newsfirstkannada.com

ಕದನಕ್ಕೂ ಮುನ್ನವೇ ಪಂಜಾಬ್​ಗೆ ಢವಢವ.. ಆರ್​​ಸಿಬಿಗೆ ಕಂಟಕವಾದ್ರೆ ಈ ಆಟಗಾರ ಮಾತ್ರ..!

Share :

Published May 9, 2024 at 2:36pm

    ಇವತ್ತು ಬಲಿಷ್ಠ ಆರ್​ಸಿಬಿಗೆ ಪಂಜಾಬ್​ ಸವಾಲು

    ಪಂಜಾಬ್​ ಶೇರ್ಸ್​ V/S ಕಿಂಗ್ ಕೊಹ್ಲಿ ದಂಗಲ್​​​​​

    ತವರಿನಲ್ಲಿ ಪಂಜಾಬ್​ಗೆ ‘ವಿರಾಟರೂಪ’ ಫಿಕ್ಸ್​​​..!

ಆರ್​ಸಿಬಿ ವರ್ಸಸ್​​​​ ಪಂಜಾಬ್​​​ ಕಿಂಗ್ಸ್​ ಹೈವೋಲ್ಟೇಜ್ ಕದನಕ್ಕೆ ಕ್ಷಣಗಣನೆ ಶುರುವಾಗಿದೆ. ತವರಿನಂಗಳದಲ್ಲಿ ಪಂಜಾಬ್​​​​​​​​​ ರೆಡ್​​​​​​​​ ಆರ್ಮಿ ಸೊಲ್ಲಡಗಿಸಲು ಇನ್ನಿಲ್ಲದ ಸ್ಟ್ರಾಟಜಿ ರೂಪಿಸ್ತಿದೆ. ಅವರ ತಂತ್ರಗಳನ್ನ ಠುಸ್ ಪಟಾಕಿ ಮಾಡಲು ರಣಬೇಟೆಗಾರ ಕಿಂಗ್ ಕೊಹ್ಲಿ ಸಜ್ಜಾಗಿದ್ದಾರೆ. ವಿರಾಟ್​​ರ ಪ್ರಚಂಡ ಫಾರ್ಮ್​ ಪಂಜಾಬ್​​ ಬಾಯ್ಸ್​​ಗೆ ನಡುಕ ಹುಟ್ಟಿಸಿದೆ.

ಪಂಜಾಬ್​ ಶೇರ್ಸ್​ vs ಕಿಂಗ್ ಕೊಹ್ಲಿ ದಂಗಲ್​​​
ಆರ್​ಸಿಬಿ ವರ್ಸಸ್​ ಪಂಜಾಬ್ ಕಿಂಗ್ಸ್​​​. ಐಪಿಎಲ್​​ನ ಎರಡು ಪವರ್​​ಫುಲ್​ ಟೀಮ್ಸ್​​. ಐಪಿಎಲ್​ ಗೆದ್ದಿಲ್ಲ ಅನ್ನೋದು ಬಿಟ್ರೆ, ಫ್ಯಾನ್​ಬೇಸ್​​​​, ಪಾಪ್ಯುಲಾರಿಟಿಯಲ್ಲಿ ಚಾಂಪಿಯನ್​ ತಂಡಗಳಿಗೆ ಸೆಡ್ಡು ಹೊಡೆದಿವೆ. ಉಭಯ ಟೀಮ್ಸ್​​​ 17ನೇ ಐಪಿಎಲ್​​ನಲ್ಲಿ ಎರಡನೇ ಬಾರಿ ಮುಖಾಮುಖಿಯಾಗ್ತಿವೆ. ಮೊದಲ ಬಾರಿ ಆರ್​ಸಿಬಿಗೆ ಸೋಲುಣಿಸಿದ್ದ ಪಂಜಾಬ್​​​​ಗೆ ಈ ಬಾರಿ ಮುಖಭಂಗ ತಪ್ಪಿದ್ದಲ್ಲ. ಕದನಕ್ಕೆ ಧುಮುಕುವ ಮುನ್ನವೇ ಪಂಜಾಬ್​​​ಗೆ​ ಪುಕಪುಕ ಶುರುವಾಗಿದೆ. ಬಿಕಾಜ್​​ ಆಫ್​ ಕಿಂಗ್ ಕೊಹ್ಲಿ. ಇಡೀ ಪಂಜಾಬ್ ಟೀಮ್ ರಣಬೇಟೆಗಾರನ ಭಯದಲ್ಲಿ ಕಣಕ್ಕಿಳಿಯುತ್ತಿದೆ.

ಇದನ್ನೂ ಓದಿ:Rain Alert: ಪೂರ್ವ ಮುಂಗಾರು ಮಳೆ ಬಗ್ಗೆ ಎಚ್ಚರಿಕೆ.. ಇಂದು ಎಲ್ಲೆಲ್ಲಿ ಮಳೆ ಬರುತ್ತೆ..?

ಹೋಮ್​ಗ್ರೌಂಡ್​ನಲ್ಲಿ ಆಡುತ್ತಿರುವ ಪಂಜಾಬ್​​ಗೆ ಸೆಂಚುರಿ ಸಾಮ್ರಾಟ ಭೀತಿ ಕಾಡ್ತಿದೆ. ಯಾಕಂದ್ರೆ ಪ್ರಸಕ್ತ ಐಪಿಎಲ್​​ನಲ್ಲಿ ಕಿಂಗ್ ಕೊಹ್ಲಿ ಪ್ರಚಂಡ ಫಾರ್ಮ್​ನಲ್ಲಿದ್ದಾರೆ. 11 ಇನ್ನಿಂಗ್ಸ್​​​ಗಳಿಂದ 542 ರನ್​ ಚಚ್ಚಿ ಟಾಪ್​ ಸ್ಕೋರರ್ ಅನ್ನಿಸಿಕೊಂಡಿದ್ದಾರೆ. ಪಂಜಾಬ್​​​​​ ವಿರುದ್ಧ ಕೊಹ್ಲಿ ಸೆನ್ಷೆಷನಲ್ ರೆಕಾಡ್ಸ್​ ಹೊಂದಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್​ ಹಾಗೂ ಸಿಎಸ್​ಕೆ ಬಿಟ್ರೆ ಪಂಜಾಬ್​ ಹುಲಿಗಳ ವಿರುದ್ಧ ಹೆಚ್ಚು ರನ್ ಹೊಡೆದಿದ್ದಾರೆ.

ಪಂಜಾಬ್​ ಕಿಂಗ್ಸ್ ವಿರುದ್ಧ ಕೊಹ್ಲಿ
ವಿರಾಟ್ ಕೊಹ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಒಟ್ಟು 31 ಇನ್ನಿಂಗ್ಸ್​ಗಳಲ್ಲಿ ಆಡಿದ್ದಾರೆ. 129.73 ಸ್ಟ್ರೈಕ್​ನಲ್ಲಿ ಬ್ಯಾಟ್ ಬೀಸಿರೋ ರನ್ ಮಷೀನ್​ 938 ರನ್​ ಕೊಳ್ಳೆ ಹೊಡೆದಿದ್ದಾರೆ. ಇದ್ರಲ್ಲಿ 4 ಅರ್ಧಶತಕ ಹಾಗೂ 1 ಅಮೋಘ ಶತಕ ಮೂಡಿ ಬಂದಿದೆ.

ಇದನ್ನೂ ಓದಿ:KL ರಾಹುಲ್​ಗೆ ಭಾರೀ ಅವಮಾನ; ಸಂಜೀವ್ ಗೋಯೆಂಕಾ ಕೋಪಕ್ಕೆ ಕಾರಣ ಇಲ್ಲಿದೆ..!

ಕಿಂಗ್ ಕೊಹ್ಲಿಗೆ ಎಡಗೈ ಬೌಲರ್ಸ್​ ಚಾಲೆಂಜ್​​
ಕಿಂಗ್ ಕೊಹ್ಲಿ ಸದ್ಯ ಸಾಲಿಡ್​​ ಟಚ್​​​ನಲ್ಲಿದ್ದಾರೆ ನಿಜ. ಆದರೂ ಒಂದು ರನ್ ಮಷಿನ್​ ಇಂದು ಪಂಜಾಬ್ ಬೌಲರ್ಸ್​ ವಿರುದ್ಧ ಎಚ್ಚರಿಕೆಯಿಂದ ಆಡಬೇಕಿದೆ. ಎಸ್ಪೆಷಲಿ ಎಡಗೈ ಬೌಲರ್ಸ್​. ಬಲಗೈ ಬೌಲರ್​ಗಳನ್ನ ಮನಬಂದಂತೆ ದಂಡಿಸುವ ರಣಚತುರ ಲೆಫ್ಟ್​ ಆರ್ಮ್​ ಬೌಲರ್ಸ್​ ಎದುರು ಮಾತ್ರ ಪರದಾಡ್ತಾರೆ.

ಎಡಗೈ ಬೌಲರ್ಸ್​ ವಿರುದ್ಧ ಕೊಹ್ಲಿ..!
ಪಂಜಾಬ್​ ಕಿಂಗ್ಸ್​​ ಎಡಗೈ ಸ್ಪಿನ್ನರ್ ಹರ್ಪಿತ್ ಬ್ರಾರ್ ವಿರುದ್ಧ ಕಿಂಗ್ ಕೊಹ್ಲಿ 2 ಬಾರಿ ವಿಕೆಟ್ ಒಪ್ಪಿಸಿದ್ದಾರೆ. ಇನ್ನು ಎಡಗೈ ವೇಗಿ ಸ್ಯಾಮ್ ಕರಣ್​​ ಎದುರು ಕೂಡ ಎರಡು ಬಾರಿ ವಿಕೆಟ್ ಕೈಚೆಲ್ಲಿದ್ದಾರೆ.

ಕೊಹ್ಲಿಗೆ ಕಂಟಕ ಆಗ್ತಾರಾ RCB ಮಾಜಿ ಪ್ಲೇಯರ್ ಹರ್ಷಲ್​​..?
ಬರೀ ಎಡಗೈ ಬೌಲರ್​ಗಳು ಅಷ್ಟೇ ಅಲ್ಲ.. ಆರ್​ಸಿಬಿ ಮಾಜಿ ಬೌಲರ್​ ಹರ್ಷಲ್ ಪಟೇಲ್​ ವಿರುದ್ಧ ಎಚ್ಚರಿಕೆಯಿಂದ ಬ್ಯಾಟ್ ಬೀಸಬೇಕಿದೆ. ಯಾಕಂದ್ರೆ ಹರ್ಷಲ್​​ ಸೀಸನ್​​ 17ನೇ ಐಪಿಎಲ್​ನಲ್ಲಿ 17 ವಿಕೆಟ್ ಕಬಳಿಸಿ ಬ್ಯಾಟ್ಸ್​​ಮನ್​ಗಳಿಗೆ ದುಸ್ವಪ್ನರಾಗಿ ಕಾಡ್ತಿದ್ದಾರೆ. ಪ್ರಸಂಟ್ ಫಾರ್ಮ್​ ಜೊತೆ ಹರ್ಷಲ್ ಹಾಗೂ ಕೊಹ್ಲಿ ಆರ್​ಸಿಬಿ ತಂಡದಲ್ಲಿದ್ದಾಗ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದಾರೆ. ಕಿಂಗ್ ಕೊಹ್ಲಿಯ ಸ್ಟ್ರೆಂಥ್​ & ವೀಕ್ನೆಸ್​​​ ಚೆನ್ನಾಗಿ ಗೊತ್ತಿದೆ. ಹೀಗಾಗಿ ಇಂದು ಹರ್ಷಲ್ ಪಟೇಲ್​​, ವಿರಾಟ್​​ಗೆ​ ಥ್ರೆಟ್ ಆಗಬಲ್ಲರು.

ಇದನ್ನೂ ಓದಿ:810 ಕೆಜಿ ಚಿನ್ನ..! ಒಟ್ಟು 666 ಕೋಟಿ ಮೌಲ್ಯದ ಚಿನ್ನಾಭರಣ ಸಾಗಿಸುತ್ತಿದ್ದ ಟ್ರಕ್ ಪಲ್ಟಿ.. ಮುಂದೇನಾಯ್ತು..?

ಆರ್​ಸಿಬಿ ಮುಂದಿನ 3 ಪಂದ್ಯಗಳು ಡು ಆರ್ ಡೈ. ಈ ಮಹತ್ವದ ಪಂದ್ಯಗಳಲ್ಲಿ ಕಿಂಗ್ ಕೊಹ್ಲಿ ತಂಡಕ್ಕೆ ಆಪತ್ಬಾಂಧವ. ಧರ್ಮಶಾಲಾ ದಂಗಲ್​ನಲ್ಲಿ ವಿರಾಟ್ ಸಿಡಿದೆದ್ರೆ ಪಂಜಾಬ್ ಹುಲಿಗಳು ತವರಿನಲ್ಲಿ ಬಿಲ ಸೇರೋದು ಗ್ಯಾರಂಟಿ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕದನಕ್ಕೂ ಮುನ್ನವೇ ಪಂಜಾಬ್​ಗೆ ಢವಢವ.. ಆರ್​​ಸಿಬಿಗೆ ಕಂಟಕವಾದ್ರೆ ಈ ಆಟಗಾರ ಮಾತ್ರ..!

https://newsfirstlive.com/wp-content/uploads/2024/05/harshal-patil.jpg

Load More