/newsfirstlive-kannada/media/post_attachments/wp-content/uploads/2024/12/COLD.jpg)
ಬೇಸಿಗೆಯಲ್ಲಿ ನೆತ್ತಿ ಸುಡುವ ಬಿಸಿಲಿಗೆ ಹೈರಾಣಾಗುತ್ತಿದ್ದ ಉತ್ತರ ಕರ್ನಾಟಕ.. ಸದ್ಯ ಶೀತಗಾಳಿಗೆ ತತ್ತರಿಸಿದೆ. ತಾಪಮಾನ ಪಾತಾಳಕ್ಕೆ ಕುಸಿದಿದ್ದು, ಹಗಲೊತ್ತಿನಲ್ಲೂ ಚಳಿ ಜನರನ್ನು ಬಿಡದೆ ಕಾಡುತ್ತಿದೆ. ಮುಂದಿನ ದಿನಗಳಲ್ಲಿ ಭಾರೀ ಚಳಿ ಬೀಳಲಿದೆ ಎಂದು ಇಲಾಖೆ ಎಚ್ಚರಿಕೆ ಕೊಟ್ಟಿದ್ದು, ಹಲವು ಜಿಲ್ಲೆಗಳಲ್ಲಿ ಆರೆಂಜ್​ ಅಲರ್ಟ್​ ಘೋಷಿಸಿದೆ.
ಉತ್ತರ ಕರ್ನಾಟಕ ಅಂದ ಕೂಡಲೇ ಥಟ್​ ಅಂತ ನೆನಪಾಗೋದು.. ರಣರಣ ಬಿಸಿಲು. ಸಾಮಾನ್ಯವಾಗಿ ಬಿಸಿಲ ನಾಡು, ಸುಡುವ ಭೂಮಿ ಅಂತಾನೇ ಕರೆಸಿಕೊಳ್ಳುವ ಉತ್ತರ ಕರ್ನಾಟಕದ ಮಂದಿ ಈಗ ಅಕ್ಷರಶಃ ಗಡಗಡ ನಡುಗುತ್ತಿದ್ದಾರೆ.
ವಿಪರೀತ ಚಳಿಗೆ ಉತ್ತರ ಕರ್ನಾಟಕ ಮಂದಿ ಗಢಗಢ
ನೀವು ಕೇಳುತ್ತಿರೋದು ಅಕ್ಷರಷಃ ಸತ್ಯ. ಬೇಸಿಗೆಯಲ್ಲಿ ನೆತ್ತಿ ಸುಡುವ ಬಿಸಿಲಿಗೆ ಹೈರಾಣಾಗುತ್ತಿದ್ದ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳ ಜನ.. ಈಗ ಹೊದಿಕೆ ಬಿಟ್ಟು ಹೊರಬರಲು ಹೆದರುತ್ತಿದ್ದಾರೆ. ರಾಜ್ಯಾದ್ಯಂತ ಶೀತಗಾಳಿ ಬೀಸುತ್ತಿದ್ದು, ತಾಪಮಾನ ಪಾತಾಳಕ್ಕೆ ಕುಸಿದಿದೆ. ಇದರ ಪರಿಣಾಮ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ.. ಅದರಲ್ಲೂ ಧಾರವಾಡ, ವಿಜಯಪು, ಬೀದರ್​ನಲ್ಲಿ ಹಗಲೊತ್ತಿನಲ್ಲೂ ಚಳಿ ಜನರನ್ನು ಬಿಡದೆ ಕಾಡುತ್ತಿದೆ.
ಇದನ್ನೂ ಓದಿ: ಮೆಸ್ಸಿ ಭಾರತಕ್ಕೆ ಬಂದ ವಿಮಾನದ ಬೆಲೆ 1 ಬಿಲಿಯನ್ ಡಾಲರ್! ಬೆರಗುಗೊಳಿಸುವ ಸೌಕರ್ಯಗಳು..!
/filters:format(webp)/newsfirstlive-kannada/media/media_files/2025/12/01/cold-weather-in-bangalore-2025-12-01-17-58-24.jpg)
ಧಾರವಾಡದಲ್ಲಿ ದಾಖಲೆ ಮಟ್ಟಕ್ಕೆ ಕುಸಿದ ತಾಪಮಾನ
ವಿಪರೀತ ಶೀತಗಾಳಿಯಿಂದಾಗಿ ಧಾರವಾಡ ಜಿಲ್ಲೆಯಲ್ಲಿ ತಾಪಮಾನ ದಾಖಲೆ ಮಟ್ಟಕ್ಕೆ ಕುಸಿತ ಕಂಡಿದೆ. ಮುಂಜಾನೆ ವೇಳೆ ಹಿಂದೆಂದೂ ಕಂಡಿರದ ಶೀತಗಾಳಿಯ ಅನುಭವದಿಂದ ಧಾರವಾಡದ ಮಂದಿ ಕಂಗಾಲಾಗಿದ್ದಾರೆ. ಧಾರವಾಡದಲ್ಲಿ ಕನಿಷ್ಠ 5 ಡಿಗ್ರಿ ಸೆಲ್ಸಿಯಸ್​ ಉಷ್ಣತೆ ದಾಖಲಾಗಿದ್ದು, ಪೇಡಾ ನಗರಿಯ ಜನ ಪತರಗುಟ್ಟಿದ್ದಾರೆ.
ಗುಮ್ಮಟನಗರಿ ವಿಜಯಪುರ ಜಿಲ್ಲೆಯ ಜನರು ಕೂಡ.. ಏಕಾಏಕಿ ತಾಪಮಾನ ಕುಸಿತದಿಂದ ಗಢಗಢ ನಡುಗುತ್ತಿದ್ದಾರೆ. ತಲೆಗೆ ಟೋಪಿ, ಮೈಮೇಲೆ ಸ್ವಟೆರ್​ ಇಲ್ಲದೇ ಹೊರ ಕಾಲಿಡುತ್ತಿಲ್ಲ. ಕಳೆದ 10 ವರ್ಷಗಳಲ್ಲಿ ಎರಡನೇ ಬಾರಿ ವಿಜಯಪುರ ಜಿಲ್ಲೆಯಲ್ಲಿ ಕನಿಷ್ಟ ತಾಪಮಾನ ದಾಖಲಾಗಿದೆ. ಕೇವಲ 7 ಡಿಗ್ರಿಗೆ ತಾಪಮಾನ ಕುಸಿದಿದ್ದು, ಹವಾಮಾನ ಇಲಾಖೆ ಅಧಿಕಾರಿಗಳು.. ನಸುಕಿನ ಜಾವ ಮತ್ತು ಸಾಯಂಕಾಲ ವಾಕಿಂಗ್​ಗೆ ತೆರಳದಂತೆ ಜನರಿಗೆ ಸಲಗೆ ನೀಡಿದ್ದಾರೆ.
ಇದನ್ನೂ ಓದಿ: ಕೊಹ್ಲಿ ಬ್ಯಾಟಿಂಗ್ ಆರ್ಡರ್ ಸ್ಥಾನ ತುಂಬಲು ತಂಡಕ್ಕೆ ಸಿಕ್ಕೇ ಬಿಟ್ರು ಭಲೇ ಆಟಗಾರ..!
/filters:format(webp)/newsfirstlive-kannada/media/post_attachments/wp-content/uploads/2024/12/COLD-1.jpg)
ಧಾರವಾಡ, ವಿಜಯಪುರ ಜಿಲ್ಲೆ ಮಾತ್ರವಲ್ಲ.. ಬೀದರ್​​ ಜಿಲ್ಲೆಯ ಜನರು ಕೂಡ ಮೈಕೊರೆಯುವ ಚಳಿಗೆ ಥಂಡಾ ಹೊಡೆದಿದ್ದಾರೆ. ಮೂಡಣದಲ್ಲಿ ಸೂರ್ಯನ ದರ್ಶನವಾದ್ರೂ ಕೂಡ.. ಬೀದರ್​​ ಮಂದಿ.. ಮನೆಯಿಂದ ಹೊರ ಬರಲು ಹಿಂದೇಟು ಹಾಕ್ತಿದ್ದಾರೆ. ಇದರಿಂದ ನಗರದ ವಾಕಿಂಗ್ ಹಾಟ್‌ಸ್ಪಾಟ್‌ಗಳು ಜನರಿಲ್ಲದೇ ಖಾಲಿ ಖಾಲಿ ಹೊಡೆಯುತ್ತಿವೆ. ಬೀದರ್​ನಲ್ಲಿ ಮುಂಜಾನೆ ವೇಳೆ ಕನಿಷ್ಟ 7.4 ತಾಪಮಾನ ದಾಖಲಾಗಿದ್ದು, ಜನರು ಚಳಿಯಿಂದ ರಕ್ಷಿಸಿಕೊಳ್ಳಲು ಬೆಚ್ಚಗಿನ ಉಡುಪುಗಳ ಮೊರೆ ಹೋಗಿದ್ದಾರೆ. ಡಿಸೆಂಬರ್​ 17ರವರೆಗೂ ಬೀದರ್​ನಲ್ಲಿ ಮುಂಜಾನೆ ವೇಳೆ ಚಳಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಒಟ್ಟಾರೆ.. ಈ ವರ್ಷ ವಿಪರೀತ ಚಳಿಗೆ ಬಿಸಿಲನಾಡು ಎನಿಸಿಕೊಂಡಿರುವ ಉತ್ತರ ಕರ್ನಾಟಕ ಪುಲ್​​ ಥಂಡಾ ಥಂಡಾವಾಗಿದೆ. ಜನವರಿಯಲ್ಲಿ ಕನಿಷ್ಟ ತಾಪಮಾನ 5 ಡಿಗ್ರಿವರೆಗೂ ಕುಸಿಯುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆ ಈಗಾಗಲೇ ಹಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಿದೆ.
ಇದನ್ನೂ ಓದಿ:ಮೊಟ್ಟೆ ತಿಂದರೆ ಕ್ಯಾನ್ಸರ್ ಬರುತ್ತಾ..? ಡಾ. ಅಂಜನಪ್ಪ ಕೊಟ್ಟ ಮಾಹಿತಿ ಏನು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us