/newsfirstlive-kannada/media/media_files/2025/08/08/ms-dhoni-retirement-plan-2025-08-08-18-18-34.jpg)
MS ಧೋನಿ Photograph: (ಸಿಎಸ್ಕೆ ಟ್ವಿಟರ್)
ಮುಂದಿನ ಐಪಿಎಲ್ ಸೀಸನ್ಗೆ ಫ್ರಾಂಚೈಸಿಗಳಲ್ಲಿ ಸದ್ದಿಲ್ಲದೇ ಸಿದ್ಧತೆ ಶುರುವಾಗಿದೆ. ಆಟಗಾರರ ವರ್ಗಾವಣೆ, ರಿಟೈನ್, ರಿಲೀಸ್ ಚರ್ಚೆಗಳು ಜೋರಾಗಿ ನಡೀತಿವೆ. ಇದೇ ವೇಳೆ ಧೋನಿಯ ಭವಿಷ್ಯದ ಪ್ರಶ್ನೆಯೂ ಎದ್ದಿದೆ. ಇದೇ ವೇಳೆ ರಿಟೈರ್ಮೆಂಟ್ ವಿಚಾರದಲ್ಲಿ ಬಗ್ಗೆ ಧೋನಿ ಮೌನ ಮುರಿದಿದ್ದಾರೆ.
ಕಳೆದ ವಾರ ಮಿಸ್ಟರ್ ಕೂಲ್ ಧೋನಿ ಚೆನ್ನೈಗೆ ಬಂದಿದ್ದೇ ಬಂದಿದ್ದು ಕ್ರಿಕೆಟ್ ಲೋಕದಲ್ಲಿ ಧೋನಿಯ ಭವಿಷ್ಯದ ಬಗ್ಗೆಯೇ ಚರ್ಚೆಯಾಗ್ತಿದೆ. ಧೋನಿ ಮುಂದಿನ ಐಪಿಎಲ್ ಆಡ್ತಾರಾ? ಇಲ್ವಾ? ಅನ್ನೋ ಮಿಲಿಯನ್ ಡಾಲರ್ ಪ್ರಶ್ನೆ ಮತ್ತೆ ಸಖತ್ ಸೌಂಡ್ ಮಾಡ್ತಿದೆ. ಈ ಪ್ರಶ್ನೆಗೆ ಸಂಬಂಧಪಟ್ಟಂತೆ ಹಲವು ಉಹಾಪೋಹದ ಉತ್ತರಗಳೂ ಓಡಾಡ್ತಿವೆ. ಇದೀಗ ಧೋನಿಯೇ ಈ ಬಗ್ಗೆ ಮಾತನಾಡಿದ್ದಾರೆ.
ನಿವೃತ್ತಿ ವಿಚಾರದಲ್ಲಿ ಮೌನ ಮುರಿದ ತಲಾ ಧೋನಿ
ನಿವೃತ್ತಿಯ ವಿಚಾರದಲ್ಲಿ ಧೋನಿ ಕೊನೆಗೂ ಮೌನ ಮುರಿದಿದ್ದಾರೆ. ಅಭಿಮಾನಿಗಳಲ್ಲಿದ್ದ ಗೊಂದಲವನ್ನ ಬಗೆಹರಿಸಿಲ್ಲ. ಬದಲಾಗಿ ಅಡ್ಡಗೋಡೆ ಮೇಲೆ ದೀಪವಿಟ್ಟು ಮತ್ತಷ್ಟು ಗೊಂದಲ ಕ್ರಿಯೇಟ್ ಮಾಡಿದ್ದಾರೆ. ಲೇಟೆಸ್ಟ್ ಸಂದರ್ಶನವೊಂದರಲ್ಲಿ ಭವಿಷ್ಯದ ಬಗ್ಗೆ ಮಾತನಾಡಿರೋ ಧೋನಿ, ನಾನು ಸದಾ ಯೆಲ್ಲೋ ಜೆರ್ಸಿ ತೊಟ್ಟು ಕುಳಿತು ಇರ್ತೀನಿ ಎಂದು ಫ್ಯಾನ್ಸ್ನ ಖುಷಿಪಡಿಸಿದ್ದಾರೆ. ಆದರೆ..
ಇದನ್ನೂ ಓದಿ: ಸಿರಾಜ್ ಲಾಂಗ್ ಸ್ಪೆಲ್ ಹಿಂದಿದೆ ಒಂದು ಸಿಕ್ರೇಟ್.. ಸ್ಟಾರ್ ವೇಗಿಯ ಸಹೋದರನಿಂದ ಗುಟ್ಟು ರಟ್ಟು..!
ನಾನು ಆಡ್ತೀನಿ ಅಂತಲ್ಲ
ಇದು ಒಂದು 1 ಅಥವಾ 2 ವರ್ಷಕ್ಕಲ್ಲ. ನಾನು ಸದಾ ಯೆಲ್ಲೋ ಜೆರ್ಸಿಯನ್ನೇ ತೊಡೋದು. ನಾನು ಆಡ್ತಿನೋ, ಇಲ್ವೋ. ನಾನು ಮತ್ತು ಸಿಎಸ್ಕೆ ಒಟ್ಟಿಗೆ ಇದ್ದೇವೆ. ಮುಂದಿನ 15 ರಿಂದ 20 ವರ್ಷ ಕೂಡ ಅಷ್ಟೇ. ಹಾಗಂತ ನಾನು ಆಡ್ತೀನಿ ಅಂತಲ್ಲ-ಧೋನಿ, ಸಿಎಸ್ಕೆ ಆಟಗಾರ
ಮುಂದಿನ ಸೀಸನ್ಗೂ ಮುನ್ನ ಧೋನಿ ಗುಡ್ ಬೈ?
ಧೋನಿ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿರೋ ಮಾತುಗಳೇ ಯಾಕೋ ಧೋನಿ ಸದ್ಯದಲ್ಲೇ ನಿವೃತ್ತಿ ಹೇಳ್ತಾರೆ ಅನ್ನೋ ಅನುಮಾನ ಹುಟ್ಟುಹಾಕಿವೆ. ಕೆಲ ದಿನಗಳ ಹಿಂದೆ ಇನ್ನೊಂದು ಸಂದರ್ಶನದಲ್ಲಿ ಧೋನಿ ಮಾತನಾಡಿದ್ರು. ಅದ್ರಲ್ಲೂ ನಿವೃತ್ತಿ ಪ್ರಶ್ನೆಗೆ ಧೋನಿ, ಪರೋಕ್ಷವಾಗಿ ದೇಹ ಸ್ಪಂದಿಸಬೇಕಲ್ವಾ ಎಂಬರ್ಥದ ಉತ್ತರ ಕೊಟ್ಟಿದ್ರು.
ಮುಂದಿನ 5 ವರ್ಷ ಕ್ರಿಕೆಟ್ ಆಡಲು ನನಗೆ ಅನುಮತಿ ನೀಡಲಾಗಿದೆ. ಒಂದು ಸಮಸ್ಯೆ ಇದೆ. ವೈದ್ಯರು ದೃಷ್ಟಿಗೆ ಮಾತ್ರ ಅನುಮತಿ ನೀಡಿದ್ದಾರೆ. ದೇಹಕ್ಕೆ ಅನುಮತಿ ನೀಡಿಲ್ಲ. ಕಣ್ಣುಗಳಿಂದ ಮಾತ್ರ ಕ್ರಿಕೆಟ್ ಆಡಲು ಸಾಧ್ಯವಿಲ್ಲ. ದೇಹವೂ ಬೇಕು-ಎಂಎಸ್ ಧೋನಿ
ಚೆನ್ನೈ ತಂಡದ ಮೆಂಟರ್ ಆಗ್ತಾರಾ ಮಾಹಿ?
44 ವರ್ಷದ ಧೋನಿ ಕಳೆದ ಎರಡು ಸೀಸನ್ಗಳಿಂದ ರನ್ ಗಳಿಸುವಲ್ಲೂ ಮಾಹಿ ವಿಫಲರಾಗಿದ್ದಾರೆ. ಫಾರ್ಮ್ ಕಥೆ ಬಿಡಿ. ಕಳೆದ ಸೀಸನ್ನಲ್ಲಿ ಫಿಟ್ನೆಸ್ ಸಮಸ್ಯೆಯೂ ಎದುರಾಗಿದೆ. ಕೊನೆ ಹಂತದಲ್ಲಿ ಬ್ಯಾಟಿಂಗ್ಗೆ ಬರ್ತಿದ್ದ ಮಾಹಿ, ಹೆಚ್ಚು ಹೊತ್ತು ಕ್ರೀಸ್ನಲ್ಲಿ ಇರೋಕೂ ಕಷ್ಟಪಡ್ತಿದ್ರು. ಈಗ ನೋಡಿದ್ರೆ ಕಣ್ಣಿಂದ ಮಾತ್ರ ಕ್ರಿಕೆಟ್ ಆಡೋಕೆ ಆಗಲ್ಲ ಅಂದಿರೋದು ನೋಡಿದ್ರೆ, ಫಿಟ್ನೆಸ್ ಕಾರಣದಿಂದ ಧೋನಿ ನಿವೃತ್ತಿ ನಿರ್ಧಾರ ತಳೆದ್ರೂ ಅಚ್ಚರಿಪಡಬೇಕಿಲ್ಲ. ಧೋನಿ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ರೆ, ಅಲ್ಲಿಗೆ ಎಲ್ಲಾ ಮುಗಿಯಲ್ಲ. ಸಿಎಸ್ಕೆ-ಧೋನಿ ಜೊತೆಗಿನ ಭಾಂದವ್ಯ ಮುಂದುವರೆಯಲಿದೆ. ಕೋಚ್, ಮೆಂಟರ್ ಯಾವುದಾದರೂ ಒಂದು ರೂಪದಲ್ಲಿ ಫ್ರಾಂಚೈಸಿಯ ಜೊತೆಗಿರಲಿದ್ದಾರೆ.
ಇದನ್ನೂ ಓದಿ:ರಿಷಭ್ ಪಂತ್ ಸ್ಥಾನಕ್ಕಾಗಿ ಕನ್ನಡಿಗ ಸೇರಿ 5 ಆಟಗಾರರ ಮಧ್ಯೆ ರೇಸ್..
ಧೋನಿ-ಋತುರಾಜ್ ಸಭೆ
ಧೋನಿ ಮಾತ್ರವಲ್ಲ.. ಸಿಎಸ್ಕೆ ನಾಯಕ ಅನಿಸಿಕೊಂಡಿರೋ ಋತುರಾಜ್ ಗಾಯಕ್ವಾಡ್ ಕೂಡ ಚೆನ್ನೈನಲ್ಲೇ ಇದ್ದಾರೆ. ಇಂಜುರಿಯಿಂದ ಚೇತರಿಸಿಕೊಂಡಿರೋ ಋತುರಾಜ್ ಸಿಎಸ್ಕೆ ಹೈ ಪರ್ಫಾಮೆನ್ಸ್ ಸೆಂಟರ್ನಲ್ಲಿ ಅಭ್ಯಾಸ ನಡೆಸ್ತಿದ್ದಾರೆ. ಧೋನಿ ಹಾಗೂ ಋತುರಾಜ್ ಒಟ್ಟಾಗಿ ಸಿಎಸ್ಕೆ ಮ್ಯಾನೇಜ್ಮೆಂಟ್ ಜೊತೆ ಸಭೆ ನಡೆಸಲಿದ್ದಾರೆ ಎಂಬ ವರದಿಯೂ ಹೊರಬಿದ್ದಿದೆ. ಡಿಸೆಂಬರ್ನಲ್ಲಿ ನಡೆಯೋ ಮಿನಿ ಆಕ್ಷನ್ಗೆ ಫ್ರಾಂಚೈಸಿಗಳ ವಲಯದಲ್ಲಿ ಸಿದ್ಧತೆಗಳು ಆರಂಭವಾಗಿವೆ. ಆಟಗಾರರ ಟ್ರೇಡಿಂಗ್, ರಿಲೀಸ್ ಹಾಗೂ ಮಿನಿ ಆಕ್ಷನ್ಗೆ ಯೋಜನೆಗಳನ್ನ ಸಿದ್ಧಪಡಿಸ್ತಿವೆ. ಧೋನಿ-ಋತುರಾಜ್, ಸಿಎಸ್ಕೆ ಮ್ಯಾನೇಜ್ಮೆಂಟ್ ಸಭೆಯ ಅಜೆಂಡಾ ಕೂಡ ಇದೇ. ಇದೇ ವೇಳೆ ಧೋನಿ ತಮ್ಮ ನಿವೃತ್ತಿ ಬಗ್ಗೆಯೂ ಫ್ರಾಂಚೈಸಿಗೆ ಕ್ಲಾರಿಟಿ ನೀಡಲಿದ್ದಾರೆ ಎನ್ನಲಾಗ್ತಿದೆ.
ಇದನ್ನೂ ಓದಿ:ಶತಕ ಬಾರಿಸಿ ಜೈಸ್ವಾಲ್ ಕಿಸ್ ಕೊಟ್ಟಿದ್ದು ಯಾರಿಗೆ..? ಸಿಕ್ಕಿಬಿದ್ದ ಲವ್ವರ್ ಬಾಯ್..!
ಕಳೆದ ಸೀಸನ್ನಲ್ಲಿ ಹೀನಾಯ ಪ್ರದರ್ಶನ ನೀಡಿರುವ ಸಿಎಸ್ಕೆಗೆ ಯಾವುದಾರೊಂದು ರೂಪದಲ್ಲಿ ಧೋನಿ ಬೇಕೆ ಬೇಕಿದೆ. ಫ್ರಾಂಚೈಸಿ ಸೀನಿಯರ್ಸ್ನ ಬಿಟ್ಟು ಯುವ ಆಟಗಾರರ ತಂಡವನ್ನ ಕಟ್ತಿದೆ. ಈ ಯುವ ಆಟಗಾರರಿಗೆ ಧೋನಿಯಂತಾ ಮೆಂಟರ್ ಮಾರ್ಗದರ್ಶನ ಸಿಕ್ರೆ, ಫ್ರಾಂಚೈಸಿಯ ಭವಿಷ್ಯವೂ ಭದ್ರವಾಗಲಿದೆ. ಹೀಗಾಗಿ ಧೋನಿ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ರೂ ತಂಡದೊಂದಿಗೆ ಇರೋದಂತೂ ಪಕ್ಕಾ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ