/newsfirstlive-kannada/media/post_attachments/wp-content/uploads/2024/06/KOHLI-JAISWAL.jpg)
ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾದ ಅಸಲಿ ಆಟಕ್ಕೆ ವೇದಿಕೆ ಸಜ್ಜಾಗಿದೆ. ಇಂದಿನಿಂದ ಟೀಮ್ ಇಂಡಿಯಾದ ಸೂಪರ್-8ನ ಸೆನ್ಸೇಷನ್ ಮ್ಯಾಚ್ಗಳು ಆರಂಭವಾಗಲಿದೆ. ಸೋಲಿಲ್ಲದ ಸರದಾರ ಭಾರತ ತಂಡ, ಟಿ20 ವಿಶ್ವ ಕಿರೀಟಕ್ಕೆ ಮತ್ತಿಡಬೇಕಾದ್ರೆ ಈಗ ಬ್ಯಾಟರ್ಗಳು, ಸೂಪರ್ ಹಿಟ್ ಆಗಬೇಕಿದೆ. ಇಲ್ಲ ಅಂದ್ರೆ ಮತ್ತೊಮ್ಮೆ ಕಣ್ಣೀರು ತಪ್ಪಿದಿಲ್ಲ.
ಟಿ20 ವಿಶ್ವಕಪ್ನ ಲೀಗ್ ಸ್ಟೇಜ್ನಲ್ಲಾಡಿರೋ ಎಲ್ಲಾ ಪಂದ್ಯಗಳನ್ನ ಟೀಮ್ ಇಂಡಿಯಾ ಗೆದ್ದಿದೆ. ಒಂದೇ ಒಂದು ಪಂದ್ಯ ಮಳೆಯಿಂದ ರದ್ದಾಗಿದ್ದು ಬಿಟ್ರೆ, ಉಳಿದ ಮೂರು ಪಂದ್ಯಗಳಲ್ಲಿ ವಿಜಯ ಪತಾಕೆ ಹಾರಿಸಿ ಸೂಪರ್-8ಕ್ಕೆ ಗ್ರ್ಯಾಂಡ್ ಎಂಟ್ರಿ ನೀಡಿದೆ. ಲೀಗ್ಸ್ಟೇಜ್ನಲ್ಲಿ ಟೀಮ್ ಇಂಡಿಯಾ ಗೆದ್ರೂ, ಮೆನ್ ಇನ್ ಬ್ಲೂ ಪಡೆಯ ಬ್ಯಾಟ್ಸ್ಮನ್ಸ್ಗಳು ಸೋತಿದ್ದಾರೆ.
ಇದನ್ನೂ ಓದಿ:ಭದ್ರಾ ನದಿಯಲ್ಲಿ ದಾರುಣ ಘಟನೆ.. ತೆಪ್ಪ ಮುಳುಗಿ ಮೂವರು ಪ್ರವಾಸಿ ಯುವಕರು ಸಾವು
ಟೀಮ್ ಇಂಡಿಯಾ ಪರ 96 ರನ್ಗಳೇ ಅತ್ಯಧಿಕ..!
ಟೀಮ್ ಇಂಡಿಯಾ ಹೇಳಿ ಕೇಳಿ ವಿಶ್ವ ಕ್ರಿಕೆಟ್ನ ಅಧಿಪತಿ. ಅಪ್ರತಿಮ ಬ್ಯಾಟರ್ಗಳನ್ನೇ ಹೊಂದಿರುವ ಈ ತಂಡದಲ್ಲಿ, ಸಿಂಗಲ್ ಹ್ಯಾಂಡ್ನಲ್ಲೇ ಮ್ಯಾಚ್ ಗೆಲ್ಲಿಸಿಕೊಡೋ ವೀರಾಧೀವೀರರಿದ್ದಾರೆ. ದುರಾದೃಷ್ಟವೇನೆಂದ್ರೆ, ಇವರೆಲ್ಲಾ ಲೀಗ್ ಸ್ಟೇಜ್ನಲ್ಲೇ ಮಕಾಡೆ ಮಲಗಿದ್ದಾರೆ. ಆಡಿರೋ 3 ಪಂದ್ಯಗಳಲ್ಲಿ ರಿಷಭ್ ಪಂತ್, ಗಳಿಸಿರೋ 96 ರನ್ಗಳೇ ಭಾರತ ಪರ ಅತಿ ಹೆಚ್ಚು ರನ್. ಉಳಿದಂತೆ ವಿಶ್ವ ಸಾಮ್ರಾಟ ವಿರಾಟ್ ಕೊಹ್ಲಿ, ರೋಹಿತ್, ಸೂರ್ಯಕುಮಾರ್, ಹಾರ್ದಿಕ್ ಇವಱರೂ ಹತ್ತಿರ ಸುಳಿದೇ ಇಲ್ಲ.
ಇಂಟ್ರೆಸ್ಟಿಂಗ್ ಅಂದ್ರೆ ಅಮೆರಿಕನ್ ಪಿಚ್ನಲ್ಲಿ ಟೀಮ್ ಇಂಡಿಯಾ ಬ್ಯಾಟ್ಸ್ಮನ್ಗಳು ಬಿಟ್ಟು, ಉಳಿದ ದೇಶದ ಆಟಗಾರರು ಸ್ಕೋರ್ ಮಾಡಿದ್ದಾರೆ. ಕ್ರಿಕೆಟ್ ಶಿಶುವಾಗಿ ಟಿ20 ವಿಶ್ವಕಪ್ಗೆ ಕಾಲಿಟ್ಟ ಅಮೆರಿಕಾ ಪರ ಅರೋನ್ ಜೋನ್ಸ್, ಆ್ಯಂಡ್ರೀಸ್ ಗೌಸ್ 100 ರನ್ಗಳ ಗಡಿದಾಟಿದ್ದಾರೆ. ಅದು ಕೂಡ 3 ಪಂದ್ಯಗಳಿಂದಲೇ.. ಆದ್ರೆ, ಟೀಮ್ ಇಂಡಿಯಾ ಬ್ಯಾಟರ್ಗಳು ಮಾತ್ರ, ಇದಕ್ಕೆ ಭಿನ್ನವಾಗಿದ್ದಾರೆ. ಇದೇ ಈಗ ಟೀಮ್ ಇಂಡಿಯಾ ಚಿಂತೆಗೆ ಕಾರಣವಾಗಿದೆ.
ಇದನ್ನೂ ಓದಿ:ಸರ್ಕಾರಕ್ಕೆ ಬಿಗ್ ಶಾಕ್ ಕೊಟ್ಟ ಹೈಕೋರ್ಟ್.. ಮೀಸಲಾತಿಯನ್ನು ಶೇಕಡಾ 65ಕ್ಕೆ ಹೆಚ್ಚಿಸುವ ಆದೇಶ ರದ್ದು..!
ಕೆರಿಬಿಯನ್ ದ್ವೀಪರಾಷ್ಟದಲ್ಲಾದ್ರೂ ಮಾಡ್ತಾರಾ ಸ್ಕೋರ್?
ಅಮೆರಿಕ ಬಿಡಿ. ಇದೀಗ ಟೀಮ್ ಇಂಡಿಯಾದ ನ್ಯೂ ಜರ್ನಿ, ಕೆರಬಿಯನ್ ದ್ವೀಪರಾಷ್ಟ್ರದಲ್ಲಿ ಆರಂಭಗೊಳ್ಳಲಿದೆ. ಇಲ್ಲಾದ್ರೂ ಟೀಮ್ ಇಂಡಿಯಾ ಬ್ಯಾಟರ್ಗಳು ರನ್ ಗಳಿಸ್ತಾರಾ ಎಂಬ ಪ್ರಶ್ನೆ ಇದೆ. ಇಂಡಿಯನ್ ಕಂಡೀಷನ್ಸ್ ಹಾಗೂ ವಿಂಡೀಸ್ ಕಂಡೀಷನ್ಸ್ಗೂ ಸಾಮ್ಯತೆ ಇದೆ. ಹೀಗಾಗಿ ವೆಸ್ಟ್ ಇಂಡೀಸ್ ಕಂಡೀಷನ್ಸ್ನಲ್ಲಿ ಟೀಮ್ ಇಂಡಿಯಾ ಬ್ಯಾಟರ್ಸ್ ಮಿಂಚಲೇಬೇಕಿದೆ. ಈಗಾಗಲೇ ಟೂರ್ನಿಯಲ್ಲಿ ಟೀಮ್ ಇಂಡಿಯಾ ಬೌಲರ್ಸ್, ಮಿಂಚಿದ್ದಾರೆ. ಮ್ಯಾಚ್ ವಿನ್ನರ್ಗಳಾಗಿ ಮೆರೆದಾಡಿದ್ದಾರೆ. ಆದ್ರೀಗ ಮಹತ್ವದ ಘಟ್ಟದಲ್ಲಿ ಮೆನ್ ಇನ್ ಬ್ಲೂ ಪಡೆಯ ಬ್ಯಾಟರ್ಸ್, ಕೈ ಹಿಡಿಯಬೇಕಾಗಿದೆ. ಬೌಲರ್ಗಳ ಜೊತೆಗೆ ಬ್ಯಾಟ್ಸ್ಮನ್ಸ್ ರನ್ ಭರಾಟೆ ನಡೆಸಿದ್ರಷ್ಟೇ, ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಗೆಲುವು ಸುಲಭ. ಇಲ್ಲ ಕಷ್ಟಕರ ಆಗೋದ್ರಲ್ಲೇ ಡೌಟೇ ಇಲ್ಲ.
ವರ್ಲ್ಡ್ಕ್ಲಾಸ್ ಬ್ಯಾಟರ್ಸ್ನಿಂದ ಬರಬೇಕಿದೆ ರನ್
ಟಿ-20 ವಿಶ್ವಕಪ್ ಲೀಗ್ ಸ್ಟೇಜ್ನಲ್ಲಿ ರನ್ ಗಳಿಸಲು ವಿಫಲರಾಗಿರುವ ದಿಗ್ಗಜರು, ಸೂಪರ್-8ನ ಬಿಗ್ ಮ್ಯಾಚ್ಗಳಲ್ಲಿ ರನ್ ಗಳಿಸಬೇಕಿದೆ. ಪ್ರಮುಖವಾಗಿ ವಿಶ್ವ ಸಾಮ್ರಾಟ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಸೂರ್ಯಕುಮಾರ್ರಂತಹ ವರ್ಲ್ಡ್ಕ್ಲಾಸ್ ಬ್ಯಾಟರ್ಸ್, ಬ್ಯಾಟ್ನಿಂದ ರನ್ ಕಲೆ ಹಾಕಬೇಕಿದೆ. ಬಿಗ್ ಇನ್ನಿಂಗ್ಸ್ ಕಟ್ಟೋ ಮೂಲಕ ತಂಡವನ್ನ ಗೆಲುವಿನ ದಡ ಸೇರಿಸಬೇಕಿದೆ. ಮಾತ್ರವೇ ಎಂತಹ ಬಲಿಷ್ಠ ಎದುರಾಳಿಯನ್ನಾಗಲಿ ಬಗ್ಗಬಡಿಯಲು ಸಾಧ್ಯ.
ಇದನ್ನೂ ಓದಿ:IND vs AFG.. ಯಾರಿಗೆಲ್ಲಾ ಚಾನ್ಸ್.. ಯಾರಿಗೆಲ್ಲಾ ಕೊಕ್.. ಕೊಹ್ಲಿ ಸ್ಲಾಟ್ನಲ್ಲಿ ಸರ್ಪ್ರೈಸ್..!
ಮುಂದಿನ 5 ಪಂದ್ಯಗಳಲ್ಲೂ ಬ್ಯಾಟರ್ಗಳು, ಬೌಲರ್ಗಳು ಕನ್ಸಿಸ್ಟೆನ್ಸಿ ತೋರಬೇಕಿದೆ. ಬೌಲರ್ಗಳ ಜೊತೆ ಬ್ಯಾಟ್ಸ್ಮನ್ಗಳು ದರ್ಬಾರ್ ನಡೆಸಿದ್ರಷ್ಟೇ, ವಿಂಡೀಸ್ನಿಂದ ಟಿ20 ವಿಶ್ವಕಪ್ ಗೆದ್ದು ಟೀಮ್ ಇಂಡಿಯಾ ಭಾರತಕ್ಕೆ ವಾಪಸ್ ಆಗಲಿದೆ. ಒಂದು ಪಂದ್ಯ ಮಿಸ್ಸಾದ್ರೂ, ಟೀಮ್ ಇಂಡಿಯಾ ವಿಶ್ವ ಕಿರೀಟ ಗೆಲ್ಲೋ ಕನಸು ಕನಸಾಗಿಯೇ ಉಳಿಯಲಿದೆ.
ಇದನ್ನೂ ಓದಿ:ಮೂರು ವರ್ಷದ ಪುಟಾಣಿ ಕಂದನ ಕತ್ತು ಸೀಳಿ ಬರ್ಬರವಾಗಿ ಕೊಲೆಗೈದ ಚಿಕ್ಕಪ್ಪ..
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್