Advertisment

ಸೂಪರ್ ಸ್ಟಾರ್ ರಜನಿಕಾಂತ್ ರಾಜ್ಯಪಾಲರಾಗ್ತಾರಾ? ದಕ್ಷಿಣ ಭಾರತಕ್ಕೆ ಬಿಜೆಪಿ ಮಾಡಿರೋ ಮೆಗಾ ಪ್ಲಾನ್ ಏನು?

author-image
Bheemappa
Updated On
ಬಾಲಿವುಡ್​ಗೆ ಎಂಟ್ರಿ ಕೊಡ್ತರಾ ರಾಕಿಭಾಯ್ ಯಶ್.. ಸುದೀಪ್​ ಮಗಳ ಡ್ಯಾನ್ಸ್​ ಹೇಗಿದೆ ನೋಡಿ?
Advertisment
  • ರಜನಿಗೆ ರಾಜ್ಯಪಾಲರ ಪಟ್ಟ ಕಟ್ಟಿಿದ್ರೆ ಬಿಜೆಪಿಗೆ ಆಗೋ ಲಾಭವೇನು.?
  • ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಭೇಟಿ ಬಳಿಕ ಹೊಸ ಚರ್ಚೆ
  • ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿರೋ ಈ ಸುದ್ದಿ ನಿಜಾನಾ?

ನವದೆಹಲಿ: ಜೈಲರ್ ಸಿನಿಮಾದ ಸಕ್ಸಸ್​ನಲ್ಲಿರೋ ಸೂಪರ್​ ಸ್ಟಾರ್​ ರಜನಿಕಾಂತ್ ಅವರು ತೆಲಂಗಾಣದ ರಾಜ್ಯಪಾಲ ಆಗುತ್ತಾರೆ ಎನ್ನುವ ಸುದ್ದಿಯೊಂದು ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಇಂತಹದೊಂದು ಬಂಪರ್​ ಆಫರ್​ ಅನ್ನು ತಲೈವಾಗೆ ನೀಡಿದೆ ಎಂದು ಹೇಳಲಾಗುತ್ತಿದೆ.

Advertisment

ಸೂಪರ್ ಸ್ಟಾರ್ ರಜನಿಕಾಂತ್ ಈ ಹಿಂದೆ ತಮಿಳುನಾಡು ರಾಜಕಾರಣದಲ್ಲಿ ಧುಮುಕುವುದಾಗಿ ಹೇಳಿದ್ದರು. ನಂತರ ದಿನಗಳಲ್ಲಿ ಅನಾರೋಗ್ಯ ಕಾರಣ ನೀಡಿ ಅವರು ರಾಜಕಾರಣದಿಂದ ಹಿಂದೆ ಸರಿದಿದ್ದರು. ಆದ್ರೆ ಈಗ ರಜನಿಕಾಂತ್ ಅವರು ತೆಲಂಗಾಣದ ನೂತನ ರಾಜ್ಯಪಾಲರಾಗುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದ್ದು ಈ ಬಗ್ಗೆ ಅವರು ಮಾತ್ರ ಅಧಿಕೃತವಾಗಿ ಹೇಳಿಕೆ ನೀಡಿಲ್ಲ ಎಂದು ತಿಳಿದು ಬಂದಿದೆ.

[caption id="attachment_16786" align="aligncenter" width="800"]publive-image ಸಿಎಂ ಯೋಗಿ ಆದಿತ್ಯ ನಾಥ್ ಮತ್ತು ರಜನಿಕಾಂತ್[/caption]

ಇತ್ತೀಚೆಗಷ್ಟೇ ಜೈಲರ್ ಸಿನಿಮಾ ಯಶಸ್ವಿಯಾಗಿದ್ದಕ್ಕೆ ರಜನಿಕಾಂತ್ ಅವರು ಹಿಮಾಲಯಕ್ಕೆ ಟ್ರಿಪ್ ಹೋಗಿದ್ದರು. ಹಿಮಾಲಯದಿಂದ ವಾಪಸ್ ಆಗುವಾಗ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಜಾರ್ಖಂಡ್ ಗವರ್ನರ್​ ಸಿ.ಪಿ ರಾಧಾಕೃಷ್ಣ ಸೇರಿದಂತೆ ಕೆಲವು ರಾಜಕೀಯ ಗಣ್ಯರನ್ನು ಭೇಟಿ ಮಾಡಿದ್ದರು. ಹೀಗಾಗಿ ಬಿಜೆಪಿಯು ರಜನಿಕಾಂತ್ ಅವರನ್ನು ಗವರ್ನರ್​ ಆಗಿ ನೇಮಕ ಮಾಡಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಅಲ್ಲದೇ ರಜನಿಕಾಂತ್​ರನ್ನು ರಾಜ್ಯಪಾಲರನ್ನಾಗಿ ಮಾಡಿದ್ರೆ ದಕ್ಷಿಣ ಭಾರತದಲ್ಲಿ ಬಿಜೆಪಿ ಇನ್ನಷ್ಟು ಆಳವಾಗಿ ಬೇರೂರಬಹುದು ಎಂಬ ಲೆಕ್ಕಚಾರದಲ್ಲಿದೆ ಎನ್ನಲಾಗಿದೆ.

Advertisment

ಸದ್ಯ ತೆಲಂಗಾಣದ ಗವರ್ನರ್​ ತಮಿಳಿಸೈ ಸೌಂದರರಾಜನ್ ಹಾಗೂ ಸಿಎಂ ಕೆ.ಚಂದ್ರಶೇಖರ್​ ರಾವ್ ಅವರ ಮಧ್ಯೆ ಕಿತ್ತಾಟ ನಡೆಯುತ್ತಿದೆ. ಇದು ಅಲ್ಲಿನ ರಾಜಕೀಯ ಬಣದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಹೀಗಾಗಿ ಬಿಜೆಪಿ ರಜನಿಕಾಂತ್​ರನ್ನ ಗವರ್ನರ್ ಮಾಡುವ ಯೋಚನೆಯಲ್ಲಿದಿಯಾ ಎಂಬ ಪ್ರಶ್ನೆ ಕಾಡುತ್ತಿದೆ. ಜೊತೆಗೆ ಇಂತಹ ಅಧಿಕಾರ ಕೊಟ್ಟರು ತೈಲವಾ ಒಪ್ಪುತ್ತಾರೆಯೇ ಎಂಬುದು ಮಿಲಿಯನ್​ ಡಾಲರ್​ ಪ್ರಶ್ನೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment