ಇಬ್ಬರು ಮಕ್ಕಳ ಜೀವ ತೆಗೆದು ಪ್ರಾಣ ಬಿಟ್ಟ ತಾಯಿ.. ಕೇಸ್​​ಗೆ ಬಿಗ್​ ಟ್ವಿಸ್ಟ್ ಸಿಕ್ಕಿದೆ..

ಕಳೆದ ರಾತ್ರಿ ಭುವನೇಶ್ವರಿ ನಗರದಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದ್ದು, ಇಬ್ಬರು ಮಕ್ಕಳು ಹಾಗೂ ತಾಯಿ ದಾರುಣ ಅಂತ್ಯ ಕಂಡಿದ್ದಾರೆ. ಇದೀಗ ಪ್ರಕರಣಕ್ಕೆ ಟ್ವಿಸ್ಟ್​ ಸಿಕ್ಕಿದ್ದು, ಗಂಡನ ಅನೈತಿಕ ಸಂಬಂಧಕ್ಕೆ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ ಅನ್ನೋ ವಿಚಾರ ಬೆಳಕಿಗೆ ಬಂದಿದೆ.

author-image
Ganesh Kerekuli
Bengalore mother (2)
Advertisment

ಬೆಂಗಳೂರು: ಕಳೆದ ರಾತ್ರಿ ಭುವನೇಶ್ವರಿ ನಗರದಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದ್ದು, ಇಬ್ಬರು ಮಕ್ಕಳು ಹಾಗೂ ತಾಯಿ ದಾರುಣ ಅಂತ್ಯ ಕಂಡಿದ್ದಾರೆ. ಇದೀಗ ಪ್ರಕರಣಕ್ಕೆ ಟ್ವಿಸ್ಟ್​ ಸಿಕ್ಕಿದ್ದು, ಗಂಡನ ಅನೈತಿಕ ಸಂಬಂಧಕ್ಕೆ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ ಅನ್ನೋ ವಿಚಾರ ಬೆಳಕಿಗೆ ಬಂದಿದೆ. 

ಭುವನ್ (1.5), ವೃಂದಾ (4) ಹಾಗೂ ತಾಯಿ ವಿಜಲಕ್ಷ್ಮೀ ಮೃತ ದುರ್ದೈವಿಗಳು. ಇಬ್ಬರು ಮಕ್ಕಳನ್ನ ಸಾಯಿಸಿ, ತಾಯಿ ಆತ್ಮ*ತ್ಯೆ ಮಾಡಿಕೊಂಡಿದ್ದಾಳೆ. ನೇಣು ಬಿಗಿದ ಸ್ಥಿತಿಯಲ್ಲಿ ಮೂವರ ಮೃತ‌ದೇಹ ಪತ್ತೆಯಾಗಿದೆ. 

ಇದನ್ನೂ ಓದಿ: ಘಟಾನುಘಟಿ ಸ್ಟಾರ್​ಗಳಿಗೆ RCB ಗೇಟ್​ಪಾಸ್.. ಯಾರನ್ನೆಲ್ಲ ರಿಲೀಸ್ ಮಾಡುತ್ತೆ..?

Bengalore mother (3)

ಇವರು ಮೂಲತಃ ರಾಯಚೂರು ಜಿಲ್ಲೆಯವರು. ವಿಜಯಲಕ್ಷ್ಮಿ ಗಂಡ ಖಾಸಗಿ ಮಾಲ್‌ನಲ್ಲಿ ಕೆಲಸ ಮಾಡುತ್ತಿದ್ದಾನೆ. ನಿನ್ನೆ ವಿಜಯಲಕ್ಷ್ಮಿ ತಂಗಿ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮದುವೆಯಾಗಿ ಐದು ವರ್ಷವಾಗಿತ್ತು. ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಇದನ್ನೂ ಓದಿ: ವೀರೇಂದ್ರ ಪಪ್ಪಿ ಆಸ್ತಿ ಕಂಡು ಬೆಚ್ಚಿದ ED; 40 ಕೆಜಿ ಚಿನ್ನ ಸೀಜ್..!

bengalore mother (1)

ಟ್ವಿಸ್ಟ್ ಏನು..? 

ಪೊಲೀಸರ ಪ್ರಾಥಮಿಕ ತನಿಖೆ ವೇಳೆ ಗೊತ್ತಾಗಿರೋ ಮಾಹಿತಿ ಪ್ರಕಾರ, ವಿಜಯಲಕ್ಷ್ಮಿ ಪತಿ ರಮೇಶ್​ಗೆ ಇನ್​ಸ್ಟಾಗ್ರಾಮ್​​ನಲ್ಲಿ ಬೇರೆ ಯಾವುದೋ ಮಹಿಳೆಗೆ ಮೆಸೇಜ್ ಮಾಡ್ತಿದ್ದ. ಪ್ರತಿನಿತ್ಯ ಮನೆಗೆ ಬರುತ್ತಿದ್ದ ರಮೇಶ್, ಪತ್ನಿ ಜೊತೆ ಗಲಾಟೆ ಮಾಡ್ತಿದ್ದ. ನಾನು ಮತ್ತೊಂದು ಮದುವೆಯಾಗ್ತೀನಿ ಅಂದಿದ್ನಂತೆ. 

ವಿಜಯಲಕ್ಷ್ಮೀಗೆ ಡಿವೋರ್ಸ್ ಕೊಡೋದಾಗಿ ಹೆದರಿಸ್ತಿದ್ದ. ಈ ವಿಚಾರವನ್ನು ವಿಜಯಲಕ್ಷ್ಮೀ ತನ್ನ  ಕುಟುಂಬಸ್ಥರ ಬಳಿ ಹೇಳಿಕೊಂಡಿದ್ದಳು. ಎರಡು ತಿಂಗಳ ಹಿಂದೆ ಊರಲ್ಲಿ ರಾಜಿ ಪಂಚಾಯ್ತಿ ಮಾಡಲಾಗಿತ್ತು. ಆನಂತರ ಮತ್ತೆ ರಮೇಶ್ ಜೊತೆ ವಿಜಯಲಕ್ಷ್ಮೀ ಬೆಂಗಳೂರಿಗೆ ಬಂದಿದ್ದಳು. ರಾಜಿ ಸಂಧಾನ ಮುಗಿದ ನಂತರವೂ ಆತ ಮೆಸೇಜ್ ಮಾಡ್ತಿದ್ದ ಎನ್ನಲಾಗಿದೆ. 

ಇದನ್ನೂ ಓದಿ: ಹೃದಯ ವಿದ್ರಾವಕ ಘಟನೆ.. ಇಬ್ಬರು ಮಕ್ಕಳ ಜೀವ ತೆಗೆದು ಪ್ರಾಣ ಬಿಟ್ಟ ತಾಯಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bengaluru News Raichur Bengaluru case
Advertisment