/newsfirstlive-kannada/media/media_files/2025/08/09/namma-metro-yelleo-line-2025-08-09-16-44-14.jpg)
ಬೆಂಗಳೂರು ನಿವಾಸಿಗಳ ಸಂಚಾರದ ಜೀವನಾಡಿ ‘ನಮ್ಮ ಮೆಟ್ರೋ’ ಮತ್ತಷ್ಟು ವಿಸ್ತರಣೆ ಆಗ್ತಿದೆ. ಹಳದಿ ಮಾರ್ಗ ಸಂಚಾರಕ್ಕೆ ಇವತ್ತು ಪ್ರಧಾನಿ ಮೋದಿ ಹಸಿರು ನಿಶಾನೆ ತೋರಿಸಲಿದ್ದಾರೆ. ಆ ಮೂಲಕ ಸಿಲಿಕಾನ್ ಸಿಟಿಯ ಬಹುದಿನಗಳ ಕನಸು ಈಡೇರಲಿದೆ.
ಹಳದಿ ಮಾರ್ಗದ ವಿಶೇಷತೆಗಳು..
ಪ್ರಧಾನಿ ಮೋದಿ ಉದ್ಘಾಟಿಸಲಿರುವ ಹಳದಿ ಮಾರ್ಗದ ವಿಶೇಷತೆಗಳು ಏನು ಅಂತಾ ನೋಡೋದಾದ್ರೆ.. ಸುಮಾರು 5,056.99 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಮಾರ್ಗ ನಿರ್ಮಾಣವಾಗಿದೆ. ಐಟಿ ಹಬ್ ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸುವ ‘ಚಾಲಕ ರಹಿತ ರೈಲು’ ಈ ಮಾರ್ಗದಲ್ಲಿ ಸಂಚರಿಸಲಿದೆ. ಆರ್.ವಿ.ರಸ್ತೆ-ಬೊಮ್ಮಸಂದ್ರ ನಡುವೆ 19.15 ಕಿಲೋ ಮೀಟರ್ ಸಂಪರ್ಕ ಕಲ್ಪಿಸಲಿದೆ. ಇದು ಒಟ್ಟು 16 ನಿಲ್ದಾಣಗಳನ್ನು ಹೊಂದಿದ್ದು, ಸದ್ಯ ಮೂರು ರೈಲುಗಳ ಮೂಲಕ ವಾಣಿಜ್ಯ ಸಂಚಾರ ಆರಂಭವಾಗಲಿದೆ.
ಮುಂದಿನ ದಿನಗಳಲ್ಲಿ 3.5 ಲಕ್ಷ ಮಂದಿ ಸಂಚಾರ..!
ಸದ್ಯ ಪ್ರತಿ 20 ರಿಂದ 25 ನಿಮಿಷಗಳ ಅಂತರದಲ್ಲಿ ಒಂದು ಮೆಟ್ರೋ ಸಂಚಾರ ಇರಲಿದೆ. ನಿತ್ಯ 20-30 ಸಾವಿರ ಪ್ರಯಾಣಿಕರು ಈ ಮಾರ್ಗದಲ್ಲಿ ಸಂಚಾರ ಮಾಡಲಿದ್ದಾರೆ. 2026ರವೇಳೆಗೆ 12 ರೈಲುಗಳು ಹಳದಿ ಮಾರ್ಗಕ್ಕೆ ಸೇರ್ಪಡೆ ಆಗಲಿದೆ. ಆ ಮೂಲಕ ಹಳದಿ ಮಾರ್ಗದಲ್ಲಿ 15 ಮೆಟ್ರೋಗಳು ಓಡಾಡಲಿವೆ. ಅಂತೆಯೇ ಮುಂಬರುವ ದಿನಗಳಲ್ಲಿ ಮೆಟ್ರೋ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಲಿದ್ದು, 3.5 ಲಕ್ಷ ಮಂದಿ ಪ್ರಯಾಣಿಕರು ಪ್ರಯಾಣಿಸಬಹುದು ಎಂದು ಬಿಎಂಆರ್ಸಿಎಲ್ ಅಂದಾಜಿಸಿದೆ.
ಇದನ್ನೂ ಓದಿ:ಪಾಕ್ನ 5 F-16 ಫೈಟರ್ ಜೆಟ್, 1 ದೊಡ್ಡ ವಿಮಾನ ಹೊಡೆದುರುಳಿಸಿದ್ದೇವೆ- ಏರ್ಚೀಫ್ ಮಾರ್ಷಲ್
16 ನಿಲ್ದಾಣಗಳು..
ಬೊಮ್ಮಸಂದ್ರ, ಹಬ್ಬಗೋಡಿ, ಹುಸ್ಕೂರು ರಸ್ತೆ, ಇನ್ಫೋಸಿಸ್ ಫೌಂಡೇಶನ್ (ಕೋನಪ್ಪನ ಅಗ್ರಹಾರ), ಎಲೆಕ್ಟ್ರಾನಿಕ್ ಸಿಟಿ, ಬೆರಟೇನ ಅಗ್ರಹಾರ, ಹೊಸ ರಸ್ತೆ, ಸಿಂಗಸಂದ್ರ, ಕೂಡ್ಲುಗೇಟ್, ಹೊಂಗಸಂದ್ರ, ಬೊಮ್ಮನಹಳ್ಳಿ, ಸೆಂಟ್ರಲ್ ಸಿಲ್ಕ್ ಬೋರ್ಡ್, ಬಿಟಿಎಂ ಲೇಔಟ್, ಜಯದೇವ ಆಸ್ಪತ್ರೆ, ರಾಗಿಗುಡ್ಡ, ಆರ್. ವಿ.ರಸ್ತೆ ನಿಲ್ದಾಣಗಳನ್ನು ಹೊಂದಿದೆ.
ಡಬ್ಬಲ್ ಡೆಕ್ಕರ್
ನಮ್ಮ ಮೆಟ್ರೋದ ‘ಡಬಲ್ ಡೆಕ್ಕರ್ ಪ್ರೈಓವರ್’ ಹಳದಿ ಮಾರ್ಗದಲ್ಲಿ ನಿರ್ಮಾಣವಾಗಿದೆ. ರಾಗಿಗುಡ್ಡದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ವರೆಗೆ (ಸಿಎಸ್ಬಿ) ಡಬ್ಬಲ್ ಡೆಕ್ಕರ್ (3.3 ಕಿ.ಮೀ) ನಿರ್ಮಾಣವಾಗಿದೆ. ಡಬ್ಬಲ್ ಡೆಕ್ಕರ್ ಪ್ರೈಓವರ್‌ನ ಮೇಲ್ಭಾಗದಲ್ಲಿ ರೈಲು ಓಡಾಡಲಿದೆ. ಕೆಳಭಾಗ ವಾಹನಗಳ ಓಡಾಟಕ್ಕೆ ಮೀಸಲಾಗಿದೆ. ಕೆಳರಸ್ತೆಯಿಂದ ಡಬಲ್ ಡೆಕ್ಕರ್ನ ಮೊದಲ ಪ್ರೈಓವರ್ 8 ಮೀ ಎತ್ತರದಲ್ಲಿದ್ದರೆ, ಮೆಟ್ರೋ ವಯಡಕ್ಟ್ 16 ಮೀಟರ್ ಎತ್ತರದಲ್ಲಿದೆ.
ಇದನ್ನೂ ಓದಿ: ದರ್ಶನ್ ಫ್ಯಾನ್ಸ್ ಇಂದ ರಮ್ಯಾಗೆ ಅಶ್ಲೀಲ ಮಸೇಜ್ ಕೇಸ್; A1 ಆರೋಪಿನ ವಶಕ್ಕೆ ಪಡೆದ CCB
ಎತ್ತರದ ಇಂಟರ್‌ಚೇಂಜ್
ಜಯದೇವ ಇಂಟರ್‌ಚೇಂಜ್ ನಿಲ್ದಾಣದಲ್ಲಿ ಹಂತದ ಸಾರಿಗೆ ವ್ಯವಸ್ಥೆ ನಿರ್ಮಾಣವಾಗಿದೆ. 5ನೇ ಹಂತ ನೆಲಮಟ್ಟದಿಂದ 29 ಮೀಟರ್ ಎತ್ತರದಲ್ಲಿದೆ. ಇದು ದೇಶದ ಎತ್ತರದ ಮೆಟ್ರೋ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಇಂಟರ್‌ಚೇಂಜ್ ನಿಲ್ದಾಣದಲ್ಲಿ ಅಂಡರ್ಪಾಸ್, ನೆಲಮಟ್ಟದಲ್ಲಿ ಸಾಮಾನ್ಯ ವಾಹನ ಸಂಚಾರ, ಅದರ ಮೇಲೆ ರಾಗಿಗುಡ್ಡೆ-ಸಿಲ್ಕ್ ಬೋರ್ಡ್ ಮೇಲ್ಸೇತುವೆ, ಅದರ ಮೇಲೆ ಹಳದಿ ಮಾರ್ಗ ನಿರ್ಮಾಣ ಆಗಿದೆ. ಇದರ ಮೇಲೆ ಗುಲಾಬಿ ಮಾರ್ಗ ತಲೆ ಎತ್ತಲಿದ್ದು, 2026ರಲ್ಲಿ ಉದ್ಘಾಟನೆಗೊಳ್ಳುವ ನಿರೀಕ್ಷೆ ಇದೆ.
ಚಾಲಕ ರಹಿತ ರೈಲು
ಈವರೆಗೆ ನಮ್ಮ ಮೆಟ್ರೋದ ರೈಲುಗಳು ಡಿಟಿಜಿ ಸಿಗ್ನಲಿಂಗ್ ತಂತ್ರ ಜ್ಞಾನದಲ್ಲಿ ಸಂಚರಿಸುತ್ತಿವೆ. ಹಳದಿ ಮಾರ್ಗದಲ್ಲಿ ಚಾಲಕ ರಹಿತ ರೈಲಿಗಾಗಿ ಸಿಬಿಟಿಸಿ (ಕಮ್ಯುನಿಕೇಶನ್ ಬೇಸ್ಟ್ ಟ್ರೈನ್ ಕಂಟ್ರೋಲ್) ತಂತ್ರಜ್ಞಾನ ಬಳಸಲಾಗಿದೆ. ಚೀನಾದಿಂದ ಚಾಲಕ ರಹಿತ ಪ್ರೋಟೋಟೈಪ್ ರೈಲು ಬಂದಿದೆ. ಅದೇ ಮಾದರಿ ನೋಡಿಕೊಂಡು ಕೋಲ್ಕತಾದ ತೀತಾಫಡ್ ರೈಲ್ ಸಿಸ್ಟಂ ಲಿ. 14 ರೈಲನ್ನು ಈ ಮಾರ್ಗಕ್ಕೆ ಒದಗಿಸುತ್ತಿದೆ. ಇದು ಚಾಲಕ ರಹಿತ ರೈಲಾದರೂ ಆರಂಭದಲ್ಲಿ ಚಾಲಕ ಸಹಿತವಾಗಿ ಸಂಚರಿಸಿ ಬಳಿಕ ಚಾಲಕರಹಿತವಾಗಿ ಓಡಿಸಲಾಗುತ್ತದೆ.
ಇದನ್ನೂ ಓದಿ: ಆ್ಯಕ್ಷನ್ ಪ್ರಿನ್ಸ್ 3.5 ಕೋಟಿ ಹಣ ವಂಚನೆ ಆರೋಪ; ಸ್ಪಷ್ಟನೆ ಕೊಟ್ಟ ಧ್ರುವ ಸರ್ಜಾ ಆಪ್ತ ಬಳಗ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ