/newsfirstlive-kannada/media/media_files/2025/09/13/chikkamaglore-suresh-1-2025-09-13-14-23-50.jpg)
ಹಾಸನದ ದುರ್ಘಟನೆಯಲ್ಲಿ ಚಿಕ್ಕಮಗಳೂರಿನ ಮಣೆನಹಳ್ಳಿ ಗ್ರಾಮದ ಯುವಕ ಸುರೇಶ್ ಎಂಬಾತ ಮೃತಪಟ್ಟಿದ್ದಾನೆ. 19 ವರ್ಷದ ಸುರೇಶ್ ಹಾಸನದಲ್ಲಿ ಇಂಜಿನೀಯರಿಂಗ್ ಮಾಡ್ತಿದ್ದ. ಮಣೆನಹಳ್ಳಿಯಿಂದ ಇಂಜಿನಿಯರಿಂಗ್ಗೆ ಸೇರಿದ್ದ ಮೊದಲ ಯುವಕನಾಗಿದ್ದ.
ಅಲ್ಲದೇ ಕಾಲೇಜಿಗೇ ಟಾಪರ್ ಆಗಿದ್ದ. ತಂದೆ ರಮೇಶ್ ಕೂಲಿ ಮಾಡಿ ಮಗನಿಗೆ ವಿದ್ಯಾಭ್ಯಾಸ ಮಾಡಿಸಿದ್ದರು. ಇದೀಗ ಮಗನನ್ನು ಕಳೆದುಕೊಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ರಮೇಶ್ ಅವರ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿದೆ.
ಇದನ್ನೂ ಓದಿ:ಸ್ನೇಹಾ ಶೆಟ್ಟಿಗೆ ಅಕುಲ್ ಕ್ಲಾಸ್! ಹಳ್ಳಿ ಪವರ್ ಶೋ ಕ್ವಿಟ್ ಮಾಡಿದ ಇಬ್ಬರು ಸ್ಪರ್ಧಿಗಳು!
ಅಂತ್ಯಕ್ರಿಯೆ ವೇಳೆ ಶ್ವಾನ ಕೂಡ ಕಣ್ಣೀರು ಇಟ್ಟಿದೆ. ಅಂತ್ಯಕ್ರಿಯೆ ಸ್ಥಳಕ್ಕೆ ಬಂದಿದ್ದ ಶ್ವಾನ ಜನರ ಗುಂಪಿನ ಮಧ್ಯೆ ಸುರೇಶ್ ಅಗಲಿಕೆಗೆ ನೋವು ವ್ಯಕ್ತಪಡಿಸಿದೆ. ಇನ್ನು, ಅಣ್ಣ ಸುರೇಶ್ನನ್ನು ಕಳೆದುಕೊಂಡು ಸಹೋದರ ರಾಜು ಒಂಟಿಯಾಗಿದ್ದಾನೆ. ಅಣ್ಣನ ವಿದ್ಯಾಭ್ಯಾಸಕ್ಕೆ ತಮ್ಮ ರಾಜು ಕೂಡ ಸಾಥ್ ನೀಡಿದ್ದ. ಗಾರೆ ಕೆಲಸ ಮಾಡಿ ಕುಟುಂಬ ಸುರೇಶ್ ವಿದ್ಯಾಭ್ಯಾಸದ ವೆಚ್ಚ ಭರಿಸುತ್ತಿದ್ದ. ತಮ್ಮ ಕೂಡ ಅಣ್ಣನ ವಿಧ್ಯಾಭಸಕ್ಕೆ ತನ್ನ ದುಡಿಮೆಯಲ್ಲಿ ಪಾಲು ನೀಡ್ತಾ ಇದ್ದ. ಸುರೇಶ್ ವಿದ್ಯಾಭ್ಯಾಸ ಪೂಣರ್ಗೊಂಡ್ರೆ ಕಷ್ಟದ ದಿನಗಳು ಕಳೆಯುತ್ತೆ ಅಂತಾ ತಂದೆ ರಮೇಶ್ ಕನಸು ಕಂಡಿದ್ದರು. ರಾಜು ಸಣ್ಣ ವಯಸ್ಸಾದ್ರೂ ಅಣ್ಣನ ಕನಸಿಗೆ ಯಜಮಾನನಂತೆ ನಿಂತಿದ್ದ. ಆದ್ರೀಗ ಇದೀಗ ಅಣ್ಣನನ್ನು ಕಳೆದುಕೊಂಡು ಸಹೋದರ ಒಂಟಿಯಾಗಿದ್ದಾನೆ.
ಗಣೇಶ ವಿಸರ್ಜನೆ ದುರಂತದಲ್ಲಿ ಮೃತಪಟ್ಟ ಸುರೇಶ್ ಕುಟುಂಬಕ್ಕೆ ಸಿ.ಟಿ ರವಿ ಸಾಂತ್ವನ ಹೇಳಿದ್ದಾರೆ. ಚಿಕ್ಕಮಗಳೂರು ಮೂಲದ ಸುರೇಶ್ ಹಾಸನದ ಮೊಸಳೆ ಹಳ್ಳಿ ಲಾರಿ ಅಪಘಾತದಲ್ಲಿ ಮೃತಪಟ್ಟಿದ್ದ. ಸುರೇಶ್ ಮೃತದೇಹ ಅಂತಿಮ ದರ್ಶನ ಪಡೆದ ಎಂಎಲ್ಸಿ ಸಿ.ಟಿ ರವಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬಳಿಕ ಆ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.
ಇದನ್ನೂ ಓದಿ:ಹೂವಿನ ಬಾಣದ ಈ ವೈರಲ್ ಹುಡುಗಿ ಯಾರು..? ಈಗ ಏನ್ ಹೇಳ್ತಿದ್ದಾಳೆ ಇವರು..? VIDEO
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ