/newsfirstlive-kannada/media/media_files/2025/09/01/apple-hebbal-store-2025-09-01-18-31-29.jpg)
ಬೆಂಗಳೂರಿನಲ್ಲಿ ಆ್ಯಪಲ್ ಐಪೋನ್ ಕಂಪನಿಯು ದೇಶದ ತನ್ನ 3ನೇ ಮಳಿಗೆಯನ್ನು ಇವತ್ತು ಮಧ್ಯಾಹ್ನ 1 ಗಂಟೆಗೆ ಉದ್ಘಾಟಿಸಲಿದೆ. ಬೆಂಗಳೂರಿನ ಹೆಬ್ಬಾಳದಲ್ಲಿರುವ ಮಾಲ್ ಆಫ್ ಏಷ್ಯಾದಲ್ಲಿ ಆ್ಯಪಲ್ ಐಪೋನ್ ಕಂಪನಿಯ ಮಳಿಗೆ ಉದ್ಘಾಟನೆಯಾಗಲಿದೆ.
ಮಳಿಗೆಯಲ್ಲಿ ಆ್ಯಪಲ್ ಕಂಪನಿಯ ಐಪೋನ್, ಐಪ್ಯಾಡ್, ಐ ಮ್ಯಾಕ್ ಸೇರಿದಂತೆ ಆ್ಯಪಲ್ ಕಂಪನಿಯ ಎಲ್ಲ ಉತ್ಪನ್ನಗಳು ಲಭ್ಯವಿರಲಿವೆ. ಗ್ರಾಹಕರು ಇಲ್ಲೇ ಆ್ಯಪಲ್ ಐಪೋನ್ ಅನ್ನು ನೇರವಾಗಿ ಆ್ಯಪಲ್ ಕಂಪನಿಯಿಂದಲೇ ಖರೀದಿ ಮಾಡಬಹುದು.
ಇದನ್ನೂ ಓದಿ:BSNL ಬೆಸ್ಟ್ ರೀಚಾರ್ಜ್ ಪ್ಲಾನ್.. 147 ರೂಪಾಯಿಗೆ 30 ದಿನಗಳ ವ್ಯಾಲಿಡಿಟಿ..!
ದೇಶದಲ್ಲಿ ಈಗಾಗಲೇ ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಹಾಗೂ ದೆಹಲಿಯ ಸಾಕೇತ್ನಲ್ಲಿ ಆ್ಯಪಲ್ ಐಪೋನ್ ಮಳಿಗೆ ಆರಂಭವಾಗಿದೆ. ಈಗ ದೇಶದ ಮೂರನೇ ಮಳಿಗೆಯನ್ನು ಬೆಂಗಳೂರಿನ ಹೆಬ್ಬಾಳದ ಮಾಲ್ ಆಫ್ ಏಷ್ಯಾದಲ್ಲಿ ಆರಂಭಿಸುತ್ತಿದೆ. ಮಾಲ್ ಆಫ್ ಏಷ್ಯಾದಲ್ಲಿ ಆ್ಯಪಲ್ ಕಂಪನಿಯ ಎಲ್ಲ ಉತ್ಪನ್ನಗಳ ಅನುಭವವನ್ನು ಗ್ರಾಹಕರು ಪಡೆದುಕೊಳ್ಳಬಹುದು.
ಐಫೋನ್ 16 ಸರಣಿಯ ಫೋನ್ಗಳು, ಎಂ4 ಚಿಪ್ ಆಧರಿತ ಮ್ಯಾಕ್ ಬುಕ್ ಪ್ರೋ( ಪರ್ಸನಲ್ ಕಂಪ್ಯೂಟರ್) ಆ್ಯಪಲ್ ಟ್ಯಾಬ್ಲೆಟ್, 10ನೇ ಸರಣಿಯ ಆ್ಯಪಲ್ ವಾಚ್, ಆ್ಯಪಲ್ ಏರ್ ಪ್ಯಾಡ್, ಆ್ಯಪಲ್ ಏರ್ ಟ್ಯಾಗ್ ಹೊಸ ಮಳಿಗೆಗಳಲ್ಲಿ ಗ್ರಾಹಕರಿಗೆ ಖರೀದಿಗಾಗಿ ಸಿಗಲಿವೆ.
ಈ ಎಲ್ಲಾ ಉತ್ಪನ್ನಗಳನ್ನು ಮಾಲ್ ಆಫ್ ಏಷ್ಯಾದ ಮೊದಲ ಮಹಡಿಯ ಸ್ಟೋರ್ ನಲ್ಲಿ ಬಳಸಿ ನೋಡಿ, ನಂತರ ಖರೀದಿಸಬಹುದು. ಆನ್ ಲೈನ್ ಖರೀದಿಸಿದ ಉತ್ಪನ್ನಗಳನ್ನು ಈ ಹೊಸ ಮಳಿಗೆಯಿಂದ ಗ್ರಾಹಕರು ಪಡೆಯಬಹುದು.
ಇದನ್ನೂ ಓದಿ:ಕರ್ನಾಟಕದಲ್ಲಿ ಕಡಿಮೆ ಫೀಜು ಇರೋ ಸರ್ಕಾರಿ ಕಾಲೇಜುಗಳು ಎಲ್ಲೆಲ್ಲಿವೆ ಗೊತ್ತಾ?
ಹೆಬ್ಬಾಳದ ಮಾಲ್ ಆಫ್ ಏಷ್ಯಾದಲ್ಲಿ ಹೊಸ ಮಳಿಗೆ ಉದ್ಘಾಟಿಸುವ ಆ್ಯಪಲ್ ಕಂಪನಿ.
ಆ್ಯಪಲ್ ಕಂಪನಿಯ 70 ಸಿಬ್ಬಂದಿ ಗ್ರಾಹಕರಿಗೆ ಖರೀದಿಯ ವೇಳೆ ನೆರವು ನೀಡುವರು. ಆ್ಯಪಲ್ ಕಂಪನಿಯ ಉತ್ಪನ್ನಗಳ ವಿಶೇಷತೆ, ಫೀಚರ್ಗಳು ಏನೇನು ಎಂಬ ಬಗ್ಗೆ ಹೊಸ ಗ್ರಾಹಕರಿಗೂ ತಿಳಿಸಿಕೊಡುವರು. ಐಪೋನ್ ನಲ್ಲಿ ಉತ್ತಮ ಪೋಟೋ ತೆಗೆಯಬಹುದು, ಆ್ಯಪಲ್ ಇಂಟಲಿಜೆನ್ಸ್ ಅನ್ನು ಗ್ರಾಹಕರು ಹೇಗೆ ಬಳಕೆ ಮಾಡಿಕೊಳ್ಳಬಹುದು ಎಂಬ ಬಗ್ಗೆ ಮಳಿಗೆಯ ಸಿಬ್ಬಂದಿ ಗ್ರಾಹಕರಿಗೆ ತಿಳಿಸಿಕೊಡುವರು.
ಇದನ್ನೂ ಓದಿ:ಎಚ್ಚರ, ಎಚ್ಚರ! ಈಗ eSIM ಸಿಮ್ ಹಗರಣ ಜೋರು.. ಏನಿದು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ