/newsfirstlive-kannada/media/media_files/2025/12/26/hd-kumaraswamy-2-2025-12-26-16-12-53.jpg)
ಬೆಂಗಳೂರು: ಚಿತ್ರದುರ್ಗ ಬಸ್ ದುರಂತ ಬೆನ್ನಲ್ಲೇ ಹೊಸ ರೂಲ್ಸ್ ಜಾರಿಯಾಗುತ್ತೆ ಎಂಬ ಚರ್ಚೆ ಶುರುವಾಗಿದೆ. ರಾತ್ರಿ ಸಮಯದಲ್ಲಿ ಖಾಸಗಿ ಬಸ್​ಗಳ ಸಂಚಾರಕ್ಕೆ ಬ್ರೇಕ್ ಬೀಳಲಿದೆ ಎಂದು ಹೇಳಲಾಗುತ್ತಿದೆ.
ಯಾಕೆಂದರೆ ರಾತ್ರಿ ಸಮಯದಲ್ಲಿ ಖಾಸಗಿ ಬಸ್​ಗಳ ಆ್ಯಕ್ಸಿಡೆಂಟ್ ಹೆಚ್ಚಾಗ್ತಿದೆ. ರಾತ್ರಿ 2 ಗಂಟೆಯ ನಂತರ ಸಂಚಾರ ಬಂದ್ ಮಾಡಬೇಕು. ರಾತ್ರಿ ಬಸ್ ಸಂಚಾರ ಕಂಟ್ರೋಲ್ ಮಾಡಿದ್ರೆ ಅಪಘಾತ ನಿಯಂತ್ರಿಸಬಹುದು ಎಂಬ ಸಲಹೆಯನ್ನ ಸರ್ಕಾರಕ್ಕೆ ನೀಡಲಾಗುತ್ತಿದೆ. ಸ್ವತಃ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಸಹ ಈ ಕುರಿತು ಮಾತನ್ನಾಡಿದ್ದಾರೆ. ರಾತ್ರಿ ಸಮಯ ಖಾಸಗಿ ಬಸ್ ಸಂಚಾರಕ್ಕೆ ಮಾರ್ಗಸೂಚಿ ತಯಾರಿಸಲು ಕೇಂದ್ರಕ್ಕೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ:ಭಾವಿ ಪತಿ ಜೊತೆ ರಂಜನಿ ರಾಘವನ್ ಜಾಲಿ ಜಾಲಿ!
ಖಾಸಗಿ ಬಸ್ ಮಾಲೀಕರು ವಿರೋಧ
ರಾತ್ರಿ ಸಮಯ ಅಪಘಾತಕ್ಕೆ ಲಾರಿ, ಟ್ರಕ್​​ಗಳು ಕಾರಣ ಎಂಬ ಆರೋಪ ಇದೆ. ಖಾಸಗಿ ಬಸ್​ಗಳಿಂದ ಯಾವುದೇ ಅಪಘಾತ ಆಗ್ತಿಲ್ಲ. ಬದಲಾಗಿ, ಲಾರಿ, ಟ್ರಕ್ ಡ್ರೈವರ್ ಗಳ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸ್ತಿದೆ. ಲಾರಿ, ಟ್ರಕ್ ಚಾಲಕರು ಒತ್ತಡದಲ್ಲಿ ಕೆಲಸ ಮಾಡ್ತಾರೆ. ಮಾಲೀಕರ ಒತ್ತಡಕ್ಕೆ ಸಿಲುಕಿ ವಿಶ್ರಾಂತಿ ಇಲ್ಲದೇ ಕೆಲಸ ಮಾಡ್ತಾರೆ. ಚಾಲನೆ ವೇಳೆ ರೀಲ್ಸ್ ನೋಡ್ಕೊಂಡು ಡ್ರೈವಿಂಗ್ ಮಾಡ್ತಾರೆ ಎಂದು KSBOA ಅಧ್ಯಕ್ಷ ಎಸ್.ನಟರಾಜ ಶರ್ಮಾ ಹೇಳಿದ್ದಾರೆ.
/filters:format(webp)/newsfirstlive-kannada/media/media_files/2025/12/26/chitradurga-accident-3-2025-12-26-09-22-38.jpg)
ಟ್ರಕ್​ಗಳಲ್ಲಿ ದೂರದ ದೂರದ ಪ್ರಯಾಣಕ್ಕೂ ಒಬ್ಬರೇ ಚಾಲಕರು. ಇದು ದೈಹಿಕ ಹಾಗೂ ಮಾನಸಿಕ ಒತ್ತಡಕ್ಕೆ ಕಾರಣ ಹಾಗೂ ನಿದ್ರೆ ಸಮಸ್ಯೆ ಆಗುತ್ತದೆ. ಆದರೆ, ಖಾಸಗಿ ಬಸ್​ಗಳಲ್ಲಿ ಇಬ್ಬರು ಡ್ರೈವರ್ ಇರ್ತಾರೆ.. ಹಗಲು ಸಮಯ ನಿದ್ದೆ ಮಾಡ್ತಾರೆ. ಮೊದಲು ಟ್ರಕ್, ಲಾರಿ ಅವರನ್ನ ಕಂಟ್ರೋಲ್ ಮಾಡುವಂತೆ KSBOA ಅಧ್ಯಕ್ಷ ಎಸ್.ನಟರಾಜ ಶರ್ಮಾ ಆಗ್ರಹಿಸಿದ್ದಾರೆ.
ಕುಮಾರಸ್ವಾಮಿ ಅವರು ರಾತ್ರಿ 2 ಗಂಟೆಯ ಬಳಿಕ ಬಸ್ ಸಂಚಾರ ನಿಲ್ಲಿಸುವ ಹೇಳಿಕೆಯನ್ನ ಮರುಪರಿಶೀಲನೆ ಮಾಡಬೇಕು. ಅಪಘಾತಗಳಿಗೆ ಪ್ರಮುಖ ಕಾರಣ ಅತಿ ದಣಿವು ಅನುಭವಿಸುವ ಲಾರಿ ಚಾಲಕರು. ಲಾರಿ ಚಾಲಕರಿಗೆ ನಿರಂತರ ಕೆಲಸ, ಸಮರ್ಪಕ ವಿಶ್ರಾಂತಿ ಇಲ್ಲ ಎಂಬ ಆರೋಪ ಇದೆ. ಹೆಚ್ಚಿನ ಬಸ್‌ಗಳಲ್ಲಿ ಡಬಲ್ ಡ್ರೈವರ್ ವ್ಯವಸ್ಥೆ ಇದೆ ಎಂದಿದ್ದಾರೆ.
ಇದನ್ನೂ ಓದಿ: ಒಂಟಿಯಾಗಿದ್ದ ನರ್ಸ್​ನ ಕತ್ತು ಕೊಯ್ದು ಹತ್ಯೆ.. ಪ್ರೀತಿ ಕೊಂದ ಕೊಲೆಗಾರ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us