Advertisment

ಮೂರನೇ ಬಾರಿಗೆ ಪರಪ್ಪನ ಅಗ್ರಹಾರ ಜೈಲು ಸೇರಿದ ದರ್ಶನ್.. ಪವಿತ್ರ ಗೌಡ ಕೂಡ ಕಂಬಿ ಹಿಂದೆ..

ಸುಪ್ರೀಂ ಕೋರ್ಟ್​ ದರ್ಶನ್ ಅಂಡ್​ ಗ್ಯಾಂಗ್​​ಗೆ ನೀಡಲಾಗಿದ್ದ ಜಾಮೀನನ್ನು ರದ್ದು ಮಾಡಿದೆ. ಪರಿಣಾಮ ಮತ್ತೆ ರೇಣುಕಾಸ್ವಾಮಿ ಪ್ರಕರಣದ ಪ್ರಮುಖ 7 ಆರೋಪಿಗಳು ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾರೆ.

author-image
Ganesh Kerekuli
Darshan and pavitra gowda
Advertisment

ಸುಪ್ರೀಂ ಕೋರ್ಟ್​ ದರ್ಶನ್ ಅಂಡ್​ ಗ್ಯಾಂಗ್​​ಗೆ ನೀಡಲಾಗಿದ್ದ ಜಾಮೀನನ್ನು ರದ್ದು ಮಾಡಿದೆ. ಪರಿಣಾಮ ಮತ್ತೆ ರೇಣುಕಾಸ್ವಾಮಿ ಪ್ರಕರಣದ ಪ್ರಮುಖ 7 ಆರೋಪಿಗಳು ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾರೆ. 
 
ಇಂದು ಮಧ್ಯಾಹ್ನದ ವೇಳೆಗೆ ಎರಡನೇ ಆರೋಪಿ ದರ್ಶನ್ ಹಾಗೂ ಮೊದಲ ಆರೋಪಿ ಪವಿತ್ರ ಗೌಡ ಸೇರಿ ಒಟ್ಟು 7 ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಅವರಲ್ಲಿ ಪವಿತ್ರ ಗೌಡ, ದರ್ಶನ್, ಪ್ರದೂಷ್, ಲಕ್ಷ್ಮಣ, ನಾಗರಾಜ್​ನನ್ನು ನ್ಯಾಯಾಧೀಶ ಮುಂದೆ ಹಾಜರುಪಡಿಸಲಾಯಿತು.

Advertisment

ಇದನ್ನೂ ಓದಿ: Breaking ರೇಣುಕಾಸ್ವಾಮಿ ಪ್ರಕರಣದ ಆರೋಪಿ ದರ್ಶನ್ ಮತ್ತೆ ಅರೆಸ್ಟ್ 

Darshan pavitra gowda (2)

ಬೆಂಗಳೂರಿನ 64ನೇ ಸಿಟಿ ಸಿವಿಲ್ ಕೋರ್ಟ್​ನ ನ್ಯಾಯಾಧೀಶ ನ್ಯಾ.ಈರಪ್ಪಣ್ಣ ಪವಡಿ ನಾಯ್ಕ್​ ಮುಂದೆ ಐವರು ಆರೋಪಿಗಳನ್ನು ಹಾಜರುಪಡಿಸಿದ್ದರು. ಬಳಿಕ ಪರಪ್ಪನ ಅಗ್ರಹಾರ ಜೈಲಿಗೆ ಕರೆದುಕೊಂಡು ಹೋಗಲಾಗಿದೆ. ಆ ಮೂಲಕ ದರ್ಶನ್ ಮೂರನೇ ಬಾರಿಗೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ಎರಡನೇ ಬಾರಿಗೆ ಜೈಲಿಗೆ ಸೇರಿದ್ರೆ, ಪತ್ನಿ ಮೇಲೆ ಹಲ್ಲೆ ನಡೆಸಿ ಮೊದಲ ಬಾರಿಗೆ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದರು. 

ಇದನ್ನೂ ಓದಿ: ನಟ ದರ್ಶನ್ ಅಂಡ್ ಗ್ಯಾಂಗ್ ಜಾಮೀನು ರದ್ದುಪಡಿಸಿದ ಆದೇಶದಲ್ಲಿ ಸುಪ್ರೀಂ ಕೋರ್ಟ್ ಹೇಳಿದ್ದೇನು ಗೊತ್ತಾ? ಕಂಪ್ಲೀಟ್ ಮಾಹಿತಿ

ಮತ್ತಿಬ್ಬರು ಆರೋಪಿಗಳಾದ ಜಗದೀಶ್ ಹಾಗೂ ಅನುಕುಮಾರ್​​ನನ್ನು ನಾಳೆ ಬೆಳಗ್ಗೆ ನ್ಯಾಯಾಲಯದ ಮುಂದೆ ಹಾಜರುಪಡಿಸುತ್ತಾರೆ. ಈ ಇಬ್ಬರನ್ನು ಚಿತ್ರದುರ್ಗದಲ್ಲಿ ಬಂಧಿಸಲಾಗಿದ್ದು, ಬೆಂಗಳೂರಿನತ್ತ ಕರೆದುಕೊಂಡು ಬರಲಾಗುತ್ತಿದೆ. 

Advertisment

ಸುಪ್ರೀಂ ಕೊರ್ಟ್​ನಿಂದ ಮಹತ್ವ ತೀರ್ಪು..    


ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪಿಗಳಾದ ನಟ ದರ್ಶನ್, ಪವಿತ್ರಾ ಗೌಡ ಸೇರಿ ಇತರೆ 7 ಆರೋಪಿಗಳಿಗೆ ಹೈಕೋರ್ಟ್​ ಜಾಮೀನು ನೀಡಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ, ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಕೆ ಮಾಡಿತ್ತು. ಇದೀಗ ಸುಪ್ರೀಂ ಕೋರ್ಟ್​ ತೀರ್ಪು ನೀಡಿದ್ದು ನಟ ದರ್ಶನ್​, ಪವಿತ್ರಾ ಗೌಡ ಹಾಗೂ 7 ಆರೋಪಿಗಳ ಜಾಮೀನು ಅನ್ನು ರದ್ದು ಮಾಡಿದೆ.

ಇದನ್ನೂ ಓದಿ: ಪೂಜೆ ಮಾಡಿ ಅಮ್ಮನ ತಬ್ಬಿ ಕಣ್ಣೀರಿಟ್ಟ ಪವಿತ್ರ ಗೌಡ.. ಅರೆಸ್ಟ್ ಮಾಡುವ ಮುನ್ನ ನಡೆದಿದ್ದು ಏನು..?

Darshan pavitra

ಇವತ್ತು ಸುಪ್ರೀಂ ಕೋರ್ಟ್​​ನಲ್ಲಿ ರೇಣುಕಾಸ್ವಾಮಿ ಪ್ರಕರಣದ ಆರೋಪಿ ದರ್ಶನ್, ಪವಿತ್ರಾಗೌಡ ಹಾಗೂ 7 ಆರೋಪಿಗಳ ಜಾಮೀನು ರದ್ದು ಕೋರಿ ರಾಜ್ಯ ಸರ್ಕಾರದ ಅರ್ಜಿಯ ಆದೇಶ ಹೊರ ಬಿದ್ದಿದೆ. ಹೈಕೋರ್ಟ್​ ತೀರ್ಪಿನಲ್ಲಿ ದೋಷವಿದೆ ಎಂದು ಸುಪ್ರೀಂ ಕೋರ್ಟ್​ ಹೇಳಿದೆ. ಈ ಪ್ರಕರಣವನ್ನು ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಜೆ.ಬಿ ಪರ್ದಿವಾಲಾ ಹಾಗೂ ನ್ಯಾಯಾಮೂರ್ತಿ ಮಹಾದೇವನ್ ಪೀಠ ತೀರ್ಪು ನೀಡಿದೆ. ಜಾಮೀನು ರದ್ದು ಹಿನ್ನೆಲೆಯಲ್ಲಿ ಆರೋಪಿಗಳಾದ ದರ್ಶನ್, ಪವಿತ್ರ ಗೌಡ, ಪ್ರದೂಷ್, ನಾಗರಾಜ್, ಲಕ್ಷ್ಮಣ್, ಅನುಕುಮಾರ್ ಹಾಗೂ ಜಗದೀಶ್ ಮತ್ತೆ ಜೈಲು ಸೇರಬೇಕಾಗಿದೆ.  

Advertisment

ಇದನ್ನೂ ಓದಿ:ಅಂದು ಜೈಲಿನಲ್ಲಿದ್ದಾಗ ಸಾರಥಿ ಸಿನಿಮಾ ರಿಲೀಸ್, ಈಗ ಡೆವಿಲ್ ರಿಲೀಸ್ ಸಾಧ್ಯತೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Murder case Pavitra Gowda Actor Darshan Darshan in jail
Advertisment
Advertisment
Advertisment