/newsfirstlive-kannada/media/post_attachments/wp-content/uploads/2023/09/Sharukh-Khan.bmp)
ನಟ ಶಾರುಖ್ ಖಾನ್ ಬಾಲಿವುಡ್ ಬಾದ್ ಶಾ. ಇತ್ತೀಚೆಗೆ ರಿಲೀಸ್ ಆದ ಶಾರುಖ್ ಹೊಸ ಸಿನಿಮಾ ಜವಾನ್ ಸಖತ್ ಹಿಟ್ ಆಗಿದೆ. ಸುಮಾರು 800 ಕೋಟಿಗೂ ಹೆಚ್ಚು ರೂ. ಕಲೆಕ್ಷನ್ ಮಾಡಿದೆ. ತಮಿಳು ಸ್ಟಾರ್ ಡೈರೆಕ್ಟರ್ ಅಟ್ಲೀ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಸಿನಿಮಾವನ್ನು ಶಾರುಖ್ ಒಡೆತನದ ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಸಂಸ್ಥೆ ನಿರ್ಮಾಣ ಮಾಡಿದೆ. ಶಾರುಖ್ ಜತೆ ಲೇಡಿ ಸೂಪರ್ ಸ್ಟಾರ್ ನಯನತಾರಾ, ದೀಪಿಕಾ ಪಡುಕೋಣೆ, ವಿಜಯ್ ಸೇತುಪತಿ ಬಣ್ಣ ಹಚ್ಚಿದ್ದಾರೆ.
ಜವಾನ್ಗೆ ಮುನ್ನ ರಿಲೀಸ್ ಆಗಿದ್ದ ಶಾರುಖ್ ಪಠಾಣ್ ಸಿನಿಮಾ ಸಾಕಷ್ಟು ವಿವಾದಗಳಲ್ಲಿ ಸಿಲುಕಿತ್ತು. ಆರೇಂಜ್ ಕಲರ್ ಬಿಕಿನಿ ಧರಿಸಿ ದೀಪಿಕಾ ಬೇಷರಂ ರಂಗ್ ಸಾಂಗ್ನಲ್ಲಿ ಕಾಣಿಸಿಕೊಂಡಿದ್ದರು. ಹಾಗಾಗಿ ಇಡೀ ದೇಶಾದ್ಯಂತ ಹಿಂದೂಪರ ಸಂಘಟನೆಗಳು ಬೀದಿಗಿಳಿದು ಪ್ರತಿಭಟಿಸಿದ್ದರು. ಕೇಸರಿ ಬಣ್ಣಕ್ಕೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿದ್ದರು.
#jawan#JawanReviewpic.twitter.com/LSKk9Vf8w4
— RUDRA? (@invincibl39) September 7, 2023
ಈಗ ಪಠಾಣ್ ನಂತರ ರಿಲೀಸ್ ಆದ ಜವಾನ್ ಸಿನಿಮಾಗೂ ಅದೇ ರೀತಿಯಲ್ಲಿ ಮತ್ತೊಂದು ಸಮಸ್ಯೆ ಎದುರಾಗಿದೆ. ಈ ಬಾರಿ ಎದುರಾಗಿದ್ದು ಯಾವುದೇ ರಾಜಕೀಯ ಸಮಸ್ಯೆ ಅಲ್ಲ, ಬದಲಿಗೆ ಸಿನಿಮಾದ ಕೆಲವು ದೃಶ್ಯಗಳು ಬೇರೆ ಸಿನಿಮಾಗಳಿಂದ ಕದ್ದಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಟ್ವಿಟರ್ (X) ಖಾತೆಯಲ್ಲಿ ನೆಟ್ಟಿಗರು ಕದ್ದಿದ್ದಾರೆ ಎನ್ನಲಾದ ದೃಶ್ಯಗಳನ್ನು ಪೊಸ್ಟ್ ಮಾಡಿ ಒರಿಜಿನಲ್ ಸೀನ್ಸ್ ಯಾವುದು ಎಂದು ಬಿಚ್ಚಿಟ್ಟಿದ್ದಾರೆ.
Can anyone please confirm whether #Jawan copied scene from #Apocalypto ? pic.twitter.com/dWFDTplkWU
— Entertainment Buzz (@Entertain_Buzz_)
Can anyone please confirm whether #Jawan copied scene from #Apocalypto ? pic.twitter.com/dWFDTplkWU
— ENTERTAINMENT BUZZ (@Entertain_Buzz_) September 8, 2023
Even the money heist was copied from #Jawanpic.twitter.com/cO6SPIIii0
Even the money heist was copied from #Jawanpic.twitter.com/cO6SPIIii0
— Sansa (@OhSansa02) September 12, 2023
ಮನಿ ಹೀಸ್ಟ್, ಶಿವಾಜಿ ದಿ ಬಾಸ್, ಎಸ್ಆರ್ಕೆ, ಅಪೋಕಾಲಿಪ್ಟೋ, ಬಾಹುಬಲಿ 2 ಹೀಗೆ ಹಲವು ಸಿನಿಮಾಗಳಿಂದ ಕದ್ದಿದ್ದಾರೆ ಎನ್ನುವ ಆರೋಪ ಜವಾನ್ ಚಿತ್ರತಂಡದ ವಿರುದ್ಧ ಕೇಳಿ ಬಂದಿದೆ. ಹೀಗಾಗಿ ನೆಟ್ಟಿಗರು ಜವಾನ್ ಸಿನಿಮಾದ ವಿರುದ್ಧ ರೊಚ್ಚಿಗೆದ್ದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ