Advertisment

ಹವಾಮಾನ ಇಲಾಖೆ ಎಚ್ಚರಿಕೆ.. ಕರ್ನಾಟಕಕ್ಕೆ ಮತ್ತೆ ಕಾಡಲಿದೆ ಮಳೆ ಕಂಟಕ ಹುಷಾರ್..!

author-image
Veena Gangani
Updated On
ಬೆಂಗಳೂರಿನ ಹಲವೆಡೆ ಮಳೆರಾಯನ ಆರ್ಭಟ: ದ್ವಿಚಕ್ರ ವಾಹನ ಸವಾರರಿಗೆ ಇದೆಂಥಾ ಕಾಟ; ಎಲ್ಲೆಲ್ಲಿ ಏನಾಗಿದೆ ಗೊತ್ತಾ?
Advertisment
  • ಸಿಲಿಕಾನ್​ ಸಿಟಿಯಲ್ಲಿ ಮೋಡ ಕವಿದ ವಾತಾವರಣ ಇರಲಿದೆ
  • ಬೆಳಗಾವಿ, ಶಿವಮೊಗ್ಗ, ಚಿಕ್ಕಮಗಳೂರು ಸೇರಿ ಎಲ್ಲೆಲ್ಲಿ ಮಳೆ ಸಾಧ್ಯತೆ?
  • ಮೀನುಗಾರರು ಎಚ್ಚರಿಕೆಯಿಂದಿರುವಂತೆ ಸೂಚನೆ ಕೊಟ್ಟಿದ್ದು ಏಕೆ?

ಬೆಂಗಳೂರು: ಇಂದು ಮತ್ತು ನಾಳೆ ರಾಜ್ಯದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈಗಾಗಲೇ ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ನೀಡಿದೆ. ಜೊತೆಗೆ ಬೆಳಗಾವಿ, ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಗೆ ಯೆಲ್ಲೋ ಅಲರ್ಟ್ ಘೋಷಿಸಿದೆ.

Advertisment

ಇದನ್ನೂ ಓದಿ: ಹುಡುಗಿಯರಿಗೆ ಈ ಕೆಟ್ಟ ಅಭ್ಯಾಸವಿದ್ರೆ ಲಕ್ಷ್ಮೀ ಕೋಪಿಸಿಕೊಳ್ತಾಳೆ.. ನಿಮ್ಮ ಕೈಯಲ್ಲಿ ದುಡ್ಡು ನಿಲ್ಲಲ್ಲ..!

ಕರಾವಳಿ ಭಾಗದಲ್ಲಿ ಗಂಟೆಗೆ 35-55 ಕಿ.ಮೀ ವೇಗದಲ್ಲಿ ಗಾಳಿ ಬೀಸೋ ಸಾಧ್ಯತೆ ಇದ್ದು, ಮೀನುಗಾರರು ಎಚ್ಚರಿಕೆಯಿಂದಿರುವಂತೆ ಸೂಚನೆ ನೀಡಲಾಗಿದೆ. ಅಲ್ಲದೇ ಇಂದು ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದೆ.

publive-image

ನಗರದ ಕೆಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆಯಿಂದ ಮಾಹಿತಿ ಕೊಟ್ಟಿದೆ. ಹೀಗಾಗಿ ಸಿಲಿಕಾನ್​ ಸಿಟಿ ಜನರು ವೀಕೆಂಡ್ ಅಂತ ಚಿಲ್​ ಮಾಡಲೆಂದು ಆಚೆ ಹೋಗುವ ಮೊದಲು ಛತ್ರಿ, ರೈನ್ ಕೋರ್ಟ್ ಇನ್ನಿತರ ವಸ್ತುಗಳನ್ನು ತೆಗೆದುಕೊಂಡು ಹೋಗಿ. ಇಲ್ಲವಾದರೆ ಮಳೆ ಬರುವ ಮುನ್ನ ಮನೆಗೆ ಸೇರಿದರೆ ಉತ್ತಮ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment