Advertisment

ಡಬಲ್ ಡೆಕ್ಕರ್, ದೇಶದ ಅತೀ ಎತ್ತರದ ಮೆಟ್ರೋ ನಿಲ್ದಾಣ -ಹಳದಿ ಮಾರ್ಗದ ವಿಶೇಷತೆಗಳು ಏನೇನು..?

ಬೆಂಗಳೂರು ನಿವಾಸಿಗಳ ಸಂಚಾರದ ಜೀವನಾಡಿ ‘ನಮ್ಮ ಮೆಟ್ರೋ’ ಮತ್ತಷ್ಟು ವಿಸ್ತರಣೆ ಆಗ್ತಿದೆ. ಹಳದಿ ಮಾರ್ಗ ಸಂಚಾರಕ್ಕೆ ನಾಳೆ ಪ್ರಧಾನಿ ಮೋದಿ ಹಸಿರು ನಿಶಾನೆ ತೋರಿಸಲಿದ್ದಾರೆ. ಆ ಮೂಲಕ ಸಿಲಿಕಾನ್ ಸಿಟಿಯ ಬಹುದಿನಗಳ ಕನಸು ಈಡೇರಲಿದೆ.

author-image
Ganesh Kerekuli
Namma metro yellow line
Advertisment

ಬೆಂಗಳೂರು ನಿವಾಸಿಗಳ ಸಂಚಾರದ ಜೀವನಾಡಿ ‘ನಮ್ಮ ಮೆಟ್ರೋ’ ಮತ್ತಷ್ಟು ವಿಸ್ತರಣೆ ಆಗ್ತಿದೆ. ಹಳದಿ ಮಾರ್ಗ ಸಂಚಾರಕ್ಕೆ ನಾಳೆ ಪ್ರಧಾನಿ ಮೋದಿ ಹಸಿರು ನಿಶಾನೆ ತೋರಿಸಲಿದ್ದಾರೆ. ಆ ಮೂಲಕ ಸಿಲಿಕಾನ್ ಸಿಟಿಯ ಬಹುದಿನಗಳ ಕನಸು ಈಡೇರಲಿದೆ. 

Advertisment

ಹಳದಿ ಮಾರ್ಗದ ವಿಶೇಷತೆಗಳು..

ಪ್ರಧಾನಿ ಮೋದಿ ಉದ್ಘಾಟಿಸಲಿರುವ ಹಳದಿ ಮಾರ್ಗದ ವಿಶೇಷತೆಗಳು ಏನು ಅಂತಾ ನೋಡೋದಾದ್ರೆ.. ಸುಮಾರು 5,056.99 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಮಾರ್ಗ ನಿರ್ಮಾಣವಾಗಿದೆ. ಐಟಿ ಹಬ್ ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸುವ ‘ಚಾಲಕ ರಹಿತ ರೈಲು’ ಈ ಮಾರ್ಗದಲ್ಲಿ ಸಂಚರಿಸಲಿದೆ. ಆರ್.ವಿ.ರಸ್ತೆ-ಬೊಮ್ಮಸಂದ್ರ ನಡುವೆ 19.15 ಕಿಲೋ ಮೀಟರ್ ಸಂಪರ್ಕ ಕಲ್ಪಿಸಲಿದೆ. ಇದು ಒಟ್ಟು 16 ನಿಲ್ದಾಣಗಳನ್ನು ಹೊಂದಿದ್ದು, ಸದ್ಯ ಮೂರು ರೈಲುಗಳ ಮೂಲಕ ವಾಣಿಜ್ಯ ಸಂಚಾರ ಆರಂಭವಾಗಲಿದೆ. 

ಇದನ್ನೂ ಓದಿ: ನಾಳೆ ಬೆಂಗಳೂರಲ್ಲಿ ಪ್ರಧಾನಿ ಮೋದಿ.. ಮೆಟ್ರೋ, 3 ವಂದೇ ಭಾರತ್ ರೈಲು ಸೇರಿ ಏನೆಲ್ಲ ಉದ್ಘಾಟಿಸ್ತಾರೆ..?

ಮುಂದಿನ ದಿನಗಳಲ್ಲಿ 3.5 ಲಕ್ಷ ಮಂದಿ ಸಂಚಾರ..! 

ಸದ್ಯ ಪ್ರತಿ 20 ರಿಂದ 25 ನಿಮಿಷಗಳ ಅಂತರದಲ್ಲಿ ಒಂದು ಮೆಟ್ರೋ ಸಂಚಾರ ಇರಲಿದೆ. ನಿತ್ಯ 20-30 ಸಾವಿರ ಪ್ರಯಾಣಿಕರು ಈ ಮಾರ್ಗದಲ್ಲಿ ಸಂಚಾರ ಮಾಡಲಿದ್ದಾರೆ. 2026ರವೇಳೆಗೆ 12 ರೈಲುಗಳು ಹಳದಿ ಮಾರ್ಗಕ್ಕೆ ಸೇರ್ಪಡೆ ಆಗಲಿದೆ. ಆ ಮೂಲಕ ಹಳದಿ ಮಾರ್ಗದಲ್ಲಿ 15 ಮೆಟ್ರೋಗಳು ಓಡಾಡಲಿವೆ.  ಅಂತೆಯೇ ಮುಂಬರುವ ದಿನಗಳಲ್ಲಿ ಮೆಟ್ರೋ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಲಿದ್ದು, 3.5 ಲಕ್ಷ ಮಂದಿ ಪ್ರಯಾಣಿಕರು ಪ್ರಯಾಣಿಸಬಹುದು ಎಂದು ಬಿಎಂಆರ್​ಸಿಎಲ್ ಅಂದಾಜಿಸಿದೆ.

Advertisment

ಇದನ್ನೂ ಓದಿ:  ನಾಳೆ ಬೆಂಗಳೂರಿಗೆ ಪ್ರಧಾನಿ ಮೋದಿ ಭೇಟಿ ಹಿನ್ನಲೆಯಲ್ಲಿ ಸಂಚಾರ ನಿರ್ಬಂಧ, ಈ ಮಾರ್ಗಗಳನ್ನು ನಾಳೆ ಅವೈಡ್ ಮಾಡಿ ಎಂದ ಪೊಲೀಸರು

Namma metro yelleo line

16 ನಿಲ್ದಾಣಗಳು..

ಬೊಮ್ಮಸಂದ್ರ, ಹಬ್ಬಗೋಡಿ, ಹುಸ್ಕೂರು ರಸ್ತೆ, ಇನ್ಫೋಸಿಸ್ ಫೌಂಡೇಶನ್ (ಕೋನಪ್ಪನ ಅಗ್ರಹಾರ), ಎಲೆಕ್ಟ್ರಾನಿಕ್ ಸಿಟಿ, ಬೆರಟೇನ ಅಗ್ರಹಾರ, ಹೊಸ ರಸ್ತೆ, ಸಿಂಗಸಂದ್ರ, ಕೂಡ್ಲುಗೇಟ್, ಹೊಂಗಸಂದ್ರ, ಬೊಮ್ಮನಹಳ್ಳಿ, ಸೆಂಟ್ರಲ್ ಸಿಲ್ಕ್ ಬೋರ್ಡ್, ಬಿಟಿಎಂ ಲೇಔಟ್, ಜಯದೇವ ಆಸ್ಪತ್ರೆ, ರಾಗಿಗುಡ್ಡ, ಆರ್. ವಿ.ರಸ್ತೆ ನಿಲ್ದಾಣಗಳನ್ನು ಹೊಂದಿದೆ. 

ಡಬ್ಬಲ್ ಡೆಕ್ಕರ್

ನಮ್ಮ ಮೆಟ್ರೋದ ‘ಡಬಲ್ ಡೆಕ್ಕರ್ ಪ್ರೈಓವರ್’ ಹಳದಿ ಮಾರ್ಗದಲ್ಲಿ ನಿರ್ಮಾಣವಾಗಿದೆ.  ರಾಗಿಗುಡ್ಡದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ವರೆಗೆ (ಸಿಎಸ್​ಬಿ) ಡಬ್ಬಲ್ ಡೆಕ್ಕರ್ (3.3 ಕಿ.ಮೀ)  ನಿರ್ಮಾಣವಾಗಿದೆ. ಡಬ್ಬಲ್ ಡೆಕ್ಕರ್​​​ ಪ್ರೈಓವರ್‌ನ ಮೇಲ್ಭಾಗದಲ್ಲಿ ರೈಲು ಓಡಾಡಲಿದೆ. ಕೆಳಭಾಗ ವಾಹನಗಳ ಓಡಾಟಕ್ಕೆ ಮೀಸಲಾಗಿದೆ. ಕೆಳರಸ್ತೆಯಿಂದ ಡಬಲ್ ಡೆಕ್ಕರ್​ನ ಮೊದಲ ಪ್ರೈಓವರ್ 8 ಮೀ ಎತ್ತರದಲ್ಲಿದ್ದರೆ, ಮೆಟ್ರೋ ವಯಡಕ್ಟ್ 16 ಮೀಟರ್ ಎತ್ತರದಲ್ಲಿದೆ.

Advertisment

ಇದನ್ನೂ ಓದಿ:ಪಾಕ್​​ನ 5 F-16 ಫೈಟರ್ ಜೆಟ್​, 1 ದೊಡ್ಡ ವಿಮಾನ ಹೊಡೆದುರುಳಿಸಿದ್ದೇವೆ- ಏರ್​ಚೀಫ್ ಮಾರ್ಷಲ್

Narendra modi

ಎತ್ತರದ ಇಂಟರ್​​ಚೇಂಜ್

ಜಯದೇವ ಇಂಟರ್​ಚೇಂಜ್ ನಿಲ್ದಾಣದಲ್ಲಿ ಹಂತದ ಸಾರಿಗೆ ವ್ಯವಸ್ಥೆ ನಿರ್ಮಾಣವಾಗಿದೆ. 5ನೇ ಹಂತ ನೆಲಮಟ್ಟದಿಂದ 29 ಮೀಟರ್ ಎತ್ತರದಲ್ಲಿದೆ. ಇದು ದೇಶದ ಎತ್ತರದ ಮೆಟ್ರೋ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಇಂಟರ್‌ಚೇಂಜ್ ನಿಲ್ದಾಣದಲ್ಲಿ ಅಂಡರ್​ಪಾಸ್, ನೆಲಮಟ್ಟದಲ್ಲಿ ಸಾಮಾನ್ಯ ವಾಹನ ಸಂಚಾರ, ಅದರ ಮೇಲೆ ರಾಗಿಗುಡ್ಡೆ-ಸಿಲ್ಕ್ ಬೋರ್ಡ್ ಮೇಲ್ಸೇತುವೆ, ಅದರ ಮೇಲೆ ಹಳದಿ ಮಾರ್ಗ ನಿರ್ಮಾಣ ಆಗಿದೆ. ಇದರ ಮೇಲೆ ಗುಲಾಬಿ ಮಾರ್ಗ ತಲೆ ಎತ್ತಲಿದ್ದು, 2026ರಲ್ಲಿ ಉದ್ಘಾಟನೆಗೊಳ್ಳುವ ನಿರೀಕ್ಷೆ ಇದೆ. 

ಚಾಲಕ ರಹಿತ ರೈಲು

ಈವರೆಗೆ ನಮ್ಮ ಮೆಟ್ರೋದ ರೈಲುಗಳು ಡಿಟಿಜಿ ಸಿಗ್ನಲಿಂಗ್ ತಂತ್ರ ಜ್ಞಾನದಲ್ಲಿ ಸಂಚರಿಸುತ್ತಿವೆ. ಹಳದಿ ಮಾರ್ಗದಲ್ಲಿ ಚಾಲಕ ರಹಿತ ರೈಲಿಗಾಗಿ ಸಿಬಿಟಿಸಿ (ಕಮ್ಯುನಿಕೇಶನ್ ಬೇಸ್ಟ್ ಟ್ರೈನ್ ಕಂಟ್ರೋಲ್) ತಂತ್ರಜ್ಞಾನ ಬಳಸಲಾಗಿದೆ. ಚೀನಾದಿಂದ ಚಾಲಕ ರಹಿತ ಪ್ರೋಟೋಟೈಪ್ ರೈಲು ಬಂದಿದೆ. ಅದೇ ಮಾದರಿ ನೋಡಿಕೊಂಡು ಕೋಲ್ಕತಾದ ತೀತಾಫಡ್ ರೈಲ್ ಸಿಸ್ಟಂ ಲಿ. 14 ರೈಲನ್ನು ಈ ಮಾರ್ಗಕ್ಕೆ ಒದಗಿಸುತ್ತಿದೆ. ಇದು ಚಾಲಕ ರಹಿತ ರೈಲಾದರೂ ಆರಂಭದಲ್ಲಿ ಚಾಲಕ ಸಹಿತವಾಗಿ ಸಂಚರಿಸಿ ಬಳಿಕ ಚಾಲಕರಹಿತವಾಗಿ ಓಡಿಸಲಾಗುತ್ತದೆ. 

Advertisment

ಇದನ್ನೂ ಓದಿ:ಕಾಡ್ಗಿಚ್ಚಿಗೆ ಬೆಚ್ಚಿದ ಫ್ರಾನ್ಸ್, 42,000 ಎಕರೆ ಭೂಮಿ ಸುಟ್ಟು ಭಸ್ಮ, ಬೆಂಕಿ ನಂದಿಸಲು 2,000 ಜನ ಹರಸಾಹಸ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Yellow Line specialization Pm Narendra Modi Namma metro
Advertisment
Advertisment
Advertisment