ಅಭಿಮಾನ್ ಸ್ಟುಡಿಯೋ ಜಾಗ ಮುಟ್ಟುಗೋಲು.. ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಹೇಳಿದ್ದೇನು..?

ರಾಜ್ಯ ಸರ್ಕಾರ ಬೆಂಗಳೂರಿನ ಉತ್ತರಹಳ್ಳಿ ರಸ್ತೆಯಲ್ಲಿರುವ ಅಭಿಮಾನ್ ಸ್ಟುಡಿಯೋ ಜಾಗವನ್ನು ಸಂಪೂರ್ಣವಾಗಿ ಮುಟ್ಟುಗೋಲು ಹಾಕಿಕೊಂಡಿದೆ. ನಿಯಯ, ಷರತ್ತಿನ ಉಲಂಘನೆಯ ಕಾರಣದಿಂದ ಅಭಿಮಾನ್ ಸ್ಟುಡಿಯೋ ಜಾಗ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಇದೇ ಜಾಗದಲ್ಲಿ ನಟ ವಿಷ್ಣು ವರ್ಧನ್ ಸಮಾಧಿ ಸ್ಥಳ ಕೂಡ ಇದೆ.

author-image
Ganesh Kerekuli
aniruddha jatkar
Advertisment

ಬೆಂಗಳೂರು: ರಾಜ್ಯ ಸರ್ಕಾರ ಬೆಂಗಳೂರಿನ ಉತ್ತರಹಳ್ಳಿ ರಸ್ತೆಯಲ್ಲಿರುವ ಅಭಿಮಾನ್ ಸ್ಟುಡಿಯೋ (Abhiman studio) ಜಾಗವನ್ನು ಸಂಪೂರ್ಣವಾಗಿ ಮುಟ್ಟುಗೋಲು ಹಾಕಿಕೊಂಡಿದೆ. ನಿಯಯ, ಷರತ್ತಿನ ಉಲಂಘನೆಯ ಕಾರಣದಿಂದ ಅಭಿಮಾನ್ ಸ್ಟುಡಿಯೋ ಜಾಗ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಇದೇ ಜಾಗದಲ್ಲಿ ನಟ ವಿಷ್ಣು ವರ್ಧನ್ ಸಮಾಧಿ (Dr.Vishnuvardhan Memorial) ಸ್ಥಳ ಕೂಡ ಇದೆ. ಇತ್ತೀಚೆಗೆ ವಿಷ್ಣುವರ್ಧನ್ ಸಮಾಧಿ ನೆಲಸಮ ಮಾಡಿರುವ ಘಟನೆ ಭಾರೀ ಸುದ್ದಿಯಾಗಿತ್ತು. 

ಇದನ್ನೂ ಓದಿ: ವಿಷ್ಣುವರ್ಧನ್ ಸಮಾಧಿ ಸ್ಥಳ ಇರೋ ಅಭಿಮಾನ್ ಸ್ಟುಡಿಯೋ ಪೂರ್ತಿ ಜಾಗ ಮುಟ್ಟುಗೋಲು ಹಾಕಿಕೊಂಡ ರಾಜ್ಯ ಸರ್ಕಾರ!

ಜಾಗ ಮುಟ್ಟುಗೋಲು ಹಾಕಿಕೊಂಡಿರೋದಕ್ಕೆ ಡಾ.ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಸಂತಸ ವ್ಯಕ್ತಪಡಿಸಿದ್ದಾರೆ. ಸರ್ಕಾರ ಅಭಿಮಾನ್ ಸ್ಟುಡಿಯೋ ಜಾಗ ವಶಪಡಿಸಿಕೊಳ್ಳಬಹುದು ಅಂತಾ ಮೊದಲೇ ಗೊತ್ತಿತ್ತು. ಆ ನಿಟ್ಟಿನಲ್ಲಿ 6 ವರ್ಷದಿಂದ ಪ್ರಯತ್ನ ಪಟ್ಟಿದ್ವಿ, ಆದರೆ ಆಗಿರಲಿಲ್ಲ. ಈಗ ನಮಗೆ ತುಂಬಾ ಖುಷಿಯಾಗಿದೆ. ಅಪ್ಪಾಜಿ ಅಂತ್ಯ ಸಂಸ್ಕಾರದ ಜಾಗದಲ್ಲಿ ಭಾರತಿ ಅಮ್ಮ ಸ್ಮಾರಕ ಕಟ್ಟಿದ್ದರು. ಆದರೆ ವಿರೋಧಿಗಳು ನೆಲಸಮ ಮಾಡಿಬಿಟ್ಟರು. 

ಇದನ್ನೂ  ಓದಿ: ಬುರುಡೆ ಕೇಸ್​ನಲ್ಲಿ ಟ್ವಿಸ್ಟ್.. SIT ಮುಂದೆ ಸ್ಫೋಟಕ ವಿಚಾರ ಬಿಚ್ಚಿಟ್ಟ ಚಿನ್ನಯ್ಯ

ಮುಟ್ಟುಗೋಲು ಬಗ್ಗೆ ಅಧಿಕೃತ ಘೋಷಣೆ ಬಂದಿರಲಿಲ್ಲ, ಈಗ ಬಂದಿದೆ. ಕೇವಲ 10 ಗುಂಟೆ ಜಾಗ ಕೇಳ್ತೀವಿ. ನಿನ್ನೆಯ ದಿನ ಸಿಎಂ ಭೇಟಿಯಾದಾಗ ಈ ಬಗ್ಗೆ ಚರ್ಚೆ ಮಾಡಿರಲಿಲ್ಲ. ನಾನು ಏನು ಹೇಳ್ತಿದ್ದಿನೋ, ಅದನ್ನೇ ಅಮ್ಮ ಹೇಳ್ತಿರೋದು. ಸಿಎಂ ಕಳೆದ ಬಾರಿ ಹೋದಾಗಲೂ ‘ಕರ್ನಾಟಕ ರತ್ನ’ ಬಗ್ಗೆ ಭರವಸೆ ಕೊಟ್ಟಿದ್ದರು. ಈ ಬಾರಿಯೂ ಭರವಸೆ ನೀಡಿದ್ದಾರೆ. ಭಿನ್ನಾಭಿಪ್ರಾಯ ಇರುವ ಅಭಿಮಾನಿಗಳು ಅಭಿಮಾನಿಗಳಲ್ಲ. ನಿಜವಾದ ಅಭಿಮಾನಿಗಳು ಸದಾ ನಮ್ಮ ಜೊತೆ ಇರೋರು. 

ಇದನ್ನೂ ಓದಿ:ಹೊಸ ಕೆಲಸಕ್ಕೆ ಕೈ ಹಾಕಿದ ಬಿಗ್​ಬಾಸ್​ ಖ್ಯಾತಿಯ ಸಂಗೀತಾ ಶೃಂಗೇರಿ; ಏನದು..?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Vishnuvardhan Abhiman studio Confiscated
Advertisment