/newsfirstlive-kannada/media/media_files/2025/12/17/shimogga-brother-2025-12-17-16-03-15.jpg)
ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಜೇಡಿಕೆರೆ ಗ್ರಾಮದಲ್ಲಿ ನಡೆದಿರುವ ಕೊಲೆ ಈಗ ಸಾಕಷ್ಟು ಸದ್ದು ಮಾಡಿದೆ. ತನ್ನ ಹೆಂಡತಿಯ ಜೊತೆ ಅಕ್ರಮ ಸಂಬಂಧ ಬೆಳೆಸಿದ್ದನ್ನು ಕಂಡು ಆಕ್ರೋಶಗೊಂಡ ಮಾಲತೇಶ ಪೂಜೆಯ ನೆಪದಲ್ಲಿ ತಮ್ಮ ರಾಮಚಂದ್ರನನ್ನು ತೋಟವೊಂದಕ್ಕೆ ಕರೆದೊಯ್ದು ಮದ್ಯಪಾನ ಮಾಡಿಸಿ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಿ ತು ಹಾಕಿದ್ದಾನೆ. ತಮ್ಮನ ಈ ಚಾಳಿಯನ್ನು ಮುಂಚೆಯೇ ಪತ್ತೆ ಹಚ್ಚಿ ಎಚ್ಚರಿಕೆ ನೀಡಿದ್ದ ಮಾಲತೇಶ್ ಬದಲಾಗದ ರಾಮಚಂದ್ರನ ನಡವಳಿಕೆಯಿಂದ ಬೇಸತ್ತು ಅಂತಿಮವಾಗಿ ಆತನ ಉಸಿರನ್ನು ನಿಲ್ಲಿಸಿ ಏನು ಗೊತ್ತಿಲ್ಲದಂತೆ ನಡೆದುಕೊಂಡಿದ್ದಾನೆ.
ಇದನ್ನೂ ಓದಿ: ಮಹಿಳೆಯಿಂದ ಪೊಲೀಸ್ ಇನ್ಸ್ ಪೆಕ್ಟರ್ ಗೆ ಲವ್ ಗೆ ಒತ್ತಾಯ : ಮಹಿಳೆಯಿಂದ ಹನಿಟ್ರ್ಯಾಪ್ ಗೆ ಯತ್ನದ ಶಂಕೆ, ಬಂಧನ
/filters:format(webp)/newsfirstlive-kannada/media/media_files/2025/12/17/shimogga-brother-1-2025-12-17-16-04-45.jpg)
ನಿನ್ನ ಮದುವೆಗಾಗಿ ಸ್ವಾಮೀಜಿಯೊಬಗಬ್ಬರು ಪೂಜೆ ಮಾಡಲು ಹೇಳಿದ್ದಾರೆ ಎಂದು ಹೇಳಿ ಮಂಜುನಾಥ ಎಂಬುವರಿಗೆ ಸೇರಿದ ತೋಟಕ್ಕೆ ಕಳೆದ ಸೆಪ್ಟೆಂಬರ್ 8 ರಂದು ರಾಮಚಂದ್ರನನ್ನು ಕರೆಸಿಕೊಂಡ ಮಾಲತೇಶ ನಂತರ ಆತನಿಗೆ ಕುಡಿಸಿ ಕೈ-ಕಾಲು ಕಟ್ಟಿ ಕೊಲೆ ಮಾಡಿದ್ದಾನೆ. ನಂತರ ಮೊದಲೇ ತೆಗೆದಿದ್ದ ಗುಂಡಿಯಲ್ಲಿ ಹಾಕಿ ಮರುದಿನ ಒಂದಿಬ್ಬರು ಕೆಲಸಗಾರರನ್ನು ಕರೆಸಿಕೊಂಡು ಗುಂಡಿಯನ್ನು ಮುಚ್ಚಿದ್ದಾನೆ. ನಂತರ ತಾನೇ ಪೊಲೀಸರಿಗೆ ನಾಪತ್ತೆಯಾಗಿರುವ ಕುರಿತು ದೂರು ನೀಡಿದ್ದಾನೆ. ಪೊಲೀಸರು ತಮ್ಮದೇ ಸ್ಟೈಲ್ ನಲ್ಲಿ ವಿಚಾರಣೆ ನಡೆಸಿದಾಗ ಸತ್ಯ ಹೊರಬಂದಿದೆ.
ಇದನ್ನೂ ಓದಿ:ರಾಜ್ಯದಲ್ಲಿ ಅಮೆರಿಕಾ ಮಾದರಿಯ ಮ್ಯಾಗ್ನೆಟ್ ಶಾಲೆಗಳ ಆರಂಭಕ್ಕೆ ಸಿದ್ದತೆ: 25 ಸಾವಿರ ಸರ್ಕಾರಿ ಶಾಲೆ ಮುಚ್ಚುವ ಭೀತಿ
/filters:format(webp)/newsfirstlive-kannada/media/media_files/2025/12/17/shimogga-brother-2-2025-12-17-16-05-00.jpg)
ತನ್ನ ಎರಡನೇ ಮಗನನ್ನು ಆತನ ಅಣ್ಣನೇ ಕೊಲೆ ಮಾಡಿರುವುದಕ್ಕೆ ರಾಮಚಂದ್ರನ ತಾಯಿ ಗೌರಮ್ಮ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ರಾಮಚಂದ್ರನನ್ನು ಮಾಲತೇಶನೇ ಕೊಲೆ ಮಾಡಿರುವ ಕುರಿತು ನನ್ನ ಸೊಸೆಯೇ ತಿಳಿಸಿದ್ದಾಳೆ. ನನ್ನ ಮತ್ತು ರಾಮಚಂದ್ರನ ನಡುವೆ ಸಂಬಂಧ ಇದೆ ಎಂಬ ಕಾರಣಕ್ಕೆ ಕೊಲೆ ನಡೆದಿದೆ. ತಮ್ಮನನ್ನೇ ಕೊಲೆ ಮಾಡಿರುವ ಅಣ್ಣ ಮುಂದಿನ ದಿನಗಳಲ್ಲಿ ನಮ್ಮನ್ನು ಕೊಲೆ ಮಾಡುವ ಸಾಧ್ಯತೆ ಇದೆ. ಹಾಗಾಗಿ ಮಾಲತೇಶನನ್ನು ಯಾವ ಕಾರಣಕ್ಕೂ ಬಿಡದೆ ಆತನ ವಿರುದ್ಧ ಕ್ರಮ ಜರುಗಿಸಬೇಕು ಎಂದು ಖುದ್ದು ತಾಯಿಯೇ ಆಗಹಿಸಿದ್ದಾರೆ.
ಒಟ್ಟಾರೆ ಒಟ್ಟಿಗೆ ಇದ್ದು ಜೀವನ ಮಾಡುತ್ತಿದ್ದ ಸಹೋದರರ ನಡುವೆ ಮೂಡಿದ ಮನಸ್ತಾಪ ಅಣ್ಣನೇ ತಮ್ಮನನ್ನು ಕೊಲೆ ಮಾಡುವ ಮೂಲಕ ಅಂತ್ಯ ಕಂಡಿರುವುದು ದುರಂತವೇ ಸರಿ.
ಇದನ್ನೂ ಓದಿ: ವಿದೇಶಿ ಆಟಗಾರರಿಗೆ ನಿರಾಸೆ.. ಹಣದ ಗುಂಗಿನಲ್ಲಿದ್ದ ಸ್ಟಾರ್​ಗಳಿಗೆ ಬಿಗ್ ಶಾಕ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us