/newsfirstlive-kannada/media/media_files/2025/12/31/bhavishya-2025-12-31-16-04-27.jpg)
2026 ಬಂದೇ ಬಿಟ್ಟಿದೆ. ನಾಳೆ ಬೆಳಗ್ಗೆಯಿಂದ ಹೊಸ ವರ್ಷ. ‘ನ್ಯೂ ಇಯರ್’ ಬರ್ತಿದ್ದಂತೆಯೇ ಕೆಲವರು ಜ್ಯೋತಿಷ್ಯದ ಮೊರೆ ಹೋಗ್ತಾರೆ. ಈ ವರ್ಷವಾದರೂ ತಮಗೆ ಒಳ್ಳೆಯದಾಗಬಹುದಾ? ಯಾವುದನ್ನ ಮಾಡಬಹುದು? ಯಾವುದೆಲ್ಲ ಮಾಡೋದು ಅಸಾಧ್ಯ ಎಂದು ತಿಳಿದುಕೊಳ್ಳಲು ಮುಂದಾಗ್ತಾರೆ. ಅದರಂತೆ ಖ್ಯಾತ ವೈಜ್ಞಾನಿಕ ಜ್ಯೋತಿಷಿ ಹಾಗಗೂ ವಾಸ್ತು ತಜ್ಞರಾದ ಸಚ್ಚಿದಾನಂದ ಬಾಬು ಗುರೂಜಿ ನೀಡಿರುವ ವರ್ಷದ ರಾಶಿ ಭವಿಷ್ಯ ಹೀಗಿದೆ..
ಮೇಷ
ರಾಶ್ಯಾಧಿಪತಿ ಕುಜ 9ನೇ ಮನೆಯ ಧನಸ್ಸು ಭಾಗ್ಯ ಸ್ಥಾನದಲ್ಲಿರೋದು ಮುನ್ನಡೆ ಹಾಗೂ ಏಳಿಗೆಗೆ ಒಳ್ಳೆಯದು. ಆದರೆ ಕುಜನಿಗೆ ಅಷ್ಟಮಾಧಿಪತ್ಯ ದೋಷ ಕೂಡ ಇದೆ. ಕುಜನ ಮೇಲೆ ಶನಿ ದೃಷ್ಟಿ ಕೂಡ ಇರೋದ್ರಿಂದ ದೈಹಿಕವಾಗಿ ಮೇಷ ರಾಶಿಯವರಿಗೆ ಕೆಲಸಗಳಲ್ಲಿ ಒತ್ತಡಗಳು ಬಹಳ ಹೆಚ್ಚಾಗುತ್ತದೆ. ತಂದೆಯ ಯೋಗಕ್ಷೇಮಕ್ಕೆ ಒಳ್ಳೆಯದಲ್ಲ.
/filters:format(webp)/newsfirstlive-kannada/media/media_files/2025/12/31/bhavishya-1-2025-12-31-16-08-21.jpg)
ಮನಸ್ಸಿಗೆ ಸ್ವಲ್ಪ ಬೇಸರ ಉಂಟಾಗುತ್ತದೆ. ಮಕ್ಕಳ ಏಳಿಗೆಗೆ ಬಹಳ ಒಳ್ಳೆಯದು. ಮಕ್ಕಳ ಜೊತೆ ಸ್ವಲ್ಪ ಮನಸ್ತಾಪಗಳು ಉಂಟಾಗಲಿದೆ. ದಾಂಪತ್ಯ ಬದುಕಿಗೆ ಅಷ್ಟು ಶುಭ ಅಲ್ಲ. ದಂಪತಿಗಳಲ್ಲಿ ಕೆಲಸದ ವಿಷಯದಲ್ಲಿ ಬಹಳ ಅಸಮಾಧಾನ ಉಂಟಾಗಬಹುದು. ಮೇಷ ರಾಶಿಯವರ ತಾಯಂದಿರಿಗೆ ಅನಿರೀಕ್ಷಿತ ಧನಲಾಭ ಉಂಟಾಗಬಹುದು. ವಿದ್ಯಾಭ್ಯಾಸಕ್ಕೆ ಮೇಷ ರಾಶಿಯವರಿಗೆ ಧನಸಹಾಯ ಉಂಟಾಗುತ್ತದೆ. ಈ ರಾಶಿಯ ಗರ್ಭಿಣಿಯರು ಹೆಚ್ಚಿನ ಜಾಗ್ರತೆ ವಹಿಸಬೇಕು.
ಪರಿಹಾರ: ಹೃದ್ರೋಗಿಗಳು ಹೆಚ್ಚಿನ ಜಾಗ್ರತೆವಹಿಸಿ. 3 ತಿಂಗಳ ಕಾಲ ಆದಿತ್ಯ ಪಾರಾಯಣ ಮಾಡಿ. ಬೆಳ್ಳಿ ಅಥವಾ ಚಿನ್ನದಲ್ಲಿ ಉಂಗುರದ ಬೆರಳಿಗೆ ಮಾಣಿಕ್ಯವನ್ನು ಭಾನುವಾರ ಬೆಳಗ್ಗೆ ಧರಿಸಿಕೊಂಡರೆ ಒಳ್ಳೆಯದು. ಸೂರ್ಯ ಗಾಯತ್ರಿ ಮಂತ್ರವನ್ನು ದಿನನಿತ್ಯ ಬೆಳಗ್ಗೆ ಪೂರ್ವಾಭಿಮುಖ 24 ಬಾರಿ ಜಪಿಸಿ.
ಇದನ್ನೂ ಓದಿ: 2026ರ ಬಗ್ಗೆ ಬಾಬಾ ವಂಗಾ ಭವಿಷ್ಯವಾಣಿ ಏನೇನು? ಪುಟಿನ್ ಪತನ, ಏಲಿಯನ್ಸ್ ಜೊತೆ ಮುಖಾಮುಖಿ, ಎಐ ನಿಂದ ಮನುಷ್ಯನ ಕಂಟ್ರೋಲ್!!
ವೃಷಭ
/filters:format(webp)/newsfirstlive-kannada/media/post_attachments/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
ಮಕ್ಕಳಿಗೆ ತಮ್ಮ ಅಥವಾ ತಂಗಿ ಲಭ್ಯ ಆಗಬಹುದು. ಗುರು ವಕ್ರನಾಗಿದ್ದರೆ ಹಣಕಾಸಿನ ವಿಷಯಕ್ಕೆ ಒಳ್ಳೆಯದು. ನೌಕರಿ ಅಥವಾ ಉದ್ಯಮದಲ್ಲಿ ಏಳಿಗೆ ಉಂಟಾಗಲಿದೆ. ಚತುರ್ಥದಲ್ಲಿ ಕೇತು ಇದ್ದರೆ ತಾಯಿಯ ಯೋಗಕ್ಷೇಮಕ್ಕೆ ಒಳ್ಳೆಯದಲ್ಲ. ವಾಹನಕ್ಕೆ ಸಂಬಂಧಪಟ್ಟಂತೆ ಶಾರ್ಟ್ ಸರ್ಕ್ಯೂಟ್ ಆಗಬಹುದು. ಚತುರ್ಥಾಧಿಪತಿ ರವಿ ಅಷ್ಟಮದಲ್ಲಿರುವುದರಿಂದ ತಂದೆ ಯೋಗಕ್ಷೇಮಕ್ಕೆ ಒಳ್ಳೆಯದಲ್ಲ. ವೃಷಭ ರಾಶಿಯವರ ಆರೋಗ್ಯದಲ್ಲೂ ಏರುಪೇರಾಗಬಹುದು. ಹೂಡಿಕೆಯಲ್ಲಿ ನಷ್ಟ ಉಂಟಾಗಬಹುದು. ಉದ್ಯಮಿಗಳಿಗೆ ಒಳ್ಳೆಯದು ಜೊತೆಗೆ ನೌಕರಿಯಲ್ಲಿ ಏಳಿಗೆ ಕಾಣುತ್ತಿರಿ.
ಪರಿಹಾರ: ರಾಶ್ಯಾಧಿಪತಿ ಶುಕ್ರ ಬಲಹೀನನಾಗಿದ್ದಾನೆ. ಪೂರ್ವ ಪುಣ್ಯಸ್ಥಾನದ ಮೂಲಕ ಬುಧನನ್ನ ಬಲಪಡಿಸಬೇಕಾಗುತ್ತದೆ. 3 ತಿಂಗಳ ಕಾಲ ಮುಂಜಾನೆ ಶುಕ್ರ ಬೀಜ ಮಂತ್ರವನ್ನು 4 ಜಪಿಸಿದ್ರೆ ಬಹಳ ಒಳ್ಳೆಯದು.
ಮಿಥುನ
/filters:format(webp)/newsfirstlive-kannada/media/post_attachments/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
ಸಪ್ತಮ ಹಾಗೂ ಕರ್ಮಸ್ಥಾನದಲ್ಲಿರುವ ವಕ್ರ ಗುರು ಒಂದು ರೀತಿಯಲ್ಲಿ ಒಳ್ಳೆಯದು ಒಂದು ರೀತಿಯಲ್ಲಿ ಅಶುಭ. ಅವಿವಾಹಿತರಿಗೆ ಕಲ್ಯಾಣ ಯೋಗ ಉಂಟಾಗಬಹುದು. ನಿಮ್ಮ ಮದುವೆ ಪ್ರಯತ್ನ ಫಲಿಸುತ್ತದೆ. ವೃತ್ತಿಯಲ್ಲಿ ಏಳಿಗೆ ಕಾಣುತ್ತೀರಿ. ಜನ್ಮ ರಾಶಿಯಲ್ಲಿ ಗುರು ಗೋಚರಿಸಿದಾಗ ಮನಸ್ಸಿಗೆ ಏನೋ ಒಂತರ ನೋವುಂಟಾಗುತ್ತದೆ. ಸಾಧಾರಣ ಗುರು ಜನ್ಮರಾಶಿ ಬಂದಾಗ ಸ್ವಲ್ಪ ವೈರಾಗ್ಯದ ಪರಿಸ್ಥಿತಿ ಬರುತ್ತದೆ. ಮಕ್ಕಳ ವಿಷಯದಲ್ಲಿ ಅಸಮಾಧಾನ ಆಗಲಿದೆ. ಕೈಯಲ್ಲಿ ದುಡ್ಡು ನಿಲ್ಲಲ್ಲ. ಮನೆ ಒಡಹುಟ್ಟಿದವರ ಯೋಗಕ್ಷೇಮಕ್ಕೂ ಒಳ್ಳೆಯದಲ್ಲ. ಒಳ್ಳೆಯ ಬಾಂಧವ್ಯ ಇರುವ ದಂಪತಿಗಳಲ್ಲೂ ಪರಸ್ಪರ ಅಸಮಾಧಾನ ಉಂಟಾಗಲಿದೆ. ದಂಪತಿಗಳಲ್ಲಿ ಅಪಾರ್ಥಗಳು ಸಂದೇಹಗಳು ಶುರು ಆಗಲಿದೆ. ಡೈವೋರ್ಸ್​​ ಕೇಸ್​ಗಳು ಮುಂದೂಡಿಕೆ ಆಗಲಿವೆ. ಮದುವೆ ಸಮಯದಲ್ಲಿ ಮದುವೆ ಮಂಟಪದಲ್ಲಿ ಏನಾದ್ರು ವ್ಯತ್ಯಾಸಗಳು ಜಗಳಗಳು ಶುರು ಆಗಬಹುದು. ತಂದೆಯ ಯೋಗಕ್ಷೇಮಕ್ಕೂ ಒಳ್ಳೆಯದಲ್ಲ. ವಕೀಲರಿಗೆ, ನ್ಯಾಯಾಧೀಶರಿಗೆ ಕೀರ್ತಿ ಪ್ರತಿಷ್ಠೆ ಹೆಚ್ಚಲಿದೆ.
ಪರಿಹಾರ: ಗುರು ಆರಾಧನೆ ಮಾಡಿ. 3 ಗುರುವಾರಗಳು ಗುರುವಿನ ದರ್ಶನ ಪಡೆದು ಹೂವು, ಹಣ್ಣು ಅರ್ಪಿಸಿ ಆಶೀರ್ವಾದ ಪಡೆಯಿರಿ. ಗುರು ಬೀಜಮಂತ್ರವನ್ನು ದಿನನಿತ್ಯ ಉತ್ತರಾಭಿಮುಖವಾಗಿ 54 ಬಾರಿ ಜಪಿಸಿ.
ಇದನ್ನೂ ಓದಿ: 2026ರ ಬಗ್ಗೆ ಬಾಬಾ ವಂಗಾ ಭವಿಷ್ಯವಾಣಿ ಏನೇನು? ಪುಟಿನ್ ಪತನ, ಏಲಿಯನ್ಸ್ ಜೊತೆ ಮುಖಾಮುಖಿ, ಎಐ ನಿಂದ ಮನುಷ್ಯನ ಕಂಟ್ರೋಲ್!!
ಕಟಕ:
/filters:format(webp)/newsfirstlive-kannada/media/post_attachments/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
ರಾಶ್ಯಾಧಿಪತಿ ಚಂದ್ರ ಲಾಭ ಸ್ಥಾನದಲ್ಲಿ ಉಚ್ಛನಾಗಿರೋದು ಬಹಳ ಒಳ್ಳೆಯದು. ಕಟಕ ರಾಶಿಯವರ ಹಣದ ಸಮಸ್ಯೆಗಳಿಗೆ ಒಂದು ದಾರಿ ಕಾಣುತ್ತದೆ. ಕಟಕ ರಾಶಿಯವರ ಆಸೆ ಆಕಾಂಕ್ಷೆಗಳು ಸ್ವಲ್ಪ ಏರುಪೇರು ಉಂಟಾಗುತ್ತದೆ. ದ್ವಿಚಕ್ರ ವಾಹನ ಅಪಘಾತ ಆಗಿ ಬೆನ್ನಿಗೆ ಪೆಟ್ಟಾಗುವಂತ ಸಾಧ್ಯತೆ ಇರುತ್ತದೆ. ತಾಯಿ ತಂದೆಗೆ ಅಗ್ನಿ ಅಥವಾ ಹಲಿಗೆ ತುಂಡುಗಳಿಂದ ಪೆಟ್ಟಾಗುವಂತ ಸಾಧ್ಯತೆ ಇರುತ್ತದೆ. ಕಟಕ ರಾಶಿಯವರಿಗೆ ಹೊಟ್ಟೆ ಸಮಸ್ಯೆಗಳು ಕಾಡಬಹುದು. ಸೋಂಕುಗಳು ಕಾಣಿಸಿಕೊಳ್ಳಬಹುದು. ಅಂದರೆ ಹಲ್ಲು ನೋವು, ಕಣ್ಣಲ್ಲಿ ಉರಿ ಯಾಗಬಹುದು.
ಪರಿಹಾರ: ವೈದ್ಯರ ಸಲಹೆ ಪಡೆಯಿರಿ. ಕುಜನ ಆರಾಧನೆ ಮಾಡಿ. 7 ಮಂಗಳವಾರ ಸುಬ್ರಹ್ಮಣ್ಯ ದೇಗುಲಕ್ಕೆ ತೊಗರಿಬೇಳೆ, ಮೊದಲನೇ ಮಂಗಳವಾರ ಕೆಂಪು ವಸ್ತ್ರ ನೀಡಿ ಅರ್ಚನೆ ಮಾಡಿಸಿ.
ಸಿಂಹ
/filters:format(webp)/newsfirstlive-kannada/media/post_attachments/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
ಸಿಂಹ ರಾಶಿಯಲ್ಲಿ ಕೇತು ಇದ್ದಾನೆ. ಆರೋಗ್ಯದಲ್ಲಿ ಏರುಪೇರಾಗಬಹುದು. ಹೃದ್ರೋಗಿಗಳಿಗೆ ಸಮಸ್ಯೆಗಳು ಹೆಚ್ಚಾಗಬಹುದು. ಕೊಲೆಸ್ಟ್ರಾಲ್ ಹೆಚ್ಚಾಗಲಿದೆ. ಹಿಂದೆ ಮಾಡಿದ ಹೂಡಿಕೆಗಳಿಂದ ಲಾಭ ಸಿಗಲಿದೆ. ಈ ರಾಶಿಯ ಗರ್ಭಿಣಿಯರು ಜಾಗ್ರತೆವಹಿಸಿ. ಗರ್ಭಿಣಿಯರಿಗೆ ವಾಹನ ಅಪಘಾತ ಆಗಬಹುದು. ಹಣಕಾಸಿನ ವ್ಯವಹಾರ ಮಾಡೋರಿಗೆ ಒಳ್ಳೆಯದು. ಈ ರಾಶಿಯವರಿಗೆ ನರ ದೌರ್ಬಲ್ಯ ಕೂಡ ಕಾಣಿಸಿಕೊಳ್ಳಬಹುದು. ಪತಿ ಅಥವಾ ಪತ್ನಿಯ ಆರೋಗ್ಯಕ್ಕೂ ಅಷ್ಟು ಒಳ್ಳೆಯದಲ್ಲ. ಕುಡುಕ ಗಂಡನಿಂದ ಹಿಂಸೆ ಜಾಸ್ತಿ ಆಗುತ್ತದೆ. ಹೋಟೆಲ್ ಉದ್ಯಮಿಗಳು ಹಾಗೂ ಆಹಾರ ವರ್ತಕರಿಗೆ ಲಾಭ ಹೆಚ್ಚಿರುತ್ತದೆ. ಪಂಚಮಾಧಿಪತಿ ಗುರು ವಕ್ರ ಸ್ಥಿತಿಯಲ್ಲಿ ಪಂಚಮದ ಮೇಲೆ ದೃಷ್ಟಿ ಹಾಕಿರೋದ್ರಿಂದ ಇವರ ಮಕ್ಕಳು ಸ್ಕೂಲ್, ಕಾಲೇಜ್ ಅಥವಾ ನೌಕರಿ ವಿಷಯಗಳಿಗೆ ಸಂಬಂಧಪಟ್ಟ ಹಾಗೆಯೇ ಪೋಷಕರಿಂದ ದೂರ ಆಗುವಂತ ಸಾಧ್ಯತೆ ಇರುತ್ತದೆ.
ಪರಿಹಾರ: ಪೂರ್ವ ಪುಣ್ಯಸ್ಥಾನಾಧಿಪತಿ ಗುರು ಲಾಭದಲ್ಲಿ ಬುಧನ ಮನೆಯಲ್ಲಿರೋದ್ರಿಂದ ಬುಧನ ಅಧಿದೇವತೆ ಮಹಾವಿಷ್ಣು ಆಗಿರೋದ್ರಿಂದ ಸಿಂಹ ರಾಶಿಯವರು ವಿಷ್ಣು ಆರಾಧನೆ ಮಾಡಬೇಕಾಗುತ್ತದೆ
ಕನ್ಯಾ
/filters:format(webp)/newsfirstlive-kannada/media/post_attachments/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
ಬುಧನ ಜೊತೆ ಕುಜನೂ ಹಾಗೆ ಕುಜನ ಬುಧನ ಮೇಲೆ ಶನಿಯ ದಶಮ ದೃಷ್ಟಿ ಇರುವುದರಿಂದ ಬಿಪಿ, ಕೊಲೆಸ್ಟ್ರಾಲ್, ಹೈಪರ್ ಟೆನ್ ಷನ್, ಶುಗರ್ ಜಾಸ್ತಿ ಆಗುವ ಸಾಧ್ಯತೆ ಇರಲಿದೆ. ಪದೇ ಪದೇ ಬೆನ್ನು ನೋವು ಉಂಟಾಗಬಹುದು. ನರ ದೌರ್ಬಲ್ಯ ಉಂಟಾಗಬಹುದು. ತಲೆನೋವು ಉಂಟಾಗಲಿದೆ. ತಾಯಿಯ ಆಶೀರ್ವಾದದಿಂದ ಒಂದು ಸೈಟ್ ಅಥವಾ ವಾಹನ ಲಭ್ಯ ಆಗಲಿದೆ. ಪದೇ ಪದೇ ಅಜೀರ್ಣ ಹೊಟ್ಟೆಯ ಸೋಂಕು ಆಗಬಹುದು. ಅವಿವಾಹಿತರಿಗೆ ಮದುವೆ ಪ್ರಯತ್ನಗಳು ಫಲಿಸಬಹುದು. ಪುಣ್ಯಕ್ಷೇತ್ರಗಳ ದರ್ಶನ ಆಗಲಿದೆ. ವಿಚಿತ್ರ ದೈವೀಕ ಹಾಗೂ ದೆವ್ವದ ಕನಸುಗಳು ಬೀಳಲಿದೆ.
ಪರಿಹಾರ: ಶಿವನ ಆರಾಧನೆ ಮಾಡಿ. ಮುಂಜಾನೆ ಅಥವಾ ಸಂಜೆ ಉತ್ತರಾಭಿಮುಖವಾಗಿ 28 ಬಾರಿ ಜಪಿಸಿ. ನಾಲ್ಕು ಸೋಮವಾರ ಶಿವನ ದೇಗುಲಕ್ಕೆ ಬಿಲ್ವಪತ್ರೆ, ಹಾಲು, ಬಾಳೆಹಣ್ಣು ಅರ್ಪಿಸಿ ಅರ್ಚನೆ ಮಾಡಿಸಿದರೆ ಒಳ್ಳೆಯದು
ಇದನ್ನೂ ಓದಿ: 2026ರ ಬಗ್ಗೆ ಬಾಬಾ ವಂಗಾ ಭವಿಷ್ಯವಾಣಿ ಏನೇನು? ಪುಟಿನ್ ಪತನ, ಏಲಿಯನ್ಸ್ ಜೊತೆ ಮುಖಾಮುಖಿ, ಎಐ ನಿಂದ ಮನುಷ್ಯನ ಕಂಟ್ರೋಲ್!!
ತುಲಾ
/filters:format(webp)/newsfirstlive-kannada/media/post_attachments/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
ಸ್ವಲ್ಪ ಅಶುಭ ವಾರ್ತೆಗಳು ಕೇಳಿ ಬರಬಹುದು. ಮೇ 2026 ರವರೆಗೂ ಅನ್ಕೊಂಡಿದ್ದು ಸುಮಾರು ಕೆಲಸಗಳಿಗೆ ಚಾಲನೆ ಸಿಗುತ್ತದೆ. ಸ್ವಲ್ಪ ಯಶಸ್ಸು ಹಾಗೂ ಕೀರ್ತಿ ಕೂಡ ಹೆಚ್ಚುತ್ತದೆ. ಹೊಸ ವಾಹನ, ಇಂಟರ್ ನ್ಯಾಷನಲ್ ಟ್ರಾವೆಲಿಂಗ್, ಹೊಸ ನಿವೇಶನ ಅಥವಾ ಮನೆ ಕೂಡ ಕಷ್ಟಪಟ್ಟರೆ ಲಭ್ಯ ಆಗುವಂತಹ ಸಾಧ್ಯತೆ ಇರುತ್ತದೆ. ಆರೋಗ್ಯದಲ್ಲಿ ಆಯಾಸ ಹೆಚ್ಚಾಗಿ ಬಿಪಿ, ಯೂರಿಕ್ ಆಸಿಡ್ ಲೆವೆಲ್ಸ್ ಹೆಚ್ಚಾಗಬಹುದು. ಮೈ ಮೂಳೆಗಳಲ್ಲಿ ಪದೇ ಪದೇ ನೋವುಂಟಾಗಬಹುದು.
ಹಣದ ಸಮಸ್ಯೆಗಳು ಕಡಿಮೆಯಾಗುತ್ತದೆ. ಕೆಲವು ಮುಖ್ಯ ಕೆಲಸಗಳು ಈಡೇರುತ್ತದೆ. ಸಂಭಾವಿತರಿಗೆ ಮದುವೆ ಪ್ರಯತ್ನ ಫಲಿಸುತ್ತೆ. ಮನಸ್ಸಲ್ಲಿ ಏನೋ ಒಂದು ಭಯ, ಆತಂಕ, ಒಂತರ ಸ್ವಲ್ಪ ಡಿಪ್ರೆಸ್ಸಿವ್ ಫೀಲಿಂಗ್ಸ್ ಈ ತರ ಬರುವಂತ ಸಾಧ್ಯತೆಗಳಿರುತ್ತದೆ. ವೃತ್ತಿಯಲ್ಲಿ ವಿಚಿತ್ರ, ಅನಿರೀಕ್ಷಿತ ರೀತಿಯಲ್ಲಿ ಆಗಾಗ ದುಡ್ಡು ಬರುತ್ತದೆ. ಕೆಲವು ಒಳ್ಳೆಯ ಆಸೆಗಳು ಈಡೇರುತ್ತದೆ. ಸ್ವಲ್ಪ ಬೆನ್ನು ನೋವಿನಿಂದ ನರಳಬಹುದು. ದಂಪತಿಗಳು ಮಕ್ಕಳು ಮಾಡಿಕೊಳ್ಳೋ ಯೋಚನೆಯನ್ನು 4 ತಿಂಗಳು ಮುಂದೂಡಿದರೆ ಒಳ್ಳೆಯದು. ಗರ್ಭಿಣಿಯರು ಸಂಜೆಯ ಹೊತ್ತಲ್ಲಿ ಮನೆಯಲ್ಲಿದ್ದರೆ ಒಳ್ಳೆಯದು.
ಪರಿಹಾರ: ದಿನನಿತ್ಯ ಬೆಳಗ್ಗೆ ಅಥವಾ ಸಂಜೆ 54 ಬಾರಿ ಉತ್ತರಾಭಿಮುಖವಾಗಿ ಜಪಿಸಿ
ವೃಶ್ಚಿಕ
/filters:format(webp)/newsfirstlive-kannada/media/post_attachments/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
ದೈಹಿಕ ಹಾಗೂ ಮಾನಸಿಕ ಒತ್ತಡಗಳು ಹೆಚ್ಚಾಗಬಹುದು. ಎಲ್ಲಾ ಕೆಲಸಗಳು ವಿಳಂಬ ಹಾಗೂ ಸ್ಥಗಿತ ಆಗಬಹುದು. ಪತಿ-ಪತ್ನಿ ಯೋಗಕ್ಷೇಮಕ್ಕೂ ಒಳ್ಳೆಯದಲ್ಲ. ಮದುವೆ ಆಗಿ ಬಹಳ ವರ್ಷ ಆಗಿದ್ದರೂ ದಂಪತಿಗಳಲ್ಲಿ ವೈಮನಸ್ಸು ಉಂಟಾಗಲಿದೆ. ಪಿತ್ರಾರ್ಜಿತ ಆಸ್ತಿ ವಿಷಯದಲ್ಲಿ ಅನುಕೂಲ ಉಂಟಾಗಬಹುದು. ನೌಕರಿ ಅಥವಾ ಉದ್ಯಮದಲ್ಲಿ ಒಳ್ಳೆಯದು. ರಾಹು ಇರುವುದರಿಂದ ಎಲೆಕ್ಟ್ರಿಕಲ್ ಉಪಕರಣಗಳು ಕೆಟ್ಟು ಹೋಗಬಹುದು. ತಾಯಿಯ ಆರೋಗ್ಯಕ್ಕೂ ಒಳ್ಳೆಯದಲ್ಲ. ಕೆಲವರಿಗೆ ಪ್ರೇಮ ಪ್ರಸಂಗಗಳು ಉಂಟಾಗಬಹುದು. ಅನಿರೀಕ್ಷಿತ ಧನ ಹಾನಿ ಕೂಡ ಉಂಟಾಗುವಂತ ಸಾಧ್ಯತೆ ಇರುತ್ತದೆ. ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದಲ್ಲ. ಮಕ್ಕಳ ಜೊತೆ ಕೂಡ ಅಪಾರ್ಥಗಳು ಉಂಟಾಗಬಹುದು.
ಮೂರು ತಿಂಗಳ ಕಾಲ ಬಹಳ ಅಸಮಾಧಾನದ ಮನಸ್ಥಿತಿಯಲ್ಲಿರುತ್ತಾರೆ. OCD ಮಾನಸಿಕ ಅಸ್ವಸ್ಥತೆ ಉಂಟಾಗಬಹುದು. ಸಾತ್ವಿಕ ಆಹಾರ ತಗೊಂಡ್ರೆ ಒಳ್ಳೆಯದು
ಪರಿಹಾರ: ಸಿದ್ಧೌಷಧ ಅಂದ್ರೆ ಮಹಾಮೃತ್ಯುಂಜಯನ ಮಂತ್ರ ಪಠಿಸಿ. ಬೆಳಗ್ಗೆ ಸ್ನಾನದ ನಂತರ ಅಥವಾ ಸಂಜೆ ಸೂರ್ಯಾಸ್ತದ ನಂತರ ಮಹಾಮೃತ್ಯುಂಜಯ ಮಂತ್ರ ಜಪವನ್ನ ಆದ್ರೆ 108 ಬಾರಿ ಜಪಿಸಬೇಕು.
ಇದನ್ನೂ ಓದಿ: 2026ರ ಬಗ್ಗೆ ಬಾಬಾ ವಂಗಾ ಭವಿಷ್ಯವಾಣಿ ಏನೇನು? ಪುಟಿನ್ ಪತನ, ಏಲಿಯನ್ಸ್ ಜೊತೆ ಮುಖಾಮುಖಿ, ಎಐ ನಿಂದ ಮನುಷ್ಯನ ಕಂಟ್ರೋಲ್!!
ಧನಸ್ಸು
/filters:format(webp)/newsfirstlive-kannada/media/post_attachments/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
ಭಾಗ್ಯ ಸ್ಥಾನದ ಅಧಿಪತಿ ರವಿ, ಪಂಚಮ ವ್ಯಯಾಧಿಪತಿ ಯೋಗಕಾರಕ ಕುಜ, ಸಪ್ತಮ ದಶಮಾಧಿಪತಿ ಬುಧ ಹಾಗೂ ಷಷ್ಠಿ ಲಾಭಾಧಿಪತಿ ಶುಕ್ರ ಈ ಚತುರ್ ಗ್ರಹಗಳ ಮೇಲೆ ಶನಿಯ ದಶಮ ದೃಷ್ಟಿ ಹಾಗೇನೇ ರಾಶಿಯ ಮೇಲೆ ಚತುರ್ಥಾಧಿಪತಿ ವಕ್ರ ಗುರುವಿನ ದೃಷ್ಟಿ ಇದೆ. ಒಂದು ಯೋಗ ಉತ್ಪತ್ತಿಯಾಗುತ್ತದೆ. ಯಮಧರ್ಮ ಯೋಗ ಅಂತ ಹೆಸರು ಗಾಬರಿ ಪಡಬಾರದು. ಕಾರಣ ಇಲ್ಲದೆ ಧನು ರಾಶಿಯವರಿಗೆ ಏನೋ ಭಯ, ಕೆಟ್ಟ ಕನಸುಗಳು, ನಮಗೇನಾದ್ರೂ ಆಗ್ಬಿಟ್ರೆ ನಾಳೆ ಬೆಳಗ್ಗೆ ಕಣ್ಣು ಬಿಡ್ತೀವೊ ಇಲ್ವೋ, ಈ ರೀತಿ ಹೆದರಿಕೆ ಆಗ್ತಾ ಇರುತ್ತೆ ಆಲೋಚನೆಗಳು ಬರ್ತಾ ಇರುತ್ತದೆ.
ಈ ರಾಶಿಯವರಿಗೆ ಸಣ್ಣಪುಟ್ಟ ಅಪಘಾತ ಆಗಬಹುದು. ಪ್ರಭಾವಿ ಸ್ನೇಹಿತರು ಸಿಗುತ್ತಾರೆ. ಈ ರಾಶಿಯ ರಾಜಕಾರಣಿಗಳಿಗೆ ಒಳ್ಳೆಯದು. ಸಿನಿಮಾ ನಟ ನಟಿಯರಿಗೆ ಒಳ್ಳೆಯದು. ಮಕ್ಕಳಿಂದ ಟೆನ್ಷನ್ ಜಾಸ್ತಿ ಆಗಲಿದೆ. ಒಡಹುಟ್ಟಿದವರ ಜೊತೆಯಲ್ಲಿ ದರ್ಪದಿಂದ ವರ್ತಿಸುತ್ತಾರೆ. ಮನೆಯಲ್ಲಿ ಅಶಾಂತಿ ಉಂಟಾಗಬಹುದು. ತಾಯಿಯ ಆರೋಗ್ಯ ಕೆಡಬಹುದು. ಪಿತ್ರಾರ್ಜಿತ ಆಸ್ತಿ ವಿಷಯಕ್ಕೆ ಒಳ್ಳೆಯದು. ತಂದೆಗೆ ಪುಣ್ಯಕ್ಷೇತ್ರದಲ್ಲಿ ಅಪಘಾತದ ಸಾಧ್ಯತೆ ಇರುತ್ತದೆ.
ಪರಿಹಾರ: ಬೆಳಗ್ಗೆ ಮತ್ತು ಸಂಜೆ ಉತ್ತರಾಭಿಮುಖವಾಗಿ ಕುಳಿತು ಪಠಿಸಿ. 'ಶ್ರೀ ರಾಂ ಜೈ ರಾಂ ಜೈ ಜೈ ರಾಂ'. 4 ತಿಂಗಳ ಕಾಲ ಬೆಳ್ಳಿ ಅಥವಾ ಚಿನ್ನದ ಉಂಗುರದಲ್ಲಿ ತೋರು ಬೆರಳಿಗೆ ಪುಷ್ಯರಾಗ ಹರಳನ್ನು ಧರಿಸಿದರೆ ಒಳ್ಳೆಯದು.
ಮಕರ
/filters:format(webp)/newsfirstlive-kannada/media/post_attachments/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
ನಿಮ್ಮ ಕೆಲಸಗಳು ಮುನ್ನುಗ್ಗುತ್ತದೆ. ದೈಹಿಕ ದಣಿವು ಹೆಚ್ಚಿರುತ್ತದೆ. ಖರ್ಚುಗಳು ಹೆಚ್ಚಾಗ್ತಾ ಇರುತ್ತದೆ. ಪಾದಗಳಲ್ಲಿ, ಕಾಲುಗಳಲ್ಲಿ ನಿಶಕ್ತಿ ಉಂಟಾಗಲಿದೆ. ಬಿಪಿ, ಶುಗರ್ ಕಾಯಿಲೆಗಳು ಉಲ್ಬಣ ಆಗಲಿದೆ. ನವ ನಿರ್ಮಾಣ ಆಗಿರುವ ಮನೆಗೆ ಗೃಹಪ್ರವೇಶ ಮಾಡುತ್ತೀರಿ. ದಂತ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಪದೇ ಪದೇ ತಲೆನೋವು ಉಂಟಾಗಲಿದೆ. ಮೂಲವ್ಯಾಧಿ ಇರೋರಿಗೆ ಉಲ್ಬಣ ಆಗಲಿದೆ. ಕಣ್ಣಿನ ಸಮಸ್ಯೆ ಕಾಡಬಹುದು. ಅವಿವಾಹಿತರಿಗೆ ಪ್ರೇಮ ವಿವಾಹ ಆಗಬಹುದು. ಕೆಲವರು ಪ್ರೀತಿ ಪ್ರೇಮಕ್ಕೆ ಬೀಳಬಹುದು. ದಾಂಪತ್ಯ ಚೆನ್ನಾಗಿರುತ್ತದೆ. ಖರ್ಚುಗಳು ಹೆಚ್ಚಾಗಲಿದೆ. ಸಣ್ಣಪುಟ್ಟ ಆರೋಗ್ಯದ ಸಮಸ್ಯೆಗಳು ಕಾಡಬಹುದು.
ಪರಿಹಾರ: 3 ತಿಂಗಳು ಪ್ರತಿ ಶುಕ್ರವಾರ ಒಣ ಅವರೆಕಾಳನ್ನು ಅಮ್ಮನವರ ದೇಗುಲಕ್ಕೆ ಅರ್ಪಿಸಿ. ಮೊದಲನೇ ಶುಕ್ರವಾರ ಕೆಂಪು ಮತ್ತು ಹಸಿರು ಬಣ್ಣದ ವಸ್ತ್ರವನ್ನು ಅರ್ಪಿಸಿ.
ಕುಂಭ
/filters:format(webp)/newsfirstlive-kannada/media/post_attachments/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
ಭಯ, ಆತಂಕ ಇದ್ದೇ ಇರುತ್ತದೆ. ಸಣ್ಣ ಪುಟ್ಟ ವಿಷಯಗಳಿಗೆ ಅಪಾರ್ಥ ಮಾಡಿಕೊಂಡು ದೂರ ಆಗುವ ಸಾಧ್ಯತೆ ಇದೆ. ಪತಿ ಅಥವಾ ಪತ್ನಿಯ ಯೋಗಕ್ಷೇಮಕ್ಕೂ ಅಷ್ಟು ಒಳ್ಳೆಯದಲ್ಲ. ಆರೋಗ್ಯ ಸಮಸ್ಯೆಗಳು, ನೌಕರಿಯಲ್ಲಿ ತೊಡಕುಗಳು, ಅಪಾರ್ಥಗಳು ಇರಲಿವೆ. ತಾಯಿಯ ಯೋಗಕ್ಷೇಮಕ್ಕೆ ಒಳ್ಳೆಯದಲ್ಲ. ಗುಂಪಿರುವ ಸ್ಥಳಗಳಲ್ಲಿ, ಜನಸಂದಣಿ ಇರೋ ಜಾಗದಲ್ಲಿ, ರಸ್ತೆಯಲ್ಲಿ ಜಾಗ್ರತೆವಹಿಸಬೇಕು. ಇಲ್ಲದಿದ್ದರೆ ದೇಹಕ್ಕೆ ತೊಂದರೆಯಾಗಬಹುದು. ಗುರು ರಕ್ಷಣೆ ಇರಲಿದೆ. ಚರ್ಮದ ಮೇಲೆ ಮಚ್ಚೆಗಳು, ಸೋಂಕುಗಳು ದವಡೆಯಲ್ಲಿ ನೋವು ಕಾಡಬಹುದು.
ಪರಿಹಾರ: ರಾಶ್ಯಾಧಿಪತಿ ಶನಿ ಮೇಲೆ ಭೂಮಿಕಾರಕ ಕುಜನ ದೃಷ್ಟಿ ಇರುವುದರಿಂದ ದಿನನಿತ್ಯ ಮುಂಜಾನೆ ಅಥವಾ ಸಂಜೆ ಉತ್ತರಾಭಿಮುಖವಾಗಿ ಕುಳಿತು ಕುಜನ ಬೀಜ ಮಂತ್ರವನ್ನು 108 ಬಾರಿ ಜಪಿಸಬೇಕು.
ಇದನ್ನೂ ಓದಿ: ನಾಸ್ಟ್ರಾಡಾಮ್ ಭವಿಷ್ಯವಾಣಿಗೆ ಜನ ಗಾಬರಿ.. ‘2026 ವಿನಾಶದ ವರ್ಷ’ ಎಂದ ವಿಶ್ಲೇಷಕರು..!
ಮೀನ
/filters:format(webp)/newsfirstlive-kannada/media/post_attachments/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
ಯಾರಲ್ಲಿ ಆಧ್ಯಾತ್ಮಿಕ ಚಿಂತನೆ ಜಾಸ್ತಿ ಇರುತ್ತೋ ಅವರಿಗೆ ಮೋಕ್ಷ ಪ್ರಾಪ್ತಿ ಆಗುತ್ತದೆ. ಅಮ್ಮನವರ ರೂಪದಲ್ಲಿ ಅವರಿಗೆ ಏನಾದ್ರು ಒಂದು ಅನುಭವ ಆಗಬಹುದು. ಇದು ಸ್ವಲ್ಪ ಚಿಂತಾಜನಕ ಅಂತ ಹೇಳ್ಬೇಕಾಗುತ್ತೆ. ಮನಸ್ಸಲ್ಲಿ ಏನಾದ್ರೂ ಆತಂಕ ಬೇಸರ ಆರೋಗ್ಯದಲ್ಲಿ ಏರುಪೇರಾಗುವುದು ಈ ರೀತಿ ಕಾಡ್ತಾನೆ ಇರುತ್ತದೆ. ಯಾವಾಗಲೂ ಮಲಗಬೇಕು ಅಂತ ಆಸೆ ಇರುತ್ತೆ. ಯಾವಾಗಲೂ ಸುಸ್ತು ಸುಸ್ತು ಅಂತ ಅಂತ ಇರ್ತಾರೆ.
ಬಹಳ ಒತ್ತಡಗಳು, ಕಾಲುಗಳಲ್ಲಿ ಪಾದಗಳಲ್ಲಿ ನೋವು ಸುಸ್ತು ಜಿಗುಪ್ಸೆ ಇರುತ್ತದೆ. ಮಕ್ಕಳಿಗೆ ಒಳ್ಳೆಯದು, ಇಷ್ಟಾರ್ಥ ಸಿದ್ದಿ ಹಾಗೂ ಗೃಹಯೋಗ ಇದೆ. ತಾಯಿ ಆರೋಗ್ಯದಲ್ಲಿ ಅನಿರೀಕ್ಷಿತ ಏರುಪೇರಾಗಬಹುದು. ಪದೇ ಪದೇ ಜೀರ್ಣಕ್ರಿಯೆ ಮೇಲೆ ಕೆಟ್ಟ ಪರಿಣಾಮ. ಹೊಟ್ಟೆಯ ಸೋಂಕುಗಳು ಆಗುವ ಸಾಧ್ಯತೆ ಇದೆ. ಲಾಯರ್​ಗೆ ಕೀರ್ತಿ ಪ್ರತಿಷ್ಠೆ ಹೆಚ್ಚಾಗಲಿದೆ. ನಿದ್ದೆ ವೈಪರೀತ್ಯಗಳು ಹೆಚ್ಚಾಗಲಿವೆ. ಕೆಲವು ಕನಸುಗಳು ನನಸಾಗುತ್ತದೆ.
ಪರಿಹಾರ: ಶಿವನ ಆರಾಧನೆ ಕೂಡ ಮಾಡ್ಬೇಕು. ಕೇರಳ ರಾಜ್ಯದಲ್ಲಿರುವಂತಹ ಗುರುವಾಯೂರು ದೇವಸ್ಥಾನದಲ್ಲಿ ಗುರುವಾಯೂರಪ್ಪನ ದರ್ಶನ ಮಾಡಿ. ಅಲ್ಲಿ ಕುಳಿತು 'ವಿಷ್ಣು ಸಹಸ್ರನಾಮ ಪಾರಾಯಣ' ಮಾಡಿದ್ರೆ ಬಹಳ ಒಳ್ಳೆಯದು. ನಂಜನಗೂಡು ಪುಣ್ಯಕ್ಷೇತ್ರದಲ್ಲಿ ನಂಜುಂಡೇಶ್ವರನ ದರ್ಶನ ಮಾಡಿದರೆ ಒಳ್ಳೆಯದು.
ಇದನ್ನೂ ಓದಿ:ತುಮಕೂರು ಮಹಾನಗರ ಪಾಲಿಕೆಗೆ ಸುತ್ತಲಿನ 54 ಗ್ರಾಮ ಸೇರ್ಪಡೆಗೆ ಕ್ಯಾಬಿನೆಟ್ ಒಪ್ಪಿಗೆ-ಡಾ.ಜಿ.ಪರಮೇಶ್ವರ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us