/newsfirstlive-kannada/media/media_files/2025/08/08/supreme-court-judges-2025-08-08-15-44-31.jpg)
ಅಪರೂಪದ ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್ ತನ್ನ ಆದೇಶವನ್ನು ತಾನೇ ಹಿಂತೆಗೆದುಕೊಂಡಿದೆ. ಅಲಹಾಬಾದ್ ಹೈಕೋರ್ಟ್ ಜಡ್ಜ್ ಪ್ರಶಾಂತ್ ಕುಮಾರ್ ಅವರಿಗೆ ಕ್ರಿಮಿನಲ್ ಪ್ರಕರಣಗಳ ವಿಚಾರಣೆ ನಡೆಸದಂತೆ ನಿರ್ಬಂಧ ವಿಧಿಸಿ ಆದೇಶ ನೀಡಿತ್ತು.
ಈ ಆದೇಶದ ಬಗ್ಗೆ ವಿವಿಧ ಹೈಕೋರ್ಟ್ಗಳ ಜಡ್ಜ್ಗಳು ನೋವು ವ್ಯಕ್ತಪಡಿಸಿ, ಅಲಹಾಬಾದ್ ಹೈಕೋರ್ಟ್ ಸಿಜೆಗೆ ಪತ್ರ ಬರೆದಿದ್ದರು. ಬಳಿಕ ಸುಪ್ರೀಂ ಕೋರ್ಟ್ ಸಿಜೆ ಬಿ.ಆರ್.ಗವಾಯಿ ಅವರು ಮಧ್ಯಪ್ರವೇಶಿಸಿ ಆಗಸ್ಟ್ 4 ರಂದು ಸುಪ್ರೀಂ ಕೋರ್ಟ್ನ ಜಸ್ಟೀಸ್ ಜೆ.ಬಿ.ಪರ್ದೀವಾಲಾ ಮತ್ತು ಜಸ್ಟೀಸ್ ಆರ್.ಮಹದೇವನ್ ಪೀಠ ನೀಡಿದ್ದ ಆದೇಶವನ್ನು ಹಿಂತೆಗೆದುಕೊಳ್ಳುವಂತೆ ಸುಪ್ರೀಂ ಕೋರ್ಟ್ನ ಇಬ್ಬರು ನ್ಯಾಯಮೂರ್ತಿಗಳಿಗೆ ಮನವಿ ಮಾಡಿದ್ದರು.
ಹೀಗಾಗಿ ಇಂದು ಸುಪ್ರೀಂ ಕೋರ್ಟ್ನ ಜಸ್ಟೀಸ್ ಜೆ.ಬಿ.ಪರ್ದಿವಾಲಾ ಮತ್ತು ಜಸ್ಟೀಸ್ ಆರ್.ಮಹದೇವನ್ ಪೀಠವು ಆಗಸ್ಟ್ 4 ರಂದು ತನ್ನ ನೀಡಿದ್ದ ಆದೇಶವನ್ನು ಹಿಂತೆಗೆದುಕೊಂಡಿದೆ. ನ್ಯಾಯಾಂಗದ ಘನತೆಯನ್ನು ಎತ್ತಿ ಹಿಡಿಯಲು ನಾವು ಆದೇಶ ನೀಡಿದ್ದೇವು ಎಂದು ಸುಪ್ರೀಂ ಕೋರ್ಟ್ ಜಸ್ಟೀಸ್ ಜೆ.ಬಿ.ಪರ್ದಿವಾಲಾ ಪೀಠ ಹೇಳಿದೆ.
ಹೈಕೋರ್ಟ್ನ ನ್ಯಾಯಮೂರ್ತಿಗಳ ಕೆಲಸದ ಹಂಚಿಕೆಯ ವಿಷಯದಲ್ಲಿ ಹೈಕೋರ್ಟ್ ಸಿಜೆಯೇ ಮಾಸ್ಟರ್ ಆಫ್ ರೋಸ್ಟರ್ ಎಂಬುವುದನ್ನು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ. ಹೀಗಾಗಿ ಅಲಹಾಬಾದ್ ಹೈಕೋರ್ಟ್ನ ಜಡ್ಜ್ ಪ್ರಶಾಂತ್ ಕುಮಾರ್‌ಗೆ ಕೆಲಸದ ಹಂಚಿಕೆಯ ವಿಷಯವನ್ನು ಅಲಹಾಬಾದ್ ಹೈಕೋರ್ಟ್ ಸಿಜೆಗೆ ಬಿಟ್ಟಿದೆ.
ಸುಪ್ರೀಂ ಕೋರ್ಟ್ ಸಿಜೆ ಮನವಿ ಮಾಡಿಕೊಂಡ ಹಿನ್ನಲೆಯಲ್ಲಿ ನಾವು ಆಗಸ್ಟ್ 4ರ ಆದೇಶದ ಪ್ಯಾರಾ 25 ಮತ್ತು 26 ಅನ್ನು ಡೀಲೀಟ್ ಮಾಡುತ್ತಿದ್ದೇವೆ. ಈ ವಿಷಯದ ಬಗ್ಗೆ ತೀರ್ಮಾನ ಕೈಗೊಳ್ಳುವುದನ್ನು ಅಲಹಾಬಾದ್ ಹೈಕೋರ್ಟ್ ಸಿಜೆಗೆ ಬಿಟ್ಟಿದ್ದೇವೆ. ಹೈಕೋರ್ಟ್ ಸಿಜೆ ಅವರು ಮಾಸ್ಟರ್ ಆಫ್ ರೋಸ್ಟರ್ ಎಂಬುದನ್ನು ನಾವು ಸಂಪೂರ್ಣವಾಗಿ ಒಪ್ಪಿದ್ದೇವೆ. ನಮ್ಮ ನಿರ್ದೇಶನವು ಖಂಡಿತವಾಗಿಯೂ ಹೈಕೋರ್ಟ್ ಸಿಜೆ ಅವರ ಅಧಿಕಾರದ ಆಡಳಿತಾತ್ಮಕ ತೀರ್ಮಾನಗಳ ಮಧ್ಯಪ್ರವೇಶ ಅಲ್ಲ. ಯಾವಾಗ ಕಾನೂನು, ನಿಯಮಗಳಿಗೆ ತೊಂದರೆಯಾಗುತ್ತೋ ಆಗ ಸುಪ್ರೀಂ ಕೋರ್ಟ್ ಸರಿಪಡಿಸುವಂಥ ಕ್ರಮಗಳನ್ನು ತೆಗೆದುಕೊಳ್ಳಲೇಬೇಕಾಗುತ್ತೆ ಎಂದು ಜಸ್ಟೀಸ್ ಜೆ.ಬಿ.ಪರ್ದಿವಾಲಾ ಪೀಠ ತನ್ನ ಆದೇಶದಲ್ಲಿ ಸ್ಪಷ್ಟವಾಗಿ ಹೇಳಿದೆ.
ಆಗಸ್ಟ್ 4ರ ಸುಪ್ರೀಂಕೋರ್ಟ್ ಆದೇಶದಲ್ಲಿ ಅಲಹಾಬಾದ್ ಹೈಕೋರ್ಟ್ ನ ಜಡ್ಜ್ ಪ್ರಶಾಂತ್ ಕುಮಾರ್ ಅವರಿಗೆ ಕ್ರಿಮಿನಲ್ ಕೇಸ್ ವಿಚಾರಣೆ ನಡೆಸದಂತೆ ನಿರ್ಬಂಧ ವಿಧಿಸಲಾಗಿತ್ತು. ಜಡ್ಜ್ ಪ್ರಶಾಂತ್ ಕುಮಾರ್ ಅವರು, ಸಿವಿಲ್ ವಿವಾದವನ್ನು ಕ್ರಿಮಿನಲ್ ಪ್ರಕರಣ ಎಂದು ಪರಿಗಣಿಸಿ, ಸಮನ್ಸ್ ಎತ್ತಿ ಹಿಡಿದಿದ್ದರು. ಈ ದೋಷಪೂರಿತ ಆದೇಶ ನೀಡಿದ್ದಕ್ಕಾಗಿ ಹೈಕೋರ್ಟ್ ಜಡ್ಜ್ ಪ್ರಶಾಂತ್ ಕುಮಾರ್ ಅವರಿಗೆ ಕ್ರಿಮಿನಲ್ ಕೇಸ್ ವಿಚಾರಣೆ ನಡೆಸದಂತೆ ಸುಪ್ರೀಂ ಕೋರ್ಟ್ ನಿರ್ಬಂಧ ವಿಧಿಸಿತ್ತು.
ಇದನ್ನೂ ಓದಿ: RCB ಯಶ್ ದಯಾಳ್ ಪ್ರಕರಣದಲ್ಲಿ ಹೈಕೋರ್ಟ್ ಮಹತ್ವದ ನಿರ್ಧಾರ.. ಬೌಲರ್ಗೆ ಢವಢವ!
ಅಲಹಾಬಾದ್ ಹೈಕೋರ್ಟ್ ಜಡ್ಜ್ ಪ್ರಶಾಂತ್ ಕುಮಾರ್ ಮತ್ತು ಹೈಕೋರ್ಟ್ ಸಿಜೆ ಅರುಣ್ ಬನ್ಸಾಲಿ ಫೋಟೊ
ಈ ನಿರ್ಬಂಧ ವಿಧಿಸಿದ ಬಳಿಕ ಅಲಹಾಬಾದ್ ಹೈಕೋರ್ಟ್ ಜಡ್ಜ್ಗಳು ಹೈಕೋರ್ಟ್ ಸಿಜೆ ಅರುಣ್ ಬನ್ಸಾಲಿ ಅವರಿಗೆ ಫುಲ್ ಕೋರ್ಟ್ ಸಭೆ ನಡೆಸುವಂತೆ ಒತ್ತಾಯಿಸಿದ್ದರು. ಆಗಸ್ಟ್ 4ರ ಸುಪ್ರೀಂ ಕೋರ್ಟ್ ಆದೇಶಕ್ಕೆ ನೋವು ವ್ಯಕ್ತಪಡಿಸಿ ಹೈಕೋರ್ಟ್ ಜಡ್ಜ್ ಅರೀಂದಮ್ ಸಿನ್ಹಾ ಬರೆದ ಪತ್ರಕ್ಕೆ ಏಳು ಮಂದಿ ನ್ಯಾಯಮೂರ್ತಿಗಳು ಸಹಿ ಹಾಕಿದ್ದರು. ಇದನ್ನು ಅಲಹಾಬಾದ್ ಹೈಕೋರ್ಟ್ ಸಿಜೆ ಅರುಣ್ ಬನ್ಸಾಲಿ ಅವರು ಸುಪ್ರೀಂ ಕೋರ್ಟ್ ಸಿಜೆ ಬಿ.ಆರ್.ಗವಾಯಿ ಅವರ ಗಮನಕ್ಕೆ ತಂದಿದ್ದರು.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣನಿಗೆ ಬಿಗ್ ಶಾಕ್.. ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್, ಜೀವನಪರ್ಯಂತ ಜೈಲುಶಿಕ್ಷೆ ಪ್ರಕಟ
ಬಳಿಕ ಸಿಜೆಐ ಬಿ.ಆರ್.ಗವಾಯಿ ಅವರು ಆಗಸ್ಟ್ 4 ರಂದು ಆದೇಶ ನೀಡಿದ್ದ ಜಸ್ಟೀಸ್ ಜೆ.ಬಿ.ಪರ್ದಿವಾಲಾ ಮತ್ತು ಜಸ್ಟೀಸ್ ಆರ್.ಮಹದೇವನ್ ಅವರಿಗೆ ಪತ್ರ ಬರೆದು ಆಗಸ್ಟ್ 4 ರ ಆದೇಶವನ್ನು ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿದ್ದರು. ಹೀಗಾಗಿ ಜಸ್ಟೀಸ್ ಜೆ.ಬಿ.ಪರ್ದಿವಾಲಾ ಮತ್ತು ಜಸ್ಟೀಸ್ ಆರ್. ಮಹದೇವನ್ ಪೀಠವು ಆಗಸ್ಟ್ 4ರ ಆದೇಶದ ಪ್ಯಾರಾ 25 ಮತ್ತು 26 ಅನ್ನು ಡಿಲೀಟ್ ಮಾಡಿ, ತನ್ನ ಆದೇಶವನ್ನು ಹಿಂತೆಗೆದುಕೊಂಡಿದೆ. ಜಡ್ಜ್ ಪ್ರಶಾಂತ್ ಕುಮಾರ್‌ಗೆ ಯಾವ ಜವಾಬ್ದಾರಿ ನೀಡಬೇಕು ಎನ್ನುವುದನ್ನು ಹೈಕೋರ್ಟ್ ಸಿಜೆ ವಿವೇಚನೆಗೆ ಬಿಟ್ಟಿದೆ.
ಆಗಸ್ಟ್ 4ರ ಆದೇಶದಲ್ಲಿ ಸುಪ್ರೀಂ ಕೋರ್ಟ್, ಅಲಹಾಬಾದ್ ಹೈಕೋರ್ಟ್ ಜಡ್ಜ್ ಪ್ರಶಾಂತ್ ಕುಮಾರ್, ಅವರು ಕ್ರಿಮಿನಲ್ ಕೇಸ್ ಗಳನ್ನು ಇನ್ನೆಂದೂ ವಿಚಾರಣೆ ನಡೆಸಬಾರದು. ಹಿರಿಯ ನ್ಯಾಯಮೂರ್ತಿಯ ಜೊತೆ ವಿಭಾಗೀಯ ಪೀಠದಲ್ಲಿ ತಮ್ಮ ನಿವೃತ್ತಿಯವರೆಗೂ ಕಾರ್ಯನಿರ್ವಹಿಸಬೇಕೆಂದು ಸುಪ್ರೀಂ ಕೋರ್ಟ್ ಆದೇಶಿಸಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ