/newsfirstlive-kannada/media/media_files/2025/10/01/mysore-jambu-savari-02-2025-10-01-17-56-12.jpg)
ಸಾಂದರ್ಭಿಕ ಫೋಟೋ
ಮೈಸೂರು ದಸರಾ.. ಎಷ್ಟೊಂದು ಸುಂದರ. ಎನ್ನುವಂತೆ ನಾಡಹಬ್ಬ ದಸರಾ ಸಂಭ್ರಮ ಕಳೆಗಟ್ಟಿದೆ. ವಿಜಯದಶಮಿಯಾದ ಇಂದು 416ನೇ ಐತಿಹಾಸಿಕ ಜಂಬೂ ಸವಾರಿಗೆ ಕ್ಷಣಗಣನೆ ಶುರುವಾಗಿದೆ. 6ನೇ ಬಾರಿ ಕ್ಯಾಪ್ಟನ್​​​ ಅಭಿಮನ್ಯು ಅಂಬಾರಿ ಹೊರಲು ಸರ್ವಸನ್ನದ್ಧನಾಗಿದ್ದಾನೆ.
ವಿಶ್ವವಿಖ್ಯಾತ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಮೈಸೂರು ದಸರಾಗೆ ಭೂಷಣವೇ ಜಂಬೂಸವಾರಿ.. ಅರಮನೆ ಅಂಗಳದಲ್ಲಿನ ಐತಿಹಾಸಿಕ ಜಂಬೂಸವಾರಿಗೆ ಸಾಂಸ್ಕೃತಿಕ ರಾಜಧಾನಿ ಸಜ್ಜಾಗಿದೆ.. ಗಜಪಡೆಗಳ ಕ್ಯಾಪ್ಟನ್ ಅಭಿಮನ್ಯು ವಜ್ರಖಚಿತ ಚಿನ್ನದ ಅಂಬಾರಿ ಹೊರಲು ಸಜ್ಜಾಗಿದ್ದಾನೆ.
ನಾಡಹಬ್ಬ ದಸರಾ.. ದಸರಾ ಸಡಗರ ಸದ್ಯ ಕೊನೆಘಟ್ಟಕ್ಕೆ ತಲುಪಿದೆ.. ದಶ ದಿನದ ಕ್ಷಣಕ್ಕೆ ಸಾಕ್ಷಿಯಾಗಲು ಲಕ್ಷಗಟ್ಟಲೆ ಪ್ರವಾಸಿಗರು ಮೈಸೂರಿನತ್ತ ಹೆಜ್ಜೆ ಹಾಕ್ತಿದ್ದಾರೆ.. 750 ಕೆ.ಜಿ.ತೂಕದ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗೋ ತಾಯಿ ಚಾಮುಂಡಿ ನಾಡಿನ ಜನಕ್ಕೆ ದರ್ಶನ ತೋರಲಿದ್ದಾಳೆ. 6ನೇ ಬಾರಿಗೆ ಅಂಬಾರಿಯನ್ನ ಹೊತ್ತು ಕ್ಯಾಪ್ಟನ್ ಅಭಿಮನ್ಯು ಹೆಜ್ಜೆ ಹಾಕಲಿದ್ದಾನೆ.
ಜಂಬೂಸವಾರಿಗೆ ಕ್ಷಣಗಣನೆ
- ಬೆಳಗ್ಗೆ 8 ಗಂಟೆಗೆ ಚಾಮುಂಡಿ ಬೆಟ್ಟದಿಂದ ಉತ್ಸವ ಮೂರ್ತಿ ಮೆರವಣಿಗೆ
- 10:15ಕ್ಕೆ ಅರಮನೆಯಲ್ಲಿ ಉತ್ತರ ಪೂಜೆ, 10:45-11:00 ಗಂಟೆ ಜಟ್ಟಿ ಕಾಳಗ
- 11:20-11:45ರವರೆಗೆ ಅರಮನೆಯ ಭುವನೇಶ್ವರಿ ದೇಗುಲಕ್ಕೆ ವಿಜಯಯಾತ್ರೆ
- ಮಧ್ಯಾಹ್ನ 01:01-01:18 ರ ನಡುವೆ ಶುಭ ಧನುರ್ ಲಗ್ನದಲ್ಲಿ ನಂದಿ ಧ್ವಜಪೂಜೆ
- ಸಂಜೆ 04:42 ಗಂಟೆಯಿಂದ 05:16 ರ ನಡುವೆ ಕುಂಭ ಲಗ್ನದಲ್ಲಿ ಜಂಬೂಸವಾರಿ
- ನಾಡದೇವತೆಗೆ ಸಿಎಂ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ರಿಂದ ಪುಷ್ಪಾರ್ಚನೆ
- ಜಂಬೂಸವಾರಿ ಹಿನ್ನೆಲೆ ಅರಮನೆ ಅಂಗಳದಲ್ಲಿ 40 ಸಾವಿರ ಆಸನ ವ್ಯವಸ್ಥೆ
- ಅರಮನೆಯಿಂದ ಬಲರಾಮ ದ್ವಾರ, ಚಾಮರಾಜ ವೃತ್ತ, ಕೆ.ಆರ್. ಸರ್ಕಲ್
- ಹೈವೇ ಸರ್ಕಲ್ ಮೂಲಕ ಬನ್ನಿಮಂಟಪ ತಲುಪಲಿರುವ ಜಂಬೂಸವಾರಿ
- ಸಂಜೆ 7 ಗಂಟೆಗೆ ರಾಜ್ಯಪಾಲ, ಸಿಎಂ ಸಮ್ಮುಖದಲ್ಲಿ ಪಂಜಿನ ಕವಾಯತು
ಇದನ್ನೂ ಓದಿ:ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದ ಆರ್‌ಬಿಐ: ಬ್ಯಾಂಕ್ ಸಾಲದ ಬಡ್ಡಿದರ ಯಥಾಸ್ಥಿತಿ ಮುಂದುವರಿಕೆ
ಈ ಬಾರಿ ಕ್ಯಾಪ್ಟನ್ ಅಭಿಮನ್ಯು ಜೊತೆ ಒಟ್ಟು 14 ಆನೆಗಳು ಜಂಬೂ ಸವಾರಿಯಲ್ಲಿ ಭಾಗಿಯಾಗಲಿವೆ. ಕುಮ್ಕಿ ಆನೆಗಳಾದ ಕಾವೇರಿ ಹಾಗೂ ರೂಪ ಗಜಪಡೆ ಕ್ಯಾಪ್ಟನ್ ಅಭಿಮನ್ಯು ಜೊತೆಗೆ ಹೆಜ್ಜೆ ಹಾಕಲಿವೆ. ನಿಶಾನೆ ಆನೆಯಾಗಿ ಧನಂಜಯ, ನೋಪತ್ ಆನೆಯಾಗಿ ಗೋಪಿ ಕರ್ತವ್ಯ ನಿರ್ವಹಿಸಲಿವೆ.
ದಸರಾ ಮೆರವಣಿಗೆಯಲ್ಲಿ ವಿವಿಧ ಜಿಲ್ಲೆಗಳು ಕಲಾತಂಡಗಳು ಭಾಗಿಯಾಲಿವೆ. ಇನ್ನು, ಜಂಬೂ ಸವಾರಿ ನಿಮಿತ್ತ ನಗರದಾದ್ಯಂತ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದ್ದು, ಅರಮನೆ ಸುತ್ತಮುತ್ತ ಹಾಗೂ ಜಂಬೂ ಸವಾರಿ ಸಾಗುವ ಮಾರ್ಗದಲ್ಲಿ ಹದ್ದಿನ ಕಣ್ಣಿಡಲಾಗಿದೆ.
ಇದನ್ನೂ ಓದಿ:ಕಿಚನ್ ರೂಮ್ ಪಳಪಳ ಹೊಳೆಯುವಂತೆ ಮಾಡಬೇಕಾ.. ಅದಕ್ಕೆ ಇಲ್ಲಿವೆ ಕೆಲ ಟಿಪ್ಸ್​!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ