ಈ 5 ಆಟಗಾರರ ಮೇಲೆ ಭಾರೀ ನಿರೀಕ್ಷೆ.. ಪುಟಿದೆದ್ರೆ ಭಾರತಕ್ಕೆ ವಿಶ್ವಕಪ್ ಗ್ಯಾರಂಟಿ..!

author-image
Ganesh
Updated On
ವಲ್ಡ್​ಕಪ್​ ಸೋತರು ಪರವಾಗಿಲ್ಲ ಟೀಂ ಇಂಡಿಯಾವನ್ನ ಬಿಡಬೇಡಿ.. ಪಾಕ್ ತಂಡಕ್ಕೆ​ ಮಾಜಿ ಕ್ಯಾಪ್ಟನ್​ ಸಲಹೆ!
Advertisment
  • ಕಳೆದ ವಿಶ್ವಕಪ್​ನಲ್ಲಿ ಇವರು ಸಿಕ್ಕಾಪಟ್ಟೆ ಹೈಲೈಟ್ಸ್
  • ಜೂನ್​​ನಿಂದ ಟಿ-20 ವಿಶ್ವಕಪ್ ಶುರುವಾಗಲಿದೆ
  • ದ್ರಾವಿಡ್ ನೇತೃತ್ವದಲ್ಲಿ ಭಾರತ ಚಾಂಪಿಯನ್​ ಆಗಲು ಪ್ಲಾನ್

T20 ವಿಶ್ವಕಪ್ 2024 ಟೂರ್ನಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಟೂರ್ನಿಯ ಮೂಲಕ ಮತ್ತೊಮ್ಮೆ ಟೀಂ ಇಂಡಿಯಾ ದೀರ್ಘಕಾಲದ ಐಸಿಸಿ ಟ್ರೋಫಿ ಬರವನ್ನು ಕೊನೆಗಾಣಿಸಲು ಬಯಸುತ್ತಿದೆ. ಟೀಂ ಇಂಡಿಯಾ ಈ ಐವರು ಆಟಗಾರರು ಮನಸ್ಸು ಮಾಡಿದ್ರೆ, ನಿಜವಾದ ಪರಿಶ್ರಮ ಹಾಕಿದ್ರೆ ಭಾರತಕ್ಕೆ ಈ ಬಾರಿ ಕಪ್ ಬರೋದು ಪಕ್ಕಾ ಆಗಲಿದೆ.

ವಿರಾಟ್ ಕೊಹ್ಲಿ

ಈ ವಿಶ್ವಕಪ್‌ನಲ್ಲಿ ಕೊಹ್ಲಿ ಟೀಮ್ ಇಂಡಿಯಾಗೆ ಪ್ರಮುಖ ಆಟಗಾರ ಎಂದು ಸಾಬೀತುಪಡಿಸಬಹುದು. 2022ರ ಟಿ20 ವಿಶ್ವಕಪ್‌ನಲ್ಲಿ ಕೊಹ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದರು. ಟೀಂ ಇಂಡಿಯಾ ಪರ ಕೊಹ್ಲಿ ಹಲವು ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದ್ದರು.

ಇದನ್ನೂ ಓದಿ:ಕುಂಕುಮ ಕುತೂಹಲ..! ವಿಡಿಯೋ ಬಿಡುಗಡೆ ಬೆನ್ನಲ್ಲೇ ಪ್ರಜ್ವಲ್ ರೇವಣ್ಣ ಬಗ್ಗೆ ಹೆಚ್ಚಿದ ಈ ಅನುಮಾನ..!

publive-image

ರೋಹಿತ್ ಶರ್ಮಾ

ನಾಯಕ ರೋಹಿತ್ ಶರ್ಮಾ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾಕ್ಕೆ ಬಹಳ ಮುಖ್ಯ. ಆರಂಭಿಕ ಬ್ಯಾಟಿಂಗ್ ಜವಾಬ್ದಾರಿಯನ್ನು ರೋಹಿತ್ ಶರ್ಮಾ ವಹಿಸಿಕೊಳ್ಳಲಿದ್ದಾರೆ. 2023ರಲ್ಲಿ ನಡೆದ ಏಕದಿನ ವಿಶ್ವಕಪ್‌ನಂತೆ ಟೀಂ ಇಂಡಿಯಾಕ್ಕೆ ರೋಹಿತ್ ಶರ್ಮಾ ಉತ್ತಮ ಆರಂಭ ನೀಡಿದರೆ ತಂಡಕ್ಕೆ ಹೆಚ್ಚು ಲಾಭದಾಯಕವಾಗಲಿದೆ.

ಜಸ್ಪ್ರೀತ್ ಬುಮ್ರಾ

2024ರ ಟಿ20 ವಿಶ್ವಕಪ್‌ನಲ್ಲಿ ಬುಮ್ರಾ ಟೀಂ ಇಂಡಿಯಾದ ಪ್ರಮುಖ ವೇಗದ ಬೌಲರ್ ಆಗಲಿದ್ದಾರೆ. ಎಲ್ಲರ ಕಣ್ಣುಗಳು ಬುಮ್ರಾ ಮೇಲೆಯೇ ಇರುತ್ತವೆ. ಬುಮ್ರಾ ಟೀಮ್ ಇಂಡಿಯಾ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಕೊಡುಗೆ ನೀಡಬಲ್ಲರು.

ಇದನ್ನೂ ಓದಿ:ಟೀಂ ಇಂಡಿಯಾ ಕೋಚ್​​ಗಾಗಿ ಹಗ್ಗಜಗ್ಗಾಟ.. ಶಾರೂಖ್ ಖಾನ್ vs ಜಯ್ ಶಾ..!

publive-image

ಸೂರ್ಯಕುಮಾರ್ ಯಾದವ್

ಟಿ20 ಇಂಟರ್‌ನ್ಯಾಶನಲ್‌ನ ನಂಬರ್ ಒನ್ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಕೆಲವೇ ಎಸೆತಗಳಲ್ಲಿ ಆಟದ ದಿಕ್ಕನ್ನು ಬದಲಾಯಿಸುವ ಸಾಮರ್ಥ್ಯ ಹೊಂದಿದ್ದಾರೆ. ಸೂರ್ಯ ಉತ್ತಮ ಫಾರ್ಮ್ ತೋರಿದರೆ ಟೀಂ ಇಂಡಿಯಾಗೆ ಸಾಕಷ್ಟು ಲಾಭವಾಗಲಿದೆ. 2022ರ ಟಿ20 ವಿಶ್ವಕಪ್‌ನಲ್ಲಿ ಸೂರ್ಯ 239 ರನ್ ಗಳಿಸಿದ್ದರು. ಅವರು ಮೂರನೇ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಆಗಿದ್ದರು.

ಕುಲದೀಪ್ ಯಾದವ್
ಕುಲದೀಪ್ ಯಾದವ್ ಸ್ಪಿನ್ ವಿಶ್ವಕಪ್‌ನಲ್ಲಿ ಭಾರತಕ್ಕೆ ತುಂಬಾ ಪ್ರಯೋಜನಕಾರಿ ಎಂದು ನಂಬಲಾಗಿದೆ. ಕುಲದೀಪ್ ಮುಖ್ಯ ಸ್ಪಿನ್ನರ್ ಆಗಿ ಆಡಲಿದ್ದಾರೆ. ಕುಲದೀಪ್ ಅವರ ಉತ್ತಮ ಫಾರ್ಮ್ ಟೀಮ್ ಇಂಡಿಯಾ ಟ್ರೋಫಿ ಗೆಲ್ಲಲು ಪ್ರಮುಖ ಕೊಡುಗೆ ನೀಡಬಹುದು ಎಂದು ನಿರೀಕ್ಷೆ ಮಾಡಲಾಗಿದೆ.

ಇದನ್ನೂ ಓದಿ:ಡಿವೋರ್ಸ್ ವದಂತಿ ಬೆನ್ನಲ್ಲೇ.. ವಿಶ್ವಕಪ್​​ಗೆ ವಿಮಾನ ಹತ್ತದ ಹಾರ್ದಿಕ್ ಪಾಂಡ್ಯ.. ಕೈಕೊಟ್ರಾ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment