newsfirstkannada.com

ವೀಕ್ನೆಸ್​​ ಅನ್ನೇ ಸ್ಟ್ರೆಂಥ್​ ಆಗಿ ಬದಲಿಸಿದ ವಿರಾಟ್​.. ತವರಿನಲ್ಲಿ ಗುಜರಾತ್ ವಿರುದ್ಧ ಮತ್ತೆ ಘರ್ಜಿಸ್ತಾರಾ ಕೊಹ್ಲಿ?

Share :

Published May 1, 2024 at 2:10pm

  ಸ್ಪಿನ್ನರ್ಸ್​ಗೆ ಚಳ್ಳೆ ಹಣ್ಣು ತಿನ್ನಿಸ್ತಿರೋ ವಿರಾಟ್​ ಕೊಹ್ಲಿ, ಅದು ಹೇಗೆ?

  ಐಪಿಎಲ್​ನ 10 ಇನ್ನಿಂಗ್ಸ್​ಗಳಲ್ಲಿ 500 ರನ್​ಗಳು ಚಚ್ಚಿರುವ ವಿರಾಟ್

  ಸ್ಪಿನ್ನರ್ಸ್​ ವಿರುದ್ಧ ಕೊಹ್ಲಿ ಗುಡ್​ ಟಚ್, ಕಾನ್ಫಿಡೆಂಟ್ಸ್​​ ನೆಕ್ಸ್ಟ್​ ಲೆವೆಲ್.!

ಕಿಂಗ್​ ಕೊಹ್ಲಿಗೆ ಸುಖಾ ಸುಮ್ಮನೇ ನಂಬರ್-​ 1 ಪಟ್ಟ ದಕ್ಕಿಲ್ಲ. ಏನೇ ತಪ್ಪು ಮಾಡಿದ್ರೂ, ಅದನ್ನ ಅಷ್ಟೇ ವೇಗವಾಗಿ ತಿದ್ದಿಕೊಳ್ತಾರೆ. ಎಡವಿದ ಜಾಗದಲ್ಲೆ ಎದ್ದು ನಿಲ್ತಾರೆ. ಅದಕ್ಕೆ ಈ ಸ್ಟೋರಿನೇ ಬೆಸ್ಟ್​ ಎಕ್ಸಾಂಪಲ್​​​. ಅಷ್ಟ್ಕಕೂ ಏನಪ್ಪಾ ಅದು ಅಂತೀರಾ?.

ಅಂದು ಪರದಾಟ..ಇಂದು ಜಬರ್ದಸ್ತ್​​​ ಆಟ..

ಸೀಸನ್​​​​ 17ನೇ ಐಪಿಎಲ್​​ನಲ್ಲಿ ಕಿಂಗ್ ಕೊಹ್ಲಿ ಧಮ್​ದಾರ್​ ಪ್ರದರ್ಶನ ನೀಡ್ತಿದ್ದಾರೆ. 10 ಇನ್ನಿಂಗ್ಸ್​ಗಳಲ್ಲಿ 500 ರನ್​ ಚಚ್ಚಿ ಟಾಪ್ ಸ್ಕೋರರ್ ಆಗಿ ಹೊರಹೊಮ್ಮಿದ್ದಾರೆ. ಬೌಲರ್ಸ್​ ಹಾಗೂ ಸ್ಪಿನ್ನರ್ಸ್​ ವಿರುದ್ಧ ಕೊಹ್ಲಿ ದಂಡಯಾತ್ರೆ ಎಲ್ಲರ ಕಣ್ಣು ಕುಕ್ಕಿಸ್ತಿದೆ. ಬರೀ ರನ್​​ ಗುಡ್ಡೆ ಹಾಕೋದಷ್ಟೆ ಅಲ್ಲದೇ, ಸ್ಟ್ರೈಕ್​ರೇಟ್​ ಕೂಡ ಉತ್ತಮಗೊಳಿಸಿ ಹೊಸ ಅವತಾರದಲ್ಲಿ ವಿಜೃಂಭಿಸ್ತಿದ್ದಾರೆ.

ಇದನ್ನೂ ಓದಿ: ಶಾಲೆಗಳ ಬಾಂಬ್ ಬೆದರಿಕೆ ಹಿಂದೆ ವಿದೇಶಿ ಕೈವಾಡ? ದೆಹಲಿ ಪೊಲೀಸರಿಂದ ಸ್ಫೋಟಕ ಮಾಹಿತಿ ಪತ್ತೆ

ಕಳೆದ ವರ್ಷವೂ ಕೊಹ್ಲಿ ಇದೇ ರೀತಿ ಆರ್ಭಟ ನಡೆಸಿದ್ರು. ಟೂರ್ನಿಯಲ್ಲಿ 639 ರನ್​ ಗಳಿಸಿದ್ರೂ ಸ್ಪಿನ್ನರ್ಸ್​ ವಿರುದ್ಧ ರನ್ ಗಳಿಸಲು ತಿಣುಕಾಡಿದ್ರು. ಸಿಕ್ಸರ್​​​-ಬೌಂಡ್ರಿಗಳಿಂದ ಸದ್ದು ಮಾಡಬೇಕಿದ್ದ ವಿರಾಟ್​ ತಲೆ ತಗ್ಗಿಸಿ ಪೆವಿಲಿಯನ್​ ಕಡೆ ಹೆಜ್ಜೆ ಹಾಕಿದ್ದೇ ಹೆಚ್ಚು. ಕಮ್ಮಿ ಸ್ಟ್ರೈಕ್​ರೇಟ್ ನಿಂದ ಸಾಕಷ್ಟು ಟೀಕೆ ಎದುರಿಸಿದ್ರು.

2023 ರಲ್ಲಿ ಸ್ಪಿನ್ನರ್ಸ್​ ವಿರುದ್ಧ ಕೊಹ್ಲಿ..!

ಕಳೆದ ವರ್ಷ ಒಟ್ಟು 11 ಇನ್ನಿಂಗ್ಸ್​ಗಳಲ್ಲಿ ಕಿಂಗ್ ಕೊಹ್ಲಿ ಸ್ಪಿನ್ನರ್ಸ್​ ವಿರುದ್ಧ ಬ್ಯಾಟ್ ಬೀಸಿದ್ರು. 113.46 ಸ್ಟ್ರೈಕ್​ರೇಟ್​​​ನಲ್ಲಿ 236 ರನ್​ ಬಾರಿಸಿದ್ರು. ಐದು ಬಾರಿ ಸ್ಪಿನ್ ಬಲೆಗೆ ಬಿದ್ದಿದ್ರು.

17ನೇ IPL ನಲ್ಲಿ ಸ್ಪಿನ್ನರ್ಸ್​ ವಿರುದ್ಧ ಉಗ್ರಾವತಾರ​​​​

ಯಾವ ಕಿಂಗ್ ಕೊಹ್ಲಿ ಕಳೆದ ವರ್ಷ ಸ್ಪಿನ್ನರ್ಸ್​ ವಿರುದ್ಧ ಆಡಲು ಹೆಣಗಾಡ್ತಿದ್ರೋ, ಯಾವ ಕಿಂಗ್ ಕೊಹ್ಲಿ ಸುಲಭವಾಗಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರ್ತಿದ್ರೋ, ಇಂದು ಅದೇ ವಿರಾಟ್ ಸ್ಪಿನ್ನರ್ಸ್​ಗೆ ಚಳ್ಳೆ ಹಣ್ಣು ತಿನ್ನಿಸ್ತಿದ್ದಾರೆ. ಪಾರಮ್ಯಕ್ಕೆ ಅವಕಾಶ ಕೊಡದೇ ರನ್​ ಕಲೆ ಹಾಕ್ತಿದ್ದಾರೆ. ಜೊತೆಗೆ ಸ್ಟ್ರೈಕ್​​ರೇಟ್ ಕೂಡ ಹೆಚ್ಚಿಸಿಕೊಂಡು ಸ್ಪಿನ್ನರ್ಸ್​ ಸವಾಲು ಗೆದ್ದಿದ್ದಾರೆ.

2024 ರಲ್ಲಿ ಸ್ಪಿನ್ನರ್ಸ್​ ವಿರುದ್ಧ ಕೊಹ್ಲಿ..!

ಪ್ರಸ್ತಕ ಸೀಸನ್​​ನಲ್ಲಿ ವಿರಾಟ್ ಕೊಹ್ಲಿ 9 ಇನ್ನಿಂಗ್ಸ್​ಗಳಲ್ಲಿ ಸ್ಪಿನ್ನರ್ಸ್​ ವಿರುದ್ಧ ಆಡಿದ್ದು 135.66 ರ ಸ್ಟ್ರೈಕ್​ರೇಟ್​ನಲ್ಲಿ 213 ರನ್ ಕೊಳ್ಳೆ ಹೊಡೆದಿದ್ದಾರೆ. 2 ಬಾರಿ ಮಾತ್ರ ವಿಕೆಟ್ ಒಪ್ಪಿಸಿದ್ದಾರೆ.

ಇದನ್ನೂ ಓದಿ: VIDEO: ಕ್ಲಾಸ್​ ರೂಮ್​ ಅನ್ನೇ ಸ್ವಿಮ್ಮಿಂಗ್ ಪೂಲ್ ಮಾಡಿದ ಶಾಲೆ; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!

ಗುಜರಾತ್ ಸ್ಪಿನ್ ಕೋಟೆ ಧ್ವಂಸಗೊಳಿಸ್ತಾರಾ ಕೊಹ್ಲಿ..?

ಸದ್ಯ ಕಿಂಗ್ ಕೊಹ್ಲಿ ಸ್ಪಿನ್ನರ್ಸ್​ ವಿರುದ್ಧ ಗುಡ್​ ಟಚ್​ನಲ್ಲಿದ್ದಾರೆ. ಅವರ ಕಾನ್ಫಿಡೆಂಟ್ಸ್​​ ನೆಕ್ಸ್ಟ್​ ಲೆವೆಲ್​​ನಲ್ಲಿದೆ. ಆರ್​ಸಿಬಿ ಮುಂದಿನ ಪಂದ್ಯವನ್ನ ತವರಿನಲ್ಲಿ ಗುಜರಾತ್ ವಿರುದ್ಧ ಆಡಲಿದೆ. ಶುಭ್​​ಮನ್​​ ಗಿಲ್​​ ಪಡೆ ಬಲಿಷ್ಠ ಸ್ಪಿನ್ ಬಳಗವನ್ನ ಹೊಂದಿದೆ. ಲೆಜೆಂಡ್ರಿ ರಶೀದ್ ಖಾನ್​​, ನೂರ್​ ಅಹ್ಮದ್​​ ಹಾಗೂ ಸಾಯಿ ಕಿಶೋರ್​​ರಂತ ಕ್ವಾಲಿಟಿ ಸ್ಪಿನ್ನರ್​ಗಳಿದ್ದಾರೆ.

ಇದನ್ನೂ ಓದಿ: ಹಾಸನ ವಿಡಿಯೋ ಕೇಸ್‌ಗೆ ಹೊಸ ಟ್ವಿಸ್ಟ್‌.. ಅಪ್ರಾಪ್ತ ಹೆಣ್ಣು ಮಗಳನ್ನು ಬಳಸಿಕೊಂಡ ಬಗ್ಗೆ ಅನುಮಾನ

ಇವರನ್ನ ಬೇಟೆಯಾಡಲು ರಣಬೇಟೆಗಾರ ಕೊಹ್ಲಿ ಸಜ್ಜಾಗಿದ್ದಾರೆ. ಕಳೆದ ಪಂದ್ಯದಲ್ಲಿ ಇದೇ ಗುಜರಾತ್​ ಸ್ಪಿನ್ನರ್​ಗಳನ್ನ ಕೊಹ್ಲಿ ಚಚ್ಚಿ ಬಿಸಾಕಿದ್ರು. ಹೇಳಿ ಕೇಳಿ ಚಿನ್ನಸ್ವಾಮಿ ವಿರಾಟ್ ಕೊಹ್ಲಿಯ​ ಕಿಂಗ್​ಡಮ್​​. ಇಲ್ಲಿ ಕೊಹ್ಲಿ ತೆಗೆದುಕೊಂಡಿದ್ದಕ್ಕಿಂತ ರಿಟರ್ನ್​ ಕೊಟ್ಟಿದ್ದೆ ಹೆಚ್ಚು. ಹೀಗಾಗಿ ಮುಂದಿನ ಬ್ಯಾಟಲ್​​ನಲ್ಲೋ ಕಿಂಗ್ ಕೊಹ್ಲಿ ಗುಜರಾತ್ ಸ್ಪಿನ್ ಕೋಟೆಯನ್ನ ಧ್ವಂಸಗೊಳಿಸೋದು ಪಕ್ಕಾ. ಇದ್ರಲ್ಲಿ ಡೌಟೇ ಬೇಡ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ವೀಕ್ನೆಸ್​​ ಅನ್ನೇ ಸ್ಟ್ರೆಂಥ್​ ಆಗಿ ಬದಲಿಸಿದ ವಿರಾಟ್​.. ತವರಿನಲ್ಲಿ ಗುಜರಾತ್ ವಿರುದ್ಧ ಮತ್ತೆ ಘರ್ಜಿಸ್ತಾರಾ ಕೊಹ್ಲಿ?

https://newsfirstlive.com/wp-content/uploads/2024/04/VIRAT_KOHLI_GILL.jpg

Load More