/newsfirstlive-kannada/media/media_files/2025/08/08/yashasvi-jaiswal-love-2025-08-08-15-45-42.jpg)
ಶತಕ ಬಾರಿಸಿದ ಸಂಭ್ರಮದಲ್ಲಿ ಯಶಸ್ವಿ ಜೈಸ್ವಾಲ್
ಇಂಡೋ-ಇಂಗ್ಲೆಂಡ್ ಟೆಸ್ಟ್ ಸರಣಿ ಅಂತ್ಯ ಕಂಡಿದ್ದಾಗಿದೆ. ಕೆನ್ನಿಂಗ್ಟನ್ ಓವಲ್ನಲ್ಲಿ ನಡೆದ ಕೊನೆಯ ಟೆಸ್ಟ್ನಲ್ಲಿ ಆಂಗ್ಲರನ್ನ ರೋಚಕ ರೀತಿಯಲ್ಲಿ ಮಣಿಸಿದ ಟೀಮ್ ಇಂಡಿಯಾ ಸರಣಿ ಸಮಭಲ ಸಾಧಿಸಿತು. ಈ ಕೆನ್ನಿಂಗ್ಟನ್ ಓವಲ್ ಟೆಸ್ಟ್ ಗೆಲುವಿನಲ್ಲಿ ಯಶಸ್ವಿ ಜೈಸ್ವಾಲ್ ಕೊಡುಗೆ ಮಹತ್ವದ್ದು. ಮೊದಲ ಇನ್ನಿಂಗ್ಸ್ನಲ್ಲಿ ಫೇಲ್ ಆಗಿದ್ದ ಜೈಸ್ವಾಲ್, 2ನೇ ಇನ್ನಿಂಗ್ಸ್ನಲ್ಲಿ ಬೊಂಬಾಟ್ ಇನ್ನಿಂಗ್ಸ್ ಕಟ್ಟಿದ್ರು. ಕ್ರಿಸ್ ಕಚ್ಚಿ ನಿಂತು ಆಂಗ್ಲ ಬೌಲರ್ಗಳನ್ನ ದಿಟ್ಟವಾಗಿ ಎದುರಿಸಿ ಸೊಗಸಾದ ಶತಕ ಸಿಡಿಸಿದ್ರು.
ಜೈಸ್ವಾಲ್ ಸಿಡಿಸಿದ ಈ ಅದ್ಭುತ ಶತಕದ ಬಲದಿಂದಲೇ ಟೀಮ್ ಇಂಡಿಯಾ ಇಂಗ್ಲೆಂಡ್ಗೆ 374 ರನ್ಗಳ ಬಿಗ್ ಟಾರ್ಗೆಟ್ ನೀಡೋಕೆ ಸಾಧ್ಯವಾಗಿದ್ದು. ಮ್ಯಾಟರ್ ಅದಲ್ಲ.. ಈ ಸೆಂಚುರಿ ಕಂಪ್ಲೀಟ್ ಮಾಡಿದ ತಕ್ಷಣ ಸೆಲೆಬ್ರೇಷನ್ ಮಾಡಿರೋದು ಸದ್ಯ ಚರ್ಚೆಯಲ್ಲಿರೋದು. ಶತಕ ಸಿಡಿಸಿ ಬ್ಯಾಟ್ ಮೇಲೆತ್ತಿ ಸಂಭ್ರಮಿಸಿದ ಜೈಸ್ವಾಲ್ ಆ ಬಳಿಕ ಪ್ಲೈಯಿಂಗ್ ಕಿಸ್ ನೀಡಿದ್ರು. ಆ ಕಿಸ್ ಕೊಟ್ಟಿದ್ದು ಯಾರಿಗೆ? ಅನ್ನೋ ಪ್ರಶ್ನೆಗೆ ಉತ್ತರದ ಹುಡುಕಾಟ ಸದ್ಯ ನಡೀತಿದೆ.
ಇದನ್ನೂ ಓದಿ:ಮತ್ತೆ ಟೀಂ ಇಂಡಿಯಾದಲ್ಲಿ ರೋಹಿತ್ ಕೊಹ್ಲಿ ಬಗ್ಗೆ ಮಾತುಕತೆ.. ಶೀಘ್ರದಲ್ಲೇ ಶಾಕಿಂಗ್ ನ್ಯೂಸ್..?
ಜೈಸ್ವಾಲ್ ಕಿಸ್ ಕೊಟ್ಟಿದ್ದು ಯಾರಿಗೆ?
ಜೈಸ್ವಾಲ್ ಶತಕ ಸಿಡಿಸಿದಾಗ ಹಿಟ್ಮ್ಯಾನ್ ರೋಹಿತ್ ಶರ್ಮಾ ಫೀಲ್ಡ್ನಲ್ಲಿದ್ರು. ಮೆಂಟರ್ ರೋಹಿತ್ಗೆ ಜೈಸ್ವಾಲ್ ಹೀಗೆ ಗೌರವ ಸಲ್ಲಿಸಿದ್ರು ಅಂತಾ ಆಗ ಕೆಲವರು ಅಂದುಕೊಂಡಿದ್ರು. ಕೆಲವರು ಪಂದ್ಯ ನೋಡಲು ಬಂದಿದ್ದ ಕುಟುಂಬಸ್ಥರಿಗೆ ಅನ್ನೋ ಅಭಿಪ್ರಾಯ ಹೊಂದಿದ್ರು. ಆದ್ರೀಗ ಕಿಸ್ನ ಅಸಲಿ ಸತ್ಯ ರಿವೀಲ್ ಆಗಿದೆ. ಜೈಸ್ವಾಲ್ ಪ್ಲೈಯಿಂಗ್ ಕಿಸ್ ಕೊಟ್ಟಿದ್ದು ಗೆಳತಿ ಮ್ಯಾಡಿ ಹ್ಯಾಮಿಲ್ಟನ್ಗಂತೆ.
ಸ್ಟ್ಯಾಂಡ್ನಲ್ಲಿದ್ದ ಗೆಳತಿಗೆ ಜೈಸ್ವಾಲ್ ಕಿಸ್ ಕೊಟ್ರಾ?
ಜೈಸ್ವಾಲ್ ಶತಕ ಸಿಡಿಸಿದ ದಿನ ಪಂದ್ಯವನ್ನ ವೀಕ್ಷಿಸಲು ಜೈಸ್ವಾಲ್ ರೂಮರ್ಡ್ ಗರ್ಲ್ಫ್ರೆಂಡ್ ಮ್ಯಾಡಿ ಹ್ಯಾಮಿಲ್ಟನ್ ಬಂದಿದ್ರು. ಸ್ಟ್ಯಾಂಡ್ನಲ್ಲಿ ಕುಳಿತು ಜೈಸ್ವಾಲ್ಗೆ ಮ್ಯಾಡಿ ಹ್ಯಾಮಿಲ್ಟನ್ ಚಿಯರ್ ಮಾಡ್ತಿದ್ರು. ಶತಕ ಸಿಡಿಸಿದ ಬಳಿಕ ಹ್ಯಾಮಿಲ್ಟನ್ ಕುಳಿತಿದ್ದ ಸ್ಟ್ಯಾಂಡ್ ಕಡೆಗೆ ತಿರುಗಿ ಸೆಲೆಬ್ರೇಟ್ ಮಾಡಿದ್ರಿಂದ ಜೈಸ್ವಾಲ್ ಕಿಸ್ ಕೊಟ್ಟಿದ್ದು ಈಕೆಗೆ ಎಂಬ ಚರ್ಚೆ ನಡೀತಿದೆ.
ಇದನ್ನೂ ಓದಿ:ಯಂಗ್ ಇಂಡಿಯಾ ಪವರ್! ಸರಣಿಗೂ ಮುನ್ನ ಆಡಿಕೊಂಡವ್ರಿಗೆ ಕೊಟ್ಟ ಉತ್ತರ ಹೇಗಿತ್ತು?
ಜೈಸ್ವಾಲ್ ಜೊತೆ ಹ್ಯಾಮಿಲ್ಟನ್ ಹೆಸರು ತಳುಕು ಯಾಕೆ?
ನಿನ್ನೆ ಮೊನ್ನೆಯಿಂದಲ್ಲ. ಕಳೆದ ಕೆಲ ವರ್ಷಗಳಿಂದ ಈ ಮ್ಯಾಡಿ ಹ್ಯಾಮಿಲ್ಟನ್ ಜೊತೆಗೆ ಜೈಸ್ವಾಲ್ ಹೆಸ್ರು ತಳುಕು ಹಾಕಿಕೊಂಡಿದೆ. ಈ ಹಿಂದೆ 2024ರಲ್ಲಿ ಇಂಗ್ಲೆಂಡ್ ತಂಡ ಭಾರತದ ಪ್ರವಾಸಕ್ಕೆ ಬಂದಿತ್ತು. ಮೊದಲ ಬಾರಿ ಹ್ಯಾಮಿಲ್ಟನ್ ದರ್ಶನವಾಗಿದ್ದು ಆಗಲೇ. ಸ್ಟೇಡಿಯಂಗೆ ಬಂದು ಆಗಲೂ ಕೂಡ ಜೈಸ್ವಾಲ್ಗೆ ಚಿಯರ್ ಮಾಡಿದ್ರು. ಕಳೆದ ಸೀಸನ್ ಐಪಿಎಲ್ ವೇಳೆಯೂ ಒಟ್ಟಾಗಿ ಏರ್ಪೋರ್ಟ್ನಲ್ಲಿ ಕಾಣಿಸಿಕೊಂಡಿದ್ರು.
ಮ್ಯಾಡಿ-ಜೈಸ್ವಾಲ್ ನಡುವೆ ಆಪ್ತ ಒಡನಾಟ
ಮ್ಯಾಡಿ ಹ್ಯಾಮಿಲ್ಟನ್ ಇಂಗ್ಲೆಂಡ್ನವರೇ ಆಗಿದ್ರೂ ಯಶಸ್ವಿ ಜೈಸ್ವಾಲ್ಗೆ ಅತ್ಯಾಪ್ತರು. ಇವರಿಬ್ಬರ ಸ್ನೇಹಕ್ಕೆ ಅಡಿಗಲ್ಲು ಹಾಕಿದ್ದು ಹ್ಯಾಮಿಲ್ಟನ್ ಸಹೋದರ ಹೆನ್ರಿ ಹ್ಯಾಮಿಲ್ಟನ್. ಹೆನ್ರಿ ಹ್ಯಾಮಿಲ್ಟನ್ ಕೂಡ ಒಬ್ಬ ಕ್ರಿಕೆಟರ್. ಇಂಗ್ಲೆಂಡ್ನ ಕ್ರಿಕೆಟ್ ಕ್ಲಬ್ವೊಂದರ ಪರ ಆಡುವ ಹೆನ್ರಿ, 2018ರಿಂದಲೇ ಜೈಸ್ವಾಲ್ಗೆ ಪರಿಚಯ. ಕ್ರಿಕೆಟ್ನಿಂದ ಶುರುವಾದ ಪರಿಚಯ ಇಬ್ಬರನ್ನೂ ಆಪ್ತ ಸ್ನೇಹಿತರನ್ನಾಗಿಸಿತು. ಜೊತೆಗೆ ಮ್ಯಾಡಿ ಪರಿಚಯಕ್ಕೂ ದಾರಿ ಮಾಡಿಕೊಟ್ಟಿತ್ತು.
ಇದನ್ನೂ ಓದಿ: ಸಿರಾಜ್ ಲಾಂಗ್ ಸ್ಪೆಲ್ ಹಿಂದಿದೆ ಒಂದು ಸಿಕ್ರೇಟ್.. ಸ್ಟಾರ್ ವೇಗಿಯ ಸಹೋದರನಿಂದ ಗುಟ್ಟು ರಟ್ಟು..!
2020ರಿಂದ ಡೇಟಿಂಗ್ ನಡೆಸ್ತಿರುವ ರೂಮರ್
ಜೈಸ್ವಾಲ್ ಆಡೋವಾಗೆಲ್ಲಾ ಮೈದಾನಕ್ಕೆ ಬಂದು ಮ್ಯಾಡಿ ಹ್ಯಾಮಿಲ್ಟನ್ ಚಿಯರ್ ಮಾಡ್ತಾರೆ. ಮ್ಯಾಡಿ ಹ್ಯಾಮಿಲ್ಟನ್ ಮಾತ್ರವಲ್ಲ.. ಆಕೆಯ ಅಣ್ಣ ಹೆನ್ರಿ ಹ್ಯಾಮಿಲ್ಟನ್ ಹಾಗೂ ಅವರ ಅಮ್ಮ ಕೂಡ ಸ್ಟೇಡಿಯಂಗೆ ಹಾಜರಾಗಿ ಜೈಸ್ವಾಲ್ನ ಬೆಂಬಲಿಸ್ತಾರೆ. ಜೈಸ್ವಾಲ್, ಮ್ಯಾಡಿ ಹ್ಯಾಮಿಲ್ಟನ್ ಜೊತೆ 2020ರಿಂದಲೇ ಡೇಟಿಂಗ್ ನಡೆಸ್ತಿದ್ದಾರೆ ಅನ್ನೋ ಸುದ್ದಿಯಿದೆ. ಒಟ್ಟಾಗಿರೋ ಹಲವು ಫೋಟೋಗಳು ಈ ಜೈಸ್ವಾಲ್ ಡೇಟಿಂಗ್ ರೂಮರ್ಸ್ಗೆ ಪುಷ್ಟಿ ನೀಡಿವೆ.
ಇಂಗ್ಲೆಂಡ್ ಸರಣಿಯ ಅಂತ್ಯವಾದ ಬಳಿಕ ಟೀಮ್ ಇಂಡಿಯಾ ಆಟಗಾರರು ಹಂತ ಹಂತವಾಗಿ ಭಾರತಕ್ಕೆ ವಾಪಾಸ್ಸಾಗ್ತಿದ್ದಾರೆ. ಜೈಸ್ವಾಲ್ ಇಂಗ್ಲೆಂಡ್ನಲ್ಲೇ ಉಳಿಯಲು ನಿರ್ಧರಿಸಿದ್ದಾರೆ. ಏಷ್ಯಾಕಪ್ಗೂ ಮುನ್ನ ಸಿಕ್ಕಿರೋ ಬಿಡುವನ್ನ ಮ್ಯಾಡಿ ಹ್ಯಾಮಿಲ್ಟನ್ ಕುಟುಂಬದೊಂದಿಗೆ ಕಳೆಯಲಿದ್ದಾರೆ ಎಂಬ ಸುದ್ದಿ ಇದೆ. ಈ ಸುದ್ದಿ ಕೂಡ ಡೇಟಿಂಗ್ ರೂಮರ್ಸ್ ಜೋರಾಗುವಂತೆ ಮಾಡಿದೆ.
ಇದನ್ನೂ ಓದಿ:ರಿಷಭ್ ಪಂತ್ ಸ್ಥಾನಕ್ಕಾಗಿ ಕನ್ನಡಿಗ ಸೇರಿ 5 ಆಟಗಾರರ ಮಧ್ಯೆ ರೇಸ್.. ವಿಕೆಟ್ ಕೀಪರ್ ಸ್ಥಾನ ಯಾರಿಗೆ ಒಲಿಯುತ್ತೆ?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ