ಬಳ್ಳಾರಿ ಬನ್ನಿಹಟ್ಟಿಯಲ್ಲಿ 8 ಸಾವಿರ ಟನ್ ಅದಿರು ನಾಪತ್ತೆ.. ಸಿಬಿಐ ತನಿಖೆಗೆ ಆಗ್ರಹ

ಬೇಲೆಕೇರಿ ಮಾದರಿಯಲ್ಲೇ ಬಳ್ಳಾರಿಯ ಬನ್ನಿಹಟ್ಟಿ ರೈಲ್ವೆ ಯಾರ್ಡ್​ನಲ್ಲಿದ್ದ ಅದಿರನ್ನು ಅಕ್ರಮವಾಗಿ ಸಾಗಾಟ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಅಕ್ರಮದಲ್ಲಿ ರೈಲ್ವೇ ಅಧಿಕಾರಿಗಳು, ಸ್ಥಳೀಯರು ಭಾಗಿ ಆಗಿದ್ದು. ಸಿಬಿಐ ತನಿಖೆಗೆ ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ.

author-image
Ganesh Kerekuli
Ballari Iron (3)
Advertisment

ಬೇಲೆಕೇರಿ ಮಾದರಿಯಲ್ಲೇ ಬಳ್ಳಾರಿಯ ಬನ್ನಿಹಟ್ಟಿ ರೈಲ್ವೆ ಯಾರ್ಡ್​ನಲ್ಲಿದ್ದ ಅದಿರನ್ನು ಅಕ್ರಮವಾಗಿ ಸಾಗಾಟ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಅಕ್ರಮದಲ್ಲಿ ರೈಲ್ವೇ ಅಧಿಕಾರಿಗಳು, ಸ್ಥಳೀಯರು ಭಾಗಿ ಆಗಿದ್ದು. ಸಿಬಿಐ ತನಿಖೆಗೆ ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ.

ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ.. ರಾಜ್ಯದಲ್ಲೇ ಭಾರೀ ಸದ್ದು ಮಾಡಿತ್ತು. ಸದ್ಯ ಈ ಕೇಸ್​ನಲ್ಲಿ ಕಾರವಾರ ಅಂಕೋಲಾ ಕ್ಷೇತ್ರದ ಕಾಂಗ್ರೆಸ್​ ಶಾಸಕ ಸತೀಶ್​ ಸೈಲ್​ ಜೈಲುಪಾಲಾಗಿದ್ದಾರೆ.  ಇದೀಗ ಬೇಲೆಕೇರಿ ಮಾದರಿಯಲ್ಲೇ ಮತ್ತೊಂದು ಪ್ರಕರಣ ರಾಜ್ಯದಲ್ಲಿ ನಡೆದಿರುವ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ:ಕೊಹ್ಲಿ ಬ್ಯಾಟಿಂಗ್ ಆರ್ಡರ್ ಸ್ಥಾನ ತುಂಬಲು ತಂಡಕ್ಕೆ ಸಿಕ್ಕೇ ಬಿಟ್ರು ಭಲೇ ಆಟಗಾರ..!

Ballari Iron (2)

8 ಸಾವಿರ ಟನ್ ಅದಿರು ನಾಪತ್ತೆ

ಬಳ್ಳಾರಿ ಜಿಲ್ಲೆಯ ಬನ್ನಿಹಟ್ಟಿ ರೇಲ್ವೆ ಯಾರ್ಡ್‌ನಲ್ಲಿ ಸುಮಾರು 8 ಸಾವಿರ ಟನ್ ಅದಿರು ನಾಪತ್ತೆ ಆಗಿರುವ ಬಗ್ಗೆ ಸ್ಥಳೀಯ ಬಿಜೆಪಿಯ ನಾಯಕರು ಗಂಭೀರ ಆರೋಪ ಮಾಡಿದ್ದಾರೆ.. ಹಾಗಾದ್ರೆ ಏನಿದು ಪ್ರಕರಣ ಅಂತ ನೋಡೋದಾದ್ರೆ..

ಅಕ್ರಮ ಅದಿರು ಸಾಗಾಟ

  • ಹೆಚ್ಚುವರಿಯಾಗಿದ್ದ ಅದಿರನ್ನು ರೈಲ್ವೇ ಯಾರ್ಡ್​​ನಲ್ಲಿ ಸಂಗ್ರಹಿಸಲಾಗಿತ್ತು
  • ಸ್ಟಾಕ್ ಮಾಡಿದ ಅದಿರನ್ನು ಅಕ್ರಮವಾಗಿ ಸಾಗಿಸಿದ ಅಂತಾ ಆರೋಪ
  • ಸುಹಾನ ಸ್ಟೀಲ್ಸ್​​ನಿಂದ ಗೋವಾದ ಮಾಂಡವಿ ಪೈಲಟ್ ಪ್ಲಾಂಟ್​ಗೆ ಸಾಗಾಟ
  • ರೇಲ್ವೆ ಯಾರ್ಡ್​ನಲ್ಲಿದ್ದ ಅದಿರು ಸಾಗಾಟದ ಬಗ್ಗೆ ಅ.31ರಂದು ದೂರು
  • ಈ ಬಗ್ಗೆ ದೂರು ನೀಡಿರುವ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಿಟಿ ಪಂಪಾಪತಿ
  • ಪೋಲಿಸ್ರು, ಗಣಿ & ಭೂವಿಜ್ಞಾನ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ರು
  • ಸಂಡೂರು ಕೋರ್ಟ್​​ಗೆ PCR ದಾಖಲಿಸಿ ಗಣಿ, ಭೂವಿಜ್ಞಾನ ಇಲಾಖೆ ತನಿಖೆ
  • ರೈಲ್ವೆ ಯಾರ್ಡ್​​ನಲ್ಲಿ ಅದಿರು ಇರಲಿಲ್ಲ ಎಂದು ರೇಲ್ವೆ ಅಧಿಕಾರಿಗಳ ವರದಿ 
  • ಪೊಲೀಸ್ರು, ಪ್ರಭಾವಿಗಳಿಂದ ಕೇಸ್​ ಮುಚ್ಚಿ ಹಾಕಲು ಯತ್ನ ಎಂದು ಆರೋಪ

ಇದನ್ನೂ ಓದಿ: ಮೆಸ್ಸಿ ಭಾರತಕ್ಕೆ ಬಂದ ವಿಮಾನದ ಬೆಲೆ 1 ಬಿಲಿಯನ್ ಡಾಲರ್! ಬೆರಗುಗೊಳಿಸುವ ಸೌಕರ್ಯಗಳು..!

Ballari Iron

ಅಕ್ರಮ ಅದಿರು ಸಾಗಾಟ ಕೇಸ್​ ಮುಚ್ಚಿಹಾಕಲಾಗ್ತಿದ್ದು. ರೇಲ್ವೆ ಇಲಾಖೆಯ ವರದಿ ಸೇರಿದಂತೆ ಸ್ಥಳೀಯರು ಇದರಲ್ಲಿ ಭಾಗಿ ಆಗಿದ್ದಾರೆ. ಹೀಗಾಗಿ ಬನ್ನಿಹಟ್ಟಿ ರೇಲ್ವೆ ಯಾರ್ಡ್‌ನಲ್ಲಿದ್ದ ಉತ್ಕೃಷ್ಟ ಅದಿರು ಅಕ್ರಮ ಸಾಗಟದ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಒತ್ತಾಯಿಸಿ, ರೈಲ್ವೇ ಖಾತೆಯ ರಾಜ್ಯ ಸಚಿವ ವಿ.ಸೋಮಣ್ಣಗೆ ದೂರು ನೀಡಲಾಗಿದೆ.

ಒಟ್ಟಾರೆ.. ರಾಜ್ಯದಲ್ಲಿ ಮತ್ತೊಂದು ಅದಿರು ನಾಪತ್ತೆ ಆರೋಪ ಕೇಳಿ ಬಂದಿದ್ದು, ಈ ಪ್ರಕರಣವನ್ನು ಸರ್ಕಾರ ಸಿಬಿಐ ತನಿಖೆಗೆ ಒಪ್ಪಿಸುತ್ತಾ ಅನ್ನೋದನ್ನು ಕಾದುನೋಡಬೇಕಿದೆ.

ಇದನ್ನೂ ಓದಿ:ಮೊಟ್ಟೆ ತಿಂದರೆ ಕ್ಯಾನ್ಸರ್ ಬರುತ್ತಾ..? ಡಾ. ಅಂಜನಪ್ಪ ಕೊಟ್ಟ ಮಾಹಿತಿ ಏನು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Ballari news
Advertisment