/newsfirstlive-kannada/media/media_files/2025/09/05/chandra-grhana03-2025-09-05-14-10-08.jpg)
ಗ್ರಹಣವನ್ನ ನಂಬುವಂತರಿಗೆ, ಜ್ಯೋತಿಷ್ಯ ಶಾಸ್ತ್ರದ ಮೇಲೆ ನಂಬಿಕೆ ಇಟ್ಟವರಿಗೆ ಗ್ರಹಣದ ಉಳಿತು ಕೆಡುಕಿನ ಮೇಲೂ ನಂಬಿಕೆ ಇರುತ್ತೆ. ಅಷ್ಟಕ್ಕೂ ಈ ಬಾರಿ ರಕ್ತಸಿಕ್ತ ಚಂದ್ರ ದೃಷ್ಟಿ ಯಾರ ಮೇಲಿರುತ್ತೆ? ಯಾರಿಗೆ ಲಾಭ ತರ್ತಾನೆ? ಜನರಿಗೆ ಇರೋ ಪರಿಹಾರ ಮಾರ್ಗ ಏನು? ಆ ಬಗ್ಗೆ ಜ್ಯೋತಿಷಿಗಳು ಹೇಳಿದ್ದನ್ನ ಈ ಲೇಖನದಲ್ಲಿ ವಿವರಿಸಿದ್ದೇವೆ.
ಗ್ರಹಣಕ್ಕೆ ಸಂಬಂಧ ಪಟ್ಟಂತೆ ವಿಜ್ಞಾನಕ್ಕೂ? ಜ್ಯೋತಿಷ್ಯ ಶಾಸ್ತ್ರಕ್ಕೂ? ವಿಭಿನ್ನತೆ ಇರ್ಬಹುದು. ಅದೊಂದು ಪ್ರಕೃತಿ ನಿಯಮ ಅಂತ ವಿಜ್ಞಾನ ಹೇಳ್ತಿದ್ರೆ, ಇಲ್ಲಾ ಅದಕ್ಕೊಂದು ಸಮುದ್ರಮಂಥನದ ಕಥೆಯೂ ಇದೆ ಅಂತ ಜ್ಯೋತಿಷ್ಯ ಶಾಸ್ತ್ರ ಹೇಳುತ್ತೆ. ಏನೇ ಆಗಲಿ, ಗ್ರಹಣ ಕಾಲದಲ್ಲಿ ವಾತಾವರಣ ಬದಲಾಗುತ್ತೆ. ಕೆಲವು ಅನಾಹುತಗಳು ಸಂಭವಿಸ್ತಾವೆ ಅನ್ನೋದು ಸತ್ಯ. ಹೀಗಾಗಿಯೇ ಅಂತ ಸಂದರ್ಭದಲ್ಲಿ ಎಚ್ಚರಿಕೆಯಿಂದ ಇರ್ಬೇಕಾಗುತ್ತೆ. ಕೆಲವು ನಿಯಮಗಳನ್ನ ಪಾಲನೆ ಮಾಡ್ಬೇಕಾಗುತ್ತೆ. ನಾವ್ ಈಗಾಗಲೇ ಗ್ರಹಣಕ್ಕೂ ಮುನ್ನ ಹೇಗಿರ್ಬೇಕು ಅನ್ನೋದನ್ನ ಹೇಳಿದ್ದೇವೆ. ಹಾಗೇ ಗ್ರಹಣದ ನಂತರ ಹೇಗಿರಬೇಕು ಅನ್ನೋದನ್ನ ಹೇಳ್ತೀವಿ ನೋಡಿ.
ಗ್ರಹಣದ ನಂತರ ಮನೆ ಶುದ್ಧಿ ಯಾಕೆ ಮಾಡಬೇಕು?
ದೇವಸ್ಥಾನದಲ್ಲಿ ಅಭಿಷೇಕ ಮಾಡೋದು ಯಾಕಾಗಿ?
ಗ್ರಹಣಕಾಲ ಒಳ್ಳೆಯದೋ? ಕೆಟ್ಟದ್ದೋ? ಅನ್ನೋದು ಅವರವರ ದೃಷ್ಟಿಕೋನಕ್ಕೆ ಬಿಟ್ಟಿರೋ ವಿಚಾರ. ಜ್ಯೋತಿಷ್ಯ ಶಾಸ್ತ್ರವನ್ನ ನಾವು ಹೇಗೆ ಅರ್ಥ ಮಾಡಿಕೊಳ್ಳುತ್ತೇವೆ ಅನ್ನೋದ್ರ ಮೇಲೆ ಅದು ಡಿಫೆಂಡ್ ಆಗಿರುತ್ತೆ. ಆದ್ರೆ, ಗ್ರಹಣ ಕಾಲದಲ್ಲಿ ಏನ್ ಮಾಡ್ಬೇಕು? ಏನ್ ಮಾಡಬಾರದು? ಅನ್ನೋ ಗೊಂದಲ ಖಂಡಿತವಾಗಿಯೂ ಎದುರಾಗುತ್ತೆ. ಹಾಗೇ ಗ್ರಹಣ ನಂತರ ನಾವು ಯಾವ ರೀತಿಯಲ್ಲಿ ಇರಬೇಕಾಗುತ್ತೆ ಅನ್ನೋದನ್ನ ತಿಳಿದುಕೊಳ್ಳಬೇಕು. ಯಾಕಂದ್ರೆ, ಮನೆಯನ್ನ ಶುದ್ಧ ಮಾಡಬೇಕಾಗುತ್ತಾ? ದೇವರ ಕೋಣೆಯನ್ನ ಶುದ್ಧಿ ಮಾಡ್ಬೇಕಾಗುತ್ತೆ.
ಸಾಮಾನ್ಯವಾಗಿ ಗ್ರಹಣ ಕಾಲದಲ್ಲಿ ದೇವಸ್ಥಾನದಲ್ಲಿ ಬಾಗಿಲು ತೆರೆಯುವುದು ಕಡಿಮೆ. ಒಂದು ವೇಳೆ ತೆರೆದ್ರೂ ಪೂಜೆಗಳು ನಡೆಯೋದು ವಿರಳ. ಇನ್ನು ಗ್ರಹಣ ಕಾಲ ಮುಗಿದ್ಮೇಲೆ ದೇವಸ್ಥಾನದಲ್ಲಿ ಅಭಿಷೇಕ ಮಾಡಲಾಗುತ್ತೆ. ಅಲ್ಲಿಯೂ ಶುದ್ಧಿ ಮಾಡೋ ಕೆಲಸ ಆಗುತ್ತೆ.
ವರ್ಷಾಂತ್ಯದ ಖಗ್ರಾಸ ಚಂದ್ರಗ್ರಹಣ.. ಯಾರಿಗೆ ಡೇಂಜರ್?
ರಕ್ತಬಣ್ಣವಾಗೋ ಚಂದ್ರ ಯಾರಿಗೆ ಲಾಭ ತರ್ತಾನೆ?
ಗ್ರಹಣಗಳು ಎಲ್ಲರಿಗೂ ಕೆಡಕು ಉಂಟು ಮಾಡೋದಿಲ್ಲ. ಹಾಗೇ ಎಲ್ಲರಿಗೂ ಲಾಭ ತಂದುಕೊಡಲ್ಲ. ಅದೇನಿದ್ರೂ ಗ್ರಹಣ ಯಾವ ರಾಶಿ, ನಕ್ಷತ್ರದಲ್ಲಿ ನಡೀತಾ ಇದೆ ಅನ್ನೋದ್ರ ಮೇಲೆ ಡಿಫೆಂಡ್ ಆಗುತ್ತೆ. ಬಟ್, ಜ್ಯೋತಿಷ್ಯ ಶಾಸ್ತ್ರವನ್ನ ಹೊರತು ಪಡಿಸಿ ನೋಡಿದಾಗ ಅಂತದ್ದೇನಿಲ್ಲ ಅನ್ನೋ ಉತ್ತರಗಳು ಕೇಳಿಬರ್ತಾವೆ. ಆದ್ರೆ, ಜ್ಯೋತಿಷ್ಯವನ್ನ ನಂಬುವರು ತಮ್ಮ ರಾಶಿಗೆ ಏನಾದ್ರೂ ಕೆಡುಕು ಇದೆಯಾ? ಅದಕ್ಕೆ ಏನಾದ್ರೂ ಪರಿಹಾರ ಇದೆ? ಅನ್ನೋದನ್ನ ವಿಚಾರಿಸ್ತಾರೆ. ಅದನ್ನ ನಾವು ಹೇಳೋದಕ್ಕಿಂತ ಧರ್ಮಶಾಸ್ತ್ರರು, ಜ್ಯೋತಿಷ್ಯ ಪಂಡಿತರು ಹೇಳ್ತಾರೆ.
ಗ್ರಹಣದಿಂದ ಲಾಭವಾಗುತ್ತೆ ಅಂದ್ರೆ ಯಾರೂ ತಲೆ ಕೆಡಿಸಿಕೊಳ್ಳಲ್ಲ. ಆದ್ರೆ, ಆಗಲಿ ಅಂತ ಸಂತೋಷ ಪಡ್ತಾರೆ. ಆದ್ರೆ, ಅಪ್ಪಿ ತಪ್ಪಿ ಏನಾದ್ರೂ ಕೆಡುಕು ಇದೆ ಅನ್ನೋದು ಗೊತ್ತಾದ್ರೆ ಭಯ ಬೀಳ್ತಾರೆ. ಜ್ಯೋತಿಷಿಗಳ ಹತ್ತಿರ ಓಡೋಡಿ ಹೋಗ್ತಾರೆ.
ಗ್ರಹಣ ಸಂಕಷ್ಟಕ್ಕೆ ಪರಿಹಾರದ ಮಾರ್ಗ ಏನು?
ಪ್ರಕೃತಿ ವಿಕೋಪಕ್ಕೆ ಗ್ರಹಣ ಕಾರಣ ಆಗುತ್ತಾ?
ಜ್ಯೋತಿಷ್ಯ ಶಾಸ್ತ್ರದಲ್ಲಿ ಸಮಸ್ಯೆಗಳ ಉಲ್ಲೇಖವೂ ಇರುತ್ತೆ... ಹಾಗೇ ಪರಿಹಾರದ ಮಾರ್ಗವೂ ಇರುತ್ತೆ. ಹೀಗಾಗಿ ಗ್ರಹಣ ಕಾಲದಲ್ಲಿ ಯಾವ್ ಯಾವ್ ರಾಶಿಯವರಿಗೆ? ಯಾವ ಯಾವ ನಕ್ಷತ್ರದವರಿಗೆ ಕೆಡುಕು ಇದೆಯೋ ಅವರಿಗೆ ಪರಿಹಾರದ ಮಾರ್ಗಗಳು ಇವೆ. ಸಾಮಾನ್ಯವಾಗಿ ಪರಿಹಾರ ಏನು ಅನ್ನೋದನ್ನ ಜ್ಯೋತಿಷಿಗಳು ಹೇಳಿದ್ದಾರೆ. ಧರ್ಮಶಾಸ್ತ್ರಜ್ಞರು, ಪಂಡಿತರು ಹೇಳುವ ಪ್ರಕಾರ, ಗ್ರಹಣದ ವೇಳೆ ದೇವರ ನಾಮ ಸ್ಮರಣೆ ಮಾಡಬೇಕು. ದೇವರಿಗೆ ಅಭಿಷೇಕ ಮಾಡಬೇಕು, ಜನರಿಗೆ ದಾನ ಧರ್ಮ ಮಾಡಬೇಕು. ಹಸುಗಳಿಗೆ ದಾನ ನೀಡಬೇಕು. ಗ್ರಹಣದ ವೇಳೆ ಧಾನ್ಯಗಳನ್ನು ತೆಗೆದಿಟ್ಟು, ಮರು ದಿನ ಹಸುಗಳಿಗೆ ನೀಡಬೇಕು. ಹರಳು ಎಣ್ಣೆಯಲ್ಲಿ ಮುಖ ನೋಡಿಕೊಂಡು ಮಾರನೇ ದಿನ ದೇವರಿಗೆ ಅರ್ಪಿಸಬೇಕು.
ಇನ್ನೂ ಗ್ರಹಣದ ಸಂದರ್ಭದಲ್ಲಿ ದೇವರ ನಾಮ ಸ್ಮರಣೆ, ಸ್ತೋತ್ರ ಪಠಣೆ, ಜಪ ಮಾಡಿದರೇ, ಒಳ್ಳೆಯದಾಗುತ್ತೆ.
ಗ್ರಹಣದ ಮಾರನೇ ದಿನ ದೇವಸ್ಥಾನಕ್ಕೆ ಹೋಗಿ ದೇವರಿಗೆ ಅಭಿಷೇಕ ಮಾಡಿಸಬೇಕು ಎಂದು ಜ್ಯೋತಿಷ್ಯ ವಿದ್ವಾನ್ ಕಬಿಯಾಡಿ ಜಯರಾಮ ಆಚಾರ್ಯ ಹಾಗೂ ಮೈಸೂರಿನ ಡಾಕ್ಟರ್ ಶೆಲ್ವಪಿಳ್ಳೆ ಅಯ್ಯಂಗಾರ್ ಅವರು ಹೇಳಿದ್ದಾರೆ.
ಜನ ಸಾಮಾನ್ಯರು ಹೇಳೋ ಮಾತು ಅಂದ್ರೆ, ಗ್ರಹಣಗಳು ಮನುಷ್ಯರ ಮೇಲೆ ಪರಿಣಾಮ ಬೀರುತ್ತವೋ ಇಲ್ವೋ? ಆದ್ರೆ, ಪ್ರಕೃತಿ ಮೇಲೆ ಪರಿಣಾಮ ಬೀರೋದು ಪಕ್ಕಾ ಅಂತಾರೆ. ಅದಕ್ಕೆ ಕಾರಣ ಗ್ರಹಣ ಶುರುವಾಗುವ ಮುನ್ನ, ಇಲ್ಲವೇ ಗ್ರಹಣದ ನಂತರ ಭೂಕಂಪನ, ಸುನಾಮಿ, ಭೂಕುಸಿತ... ಸೇರಿದಂತೆ ನಾನಾ ರೀತಿಯ ಪ್ರಾಕೃತಿಕ ವಿಕೋಪಗಳು ಕಾಣಿಸಿಕೊಳ್ಳುತ್ತಾವೆ. ವಿಶೇಷ ಅಂದ್ರೆ, ಈ ಬಗ್ಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖವಿದೆ.
ಗ್ರಹಣ ಕಾಲದಲ್ಲಿನ ನಿಯಮವನ್ನ ಪಾಲಿಸೋದು ಬಿಡೋದು ಖಂಡಿತವಾಗಿಯೂ ಅವರವರ ವೈಯಕ್ತಿಕ ವಿಚಾರ. ಕೆಲವರು ಮೂಢ ನಂಬಿಕೆ ಅಂತ ನಿರ್ಲಕ್ಷ್ಯ ಮಾಡಿದ್ರೆ, ಇನ್ನು ಕೆಲವರು ಶಾಸ್ತ್ರ ಹೇಳ್ತಿದೆ ಅಂತ ಪಾಲನೆ ಮಾಡ್ತಾರೆ. ಆದ್ರೆ, ನಿಯಮ ಪಾಲನೆ ಮಾಡೋದ್ರಿಂದ ವ್ಯಕ್ತಿ ಕಳೆದುಕೊಳ್ಳುವುದು ಏನೂ ಇಲ್ಲ ಅನ್ನೋದನ್ನ ನಾವು ಅರಿತ್ಕೊಳ್ಳಬೇಕು. ಆದ್ರೆ, ಯಾಱರೋ ಏನೋನೋ ಹೇಳೋ ಮೂಢನಂಬಿಕೆಗಳ ಬಗ್ಗೆ ಮಾತ್ರ ಜಾಗ್ರತರಾಗಿ ಇರ್ಬೇಕು.
ಗ್ರಹಣ ಸಂದರ್ಭದಲ್ಲಿ ಜ್ಯೋತಿಷ್ಯ ಶಾಸ್ತ್ರ ಹೇಳೋದನ್ನು ಪಾಲಿಸಬೇಕಾ? ಪಾಲಿಸಬಾರದಾ? ಅನ್ನೋದ್ ಅವರವರ ವೈಯಕ್ತಿಕ ವಿಚಾರ. ಆದ್ರೆ, ಪ್ರಕೃತಿಯಲ್ಲಿ ಕೆಲವು ಬದಲಾವಣೆ ಆಗೋದ್ರಿಂದ ಮುಂಜಾಗೃತೆ ವಹಿಸೋದು ಒಳ್ಳೆಯದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.