/newsfirstlive-kannada/media/media_files/2025/09/12/mysore-chirate-2025-09-12-12-27-30.jpg)
ಮೈಸೂರು: ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನಲ್ಲಿ ಅಚ್ಚರಿಯೊಂದು ನಡೆದಿದೆ. ಬೋನಿನಲ್ಲಿ ಹಸುವಿದ್ದರೂ ತಿನ್ನದೆ ಚಿರತೆ ಹಾಗೆಯೇ ಬಿಟ್ಟಿರೋದು ಅಚ್ಚರಿ ಮೂಡಿಸಿದೆ.
ಹುಲಿ ಸೆರೆಗೆ ಎಂದು ಬೋನ್ ಇಡಲಾಗಿತ್ತು. ಆದರೆ ಅದೇ ಬೋನ್ನಲ್ಲಿ ಚಿರತೆ ಬಿದ್ದಿದೆ. ಬೋನಿನಲ್ಲಿ ಇರಿಸಿದ್ದ ಕರು ಭಕ್ಷಿಸಲು ಬಂದು ಚಿರತೆ ಬಂಧಿಯಾಗಿದೆ. ಪರಿಣಾಮ ಒಂದೇ ಬೋನಿನಲ್ಲಿ ಕರು ಮತ್ತು ಚಿರತೆ ಚಿರತೆ ಬಂಧಿಯಾಗಿವೆ.
ಇದನ್ನೂ ಓದಿ:ಮನುಷ್ಯತ್ವ ಮರೆತ ಆಸ್ಪತ್ರೆ.. ಮಗುವಿನ ಮೃತದೇಹ ತರಲು ಮನೆ ಮನೆಗೆ ತೆರಳಿ ಭಿಕ್ಷೆ ಬೇಡಿದ ತಾಯಿ..
ತಾನು ಸಂಕಷ್ಟಕ್ಕೆ ಸಿಲುಕುತ್ತಿದ್ದಂತೆಯೇ ಚಿರತೆ ಗಾಬರಿಯಾಗಿದೆ. ಭಯದಲ್ಲಿ ಕರುವಿಗೆ ಯಾವುದೇ ಅಪಾಯ ಮಾಡಿಲ್ಲ. ಚಿರತೆ ಮನಸ್ಸು ಮಾಡಿದ್ದರೆ ಸುಲಭವಾಗಿ ಅದನ್ನು ಹಿಡಿದು ತಿನ್ನಬಹುದಿತ್ತು. ಆದರೆ ಕರವನ್ನು ಮುಟ್ಟದೇ ಇರೋದನ್ನ ನೋಡಿದ ಗ್ರಾಮಸ್ಥರು, ಬಹುಶಃ ಚಿರತೆಗೆ ಪುಣ್ಯಕೋಟಿ ಕತೆ ನೆನಪಾಗಿರಬೇಕು ಅಂದುಕೊಳ್ತಿದ್ದಾರೆ.
ಇದನ್ನೂ ಓದಿ:ಅಮೆರಿಕದಲ್ಲಿ ಕರ್ನಾಟಕ ಮೂಲದ ವ್ಯಕ್ತಿಯ ತಲೆ ಕಡಿದು ವಿಕೃತಿ
ಸಾಕು ಪ್ರಾಣಿಗಳ ಮೇಲೆ ಹುಲಿ ದಾಳಿ ನಡೆಸುತ್ತಿತ್ತು. ಹೀಗಾಗಿ ಅರಣ್ಯ ಇಲಾಖೆ ಬೋನು ಇಟ್ಟಿತ್ತು. ಹೆಚ್.ಡಿ.ಕೋಟೆ ಪಟ್ಟಣದ ವಾಸಿ ಹೆತ್ತನಾಯ್ಕರ ಜಮೀನಿನಲ್ಲಿ ಬೋನು ಇಡಲಾಗಿತ್ತು. ಕಳೆದ ರಾತ್ರಿ ಆಹಾರ ಅರಸಿ ಬಂದ ಎರಡು ವರ್ಷದ ಗಂಡು ಚಿರತೆ ಬೋನಿನಲ್ಲಿ ಸಿಕ್ಕಿಬಿದ್ದಿದೆ.
ಇದನ್ನೂ ಓದಿ:ನಮ್ಮ ಮೆಟ್ರೋದಲ್ಲಿ ಜೀವಂತ ಹೃದಯ ಸಾಗಾಟ.. ವೈದ್ಯರ ರೋಚಕ ಕಾರ್ಯಾಚರಣೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ