ಚಿನ್ನ, ರನ್ನ ಅಂತಾ ಪ್ರೀತಿ! ಈಗ 1.5 ತಿಂಗಳ ಮಗು ಸೇರಿ 3 ಹೆಣ್ಮಕ್ಕಳನ್ನ ಪತ್ನಿ ಕೈಗಿಟ್ಟು ಪತಿ ಪರಾರಿ..!

ಮೂರೂ ಹೆಣ್ಣು ಮಕ್ಕಳು ಎಂದು ಪತ್ನಿಗೆ ಕೈಕೊಟ್ಟು ಪರಾರಿಯಾದ ಪ್ರಕರಣ ಈಶಾನ್ಯ ವಿಭಾಗ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಹರೀಶ್, ಪತ್ನಿಗೆ ಕೈಕೊಟ್ಟು ಪರಾರಿಯಾದ ಮನುಷ್ಯ.

author-image
Ganesh Kerekuli
Rajasthan Harsiha cheating (2)
Advertisment

ಬೆಂಗಳೂರು: ಮೂರೂ ಹೆಣ್ಣು ಮಕ್ಕಳು ಎಂದು ಪತ್ನಿಗೆ ಕೈಕೊಟ್ಟು ಪರಾರಿಯಾದ ಪ್ರಕರಣ ಈಶಾನ್ಯ ವಿಭಾಗ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಹರೀಶ್, ಪತ್ನಿಗೆ ಕೈಕೊಟ್ಟು ಪರಾರಿಯಾದ ಮನುಷ್ಯ. 

ಏನಿದು ಕತೆ..?

ಹರೀಶ್ ಮೂಲತಃ ರಾಜಸ್ಥಾನದವ. ಬೆಂಗಳೂರಿನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಕೆಲಸ ಮಾಡ್ತಿದ್ದಾನೆ. ಈತ ವರಲಕ್ಷ್ಮೀ ಎಂಬ ಸ್ಟಾಫ್ ನರ್ಸ್​ನ ಪ್ರೀತಿಸಿ ಮದುವೆ ಆಗಿದ್ದ. ಕುಟುಂಬಸ್ಥರನ್ನು ಒಪ್ಪಿಸಿ ಆರೆಂಜ್ ಮ್ಯಾರೇಜ್ ಆಗಿದ್ದ. ಮದುವೆಯಾದ ಹೊಸದರಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಈ ಜೋಡಿಗೆ ಹುಟ್ಟಿದ ಮೂವರು ಮಕ್ಕಳು ಕೂಡ ಹೆಣ್ಣು. 

ಇದನ್ನೂ ಓದಿ: ಅಶ್ವಿನಿ ಗೌಡ ಪರ ಎದ್ದ ಅಲೆ.. ಕ್ಲೈಮ್ಯಾಕ್ಸ್‌ನಲ್ಲಿ ಎಡವುತ್ತಿದ್ದಾರಾ ಗಿಲ್ಲಿ..?

Rajasthan Harsiha cheating (1)

ಇದು ಹರೀಶ್​ನ ಅಸಮಾಧಾನಕ್ಕೆ ಕಾರಣವಾಗಿದೆ. ಮೊದಲ ಇಬ್ಬರು ಮಕ್ಕಳು ಹೆಣ್ಣು ಎಂದು ಗೊತ್ತಾದಾಗ ಮೂರನೇಯ ಬಾರಿಗೆ ಗಂಡು ಹುಟ್ಟಬಹುದು ಎಂಬ ಆಸೆಯಲ್ಲಿದ್ದ. ಇದೀಗ ಹರೀಶ್ ಪತ್ನಿ ವಿಜಯಲಕ್ಷ್ಮೀ, ಕಳೆದ ಒಂದೂವರೆ ತಿಂಗಳ ಹಿಂದೆ ಹಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಇದೀಗ ಒಂದೂವರೆ ತಿಂಗಳ ಹಸಗೂಸು ಹಾಗೂ ಇಬ್ಬರು ಮಕ್ಕಳನ್ನ ಪತ್ನಿಯ ಮಡಿಲಿಗೆ ಹಾಕಿ ಪರಾರಿ ಆಗಿದ್ದಾನೆ. 

ಆರೋಪ ಏನು..?

ಪತಿ ಕೈಕೊಟ್ಟ ಬೆನ್ನಲ್ಲೇ ಪತ್ನಿ ವರಲಕ್ಷ್ಮೀ ಆತನ ವಿರುದ್ಧ ಗಂಭೀರ ಆರೋಪ ಮಾಡಿದ್ದಾಳೆ. ಮೂವರು ಹೆಣ್ಮಕ್ಕಳು ಎಂದು ನಮ್ಮನ್ನು ಬಿಟ್ಟು ಹೋಗಿದ್ದಾನೆ. ಆತ ಮತ್ತೊಂದು ಮಹಿಳೆ ಜೊತೆ ವಾಸವಿದ್ದಾನೆ. ಈಗ ನನಗೆ ಮೂವರು ಮಕ್ಕಳನ್ನು ಸಾಕೋದಕ್ಕೆ ಆಗುತ್ತಿಲ್ಲ.

ಇದನ್ನೂ ಓದಿ: ಯಶ್ ತಾಯಿ ಪುಷ್ಪಾ ವಿರುದ್ಧ ಒತ್ತುವರಿ ಆರೋಪ; ಕೋರ್ಟ್ ಆದೇಶದಂತೆ ಘರ್ಜಿಸಿದ ಜೆಸಿಬಿ..!

Rajasthan Harsiha cheating


 
ಮಕ್ಕಳ ಶಾಲಾ ಫೀಸ್, ಮನೆ ಬಾಡಿಗೆ ಕಟ್ಟಲೂ ಕೂಡ ಆಗ್ತಿಲ್ಲ. ಇದೀಗ ಹುಟ್ಟಿರುವ ಹಸುಗೂಸನ್ನ ಆರೈಕೆ ಮಾಡೋದೇ ಕಷ್ಟವಾಗಿದೆ ಎಂದು ಆರೋಪಿಸಿ ಒಂದು ತಿಂಗಳ ಹಿಂದೆ ಈಶಾನ್ಯ ವಿಭಾಗ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಆದ್ರೆ ಪೊಲೀಸರು ಕೂಡ ಆತನನ್ನ ಕರೆಸಿಲಿಲ್ಲ ಎಂದು ಪೊಲೀಸರ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾಳೆ. 

ಇದನ್ನೂ ಓದಿ: ಗಿಲ್ಲಿಗೆ ಕಾವ್ಯಾಳ ಸ್ನೇಹ ಮುಳ್ಳಾಗ್ತಿದ್ಯಾ? ಅಶ್ವಿನಿಗೆ ಜನ ಲೈಕ್ ಮಾಡ್ತಿರೋದು ಯಾಕೆ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bengaluru News wife husband
Advertisment