/newsfirstlive-kannada/media/media_files/2025/08/09/narendra-modi-2025-08-09-15-31-52.jpg)
ಹಲವು ವರ್ಷಗಳ ಬಳಿಕ ನನಸಾಗಿರೋ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಸಂಚಾರ ಆರಂಭಕ್ಕೆ ಕೌಂಟ್ ಡೌನ್ ಆರಂಭವಾಗಿದೆ. ಇವತ್ತು ಹಳದಿ ಮಾರ್ಗಕ್ಕೆ ದೇಶದ ಪ್ರಧಾನಿ ಹಸಿರು ನಿಶಾನೆ ತೋರಲಿದ್ದಾರೆ.
ಮೋದಿಯಿಂದ ಉದ್ಘಾಟನೆ..
ರಾಜ್ಯರಾಜಧಾನಿಯಲ್ಲಿ ಸಂಚಾರಕ್ಕೆ ಸಿದ್ಧಗೊಂಡಿರೋ ಹಳದಿ ಲೈನ್ ಮೆಟ್ರೋಗೆ ಹಸಿರು ನಿಶಾನೆ ತೋರಲು ಪ್ರಧಾನಿ ಮೋದಿ ಇಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. ಅಲ್ಲದೇ ಮೂರು ವಂದೇ ಭಾರತ್ ರೈಲುಗಳಿಗೂ ಮೋದಿ ಅಂದು ಚಾಲನೆ ನೀಡಲಿದ್ದಾರೆ. ಬೆಂಗಳೂರು-ಬೆಳಗಾವಿ, ಅಮೃತಸರ-ಮಾತಾ ವೈಷ್ಣೋದೇವಿ, ನಾಗಪುರ-ಪುಣೆ ಮಾರ್ಗದ ವಂದೇ ಭಾರತ್ ರೈಲುಗಳನ್ನ ಮೋದಿ ಉದ್ಘಾಟಿಲಿದ್ದಾರೆ. ಇದೇ ವೇಳೆ ನಮ್ಮ ಮೆಟ್ರೋದ 3ನೇ ಹಂತದ 2 ಕಾರಿಡಾರ್‌ಗಳಿಗೂ ಮೋದಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಇದನ್ನೂ ಓದಿ:ದರ್ಶನ್ ಫ್ಯಾನ್ಸ್ ಇಂದ ರಮ್ಯಾಗೆ ಅಶ್ಲೀಲ ಮಸೇಜ್ ಕೇಸ್; A1 ಆರೋಪಿನ ವಶಕ್ಕೆ ಪಡೆದ CCB
ಬೆಳಗ್ಗೆ 7.50ಕ್ಕೆ ದೆಹಲಿಯಿಂದ ಹೊರಡಲಿರುವ ಮೋದಿ ಬೆಳಗ್ಗೆ 10.30ಕ್ಕೆ ಬೆಂಗಳೂರು HAL ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ.. ಬೆಳಗ್ಗೆ 10.50ಕ್ಕೆ ಹೆಲಿಕಾಪ್ಟರ್‌ನಲ್ಲಿ ಎಚ್‌ಕ್ಯೂಟಿಸಿ ಹೆಲಿಪ್ಯಾಡ್‌ಗೆ ಆಗಮಿಸಿ ರಸ್ತೆ ಮೂಲಕ ಬೆಳಗ್ಗೆ 11ಗಂಟೆಗೆ ಸಂಗೊಳ್ಳಿ ರಾಯಣ್ಣ ಸಿಟಿ ರೈಲ್ವೆ ನಿಲ್ದಾಣಕ್ಕೆ ಎಂಟ್ರಿಕೊಡಲಿದ್ದಾರೆ.. ಬೆಳಗ್ಗೆ 11.15ಕ್ಕೆ ರೈಲ್ವೆ ನಿಲ್ದಾಣದಲ್ಲಿ 3 ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಿ ಬಳಿಕ ಬೆಳಗ್ಗೆ 11.45ಕ್ಕೆ ರಸ್ತೆ ಮಾರ್ಗವಾಗಿ ರಾಗಿಗುಡ್ಡದ ಮೆಟ್ರೋ ನಿಲ್ದಾಣಕ್ಕೆ ಆಗಮಿಸಲಿದ್ದಾರೆ.. ಬೆಳಗ್ಗೆ 11.50ರಿಂದ ಮಧ್ಯಾಹ್ನ 12.50ವರೆಗೂ ಮೆಟ್ರೋ ಹಳದಿ ಮಾರ್ಗಕ್ಕೆ ಚಾಲನೆ ನೀಡಲಿರುವ ನಮೋ ಮೆಟ್ರೋ ರೈಲಿನಲ್ಲಿಯೇ ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣ ಮಾಡಲಿದ್ದಾರೆ.
ಇದನ್ನೂ ಓದಿ: IPLನಲ್ಲಿ ಈ ಬ್ಯಾಟರ್ಗೆ ಭಾರೀ ಬೇಡಿಕೆ.. ಯಂಗ್ ವಿಕೆಟ್ ಕೀಪರ್ಗಾಗಿ ಬಿಗ್ ಡೀಲ್ ನಡೆಯುತ್ತಾ?
ಬಳಿಕ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಮ್ಮ ಮೆಟ್ರೋದ 3ನೇ ಹಂತದ ಕಾಮಗಾರಿಗೆ ಮೋದಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.. ಮಧ್ಯಾಹ್ನ 1 ಗಂಟೆಯಿಂದ 2 ಗಂಟೆವರೆಗೂ IIIT ಆಡಿಟೋರಿಯಂನಲ್ಲಿ ಈ ಕಾರ್ಯಕ್ರಮ ನಡೆಯಲಿದೆ.. ಮಧ್ಯಾಹ್ನ 2.05ಕ್ಕೆ ಹೆಲಿಕಾಪ್ಟರ್ ಮೂಲಕ HAL ವಿಮಾನ ನಿಲ್ದಾಣಕ್ಕೆ ವಾಪಸ್ ಆಗಲಿರುವ ಮೋದಿ ಮಧ್ಯಾಹ್ನ 2.40ಕ್ಕೆ HAL ವಿಮಾನ ನಿಲ್ದಾಣದಿಂದ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.
ಇದನ್ನೂ ಓದಿ:ಆ್ಯಕ್ಷನ್ ಪ್ರಿನ್ಸ್ 3.5 ಕೋಟಿ ಹಣ ವಂಚನೆ ಆರೋಪ; ಸ್ಪಷ್ಟನೆ ಕೊಟ್ಟ ಧ್ರುವ ಸರ್ಜಾ ಆಪ್ತ ಬಳಗ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ