.

Advertisment

ಇದನ್ನೂ ಓದಿ: IPL ಹರಾಜಿನ ಕಣದಲ್ಲಿ ಬಿಗ್ ಸ್ಟಾರ್ಸ್..! ಯಾರಿಗೆ ಕೈಹಿಡಿಯಲಿದೆ ಅದೃಷ್ಟ..?

2022ರ ಐಪಿಎಲ್​​ನಲ್ಲಿ ಚೆನ್ನೈ ಸೂಪರ್​ಕಿಂಗ್ಸ್​ ಫ್ರಾಂಚೈಸಿ, ರವೀಂದ್ರ ಜಡೇಜಾಗೆ ನಾಯಕತ್ವದ ಪಟ್ಟ ಕಟ್ಟಿತ್ತು. ಪಟ್ಟ ಜಾಸ್ತಿ ದಿನಗಳ ಕಾಲ ಇರಲಿಲ್ಲ. ಸೀಸನ್ ಮಧ್ಯದಲ್ಲೇ ಸಿಎಸ್​​ಕೆ ಫ್ರಾಂಚೈಸಿ, ಜಡೇಜಾರನ್ನ ನಾಯಕತ್ವದಿಂದ ಕೆಳಗಿಳಿಸಿತು. ಇದ್ರಿಂದ ಮನನೊಂದಿದ್ದ ಜಡ್ಡು, ಮ್ಯಾನೇಜ್ಮೆಂಟ್ ವಿರುದ್ಧ ಅಸಮಾಧಾನ ಹೊರಹಾಕಿದ್ರು. ಅಂದೇ ಜಡ್ಡು ಚೆನ್ನೈ ಫ್ರಾಂಚೈಸಿ ಬಿಡಬೇಕಿತ್ತು. ಆದ್ರೆ ಒಳಗೊಳಗೆ ಅದೇನ್ ನಡೀತೋ ಗೊತ್ತಿಲ್ಲ. ಜಡ್ಡು ಸೈಲೆಂಟ್ ಆಗ್ಬಿಟ್ರು. 

ಆಲ್​ರೌಂಡರ್ ರವೀಂದ್ರ ಜಡೇಜಾರನ್ನ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಟ್ರೇಡ್ ಮಾಡ್ತಿರೋದು, ಚೆನ್ನೈ ಸೂಪರ್​ಕಿಂಗ್ಸ್ ಮಾಡ್ತಿರೋ ದೊಡ್ಡ ತಪ್ಪು. ಯಾಕಂದ್ರೆ ಜಡೇಜಾರಂತಹ ಆಲ್​ರೌಂಡರ್​ನನ್ನ ಹುಡುಕಿದ್ರೂ ಸಿಗೋದಿಲ್ಲ. ಆದ್ರೆ ಸಿಎಸ್​ಕೆ ಮಾಲೀಕರಿಗೆ ಜಡೇಜಾ ಸಾಮರ್ಥ್ಯ ಗೊತ್ತಿದ್ರೂ, ಗೊತ್ತಿಲ್ಲದಂತೆ ನಟಿಸುತ್ತಿದ್ದಾರೆ. ಇದು ಚೆನ್ನೈ ಫ್ರಾಂಚೈಸಿಯ ಮೂರ್ಖತನವೋ ಅಥವಾ ಸೂಸೈಡ್ ಅಟೆಂಪ್ಟೋ, ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

Advertisment

ಇದನ್ನೂ ಓದಿ: ‘ನಾವು ರೆಡಿ ಇಲ್ಲ..’ ಕೋಚ್ ಗಂಭೀರ್ ಸ್ಫೋಟಕ ಹೇಳಿಕೆ..!

DHONI_SANJU

ಜಡೇಜಾ ವರ್ಸಸ್ ಸಂಜು ಸ್ಯಾಮ್ಸನ್ ಇಬ್ಬರಲ್ಲಿ ಯಾರು ಗ್ರೇಟ್​​..? ಜಡೇಜಾನಾ ಅಥವಾ ಸ್ಯಾಮ್ಸನಾ ಅನ್ನೋ ಪ್ರಶ್ನೆಗೆ, ಉತ್ತರ ಒಂದೇ. ಅದು ರವಿಂದ್ರ ಜಡೇಜಾ. ಜಡೇಜಾ ಕೇವಲ 3D ಪ್ಲೇಯರ್​ ಅಷ್ಟೇ ಅಲ್ಲ. ಆತ ಮ್ಯಾಚ್ ವಿನ್ನರ್ ಹಾಗೆ ಗೇಮ್ ಚೇಂಜರ್ ಕೂಡ ಹೌದು. ಇನ್ನು ಸ್ಯಾಮ್ಸನ್ ಟ್ಯಾಲೆಂಟೆಡ್ ಕ್ರಿಕೆಟರ್ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಸಂಜು ಇನ್​ಕನ್ಸಿಸ್ಟೆಂಟ್​​ ಪ್ಲೇಯರ್. ಆ ದಿನ ಸ್ಯಾಮ್ಸನ್​​​ದಾದ್ರೆ ಪರ್ಫಾಮ್ ಮಾಡ್ತಾರೆ. ಇಲ್ದಿದ್ರೆ ಸ್ಯಾಮ್ಸನ್​​​ ಬ್ಯಾಟ್​ನಿಂದ ನಿರೀಕ್ಷಿತ ಪ್ರದರ್ಶನ ನೋಡೋದೇ ಅಪರೂಪ.

ರವೀಂದ್ರ ಜಡೇಜಾ ಮತ್ತು ಸಂಜು ಸ್ಯಾಮ್ಸನ್ ಟ್ರೇಡ್ ವಿಚಾರ, ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಕೆಲ ಅಭಿಮಾನಿಗಳು, ರವೀಂದ್ರ ಜಡೇಜಾರನ್ನ ಚೆನ್ನೈ ತಂಡದಲ್ಲೇ ಉಳಿಸಿಕೊಳ್ಳಬೇಕಿತ್ತು. ಸಿಎಸ್​​ಕೆ ಫ್ರಾಂಚೈಸಿ ಜಡ್ಡುರನ್ನ ಟ್ರೇಡ್ ಮಾಡಿ ತಪ್ಪು ಮಾಡ್ತಿದೆ ಅಂತ ಅಭಿಪ್ರಾಯ ವ್ಯಕ್ತಪಡಿಸಿದ್ರೆ, ಇನ್ನೂ ಕೆಲವರು ಸಂಜು ಸ್ಯಾಮ್ಸನ್​​ರನ್ನ ಸಿಎಸ್​​ಕೆ ತಂಡಕ್ಕೆ ಕರೆತರುತ್ತಿರೋದು ಒಳ್ಳೆ ಐಡಿಯಾ ಅಂತಿದ್ದಾರೆ.
ಯಾರು ಏನೇ ಹೇಳಲಿ, ಜಡೇಜಾರನ್ನ ಸಿಎಸ್​ಕೆ ತಂಡ ಟ್ರೇಡ್ ಮಾಡೋದು ಯುದ್ಧಕ್ಕೆ ಅಸ್ತ್ರಗಳಿಲ್ಲದೆ ಹೋಗೋದು ಎರಡೂ ಒಂದೇ. ಇನ್ನೇನ್ ಕೆಲವೇ ಗಂಟೆಗಳಲ್ಲಿ ಜಡೇಜಾ ಸಿಎಸ್​ಕೆ ಭವಿಷ್ಯ ಕೂಡ ನಿರ್ಧಾರವಾಗಲಿದೆ.

ಇದನ್ನೂ ಓದಿ: ವಿಕೋಪಕ್ಕೆ ತಿರುಗಿದ ರೈತರ ಪ್ರತಿಭಟನೆ.. ಮುಧೋಳದಲ್ಲಿ ಕಬ್ಬು ತುಂಬಿದ್ದ 100ಕ್ಕೂ ಹೆಚ್ಚು ಟ್ರ್ಯಾಕ್ಟರ್​ಗಳಿಗೆ ಬೆಂಕಿ..!

Advertisment

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Sanju Samson Ravindra Jadeja
Advertisment
Advertisment
Advertisment