Advertisment

3 ತಿಂಗಳು, 3 ಸರಣಿ, ಟೀಮ್​ ಇಂಡಿಯಾಗೆ 5 ಸವಾಲು

ಟಿ20 ವಿಶ್ವಕಪ್​ ಟೂರ್ನಿಗೆ ಕೆಲವೇ ತಿಂಗಳು ಬಾಕಿ ಉಳಿದಿವೆ. ತಂಡಗಳ ಸಿದ್ಧತೆಯೂ ಜೋರಾಗಿ ನಡೀತಿದೆ. ವಿಶ್ವ ಚಾಂಪಿಯನ್​​ ಟೀಮ್​ ಇಂಡಿಯಾದಲ್ಲಿ ಮಾತ್ರ ಗೊಂದಲಗಳೇ ತುಂಬಿವೆ. ಮುಂಬರೋ 3 ತಿಂಗಳಲ್ಲಿ ನಡೆಯೋ 3 ಸರಣಿಗಳಲ್ಲಿ 5 ಸವಾಲುಗಳನ್ನ ಇಂಡಿಯನ್​ ಟೀಮ್​ ಮ್ಯಾನೇಜ್​​​​​​ಮೆಂಟ್​ ಬಗೆಹರಿಸಿಕೊಳ್ಳಬೇಕಿದೆ.

author-image
Ganesh Kerekuli
gautam_gambhir_surya
Advertisment

ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಸೆಕೆಂಡ್​ ಫೈಟ್​ಗೆ ಟೀಮ್​ ಇಂಡಿಯಾ ರೆಡಿಯಾಗಿದೆ. ಸರಣಿಯ ಮೊದಲ ಪಂದ್ಯ ಮಳೆಯ ಅಬ್ಬರಕ್ಕೆ ಕೊಚ್ಚಿ ಹೋಗಿದೆ. ಇಂದಿನ ಪಂದ್ಯ ಗೆದ್ದು ಮುನ್ನಡೆ ಸಾಧಿಸೋ ಲೆಕ್ಕಾಚಾರದಲ್ಲಿ ಉಭಯ ತಂಡಗಳಿವೆ. ಮುಂಬರೋ ಟಿ20 ವಿಶ್ವಕಪ್​ ದೃಷ್ಟಿಯಿಂದ ಎರಡೂ ತಂಡಗಳಿಗೂ ಇದು ಮಹತ್ವದ ಸರಣಿಯಾಗಿದೆ.  

Advertisment

3 ತಿಂಗಳು, 3 ಸರಣಿ, ಟೀಮ್​ ಇಂಡಿಯಾಗೆ 5 ಸವಾಲು

2026ರ ಫೆಬ್ರವರಿ, ಮಾರ್ಚ್​ನಲ್ಲಿ ನಡೆಯೋ ಟಿ20 ವಿಶ್ವಕಪ್​ಗೂ ಮುನ್ನ ಟೀಮ್​  ಇಂಡಿಯಾ 3 ಟಿ20 ಸರಣಿಗಳನ್ನ ಆಡಲಿದೆ. ಆಸ್ಟ್ರೇಲಿಯಾ ಎದುರು 4 ಟಿ 20 ಪಂದ್ಯಗಳಾದ್ರೆ, ಬಳಿಕ ಸೌತ್​ ಆಫ್ರಿಕಾ ಎದುರು 5, ನ್ಯೂಜಿಲೆಂಡ್​ ಎದುರು 5 ಟಿ20 ಪಂದ್ಯನ್ನಾಡಲಿದೆ. 3 ತಿಂಗಳ ಅವಧಿಯಲ್ಲಿ ಆಡೋ ಈ 3 ಸರಣಿಗಳಲ್ಲಿ 5 ಸವಾಲುಗಳು ಟೀಮ್​ ಇಂಡಿಯಾ ಮುಂದಿವೆ. ಪ್ರತಿಷ್ಟೆಯ ಸರಣಿಗೂ ಮುನ್ನ ಕ್ಲಾರಿಟಿ ತೆಗೆದುಕೊಳ್ಳಬೇಕಿದೆ. 

ಏಕದಿನ ಮತ್ತು ಟೆಸ್ಟ್​ ತಂಡದ ನಾಯಕತ್ವವನ್ನ ಶುಭ್​ಮನ್​ ಗಿಲ್ ವಹಿಸಿಕೊಂಡ ಬಳಿಕ ಟಿ20 ನಾಯಕತ್ವ ಬದಲಾವಣೆಯ ಚಚ್ಚೆಯೂ ಬಿಸಿಸಿಐ ವಲಯದಲ್ಲಿ ನಡೆದಿದೆ. ನಾಯಕನಾದ ಬಳಿಕ ಸೂರ್ಯಕುಮಾರ್​ ಯಾದವ್​​ ತಮ್ಮ ಹಳೆ ಖದರ್​ ಕಳೆದುಕೊಂಡಿದ್ದಾರೆ. ಸೂರ್ಯಕುಮಾರ್ ಮೇಲಿನ ಒತ್ತಡ ಕಡಿಮೆ ಮಾಡಲು ಪಟ್ಟದಿಂದ ಕೆಳಗಿಳಿಸಿ ಗಿಲ್​ಗೆ ಜವಾಬ್ದಾರಿ ನೀಡೋ ಚಿಂತನೆ ಮ್ಯಾನೇಜ್​ಮೆಂಟ್ ವಲಯದಲ್ಲಿ ನಡೆದಿದೆ. ಈ ನಾಯಕತ್ವ ಬದಲಾವಣೆ ವಿಚಾರದಲ್ಲಿ ಕ್ಲಾರಿಟಿ ತೆಗೆದುಕೊಳ್ಳಬೇಕಿದೆ. 

ಫಸ್ಟ್​ ಚಾಯ್ಸ್​ ವಿಕೆಟ್​ ಕೀಪರ್​​ ಯಾರು?

ವಿಕೆಟ್​ ಕೀಪರ್​​ ವಿಚಾರದಲ್ಲಿ ಟೀಮ್​ ಇಂಡಿಯಾದಲ್ಲಿ ದೊಡ್ಡ ಗೊಂದಲ ಇದೆ. ಸದ್ಯ ಆಸಿಸ್​ ಪ್ರವಾಸದಲ್ಲಿ ಸಂಜು ಸ್ಯಾಮ್ಸನ್​ ಕೀಪಿಂಗ್​ ಜವಾಬ್ದಾರಿ ಹೊತ್ತಿದ್ದಾರೆ. ಆದ್ರೆ, ಮುಂದಿನ ಸರಣಿಗಳಲ್ಲಿ ರಿಷಭ್​ ಪಂತ್​ ಕಮ್​ಬ್ಯಾಕ್​ ಮಾಡಲಿದ್ದಾರೆ. ಆಗ ಸಂಜು ಸ್ಯಾಮ್ಸನ್​ ರೋಲ್ ಏನು ಅನ್ನೋದು ಸದ್ಯದ ಪ್ರಶ್ನೆಯಾಗಿದೆ. ಬ್ಯಾಕ್​ಅಪ್​ ವಿಕೆಟ್​ ಕೀಪರ್​ ಆಗಿ ತಂಡದಲ್ಲಿರೋ ಜಿತೇಶ್​ ಶರ್ಮಾ ವಿಚಾರದಲ್ಲೂ ಗೊಂದಲವಿದೆ. ಫಸ್ಟ್​ ಚಾಯ್ಸ್​ ಕೀಪರ್​ ಯಾರು.? ಬ್ಯಾಕ್​ ಅಪ್​ ವಿಕೆಟ್​ ಕೀಪರ್​ ಯಾರು.? ಅನ್ನೋ ಪ್ರಶ್ನೆಗೆ ಉತ್ತರ ಬೇಕಿದೆ. 

Advertisment

ಇದನ್ನೂ ಓದಿ: T20; ಹ್ಯಾಜಲ್​ವುಡ್​ ಮಿಂಚಿನ ದಾಳಿ.. ಗಿಲ್​, ಸೂರ್ಯ ಸೇರಿ 5 ವಿಕೆಟ್ ಫಿನೀಶ್​​​,​ ಸಂಕಷ್ಟದಲ್ಲಿ ಭಾರತ

ಇಂಜುರಿಗೆ ತುತ್ತಾಗಿರೋ ಹಾರ್ದಿಕ್​ ಪಾಂಡ್ಯ ಆಸಿಸ್​ ಪ್ರವಾಸದ ತಂಡದಲ್ಲಿಲ್ಲ. ಆದ್ರೂ ಹಾರ್ದಿಕ್​ ಪಾಂಡ್ಯ ತಂಡದ ಫಸ್ಟ್​ ಚಾಯ್ಸ್​ ಆಲ್​​ರೌಂಡರ್​ ಆಗಿರಲಿದ್ದಾರೆ. ಪ್ರಶ್ನೆ ಇರೋದು ಬ್ಯಾಕ್​ ಅಪ್​ ಆಲ್​​ರೌಂಡರ್​ ಯಾರಿರಲಿದ್ದಾರೆ ಅನ್ನೋದು. ನಿತೀಶ್​ ರೆಡ್ಡಿ, ಶಿವಂ ದುಬೆ ಇಬ್ಬರಲ್ಲಿ ಯಾರಿಗೆ ಸ್ಥಾನ ಸಿಗುತ್ತೆ.? ಪ್ಲೇಯಿಂಗ್​ ಇಲೆವೆನ್ನಲ್ಲಿ ಇಬ್ಬರು ಬೌಲಿಂಗ್​ ಆಲ್​ರೌಂಡರ್ಸ್​ಗೆ ಸ್ಥಾನ ನೀಡಬೇಕಾ.? ಅನ್ನೋ ಗೊಂದಲಕ್ಕೂ ತೆರೆ ಎಳೆಯಬೇಕಿದೆ. 

ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಭಾರತ-ಶ್ರೀಲಂಕಾದಲ್ಲಿ ನಡೆಯೋದ್ರಿಂದ ಸ್ಪಿನ್ನರ್ಸ್​ ಮೇಜರ್​ ರೋಲ್​ ಪ್ಲೇ ಮಾಡಲಿದ್ದಾರೆ. ಕುಲ್​​ದೀಪ್​ ಯಾದವ್​, ವರುಣ್​ ಚಕ್ರವರ್ತಿ ಸ್ಪೆಷಲಿಸ್ಟ್​ ಸ್ಪಿನ್ನರ್​ಗಳಾಗಿ ಟಿ20 ಸೆಟಪ್​ನಲ್ಲಿದ್ರೆ, ವಾಷಿಂಗ್ಟನ್​ ಸುಂದರ್​, ಅಕ್ಷರ್​ ಪಟೇಲ್​ ಸ್ಪಿನ್​​ ಆಲ್​​ರೌಂಡರ್​ಗಳಾಗಿ ತಂಡದಲ್ಲಿದ್ದಾರೆ. ಬ್ಯಾಟಿಂಗ್​ ಡೆಪ್ತ್​​ ಕಾರಣದಿಂದ ಆಲ್​ರೌಂಡರ್ಸ್​ಗೆ ಕೋಚ್​ ಗಂಭೀರ್​ ಹೆಚ್ಚು ಚಾನ್ಸ್​ ನೀಡ್ತಿದ್ದಾರೆ. ವಿಶ್ವಕಪ್​ನಲ್ಲೂ ಇದೇ ಸ್ಟ್ರಾಟರ್ಜಿ ಮುಂದುವರೆಸಬೇಕಾ.? ಎಂಬ ಪ್ರಶ್ನೆಗೆ ಉತ್ತರ ಬೇಕಿದೆ. 

Advertisment

ಇದನ್ನೂ ಓದಿ: ಮೊದಲ ಪಂದ್ಯ ಮಳೆಗೆ ಗೋವಿಂದ.. ಎರಡನೇ ಮ್ಯಾಚ್​ ಹೀನಾಯವಾಗಿ ಸೋತ ಸೂರ್ಯ ಪಡೆ..!

ಜಸ್​​ಪ್ರಿತ್​ ಬೂಮ್ರಾ ಸ್ಥಾನದ ಬಗ್ಗೆ ಕಿಂಚಿತ್ತೂ ಡೌಟ್​ ಇಲ್ಲ. ಆದ್ರೆ, ಬೂಮ್ರಾ ಜೊತೆಗಾರ ಯಾರು ಅನ್ನೋ ಕ್ಲಾರಿಟಿ ಸಿಕ್ಕಿಲ್ಲ. ಕಳೆದ ವಿಶ್ವಕಪ್​ ಟೂರ್ನಿ ಸಾಲಿಡ್​ ಪರ್ಫಾಮೆನ್ಸ್​ ನೀಡಿದ್ದ ಎಡಗೈ ವೇಗಿ ಆರ್ಷ್​​ದೀಪ್​ ಸಿಂಗ್​ ಬೆಂಚ್​ ಬಿಸಿ ಮಾಡ್ತಿದ್ದಾರೆ. ಇನ್ನೊಬ್ಬ ವೇಗಿ ಮೊಹಮ್ಮದ್​ ಸಿರಾಜ್​ಗೆ ತಂಡದಲ್ಲಿ ಚಾನ್ಸೇ ಸಿಗ್ತಿಲ್ಲ. ಅನಾನುಭವಿ ಹರ್ಷಿತ್​ ರಾಣಾಗೆ ಚಾನ್ಸ್​ ಮೇಲೆ ಚಾನ್ಸ್​ ಸಿಗ್ತಿದೆ. ಬೂಮ್ರಾ ಜೊತೆಗಾರ ಯಾರು ಅನ್ನೋದಕ್ಕೆ ಸ್ಪಷ್ಟತೆ ಬೇಕಿದೆ. 

ಒಟ್ನಲ್ಲಿ, ಇಂದಿನ ಪಂದ್ಯವೂ ಸೇರಿ ಮುಂಬರೋ 14 ಟಿ20 ಪಂದ್ಯಗಳು ವಿಶ್ವಕಪ್​ ಸಿದ್ಧತೆ ದೃಷ್ಟಿಯಿಂದ ಟೀಮ್​ ಇಂಡಿಯಾ ಪಾಲಿಗೆ ಅತ್ಯಂತ ಮಹತ್ವದ್ದಾಗಿವೆ. ಈ ಪಂದ್ಯಗಳಲ್ಲಿ ತಂಡದಲ್ಲಿರೋ ಗೊಂದಲಗಳನ್ನ ಬಗೆಹರಿಸಿಕೊಂಡು ಕ್ಲಿಯರ್​ ಕಟ್ಟ ಪ್ಲಾನ್​ನೊಂದಿಗೆ ವಿಶ್ವಕಪ್​ ಅಖಾಡಕ್ಕೆ ಇಳಿಯಬೇಕಿದೆ. 

Advertisment

ಇದನ್ನೂ ಓದಿ: ಯುವಿಗೆ ಬಿಗ್ ಆಫರ್​​.. ಈ ತಂಡದ ಕೋಚ್ ಆಗುವಂತೆ ಫ್ರಾಂಚೈಸಿ ಆಹ್ವಾನ..!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

T20I Team India
Advertisment
Advertisment
Advertisment