/newsfirstlive-kannada/media/post_attachments/wp-content/uploads/2024/06/Suraj-Revanna-1-1.jpg)
ಹಾಸನ ಜಿಲ್ಲೆಯಲ್ಲಿ ರಾಜಕೀಯವಾಗಿ ಛಾಪು ಮೂಡಿಸಿದ್ದ ಮಾಜಿ ಸಚಿವ ರೇವಣ್ಣ ಕುಟುಂಬಕ್ಕೆ ಒಂದಲ್ಲ ಒಂದು ಸಂಕಷ್ಟಗಳು ಎದುರಾಗಿತ್ತಲೆ ಇವೆ. ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಕಿಡ್ನಾಪ್​ ಕೇಸ್​​ ಮೇಲೆ ರೇವಣ್ಣ ಕುಟುಂಬ ಕಾನೂನು ಕಂಟಕ ಎದುರಿಸುತ್ತಿದೆ.
ಅಂದಹಾಗೆಯೇ ಮೊದಲು ಲೈಗಿಂಕ ದೌರ್ಜನ್ಯ, ಅತ್ಯಾಚಾರ ಆರೋಪ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಕೇಳಿ ಬಂತು. ಸದ್ಯ ಈಗ ಇವರು ಜೈಲಿನಲ್ಲಿದ್ದಾರೆ.
/newsfirstlive-kannada/media/post_attachments/wp-content/uploads/2024/06/suraj3.jpg)
ಸಂತ್ರಸ್ತೆಯ ಕಿಡ್ನ್ಯಾಪ್​ ಆರೋಪದಡಿ ಹೆಚ್​.ಡಿ.ರೇವಣ್ಣ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿ ಬಂದ್ರು. ಅದೇ ಕಿಡ್ನ್ಯಾಪ್​ ಪ್ರಕರಣದಲ್ಲಿ ಭವಾನಿ ರೇವಣ್ಣ ಕೂಡ ಬಂಧನ ಆಗೋ ಸಾಧ್ಯತೆ ಇತ್ತು, ಆದ್ರೆ ಜಾಮೀನು ಸಿಕ್ಕಿದ್ರಿಂದ ಭವಾನಿ ಬಂಧನದಿಂದ ಪಾರಾಗಿದ್ದಾರೆ. ಇದೆಲ್ಲದರ ನಡುವೆ ಇದೀಗ ಅಸಹಜ ಲೈಂಗಿಕ ದೌರ್ಜನ್ಯ ಆರೋಪದಡಿ ಎಂಎಲ್​ಸಿ ಸೂರಜ್ ರೇವಣ್ಣ ಬಂಧನವಾಗಿದೆ.
ಅಂದಹಾಗೆಯೇ ರೇವಣ್ಣ ಕುಟುಂಬಕ್ಕೆ ಎದುರಾದ ಆರೋಪಗಳೇನು. ಅವುಗಳ ಕುರಿತಾದ ಮಾಹಿತಿ ಇಲ್ಲಿದೆ.
1. ಪ್ರಜ್ವಲ್​ ರೇವಣ್ಣ ವಿರುದ್ಧದ ಆರೋಪ
ಲೈಗಿಂಕ ದೌರ್ಜನ್ಯ, ಅತ್ಯಾಚಾರ, ಬೆದರಿಕೆ ಆರೋಪದಲ್ಲಿ ಅರೆಸ್ಟ್​
ಸದ್ಯ ಎಸ್​ಐಟಿ ಕಸ್ಟಡಿಯಲ್ಲಿ ವಿಚಾರಣೆ ಎದುರಿಸುತ್ತಿರುವ ಪ್ರಜ್ವಲ್​
2. ಹೆಚ್​.ಡಿ.ರೇವಣ್ಣ ವಿರುದ್ಧ ಆರೋಪ
ಲೈಂಗಿಕ ದೌರ್ಜನ್ಯ ಕೇಸ್​ನ ಸಂತ್ರಸ್ತೆಯ ಕಿಡ್ನ್ಯಾಪ್​ ಆರೋಪ
ಸದ್ಯ ಜಾಮೀನಿನ ಮೇಲೆ ಹೊರಗಿದ್ದು, ಕೇಸ್​ ರದ್ದು ಕೋರಿ ಅರ್ಜಿ
ಇದನ್ನೂ ಓದಿ: ಲೈಫ್ ಸೆಟ್ಲ್ ಮಾಡ್ತೀನಿ, ತೋಟದ ಮನೆಗೆ ಬಾ.. ಸೂರಜ್ ರೇವಣ್ಣ ವಿರುದ್ಧ ಸಂತ್ರಸ್ತನ ಆರೋಪಗಳೇನು?
/newsfirstlive-kannada/media/post_attachments/wp-content/uploads/2024/06/suraj2.jpg)
3. ಭವಾನಿ ರೇವಣ್ಣ ವಿರುದ್ಧ ಆರೋಪ
ಹೊಳೆನರಸೀಪುರ ಕೇಸ್​ನ ಸಂತ್ರಸ್ತೆಯ ಕಿಡ್ನ್ಯಾಪ್​ ಆರೋಪ
ಸದ್ಯ ಜಾಮೀನು ಸಿಕ್ಕಿದ್ದು, ಬಂಧನ ಭೀತಿಯಿಂದ ಪಾರಾಗಿದ್ದಾರೆ
4. ಸೂರಜ್​ ರೇವಣ್ಣ ಬಂಧನ
ಸೂರಜ್​ ವಿರುದ್ಧ ಪಕ್ಷದ ಕಾರ್ಯಕರ್ತನಿಂದಲೇ ಗಂಭೀರ ಆರೋಪ
ತೋಟದ ಮನೆಗೆ ಕರೆಸಿಕೊಂಡು ಅಸಹಜ ಲೈಂಗಿಕ ದೌರ್ಜನ್ಯ ಆರೋಪ
ಲೈಂಗಿಕ ದೌರ್ಜನ್ಯ ಆರೋಪದಡಿ ಎಂಎಲ್​ಸಿ ಸೂರಜ್ ರೇವಣ್ಣ ಬಂಧನ
ಒಟ್ಟಾರೆ ರೇವಣ್ಣ ಕುಟುಂಬಕ್ಕೆ ಶಾಕ್​ ಮೇಲೆ ಶಾಕ್ ಎದುರಾಗ್ತಲೇ ಇದೆ. ಒಬ್ಬರ ಮೇಲಂತೆ ಒಬ್ಬರು ಪೊಲೀಸ್​ ಠಾಣೆ ಮೆಟ್ಟಿಲೇರುತ್ತಿದ್ದಾರೆ. ಇದೀಗ ಸೂರಜ್​ ರೇವಣ್ಣ ಅರೆಸ್ಟ್​ ಆಗಿದ್ದು, ತನಿಖೆ ಎದುರಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us