/newsfirstlive-kannada/media/media_files/2025/09/05/chandra-grhana-2025-09-05-13-51-44.jpg)
ಸೆಪ್ಟೆಂಬರ್ 7ರಂದು ಭಾರತದಲ್ಲಿ ಖಗ್ರಾಸ ಚಂದ್ರಗ್ರಹಣ
ಇವತ್ತು ರಕ್ತಬಣ್ಣವಾಗ್ತಾನೆ ಚಂದ್ರ. ಇದು ಅಪಾಯವೇ? ಇದು ವರ್ಷಾಂತ್ಯದ ಖಗ್ರಾಸ ಚಂದ್ರಗ್ರಹಣ. ಯಾರಿಗೆ ಲಾಭ? ಶುರು ಎಲ್ಲಿಂದ? ಅಂತ್ಯ ಎಲ್ಲಿ? ಎಲ್ಲೆಲ್ಲಿ ಗೋಚರಿಸುತ್ತೆ ಗ್ರಹಣ? ಅನ್ನೋದರ ಫುಲ್ ಡೀಟೈಲ್ಸ್ ಈ ವರದಿಯಲ್ಲಿದೆ.
ಗ್ರಹಣ ಬಂತು ಅಂದ್ರೆ ಕೆಲವರಿಗೆ ಭಯ, ಇನ್ನು ಕೆಲವರಿಗೆ ಕುತೂಹಲ. ಕೆಲವರು ಶಾಸ್ತ್ರದಲ್ಲಿ ಹೇಳಿದ್ದ ಸಂಪ್ರದಾಯ ಪಾಲನೆ ಮಾಡಿದ್ರೆ, ಇನ್ನು ಕೆಲವರು ಅದೆಲ್ಲ ಮೂಢನಂಬಿಕೆ ಅಂತ ತಳ್ಳಿಹಾಕ್ತಾರೆ. ರಕ್ತಸಿಕ್ತವಾಗಿ ಕಾಣಿಸಿಕೊಳ್ಳುವ ಚಂದ್ರ ಕೇಡು ಮಾಡ್ತಾನಾ? ಅದಕ್ಕೆ ಪರಿಹಾರ ಏನು? ಅದೆಲ್ಲದ್ದಕ್ಕೂ ಜ್ಯೋತಿಷ್ಯ ಪಂಡಿತರು ನ್ಯೂಸ್‌ಫಸ್ಟ್‌ಗೆ ಉತ್ತರ ನೀಡಿದ್ದಾರೆ. ಅದನ್ನು ಇಲ್ಲಿ ವಿವರವಾಗಿ ತಿಳಿಸಿದ್ದೇವೆ.
ಇದನ್ನೂ ಓದಿ:ರಾಜ್ಯದಲ್ಲಿ 12.68 ಲಕ್ಷ ಆಕ್ರಮ ರೇಷನ್ ಕಾರ್ಡ್ ಪತ್ತೆ, 8 ಲಕ್ಷ ರೇಷನ್ ಕಾರ್ಡ್ ರದ್ದು ಸಾಧ್ಯತೆ
ಸೂರ್ಯ ಗ್ರಹಣ ಆಗಿರಲಿ, ಚಂದ್ರ ಗ್ರಹಣ ಆಗಿರಲಿ, ಗ್ರಹಣ ಅಂದ್ರೇನೆ ಒಂದ್ ರೀತಿಯ ಭಯ ಮನೆ ಮಾಡಿರುತ್ತೆ. ತಮ್ಮ ರಾಶಿ ನಕ್ಷತ್ರದ ಮೇಲೆ ಗ್ರಹಣ ದೃಷ್ಟಿ ಹೇಗಿರುತ್ತೋ ಏನೋ? ಲಾಭ ತರುತ್ತಾ ನಷ್ಟ ಉಂಟು ಮಾಡುತ್ತಾ? ಅನ್ನೋದು ಒಂದು ಪ್ರಶ್ನೆಯಾಗಿದ್ರೆ, ದೋಷ ಇದ್ರೆ ಹೇಗೆ ಪರಿಹಾರ ಮಾಡಿಕೊಳ್ಳಬೇಕು. ಎಚ್ಚರಿಕೆಯಿಂದ ಹೇಗೆ ಇರ್ಬೇಕು ಅನ್ನೋದ್ ಇನ್ನೊಂದ್ ಟೆನ್ಷನ್. ಆದ್ರೆ, ಎಲ್ಲದ್ದಕ್ಕೂ ಪರಿಹಾರ ಅನ್ನೋದು ಇದ್ದೇ ಇರುತ್ತೆ. ಅಷ್ಟಕ್ಕೂ ನಾವು ಗ್ರಹಣಗಳ ಬಗ್ಗೆ ಮಾತಾಡೋಕೆ ಕಾರಣ ಸೆಪ್ಟೆಂಬರ್ 7 ರಂದು ಕಾಣಿಸಿಕೊಳ್ಳುತ್ತಿರೋ ಖಗ್ರಾಸ ಚಂದ್ರಗ್ರಹಣ. ಅಂದು ರಕ್ತಸಿಕ್ತನಾಗಿ ಕಾಣಿಸಿಕೊಳ್ಳುವ ಚಂದ್ರ ಯಾವ ರೀತಿಯಲ್ಲಿ ಗೋಚರಿಸ್ತಾನೆ? ಯಾರಿಗೆ ಲಾಭ, ಯಾರ ಮೇಲೆ ದುಷ್ಪರಿಣಾಮ? ಮನೆಯಲ್ಲಿ ಯಾವ ನಿಯಮ ಪಾಲನೆ ಮಾಡ್ಬೇಕು? ಅದೆಲ್ಲವನ್ನೂ ನ್ಯೂಸ್‌ಫಸ್ಟ್‌ಗೆ ಧರ್ಮಶಾಸ್ತ್ರಜ್ಞರು ತೆರೆದಿಟ್ಟಿದ್ದಾರೆ. ಅದೆಲ್ಲವನ್ನು ಡಿಟೇಟ್ ಹೇಳುತ್ತೇವೆ.
ಭೂಮಿಯ ನೆರಳು ಚಂದ್ರನ ಮೇಲೆ ಬಿದ್ದಾಗ ಚಂದ್ರಗ್ರಹಣ!
ಭೂಮಿಯೂ ಸೂರ್ಯನ ಸುತ್ತ ಸುತ್ತಾ ಇರುವಾಗ ಒಂದೇ ಕಕ್ಷೆಯಲ್ಲಿ ಬಂದಿರೋ ಚಂದ್ರನ ಮೇಲೆ ಸೂರ್ಯನ ಕಿರಣಗಳು ಬೀಳದಂತೆ ಭೂಮಿ ತಡೆಯುತ್ತೆ. ಆವಾಗ ಭೂಮಿಯ ನೆರಳು ಚಂದ್ರನ ಮೇಲೆ ಬಿದ್ದಿರುತ್ತೆ. ಅಂತಾ ಸಂದರ್ಭದಲ್ಲಿ ಚಂದ್ರ ರಕ್ತ ಬಣ್ಣದಲ್ಲಿ ಕಂಗೊಳಿಸ್ತಾನೆ. ಹೀಗಾಗಿಯೇ ಬ್ಲಡ್ ಮೂನ್ ಅಂತ ಕರೆಯಲಾಗುತ್ತೆ. ಬ್ಲಡ್‌ಗೂ? ಚಂದ್ರನಿಗೂ? ಗ್ರಹಣಕ್ಕೂ ಯಾವುದೇ ಸಂಬಂಧವಿಲ್ಲ.
ಹಾಗೇ ಗ್ರಹಣಗಳು ಯಾಕೆ ನಡೆಯುತ್ತವೆ ಅನ್ನೋದಕ್ಕೆ ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಉಲ್ಲೇಖವಿದೆ. ರಾಹು, ಕೇತುಗಳ ಪ್ರಭಾವದಿಂದ ಹೀಗಾಗುತ್ತೆ ಅನ್ನೋದನ್ನ ಶಾಸ್ತ್ರ ಹೇಳುತ್ತೆ. ಸೆಪ್ಟೆಂಬರ್ 7 ರಂದು ಖಗ್ರಾಸ ಚಂದ್ರ ಗ್ರಹಣ ಭಾರತದಲ್ಲಿ ಕಾಣಿಸ್ಕೊಳ್ಳುತ್ತೆ. ಇದು ಈ ವರ್ಷದ ಎರಡನೇಯ ಮತ್ತು ಕೊನೆಯ ಚಂದ್ರಗ್ರಹಣ. ನಮ್ಮ ದೇಶದಲ್ಲಿ ಕಾಣಿಸ್ಕೊಳ್ಳುವ ಗ್ರಹಣಗಳನ್ನ ಮಾತ್ರ ನಾವು ಆಚರಣೆ ಮಾಡುತ್ತೇವೆ. ಕೆಲವು ಧಾರ್ಮಿಕ ನಿಯಮಗಳನ್ನ ಪಾಲನೆ ಮಾಡುತ್ತೇವೆ. ಖಗ್ರಾಸ ಚಂದ್ರಗ್ರಹಣ ಭಾರತ, ಚೀನಾ, ಮಂಗೋಲಿಯಾ, ರಷ್ಯಾದ ಕೆಲವು ಭಾಗ, ಮಲೇಷ್ಯಾ, ಸಿಂಗಾಪುರ, ಇಂಡೋನೇಷ್ಯಾ, ಶ್ರೀಲಂಕಾ, ಏಷ್ಯಾಖಂಡದ ವಿವಿಧ ರಾಷ್ಟ್ರಗಳು, ಆಫ್ರಿಕಾ ಖಂಡದ ಪೂರ್ವ ಭಾಗ, ಗಲ್ಫ್ ದೇಶಗಳು, ಆಸ್ಟ್ರೇಲಿಯಾದಲ್ಲೂ ಕಾಣಿಸಿಕೊಳ್ಳುತ್ತಾ ಇದೆ. ಹಾಗಾದ್ರೆ, ಭಾರತದಲ್ಲಿ ಯಾವ ಕಾಲಮಾನದಲ್ಲಿ ಕಾಣಿಸಿಕೊಳ್ಳುತ್ತೆ.
ಇದನ್ನೂ ಓದಿ:ಗುಡ್​ನ್ಯೂಸ್​.. SC ಒಳ ಮೀಸಲಾತಿ ಅಳವಡಿಸಿಕೊಂಡು ಸರ್ಕಾರದ ನೇಮಕಾತಿ ಸೂಚನೆ
/filters:format(webp)/newsfirstlive-kannada/media/media_files/2025/09/05/chandra-grhana02-2025-09-05-13-56-56.jpg)
ಖಗ್ರಾಸ ಚಂದ್ರಗ್ರಹಣ!
- ಗ್ರಹಣ ಸ್ಪರ್ಶ ಕಾಲ : ರಾತ್ರಿ 9.57
- ಗ್ರಹಣದ ಮಧ್ಯ ಕಾಲ: ರಾತ್ರಿ 11.41
- ಗ್ರಹಣ ಮೋಕ್ಷ ಕಾಲ: ತಡರಾತ್ರಿ 1.26
- ಗ್ರಹಣದ ಸಂಪೂರ್ಣ ಕಾಲಾವಧಿ: 3 ಗಂಟೆ 29 ನಿಮಿಷ
ಗ್ರಹಣ ಯಾವ ಗಳಿಗೆಯಲ್ಲಿ ಶುರುವಾಗುತ್ತೆ, ಯಾವ ನಕ್ಷತ್ರದಲ್ಲಿ ಶುರುವಾಗುತ್ತೆ ಅನ್ನೋದ್ರ ಮೇಲೆ ಉಳಿತು ಕೆಡುಕುಗಳ ಬಗ್ಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖವಾಗಿರುತ್ತೆ. ಹಾಗಾದ್ರೆ, ಈ ಬಾರಿ ಗ್ರಹಣ ಯಾವ ಕಾಲಮಾನದಲ್ಲಿ ನಡೆಯುತ್ತೆ ಅನ್ನೋದರ ಬಗ್ಗೆ ಧರ್ಮಶಾಸ್ತ್ರಜ್ಞರು ಹೇಳಿದ್ದಾರೆ.
ಚಂದ್ರ ಗ್ರಹಣಕ್ಕೂ ಮುನ್ನ ನೀವೇನು ಮಾಡ್ಬೇಕು?
ಗ್ರಹಣ ಬರುತ್ತೆ ಅಂದ್ರೆ ಸಾಕು ಮಹಿಳೆಯರಿಗೆ ಟೆನ್ಷನ್ ಶುರುವಾಗುತ್ತೆ. ಊಟ ಮಾಡ್ಬೇಕೋ ಬೇಡವೋ? ಮಾಡೋದಾದ್ರೆ ಎಷ್ಟು ಗಂಟೆಯೊಳಗೆ ಮಾಡಿಕೊಳ್ಳಬೇಕು? ಅನ್ನೋದೇ ದೊಡ್ಡ ಪ್ರಶ್ನೆಯಾಗಿರುತ್ತೆ. ಆದ್ರೆ, ನಾವು ಉತ್ತರ ಕೊಡ್ತೀವಿ. ರಾತ್ರಿ 9.57ಕ್ಕೆ ಗ್ರಹಣ ಸ್ಪರ್ಶಕಾಲ ಇರೋದ್ರಿಂದ ಮಧ್ಯಾಹ್ನ 1 ಗಂಟೆಯೊಳಗೆ ಊಟ ಮಾಡಿಕೊಂಡಿದ್ರೆ ಒಳ್ಳೆಯದು. ಅರೇ ಗ್ರಹಣ ಸ್ಟಾರ್ಟ್ ಆಗೋದು ರಾತ್ರಿ 9.57ಕ್ಕೆ, ಹೀಗಿದ್ದಾಗ ಊಟ ಯಾಕೆ ಅಷ್ಟೊಂದ್ ಮುಂಚಿತವಾಗಿ ಮಾಡ್ಬೇಕು ಅನ್ನೋ ಪ್ರಶ್ನೆ ಇರುತ್ತೆ. ಬಟ್, ಈ ಬಗ್ಗೆ ಜ್ಯೋತಿಷಿಗಳು ಹೇಳೋದ್ ಏನು ಅಂದ್ರೆ, ಗ್ರಹಣಕಾಲದಲ್ಲಿ ಶುದ್ಧವಾಗಿ ಇರಬೇಕು ಅನ್ನೋ ಹಿನ್ನೆಲೆಯಲ್ಲಿ ಹಾಗೇ ಹೇಳಲಾಗುತ್ತೆ ಅನ್ನೋ ಉತ್ತರಗಳು ಬರ್ತಾವೆ. ಹಾಗೇ ಯಾರು ಅನಾರೋಗ್ಯದ ವ್ಯಕ್ತಿಗಳು, ವಯಸ್ಸಾದವ್ರು, ಅಶಕ್ತರು ಇರ್ತಾರೋ? ಅವರಿಗೆ ಅನ್ವಯವಾಗೋದಿಲ್ಲ.
ಜಪಕ್ಕೆ ದೇವರ ಧ್ಯಾನಕ್ಕೆ ಗ್ರಹಣ ಕಾಲ ಸೂಕ್ತವೇ?
ಸಾಮಾನ್ಯವಾಗಿ ಜ್ಯೋತಿಷ್ಯ ಶಾಸ್ತ್ರ ನೋಡಲು ಬರುವವರಿಗೆ, ಭಾರತದಲ್ಲಿ ಕಾಣಿಸೋ ಪ್ರತಿಯೊಂದು ಗ್ರಹಣವನ್ನು ಶ್ರದ್ಧಾ ಭಕ್ತಿಯಿಂದ ಅಚ್ಚುಕಟ್ಟಾಗಿ ಮಾಡ್ತಾ ಇರೋರಿಗೆ ತಾವು ಹೇಗಿರಬೇಕು ಅನ್ನೋದು ಪಕ್ಕಾ ಗೊತ್ತಿರುತ್ತೆ. ಗ್ರಹಣ ಒಳ್ಳೆಯದೋ ಕೆಟ್ಟದ್ದೋ? ಅನ್ನೋ ಗೊಂದಲ ಭಾವನೆ ಸಾಮಾನ್ಯವಾಗಿ ಇದ್ದೆ ಇರುತ್ತೆ. ಸಾಮಾನ್ಯವಾಗಿ ಏನಾದ್ರೂ ಕೆಟ್ಟದಾಯ್ತು ಅಂದ್ರೆ ಗ್ರಹಣ ಹಿಡೀತು ಅಂತಾರೆ. ಜೀವನದಲ್ಲಿ ಕತ್ತಲೆ ದೂರವಾಗಿ ಬೆಳಕು ಬಂತು ಅಂತಾದ್ರೆ ಗ್ರಹಣ ಬಿಡ್ತು ಅಂತಾ ಹೇಳ್ತಾರೆ. ಹೀಗಾಗಿ ಗ್ರಹಣ ಅಂದ್ರೆ ಜನರ ಮನಸ್ಸಿನಲ್ಲಿ ಕೆಟ್ಟದು ಅಂತನೇ ತೀರ್ಮಾನವಾಗಿ ಬಿಟ್ಟಿದೆ. ಆದ್ರೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅದು ಕೆಲವೊಂದು ಕಾರ್ಯಕ್ಕೆ ಪುಣ್ಯ ಕಾಲ.
ನೀವೇನು ಮಾಡಬೇಕು?
ಮಧ್ಯಾಹ್ನ ಒಂದು ಗಂಟೆಗೂ ಮುನ್ನ ಊಟ ಮಾಡಿಕೊಂಡಿದ್ರೆ ಒಳ್ಳೆಯದು. ಒಂದ್ ವೇಳೆ ಅನಾರೋಗ್ಯದ ವ್ಯಕ್ತಿಗಳಾಗಿದ್ರೆ, ಅಶಕ್ತ ವ್ಯಕ್ತಿಗಳಾಗಿದ್ರೆ ಕನಿಷ್ಟ ಗ್ರಹಣಕ್ಕೂ ಮನ್ನ ಎರಡ್ಮೂರು ಗಂಟೆಗೆ ಮುನ್ನವಾದ್ರೂ ಊಟ ಮಾಡಿ. ಗ್ರಹಣ ಸ್ಪರ್ಶವಾಗೋ ಮುನ್ನ ಸ್ನಾನ ಮಾಡಿ ಜಪಕ್ಕೆ ಸಿದ್ಧರಾಗಿ, ಗುರುವಿನಿಂದ ದೀಕ್ಷೆ ಪಡೆದ ಜಪವನ್ನ ಗ್ರಹಣಕಾಲದಲ್ಲಿ ಮಾಡಿ, ಗ್ರಹಣಕಾಲದಲ್ಲಿ ಮಾಡಿದ 1 ಜಪ, ಉಳಿದ ಸಂದರ್ಭದಲ್ಲಿ ಮಾಡೋ 10 ಸಾವಿರ ಜಪಕ್ಕೆ ಸಮಾನವಾಗುತ್ತೆ. ಹಾಗೇ ಗ್ರಹಣ ಕಾಲದಲ್ಲಿ ಮಾಡೋ ಜಪಕ್ಕೆ ಬೇಗ ವರ ಸಿದ್ಧಿಯಾಗುತ್ತೆ ಅನ್ನೋ ನಂಬಿಕೆ ಇದೆ.
ಇದನ್ನೂ ಓದಿ:ಕೆಂಪುಕೋಟೆ ಆವರಣದಲ್ಲಿ 1.5 ಕೋಟಿ ಮೌಲ್ಯದ ಚಿನ್ನದ ಕಳಸಗಳು ಕಳ್ಳತನ..! VIDEO
ಗ್ರಹಣಕಾಲದಲ್ಲಿ ಏನ್ ಮಾಡ್ಬೇಕು? ಏನನ್ನ ಮಾಡ್ಬಾರದು? ಅನ್ನೋದೇ ಜನರಿಗೆ ಗೊತ್ತಿರೋದಿಲ್ಲ. ಕೆಲವರು ಜಪ ಮಾಡೋದಕ್ಕೂ ಹಿಂದೇಟು ಹಾಕ್ತಾರೆ. ಆದ್ರೆ, ಜಪ ಮಾಡೋದು ಒಳ್ಳೆಯದು, ಹಾಗೇ ಅದಕ್ಕೆ ಫಲ ಬೇಗ ಸಿಗುತ್ತೆ ಅನ್ನೋದನ್ನ ಜ್ಯೋತಿಷ್ಯ ಹೇಳುತ್ತೆ. ಗ್ರಹಣಕ್ಕೂ ಮುನ್ನ ಹೇಗೆ ನಿಯಮ ಪಾಲನೆ ಮುಖ್ಯವಾಗುತ್ತೋ? ಹಾಗೇ ಗ್ರಹಣ ನಂತರವೂ ನಿಯಮ ಪಾಲನೆ ಮುಖ್ಯವಾಗುತ್ತೆ. ಅದ್ರಲ್ಲಿಯೂ ಕೆಲವು ರಾಶಿ ನಕ್ಷತ್ರದವ್ರು ಭಾರೀ ಎಚ್ಚರಿಕೆಯಿಂದ ಇರಬೇಕಾಗುತ್ತೆ. ಚಂದ್ರಗ್ರಹಣಕ್ಕೂ ಮುನ್ನ ಶಾಸ್ತ್ರದಲ್ಲಿರೋ ನಿಯಮ ಏನು ಅನ್ನೋದನ್ನ ಹೇಳಿದ್ದೇವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us