Advertisment

ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಈ ಎರಡು ವಿಚಾರಕ್ಕೆ ಟೆನ್ಶನ್; ಸಿದ್ದು ಇಕ್ಕಟ್ಟಿಗೆ ಕಾರಣವೇನು..?

author-image
Ganesh
Updated On
ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಈ ಎರಡು ವಿಚಾರಕ್ಕೆ ಟೆನ್ಶನ್; ಸಿದ್ದು ಇಕ್ಕಟ್ಟಿಗೆ ಕಾರಣವೇನು..?
Advertisment
  • ಹೆಚ್.ಡಿ.ಕುಮಾರಸ್ವಾಮಿ ದುಬೈ ಪ್ರವಾಸ ಹೋಗಿದ್ದಾರೆ
  • ತಮ್ಮ ಪಕ್ಷದ ಶಾಸಕರ ಬಗ್ಗೆ ಮಾಹಿತಿ ಕಲೆ ಹಾಕಿದ ಸಿದ್ದು
  • ಡಿಕೆಶಿ ವಿಚಾರದಲ್ಲಿ ವಿಪಕ್ಷಗಳಿಂದ ಟೀಕಾ ಪ್ರಹಾರ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಾಲು ಸಾಲು ಟೆನ್ಷನ್ ಶುರುವಾಗಿದೆ ಅನ್ನೋ ಮಾತುಗಳು ರಾಜಕೀಯ ವಲಯದಲ್ಲಿ ಜೋರಾಗಿ ಕೇಳಿಬರ್ತಿದೆ. ಅಂದ್ಹಾಗೆ ಸಿದ್ದರಾಮಯ್ಯಗೆ ಈಗ ಶುರುವಾಗಿರೋದು ಟೆನ್ಷನ್ ಸರ್ಕಾರದ ಕೆಲಸದ್ದಲ್ಲ. ಸರ್ಕಾರದ ಬಗ್ಗೆಯೇ ಮುಖ್ಯಮಂತ್ರಿಗಳಿಗೆ ಡಬಲ್ ಟೆನ್ಷನ್ ಇದೆ ಎಂದು ಹೇಳಲಾಗುತ್ತಿದೆ.

Advertisment

ಸಿದ್ದರಾಮಯ್ಯಗೆ ಡಬಲ್ ಟೆನ್ಷನ್

  • ಟೆನ್ಷನ್-1: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ದುಬೈ ಪ್ರವಾಸ ಹೋಗಿದ್ದಾರೆ. ಸದ್ಯ ಕುಮಾರಸ್ವಾಮಿ ಬೆನ್ನಲ್ಲೇ ಕಾಂಗ್ರೆಸ್​ನ ನಾಯಕರು ಯಾರಾದ್ರೂ ಪ್ರವಾಸ ಹೋಗಿದ್ದಾರಾ?. ದುಬೈಗೆ ಯಾರಾದ್ರೂ ಹೋಗಿದ್ದಾರಾ ಅಂತ ಸಿದ್ದರಾಮಯ್ಯ ನಿಗಾ ವಹಿಸಿದ್ದಾರೆ. ಮಾತ್ರವಲ್ಲ ತಮ್ಮ ಪಕ್ಷದ ಶಾಸಕರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ ಎನ್ನಲಾಗಿದೆ.
  • ಟೆನ್ಷನ್-2: ಮತ್ತೊಂದೆಡೆ ಡಿಸಿಎಂ ಡಿ.ಕೆ. ಶಿವಕುಮಾರ್ ಕಾರಣಕ್ಕಾಗಿ ಟೆನ್ಷನ್ ಇದ್ಯಂತೆ. ಡಿ.ಕೆ.ಶಿವಕುಮಾರ್ ವಿಚಾರದಲ್ಲಿ ವಿಪಕ್ಷಗಳಿಂದ ಟೀಕಾ ಪ್ರಹಾರ ಜೋರಾಗಿದೆ. ಜೊತೆಗೆ ಸ್ವಪಕ್ಷದಲ್ಲೇ ಹಲವರಿಗೆ ಅಸಮಾಧಾನ ಶುರುವಾಗಿದೆ. ಮತ್ತೊಂದು ಕಡೆ ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್ ಸರ್ಕಾರದಲ್ಲಿ ಪೈಪೋಟಿ ಜೋರಾಗಿದೆ.

ರಾಜ್ಯ ರಾಜಕೀಯ ವಲಯದಲ್ಲಿ ಆಪರೇಷನ್ ಕಮಲದ ಆತಂಕ ಎದುರಾಗಿದೆ. ಸ್ವತಃ ಸಿದ್ದರಾಮಯ್ಯ ಅವರೇ ಇತ್ತೀಚೆಗೆ ಬಾಯಿಬಿಟ್ಟಿದ್ದು, ಸರ್ಕಾರವನ್ನು ಅಸ್ತಿರಗೊಳಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಆದರೆ ಅದ್ಯಾವುದೂ ಬಿಜೆಪಿಯಿಂದ ಸಾಧ್ಯವಾಗುವುದಿಲ್ಲ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment