Advertisment

ಜೆಡಿಎಸ್​ ಜೊತೆಗೆ ಮೈತ್ರಿ ಬೇಕೋ..? ಬೇಡವೋ..? ಕುತೂಹಲ ಮೂಡಿಸಿದ ಬಿಜೆಪಿಯ ಇವತ್ತಿನ ಸಭೆ..!

author-image
Ganesh
Updated On
ಜೆಡಿಎಸ್​ ಜೊತೆಗೆ ಮೈತ್ರಿ ಬೇಕೋ..? ಬೇಡವೋ..? ಕುತೂಹಲ ಮೂಡಿಸಿದ ಬಿಜೆಪಿಯ ಇವತ್ತಿನ ಸಭೆ..!
Advertisment
  • ರಾಜ್ಯದಲ್ಲಿ ಚುನಾವಣೆ ಮುಕ್ತಾಯ, ಅಭ್ಯರ್ಥಿಗಳ ಸಭೆ ಕರೆದ ಬಿಜೆಪಿ
  • ಜೆಡಿಎಸ್‌ ಜೊತೆ ಮೈತ್ರಿ ಹೇಗಿರಬೇಕು ಎಂಬುದರ ಬಗ್ಗೆಯೂ ಚರ್ಚೆ
  • ಪರಿಷತ್ ಚುನಾವಣೆಗೆ ಮೈತ್ರಿ ಆಗಿ ಯಾವ್ಯಾವ ಕ್ಷೇತ್ರಗಳಲ್ಲಿ ಸ್ಪರ್ಧೆ

2024ರ ಲೋಕಸಭಾ ಕ್ಷೇತ್ರದ ಚುನಾವಣೆ ರಾಜ್ಯದಲ್ಲಿ ಎರಡು ಹಂತಗಳಲ್ಲಿ ಮುಕ್ತಾಯವಾಗಿದೆ. ಈ ಹೊತ್ತಲ್ಲೇ ದೋಸ್ತಿಗಳ ಸುತ್ತ ಪೆನ್‌ಡ್ರೈವ್ ಪೆಡಂಭೂತ ಸುತ್ತಾಡುತ್ತಿದೆ. ಬೆನ್ನಲ್ಲೇ ಇಂದು ಬಿಜೆಪಿ ಕಚೇರಿಯಲ್ಲಿ ಮಹತ್ವದ ಸಭೆಯನ್ನು‌ ಕರೆಯಲಾಗಿದೆ. ಜೆಡಿಎಸ್ ಜೊತೆ ಮೈತ್ರಿ ಬೇಕೋ? ಬೇಡ್ವೋ ಎಂಬ ಚರ್ಚೆ ಕೂಡಾ ನಡೆಯಲಿದೆ.

Advertisment

ರಾಜ್ಯದಲ್ಲಿ ಚುನಾವಣೆ ಮುಕ್ತಾಯ, ಅಭ್ಯರ್ಥಿಗಳ ಸಭೆ ಕರೆದ ಬಿಜೆಪಿ
ರಾಜ್ಯದಲ್ಲಿ ಲೋಕಸಭಾ ಚುನಾವಣೆ ಎರಡು ಹಂತಗಳಲ್ಲಿ ಮುಕ್ತಾಯವಾಗಿದೆ.. ಇದರ ಬೆನ್ನಲ್ಲೇ ಇಂದು ಬಿಜೆಪಿ ಕಚೇರಿಯಲ್ಲಿ ಮಹತ್ವದ ಸಭೆಯನ್ನು‌ ಕರೆಯಲಾಗಿದೆ. ಬೆಂಗಳೂರಿನ ಬಿಜೆಪಿಯ ಪ್ರಧಾನ ಕಚೇರಿ ಜಗನ್ನಾಥ ಭವನದಲ್ಲಿ ಬಿಜೆಪಿ ಲೋಕಸಭಾ ಅಭ್ಯರ್ಥಿಗಳ ಜೊತೆಗೆ ಸಭೆ ನಿಗದಿಪಡಿಸಲಾಗಿದೆ. ಬೆಳಗ್ಗೆ 11 ಘಂಟೆಗೆ ಆರಂಭವಾಗುವ ಸಭೆಯಲ್ಲಿ ಬಿಜೆಪಿ ಚಿಹ್ನೆಯಡಿಯಲ್ಲಿ ಕಣಕ್ಕಿಳಿದಿದ್ದ 25 ಅಭ್ಯರ್ಥಿಗಳು ಹಾಜರಾಗಲಿದ್ದಾರೆ. ಈ ಸಭೆಯಲ್ಲಿ ಮುಂದೆ ರಾಜ್ಯದಲ್ಲಿ ಜೆಡಿಎಸ್ ಜೊತೆ ಮೈತ್ರಿ ಹೇಗೆ ಮುಂದುವರೆಸಬೇಕೆಂದು ಚರ್ಚೆಯಾಗಲಿದೆ.

ಇದನ್ನೂ ಓದಿ:ವಿರಾಟ್ ಕೊಹ್ಲಿ​ ಔಟಾ? ನಾಟ್​ ಔಟಾ? ಭಾರೀ ಅನುಮಾನ.. ವಿವಾದದಲ್ಲಿ ಐಪಿಎಲ್​..!

publive-image

ಸಭೆಯಲ್ಲಿ ಮೊದಲಿಗೆ ಪ್ರತಿಯೊಂದು ಕ್ಷೇತ್ರದ ಬಗೆಗಿನ ಚುನಾವಣೆಯ ಸಮಸ್ತ ವಿವರವನ್ನು ರಾಜ್ಯದ ಬಿಜೆಪಿ ನಾಯಕರು ಕಲೆ ಹಾಕಲಿದ್ದಾರೆ. ಮೊದಲ ಹಂತದಲ್ಲಿ ಚುನಾವಣೆ ನಡೆದ 14 ಕ್ಷೇತ್ರಗಳ ಪೈಕಿ ಎಷ್ಟು‌ ಸ್ಥಾನದಲ್ಲಿ ಬಿಜೆಪಿ ಗೆಲ್ಲಲಿದೆ ಎಂಬ ಅಂಕಿ ಅಂಶಗಳನ್ನು ಮಾಹಿತಿಯ ರೂಪದಲ್ಲಿ ಕಲೆ ಹಾಕಲು ವೇದಿಕೆ ಸಜ್ಜಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಬಿಜೆಪಿಯ ಹಿರಿಯ ಮುಖಂಡ ಬಿ.ಎಸ್. ಯಡಿಯೂರಪ್ಪ ಮಾಹಿತಿ ಕಲೆ ಹಾಕಲಿದ್ದು, ಅದನ್ನು ನೇರವಾಗಿ ಹೈಕಮಾಂಡ್ ನಾಯಕರಿಗೆ ರವಾನೆ ಮಾಡಲಿದ್ದಾರೆ. ಮೊದಲ ಹಂತದ 14 ಕ್ಷೇತ್ರಗಳ ಪೈಕಿ, ಯಾವುದರಲ್ಲಿ ಬಿಜೆಪಿಗೆ ಸಿಹಿ, ಯಾವುದರಲ್ಲಿ ಕಹಿ ಎಂಬ ಸ್ಪಷ್ಟ ಚಿತ್ರಣ ದೊರೆಯಲಿದೆ.

Advertisment

ಮೈತ್ರಿ ಬಗ್ಗೆಯೂ ಸಭೆಯಲ್ಲಿ ಮಾತುಕತೆ
ಇತ್ತ ಇಂದಿನ ಸಭೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮುಂದುವರೆಸಬೇಕೇ ಬೇಡವೇ ಎಂಬ ಚರ್ಚೆಗಳು ಕೂಡ ನಡೆಯಲಿದೆ. ಸದ್ಯದಲ್ಲೇ ಎದುರಾಗಲಿರುವ ವಿಧಾನ ಪರಿಷತ್ ಚುನಾವಣೆಗೆ ಮೈತ್ರಿ ಆಗಿ ಯಾವ್ಯಾವ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಬೇಕು ಎಂಬ ಮಾತುಕತೆಯಾಗಲಿದೆ. ಇನ್ನೂ ಯಾವ್ಯಾವ ಕ್ಷೇತ್ರದಲ್ಲಿ ಜೆಡಿಎಸ್​ ಸ್ಫರ್ಧೆ, ಯಾವ್ಯಾವ ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧೆ ಎಂಬ ಚಿತ್ರಣ ಇಂದಿನ ಸಭೆಯ ಬಳಿಕ ಸಿಗಲಿದೆ. ಇದರ ಜೊತೆಗೆ ಹೈಕಮಾಂಡ್ ನಾಯಕರ ಸಮಕ್ಷಮದಲ್ಲಿ ಆಗಿರುವ ಮೈತ್ರಿ ಬೇಡ ಎಂದು ಹೇಳಲು ರಾಜ್ಯ ನಾಯಕರಿಗೆ ಸಾಧ್ಯವಿಲ್ಲ. ಹೀಗಾಗಿ, ಕ್ಷೇತ್ರಗಳಲ್ಲಿ ಮತದಾನದ ಪ್ರಮಾಣ, ಅಂಕಿ ಅಂಶಗಳು, ಗೆಲುವಿನ ವಿಶ್ವಾಸದ ಸವಿಸ್ತಾರವಾದ ಮಾತುಕತೆಗಳು ನಡೆಯುವ ಸಾಧ್ಯತೆ ಇದೆ.

ಇದನ್ನೂ ಓದಿ:ಆರ್​ಸಿಬಿ ಪ್ಲೇ ಆಫ್ ಕನಸು! ಅಂದುಕೊಂಡಷ್ಟು ಸುಲಭ ಅಲ್ಲವೇ ಅಲ್ಲ.. ಹೀಗಾದರೆ ಮಾತ್ರ ಸಾಧ್ಯ..!

ಒಟ್ಟಾರೆ, ಚುನಾವಣೆಯ ಬಳಿಕ ಬಿಜೆಪಿ ಮೊದಲು ಅಭ್ಯರ್ಥಿಗಳ ಸಭೆ ನಡೆಸಲಿದ್ದು, ಬಳಿಕ ಮೈತ್ರಿ ಮಾತುಕತೆ ಆರಂಭಿಸಲಿದೆ ಎನ್ನಲಾಗಿದೆ. ಆದ್ರೀಗ, ಸಭೆ ಬಳಿಕ ಜೆಡಿಎಸ್ ಜೊತೆಗಿನ ಮೈತ್ರಿ ಬಗ್ಗೆ ಕೇಸರಿ ಸೇನಾನಿಗಳು ಸಮ್ಮತಿ ನೀಡ್ತಾರಾ? ಅಥವಾ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರೋ ದಳವನ್ನ ನಡುನೀರಲ್ಲಿ ಕೈಬಿಡ್ತಾರಾ? ಅನ್ನೋದೇ ಸದ್ಯದ ಕೌತುಕ.

Advertisment

ಇದನ್ನೂ ಓದಿ:Heat wave: ರಣ ಬಿಸಿಲಿಗೆ ಯಾರಾದರೂ ಪ್ರಜ್ಞೆತಪ್ಪಿ ಬಿದ್ದರೆ ಯಾವತ್ತೂ ಈ ತಪ್ಪು ಮಾಡಲೇಬೇಡಿ..!

ವಿಶೇಷ ವರದಿ: ಪಿ.ಮಧುಸೂದನ್, ಪೊಲಿಟಿಕಲ್ ಬ್ಯುರೋ, ನ್ಯೂಸ್‌ ಫಸ್ಟ್‌

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment