ಕಿವೀಸ್ ವಿರುದ್ಧ ಕೊಹ್ಲಿ ದಂಡಯಾತ್ರೆ ಪಕ್ಕಾ.. ಅದಕ್ಕೆ ಕಾರಣ ಇಲ್ಲಿದೆ..

ಏಕದಿನ ಸರಣಿ ಬಂತು ಅಂದ್ರೆ ಕ್ರಿಕೆಟ್ ಅಭಿಮಾನಿಗಳಿಗೆ ಹಬ್ಬವೋ ಹಬ್ಬ. ಯಾಕಂದ್ರೆ ವಿರಾಟ್ ಕೊಹ್ಲಿ ಆಟವನ್ನ ಕಣ್ತುಂಬಿಸಿಕೊಳ್ಳಲು, ಫ್ಯಾನ್ಸ್ ಕಾತುರದಿಂದ ಕಾಯ್ತಾರೆ. ಕೊಹ್ಲಿ ಹೊಡೆಯೋ ಒಂದೊಂದು ರನ್, ಮಾಡೋ ಒಂದೊಂದು ದಾಖಲೆಯನ್ನ ಕ್ರಿಕೆಟ್ ಪ್ರಿಯರು ಎಂಜಾಯ್ ಮಾಡ್ತಾರೆ.

author-image
Ganesh Kerekuli
Virat Kohli (6)
Advertisment
  • ಕಳೆದ 6 ಪಂದ್ಯದಲ್ಲಿ 3 ಶತಕ, 3 ಅರ್ಧಶತಕ..
  • ಕಿಂಗ್​ ವಿರಾಟ್ ಕೊಹ್ಲಿ ಮೇಲೆ ಹೆಚ್ಚಿದ ನಿರೀಕ್ಷೆ
  • ಸಾಲಿಡ್ ಫಾರ್ಮ್​ನಲ್ಲಿರುವ ವಿರಾಟ್ ಕೊಹ್ಲಿ

ಏಕದಿನ ಸರಣಿ ಬಂತು ಅಂದ್ರೆ ಕ್ರಿಕೆಟ್ ಅಭಿಮಾನಿಗಳಿಗೆ ಹಬ್ಬವೋ ಹಬ್ಬ. ಯಾಕಂದ್ರೆ ವಿರಾಟ್ ಕೊಹ್ಲಿ ಆಟವನ್ನ ಕಣ್ತುಂಬಿಸಿಕೊಳ್ಳಲು, ಫ್ಯಾನ್ಸ್ ಕಾತುರದಿಂದ ಕಾಯ್ತಾರೆ. ಕೊಹ್ಲಿ ಹೊಡೆಯೋ ಒಂದೊಂದು ರನ್, ಮಾಡೋ ಒಂದೊಂದು ದಾಖಲೆಯನ್ನ ಕ್ರಿಕೆಟ್ ಪ್ರಿಯರು ಎಂಜಾಯ್ ಮಾಡ್ತಾರೆ. ಹಾಗಾಗಿ ವಿರಾಟ್ ಬ್ಯಾಟ್ ಹಿಡಿದು ನಿಂತ್ರೆ, ಪೈಸಾ ವಸೂಲ್.  

ಭಾರತದಲ್ಲಿ ಕೊಹ್ಲಿ ಮೇನಿಯಾ ಶುರುವಾಗಿದೆ. ಕ್ರಿಕೆಟ್​ ಫೀಲ್ಡ್​​ನಲ್ಲಿ ಇನ್ನೇನಿದ್ರೂ ಕಿಂಗ್ ಕೊಹ್ಲಿಯದ್ದೇ ಹವಾ. ಕೊಹ್ಲಿ ಬ್ಯಾಟ್​ ಹಿಡಿದು ಕ್ರೀಸ್​ಗೆ ಎಂಟ್ರಿ ಕೊಟ್ರೆ, ಕ್ರೀಡಾಂಗಣದಲ್ಲಿ ಕೊಹ್ಲಿಯ ಜೇಂಕಾರ ಶುರುವಾಗುತ್ತೆ. ಕೊಹ್ಲಿ ಹೊಡೆಯೋ ಒಂದೊಂದು ಬೌಂಡರಿ, ಸಿಕ್ಸರ್​ಗಳಿಗೆ, ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಯುವಂತೆ ಮಾಡಿಬಿಡುತ್ತದೆ. ಗ್ರೇಟ್​ ಫಾರ್ಮ್​​ನಲ್ಲಿರುವ ವಿರಾಟ್ ಕ್ರಿಕೆಟ್​​ ಅಭಿಮಾನಿಗಳಿಗೆ ಮತ್ತೆ ಮನರಂಜನೆ ನೀಡಲು ರೆಡಿಯಾಗಿದ್ದಾರೆ.  

ವಿಜಯ್ ಹಜಾರೆಯಲ್ಲಿ ಘರ್ಜಿಸಿದ ಕಿಂಗ್ ಕೊಹ್ಲಿ

ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್​ನಲ್ಲಿ ನಡೆದ ವಿಜಯ್ ಹಜಾರೆ ಟೂರ್ನಿಯ ಪಂದ್ಯಗಳಲ್ಲಿ ವಿರಾಟ್ ಅಬ್ಬರಿಸಿದ್ದಾರೆ. ಆಂಧ್ರ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಕೊಹ್ಲಿ, 101 ಎಸೆತಗಳಲ್ಲಿ 131 ರನ್​ ಸಿಡಿಸಿದ್ರು. ನಂತರ ಗುಜರಾತ್ ವಿರುದ್ಧ ವಿರಾಟ್, 61 ಎಸೆತಗಳಲ್ಲಿ 77 ರನ್​​ಗಳಿಸಿದ್ರು. ಆ ಎರಡೂ ಪಂದ್ಯಗಳಲ್ಲಿ ಡೆಲ್ಲಿ ಭರ್ಜರಿ ಗೆಲುವು ದಾಖಲಿಸ್ತು.

ಇದನ್ನೂ ಓದಿ:ಬಿಗ್​ ಬಾಸ್​ ಗೆಲ್ಲುವ ಸ್ಪರ್ಧಿ ಯಾರು ಅಂತಾ ಭವಿಷ್ಯ ನುಡಿದ ನೀತು ವನಜಾಕ್ಷಿ..! VIDEO

Virat kohli (5)

45 ಎಸೆತ, ಅಜೇಯ 65 ರನ್

ಸೌತ್ ಆಫ್ರಿಕಾ ವಿರುದ್ಧ ನಡೆದ 3ನೇ ಏಕದಿನ ಪಂದ್ಯದಲ್ಲಿ ಕೊಹ್ಲಿ, ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ರು. ಕೇವಲ 45 ಎಸೆತಗಳಲ್ಲಿ 65 ರನ್​ ಕಲೆಹಾಕಿದ ವಿರಾಟ್, ಆಫ್ರಿಕನ್ ಬೌಲರ್​ಗಳ ಮೇಲೆ ಸವಾರಿ ನಡೆಸಿದ್ರು. ಕೊಹ್ಲಿ ಆಟಕ್ಕೆ ಆಫ್ರಿಕನ್ನರು ಶರಣಾದ್ರು.

93 ಎಸೆತ, 102 ರನ್

ರಾಯ್​ಪುರ್​ನಲ್ಲಿ ಕೊಹ್ಲಿ, ರಾಯಲ್ ಇನ್ನಿಂಗ್ಸ್ ಆಡಿದ್ರು. 93 ಎಸೆತಗಳಲ್ಲಿ 102 ರನ್​ ಸಿಡಿಸಿದ ವಿರಾಟ್, ಆಕರ್ಷಕ ಶತಕ ಬಾರಿಸಿ ಮಿಂಚಿದ್ರು. ಕೊಹ್ಲಿಯ ಭರ್ಜರಿ ಬ್ಯಾಟಿಂಗ್​​ನಿಂದ ಟೀಮ್ ಇಂಡಿಯಾ ಬಿಗ್ ಸ್ಕೋರ್ ಕಲೆಹಾಕಿತ್ತು. ಆದ್ರೆ ಆ ಪಂದ್ಯವನ್ನ ಆಫ್ರಿಕನ್ನರು, ಸಖತ್ತಾಗಿ ಚೇಸ್ ಮಾಡಿ ಗೆದ್ದರು.    

ಇದನ್ನೂ ಓದಿ:ಮೊದಲ ಪಂದ್ಯಕ್ಕೂ ಮುನ್ನವೇ ಆಘಾತ.. ODI ಸಿರೀಸ್​ನಿಂದ ಹೊರಬಿದ್ದ ಟೀಂ ಇಂಡಿಯಾ ಸ್ಟಾರ್..!​

Virat kohli (4)

120 ಎಸೆತ, 135 ರನ್

ಗುರು ಧೋನಿ ತವರಿನಲ್ಲಿ ಶಿಷ್ಯ ವಿರಾಟ್, ಘರ್ಜಿಸಿದ್ರು. ಹರಿಣ ಬೌಲರ್​ಗಳನ್ನ ಬೇಟೆಯಾಡಿದ ವಿರಾಟ್ 120 ಎಸೆತಗಳಲ್ಲಿ 135 ರನ್​​ ದಾಖಲಿಸಿದ್ರು. ಕೊಹ್ಲಿ ಭರ್ಜರಿ ಬ್ಯಾಟಿಂಗ್​​ಗೆ, ಟೀಮ್ ಇಂಡಿಯಾಕ್ಕೆ ಗೆಲುವು ಒಲಿಯಿತು. ಕೊಹ್ಲಿಯ ವಿರಾಟ ರೂಪ ನೋಡಿ ಆಫ್ರಿಕನ್ನರು ಬೆಚ್ಚಿಬಿದ್ದರು.

81 ಎಸೆತ, ಅಜೇಯ 74 ರನ್

ಎರಡು ಪಂದ್ಯ, ಎರಡು ಸೊನ್ನೆಗಳೊಂದಿಗೆ ಆಸ್ಟ್ರೇಲಿಯಾ ಏಕದಿನ ಸರಣಿ ಆರಂಭಿಸಿದ ವಿರಾಟ್ ಕೊಹ್ಲಿ, ಸಿಡ್ನಿಯಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಸಾಲಿಡ್ ಇನ್ನಿಂಗ್ಸ್ ಆಡಿದ್ರು. 81 ಎಸೆತಗಳಲ್ಲಿ 74 ರನ್ ಕಲೆಹಾಕಿದ ಕೊಹ್ಲಿ, ಭಾರತಕ್ಕೆ ಗೆಲುವಿನ ಉಡುಗೊರೆ ನೀಡಿದ್ರು. ಸಿಡ್ನಿ ಹೀರೋ ಆಗಿ ಶೈನ್ ಆದ್ರು. ಆರು ಇನ್ನಿಂಗ್ಸ್​ಗಳಲ್ಲಿ 3 ಶತಕ ಮತ್ತು 3 ಅರ್ಧಶತಕಗಳನ್ನ ಹೊಡೆದಿರುವ ಕೊಹ್ಲಿ ಮೇಲೆ, ಮತ್ತೆ ನಿರೀಕ್ಷೆಗಳು ಹೆಚ್ಚಾಗಿವೆ. ಒಟ್ನಲ್ಲಿ..! ನ್ಯೂಜಿಲೆಂಡ್ ಸರಣಿಯಲ್ಲಿ ವಿರಾಟ್ ಸಿಡಿದ್ರೆ, ಅಭಿಮಾನಿಗಳು ಫುಲ್ ಖುಷ್ ಆಗ್ತಾರೆ. ಕಿವೀಸ್ ವಿರುದ್ಧ ಕೊಹ್ಲಿ, ಸೂಪರ್​​​ಹಿಟ್ ಆಗ್ಲಿ ಅನ್ನೋದೇ, ಎಲ್ಲರ ಆಶಯ.

ಇದನ್ನೂ ಓದಿ:ಈತ ಆರು ರಾಜ್ಯಗಳ ಪೊಲೀಸರಿಗೆ ಬೇಕಾಗಿದ್ದ.. ಭಯಾನಕ ಮನುಷ್ಯ ಕೊನೆಗೂ ಲಾಕ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Virat Kohli IND vs NZ
Advertisment