/newsfirstlive-kannada/media/media_files/2025/09/24/jasprit-bumrah-1-2025-09-24-13-58-33.jpg)
ಏಷ್ಯಾಕಪ್​ ಟೂರ್ನಿಯ ಮತ್ತೊಂದು ಮಹತ್ವದ ಕದನಕ್ಕೆ ಕೌಂಟ್​​ಡೌನ್​ ಆರಂಭವಾಗಿದೆ. ಸೋಲಿಲ್ಲದ ಸರದಾರ ಟೀಮ್​ ಇಂಡಿಯಾ ಇಂದು ಬಾಂಗ್ಲದೇಶದ ಸವಾಲಿಗೆ ಸಜ್ಜಾಗಿದೆ. ಪಾಕಿಸ್ತಾನವನ್ನ ಚಿಂದಿ ಉಡಾಯಿಸಿದ ಟೀಮ್​ ಇಂಡಿಯಾ ಬಾಂಗ್ಲಾದೇಶ ವಿರುದ್ಧವೂ ಜಯಭೇರಿ ಬಾರಿಸೋಕೆ ತುದಿಗಾಲಲ್ಲಿ ನಿಂತಿದೆ.
ಇದನ್ನೂ ಓದಿ:ಶೃಂಗೇರಿ ಶಾರದಾ ಪೀಠದ ಸಂಸ್ಥೆಯ ನಿರ್ದೇಶಕನ ವಿರುದ್ಧ ಲೈಂಗಿಕ ಕಿರುಕುಳದ ಆರೋಪ: ಶೃಂಗೇರಿ ಶಾರದಾ ಪೀಠ ಹೇಳಿದ್ದೇನು?
ಏಷ್ಯಾಕಪ್​ ಟೂರ್ನಿಯ ಮತ್ತೊಂದು ಮಹತ್ವದ ಬ್ಯಾಟಲ್​ಗೆ ವೇದಿಕೆ ಸಜ್ಜಾಗಿದೆ. ದುಬೈ ಅಂಗಳದಲ್ಲಿಂದು ಟೀಮ್​ ಇಂಡಿಯಾ ಹಾಗೂ ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಲಿವೆ. ಬದ್ಧವೈರಿ ಪಾಕ್​ ಪಡೆಯನ್ನ ಪುಡಿಗಟ್ಟಿದ ಟೀಮ್​ ಇಂಡಿಯಾ ಇದೀಗ ಬಾಂಗ್ಲಾ ಟೈಗರ್ಸ್​ ಬೇಟೆಗೆ ತುದಿಗಾಲಲ್ಲಿ ನಿಂತಿದೆ.
ಫೈನಲ್​ ಟಿಕೆಟ್​​ ಮೇಲೆ ಟೀಮ್​ ಇಂಡಿಯಾ ಕಣ್ಣು
ಏಷ್ಯನ್​ ಸಮರದಲ್ಲಿ ಟೀಮ್ ಇಂಡಿಯಾ ಸೋಲಿಲ್ಲದ ಸರದಾರನಾಗಿ ಮುನ್ನಗುತ್ತಿದೆ. ಸೂಪರ್​-4ನಲ್ಲೂ ಸೂಪರ್ ಪರ್ಫಾಮೆನ್ಸ್ ನೀಡ್ತಿರುವ ಮೆನ್​ ಇನ್​ ಬ್ಲೂ ಪಡೆ ಇಂದು ಬಾಂಗ್ಲಾ ಎದುರು ಗೆಲುವಿನ ಲಯ ಮುಂದುವರಿಸೋ ತವಕದಲ್ಲಿದೆ. ದುಬೈ ಅಂಗಳದಲ್ಲಿ ಜಯಭೇರಿ ಬಾರಿಸಿ ಒಂದು ಪಂದ್ಯ ಬಾಕಿ ಇರುವಂತೆ ಫೈನಲ್​ ಟಿಕೆಟ್​ ಗಿಟ್ಟಿಸಿಕೊಳ್ಳೋ ಲೆಕ್ಕಾಚಾರದಲ್ಲಿದೆ.
ಮುಂದುವರೆಯುತ್ತಾ ಅಭಿಷೇಕ್​ ಅಬ್ಬರ?
ಇಂದಿನ ಪಂದ್ಯದಲ್ಲಿ ಎಲ್ಲರ ಕಣ್ಣಿರೋದೆ ಡೇರಿಂಗ್​ ಬ್ಯಾಟರ್​​ ಅಭಿಷೇಕ್​ ಶರ್ಮಾ ಮೇಲೆ. ಏಷ್ಯಾಕಪ್​ ಅಖಾಡದಲ್ಲಿ ಭರ್ಜರಿ ಆಟವಾಡ್ತಿರೋ ಅಭಿಷೇಕ್​ ರನ್​ ಹೊಳೆ ಹರಿಸುತ್ತಿದ್ದಾರೆ. ಇಂದಿನ ಪಂದ್ಯದಲ್ಲೂ ಎಂಟರ್​​ಟೈನಿಂಗ್​ ಇನ್ನಿಂಗ್ಸ್​ನ ನಿರೀಕ್ಷೆ ಅಭಿಮಾನಿಗಳ ವಲಯದಲ್ಲಿದೆ. ಅಭಿಷೇಕ್​ ಜೊತೆಗೆ ಕಳೆದ ಪಂದ್ಯದಲ್ಲಿ ಶೈನ್​​ ಆದ ಶುಭ್​​ಮನ್​ ಗಿಲ್​ ಮೇಲೂ ನಿರೀಕ್ಷೆ ಹೆಚ್ಚಿದೆ.
ಮಿಡಲ್​ ಆರ್ಡರ್​ಗೆ ಇಂದು ‘ಟೆಸ್ಟಿಂಗ್​ ಟೈಮ್’
ಕಳೆದ ಪಂದ್ಯದಲ್ಲಿ ಟೀಮ್​ ಇಂಡಿಯಾದ ಮಿಡಲ್​ ಆರ್ಡರ್​ ಬ್ಯಾಟರ್ಸ್​ ಫೇಲಾದ್ರು. ಸೂರ್ಯಕುಮಾರ್​ ಯಾದವ್​ ಡಕೌಟ್​ ಆದ್ರೆ, ಸಂಜು ಸ್ಯಾಮ್ಸನ್​ ರನ್​ಗಳಿಸೋಕೆ ಪರದಾಡಿದ್ರು. ಇಂದಿನ ಪಂದ್ಯದಲ್ಲಿ ಇವರಿಬ್ಬರು ರಿಧಮ್​ ಕಂಡುಕೊಳ್ಳಬೇಕಿದೆ. ಲೋವರ್​ ಆರ್ಡರ್​ ಬ್ಯಾಟರ್​​ಗಳಾದ ಆಲ್​​ರೌಂಡರ್​​ ಹಾರ್ದಿಕ್​ ಪಾಂಡ್ಯ ಹಾಗೂ ಶಿವಂ ದುಬೆ ಕೂಡ ಜವಾಬ್ಧಾರಿಯುತ ಇನ್ನಿಂಗ್ಸ್​ ಕಟ್ಟಬೇಕಿದೆ.
ಇಂದಿನ ಪಂದ್ಯದಲ್ಲೂ ಟೀಮ್​ ಇಂಡಿಯಾ ಸ್ಪಿನ್​​ ಅಸ್ತ್ರ ಪ್ರಯೋಗಿಸೋದು ಕನ್​ಫರ್ಮ್​​​.! ವರುಣ್​ ಚಕ್ರವರ್ತಿ, ಕುಲ್​​​ದೀಪ್​ ಯಾದವ್, ಅಕ್ಷರ್​ ಪಟೇಲ್​ ಇಂದಿನ ಕದನದಲ್ಲೂ ಸ್ಪಿನ್​​ ಜಾದೂ ಮಾಡೋಕೆ ರೆಡಿಯಾಗಿದ್ದಾರೆ. ಆಡಿದ ಮೂರು ಪಂದ್ಯಗಳಲ್ಲಿ ಸ್ಪಿನ್​ ಜಾದೂ ಮಾಡಿರೋ ತ್ರಿಮೂರ್ತಿಗಳು ಇಂದು ಬಾಂಗ್ಲಾ ಟೈಗರ್ಸ್​​ನೂ ಖೆಡ್ಡಾ ಬಿಳಿಸೋಕೆ ಸಜ್ಜಾಗಿದ್ದಾರೆ.
ವೇಗಿ ಜಸ್​​​ಪ್ರಿತ್​ ಬೂಮ್ರಾಗೆ ಇಂದಿನ ಪಂದ್ಯದಲ್ಲಿ ವಿಶ್ರಾಂತಿ ನೀಡಿದ್ರೂ ಅಚ್ಚರಿಪಡಬೇಕಿಲ್ಲ. ಏಷ್ಯಾಕಪ್​ನಲ್ಲಿ ಇಂಪ್ಯಾಕ್ಟ್​ಫುಲ್​ ಪರ್ಫಾಮೆನ್ಸ್​ ನೀಡುವಲ್ಲಿ ಬೂಮ್ರಾ ಫೇಲ್​ ಆಗಿದ್ದಾರೆ. ಏಷ್ಯಾಕಪ್​ ಅಂತ್ಯವಾದ ನಾಲ್ಕೇ ದಿನಕ್ಕೆ ವೆಸ್ಟ್​ ವಿಂಡೀಸ್​ ವಿರುದ್ಧದ ಮೊದಲ ಟೆಸ್ಟ್​ ಆರಂಭವಾಗಲಿದೆ. ಹೀಗಾಗಿ ವರ್ಕ್​​ಲೋಡ್​ ಮ್ಯಾನೇಜ್​ಮೆಂಟ್​ ದೃಷ್ಟಿಯಿಂದ ಬೂಮ್ರಾಗೆ ವಿಶ್ರಾಂತಿ ನೀಡಿ, ಎಡಗೈ ವೇಗಿ ಆರ್ಷ್​​ದೀಪ್​ ಸಿಂಗ್​ಗೆ ವಿಶ್ರಾಂತಿ ನೀಡೋ ಸಾಧ್ಯತೆಯಿದೆ.
ಏಷ್ಯಾಕಪ್​ ಟೂರ್ನಿಯಲ್ಲಿ ಟೀಮ್​ ಇಂಡಿಯಾ ಬ್ಯಾಟಿಂಗ್​ ಹಾಗೂ ಬೌಲಿಂಗ್​ನಲ್ಲಿ ಬೊಂಬಾಟ್​​ ಪ್ರದರ್ಶನವನ್ನ ನೀಡಿದೆ. ಫೀಲ್ಡಿಂಗ್​ ವಿಚಾರದಲ್ಲಿ ಮಾತ್ರ ದಯನೀಯ ವೈಫಲ್ಯ ಅನುಭವಿಸಿದೆ. ಕಳೆದ ಪಂದ್ಯದಲ್ಲಂತೂ ಬರೋಬ್ಬರಿ 4 ಕ್ಯಾಚ್​ಗಳನ್ನ ಟೀಮ್​ ಇಂಡಿಯಾ ಆಟಗಾರರು ಡ್ರಾಪ್​ ಮಾಡಿದ್ರು. ಇಂದಿನ ಪಂದ್ಯದಲ್ಲಿ ಫೀಲ್ಡಿಂಗ್​ ಸುಧಾರಿಸಲೇಬೇಕಿದೆ.
ಇದನ್ನೂ ಓದಿ:ಸಂಪೂರ್ಣ ಮಹಿಳಾ ಪೊಲೀಸ್ ಅಧಿಕಾರಿಗಳಿಂದ ಮೊದಲ ಎನ್ ಕೌಂಟರ್: ಆರೋಪಿ ಬಂಧನ
ಮೊದಲ ಬದ್ಧವೈರಿ ಪಾಕಿಸ್ತಾನವನ್ನ ಒಂದಲ್ಲ. ಎರಡು ಬಾರಿ ಈ ಬಾರಿಯ ಏಷ್ಯಾಕಪ್​ ಅಖಾಡದಲ್ಲಿ ಚಿಂದಿ ಉಡಾಯಿಸಿದೆ. ಇದೀಗ 2ನೇ ಬದ್ಧವೈರಿ ಬಾಂಗ್ಲಾದೇಶದ ಚಾಲೆಂಜ್​ ಟೀಮ್​ ಇಂಡಿಯಾ ಮುಂದಿದೆ. ಪಾಕಿಸ್ತಾನಕ್ಕೆ ಹೋಲಿಸಿದ್ರೆ ಬಾಂಗ್ಲಾದೇಶ ಏಷ್ಯಾಕಪ್​ನಲ್ಲಿ ಉತ್ತಮ ಪರ್ಫಾಮೆನ್ಸ್​ ನೀಡಿದೆ. ಶ್ರೀಲಂಕಾಗೆ ಸೋಲುಣಿಸಿದ ಆತ್ಮವಿಶ್ವಾಸದಲ್ಲಿ ಇಂದು ಕಣಕ್ಕಿಳಿಯುತ್ತಿದೆ. ಬಾಂಗ್ಲಾ ಟೈಗರ್ಸ್​ ಟಫ್ ಫೈಟ್​ ನೀಡೋದಂತೂ ಪಕ್ಕಾ. ಪ್ರತಿಷ್ಟೆಯ ಪಂದ್ಯವಾಗಿರೋದ್ರಿಂದ ಟೀಮ್​ ಇಂಡಿಯಾ ಎಚ್ಚರಿಕೆಯ ಆಟವಾಡಬೇಕಿದೆ.
ಸಂಭಾವ್ಯ ತಂಡ: ಅಭಿಷೇಕ್ ಶರ್ಮಾ, ಶುಬ್ಮನ್ ಗಿಲ್, ಸೂರ್ಯ ಕುಮಾರ್ ಯಾದವ್ (ಕ್ಯಾಪ್ಟನ್), ತಿಲಕ್ ವರ್ಮಾ, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್, ಶಿವಂ ದುಬೆ, ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ