/newsfirstlive-kannada/media/media_files/2025/08/05/dharmasthala-case-2025-08-05-14-49-49.jpg)
ಧರ್ಮಸ್ಥಳ ಗ್ರಾಮದ ಅರಣ್ಯದಲ್ಲಿ ಬುರುಡೆ ರಹಸ್ಯಗಳ ಶೋಧಕಾರ್ಯ ನಡೀತಿದೆ. ಅನಾಮಿಕ ತೋರಿಸಿದ ಸ್ಥಳಗಳಲ್ಲಿ ಅಧರ್ಮದಿಂದ ಸತ್ತವರ ಅಸ್ಥಿಪಂಜರಗಳಿಗಾಗಿ ಹುಡುಕಾಟ ನಡೆಯುತ್ತಲೇ ಇದೆ. ಇವತ್ತು ದೂರುದಾರ ಗುರುತಿಸಿದ್ದ ಸ್ಥಳ ಬಿಟ್ಟು ಸರ್ಪೈಸ್ ಸ್ಪಾಟ್‌ನಲ್ಲಿ ಎಸ್‌ಐಟಿ ಉತ್ಖನನ ಮಾಡಿದೆ. ಯಾವುದೇ ಮೂಳೆ-ಬುರುಡೆಗಳ ಕುರುಹು ಸಿಗದೇ ಪರಿಶೋಧನೆ ಮುಕ್ತಾಯವಾಗಿದೆ.
15ನೇ ಸ್ಪಾಟ್‌ನಲ್ಲಿ ಮಿನಿ ಜೆಸಿಬಿ ಬಳಸಿ SIT ಶೋಧ!
ಧರ್ಮಸ್ಥಳ ಗ್ರಾಮದಲ್ಲಿ ಭೂತಾಯಿಯ ಒಡಲಲ್ಲಿ ಅಗೆದುಬಗೆದು 2 ದಶಕಗಳ ಹಿಂದಿನ ಕ್ರೌರ್ಯಗಳ ಪತ್ತೆಗೆ ಎಸ್‌ಐಟಿ ತನಿಖೆ ನಡೆಸ್ತಿದೆ. ಅನಾಮಿಕ ದೂರುದಾರ ತೋರಿಸಿದ ಕಡೆ ಧರೆಯನ್ನ ಕೆದಕುತ್ತಿದೆ. ಇವತ್ತು ಕಲ್ಲೇರಿ ಸ್ಪಾಟ್‌ನಲ್ಲಿ ಉತ್ಖನನಕ್ಕೆ ಹೋದ ಎಸ್‌ಐಟಿಯನ್ನ ಅನಾಮಿಕ ನಿಗೂಢ ಜಾಗಕ್ಕೆ ಕರೆದೊಯ್ದು ಅಸ್ಥಿಪಂಜರ ಇಲ್ಲಿದೆ ಅಂತ ತೋರಿಸಿದ್ದ. ಪಾಯಿಂಟ್ 13 ಬಿಟ್ಟು ಮತ್ತೆ ಮೂರ್ನಾಲ್ಕು ಕಡೆ ಸಮಾಧಿ ಇದೆ ಎನ್ನುತ್ತಾ ಅಲ್ಲಿ ಅಗೆಯುವಂತೆ ಪಟ್ಟು ಹಿಡಿದಿದ್ದ. ಅದರಂತೆ ಬೋಳಿಯಾರ್ ಸಮೀಪದ ಸ್ಪಾಟ್‌ನ ನಂಬರ್ 15 ಅಂತ ಗುರುತಿಸಿ ಭೂಮಿಯನ್ನ ಬಗೆದಿದ್ದ ಎಸ್‌ಐಟಿ ಕೈಗೆ ಏನೂ ಸಿಗದೇ ವಾಪಸ್ ಆಗಿದೆ.
ಇದನ್ನೂ ಓದಿ: ಧರ್ಮಸ್ಥಳ ಘರ್ಷಣೆ; ಸ್ಥಳದಲ್ಲಿ ನಡೆದ ಘಟನೆ ಬಗ್ಗೆ ಸತ್ಯ ಬಿಚ್ಚಿಟ್ಟ ಬಿಗ್ಬಾಸ್ ಸ್ಪರ್ಧಿ ರಜತ್ ಕಿಶನ್
15ರಲ್ಲೂ ಸಿಗದ ಅಸ್ಥಿಪಂಜರ!
- ಅನಾಮಿಕ ತೋರಿಸಿದ 15ನೇ ಸ್ಪಾಟ್‌ನಲ್ಲಿ ಎಸ್‌ಐಟಿ ಶೋಧ
- ಬೋಳಿಯಾರ್ನ ದಟ್ಟಾರಣ್ಯ ಪ್ರದೇಶದಲ್ಲಿ ನಡೆದಿದ್ದ ಮಹಜರು
- ಮಿನಿ ಜೆಸಿಬಿ ಬಳಸಿ ಶೋಧ ಕಾರ್ಯ ನಡೆಸಿದ್ದ SIT ಅಧಿಕಾರಿಗಳು
- ಅನಾಮಿಕ ತೋರಿಸಿದ್ದ ಹೊಸ ಸ್ಥಳದಲ್ಲೂ ಸಿಗದ ಅಸ್ಥಿಪಂಜರ
- 15ನೇ ಸ್ಥಳದಲ್ಲಿ ಕಳೇಬರ ಸಿಗದೇ ಎಸ್‌ಐಟಿ ತಂಡ ವಾಪಸ್
ಸ್ಪಾಟ್ 13 ರಲ್ಲಿ GPR ತಂತ್ರಜ್ಞಾನ ಬಳಕೆಗೆ ‘ಲಕ್ಷ’ ಸವಾಲು!
ಧರ್ಮಸ್ಥಳ ಗ್ರಾಮದ 13ನೇ ಸ್ಥಳದಲ್ಲಿ ಅಸ್ಥಿಪಂಜರ ಹುಡುಕೋದೆ ಎಸ್‌ಐಟಿಗೆ ದೊಡ್ಡ ಸವಾಲಾಗಿದೆ. ಸದ್ಯ ಜಿಪಿಆರ್ ಬಳಕೆಗೆ ಅನುಮತಿ ಸಿಗದೇ ಎಸ್‌ಐಟಿ ಶೋಧಕಾರ್ಯ ಮತ್ತಷ್ಟು ವಿಳಂಬವಾಗುತ್ತಿದೆ. ಜೊತೆಗೆ ಜಿಪಿಆರ್ ಮೂಲಕ ಮೂಳೆಗಳ ಪತ್ತೆ ಮಾಡಬೇಕಾದ್ರೆ ದಿನಕ್ಕೆ ಲಕ್ಷ ಲಕ್ಷ ಹಣ ಖರ್ಚಾಗಲಿದೆ.
ಇದನ್ನೂ ಓದಿ:ಧರ್ಮಸ್ಥಳ ಪ್ರಕರಣ; ಪಾಯಿಂಟ್ 13ರ ಪರಿಶೋಧನೆಗೆ GPR ಬಳಕೆ ಮಾಡಲು ಎಸ್‌ಐಟಿ ಪ್ಲಾನ್
GPR ಬಳಕೆಗೆ ‘ಲಕ್ಷ’ ಸವಾಲು!
- ಅತ್ಯಂತ ದುಬಾರಿ ವೆಚ್ಚದ GPR ತಂತ್ರಜ್ಞಾನ ಬಳಸಿ ಕಳೇಬರ ಶೋಧ
- 1 ದಿನಕ್ಕೆ GPR ಮೆಷಿನ್ಗೆ ಲಕ್ಷಾಂತರ ರೂಪಾಯಿ ಬಾಡಿಗೆ ಚಾರ್ಜ್
- ಮೆಷಿನ್ ಬಾಡಿಗೆಗೆ 20 ಲಕ್ಷಕ್ಕೂ ಹೆಚ್ಚು ರೂಪಾಯಿ ಎಂದು ಅಂದಾಜು
- ಸಮತಟ್ಟಾದ ಸ್ಥಳಗಳಲ್ಲಿ GPR ತಂತ್ರಜ್ಞಾನ ಸುಲಭ ಮತ್ತು ಎಫೆಕ್ಟಿವ್
ಅನಾಮಿಕ ದೂರುದಾರನ ಹೇಳಿಕೆಯನ್ನ ಕೂಲಂಕುಷವಾಗಿ ಪರಿಶೀಲನೆ ನಡೆಸಲು ಎಸ್‌ಐಟಿ ಮತ್ತೊಂದು ಹಂತದ ತನಿಖೆಗೆ ಮುಂದಾಗಿದೆ. ಅನಾಮಿಕ ದೂರುದಾರನೊಂದಿಗೆ ಕೆಲಸ ಮಾಡಿದ ಸಫಾಯಿ ಕರ್ಮಚಾರಿಗಳನ್ನ ಪತ್ತೆಹಚ್ಚಿದೆ. 1995 ರಿಂದ 2014 ರ ವರೆಗೆ ಅನಾಮಿಕ ದೂರುದಾರನೊಂದಿಗೆ ಕೆಲಸ ಮಾಡಿದ ತಮಿಳುನಾಡು ಮೂಲದ ಐವರ ವಿಚಾರಣೆ ನಡೆಸಿದೆ. ಒಟ್ಟಾರೆ, ನೇತ್ರಾವತಿ ತಟದಲ್ಲಿ ಸತ್ಯಾನ್ವೇಷಣೆಗಾಗಿ ಎಸ್‌ಐಟಿ ಅಧಿಕಾರಿಗಳು ಎಲ್ಲಾ ರೀತಿಯ ಶ್ರಮವನ್ನ ವಹಿಸ್ತಿದ್ದಾರೆ. ತನಿಖೆ ಮುಕ್ತಾಯದ ಬಳಿಕ ಸತ್ಯ ಯಾವುದು? ಮಿಥ್ಯ ಯಾವುದು ಅಂತ ಗೊತ್ತಾಗಲಿದೆ.
ಇದನ್ನೂ ಓದಿ: ಉಗ್ರರ ಟಾರ್ಗೆಟ್ ಆಗಿತ್ತು ಧರ್ಮಸ್ಥಳದ ಮಂಜುನಾಥ ದೇಗುಲ.. ಕುಕ್ಕರ್ ಬ್ಲಾಸ್ಟ್ ಕೇಸ್ನ ಸತ್ಯ ಬಯಲು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ