newsfirstkannada.com

RCB ಫ್ಲೇ ಆಫ್​ಗೆ ಎಂಟ್ರಿ ಕೊಡುತ್ತೋ, ಇಲ್ವೋ.. ಫ್ಯಾನ್ಸ್​ಗಾಗಿ ಶಪಥಗೈದ ಕಿಂಗ್ ಕೊಹ್ಲಿ!

Share :

Published May 2, 2024 at 1:42pm

    ಕಪ್​ ನಮ್ದೇ ಅಂತಾ ಸ್ಟೇಡಿಯಂಗೆ ಬಂದ ಫ್ಯಾನ್ಸ್​ಗೆ​​ ತೀವ್ರ ನಿರಾಸೆ

    ಹ್ಯಾಟ್ರಿಕ್​ ಸೋಲು ಅಭಿಮಾನಿಗಳ ವಲಯದಲ್ಲಿ ಬೇಸರಕ್ಕೆ ಕಾರಣ

    ಬೆಂಗಳೂರು ಟೀಮ್​ ಎದುರಿರೋ ಆ ಮೂರು ಚಾಲೆಂಜ್​ಗಳೇನು?

ಸತತ 2 ಪಂದ್ಯ ಗೆದ್ದ ಹುರುಪಿನಲ್ಲಿರೋ ಆರ್​​ಸಿಬಿ ಮುಂದೆ ಇದೀಗ ಬಿಗ್​ ಚಾಲೆಂಜ್​ ಎದುರಾಗಿದೆ. ಈಗಾಗಲೇ ಹೋಮ್​​ಗ್ರೌಂಡ್​ನಲ್ಲಿ ಹ್ಯಾಟ್ರಿಕ್​ ಸೋಲುಂಡು ಆರ್​​ಸಿಬಿ ಅವಮಾನಕ್ಕೆ ಒಳಗಾಗಿದೆ. ಫ್ಯಾನ್ಸ್​ ನಿರಾಶರಾಗಿದ್ದಾರೆ. ಮುಂದಿನ 3 ಪಂದ್ಯಗಳಲ್ಲಿ ಆ ನಿರಾಸೆಗೆ ಬ್ರೇಕ್​ ಹಾಕಲು ಚಿನ್ನಸ್ವಾಮಿಯ ಚಿನ್ನ ಪಣ ತೊಟ್ಟಿದ್ದಾರೆ. ಅಭಿಮಾನಿಗಳಿಗಾಗಿ ಕಿಂಗ್​ ಕೊಹ್ಲಿ ಶಪಥಗೈದಿದ್ದಾರೆ.

ಈ ಸೀಸನ್​ ಐಪಿಎಲ್​ನಲ್ಲಿ ಆರ್​​ಸಿಬಿ ಫ್ಲೇ ಆಫ್​ಗೆ ಎಂಟ್ರಿ ಕೊಡುತ್ತೋ, ಇಲ್ವಾ ಅನ್ನೋದು ಮಿಲಿಯನ್​ ಡಾಲರ್​ ಪ್ರಶ್ನೆಯಾಗಿದೆ. ಉಳಿದ ಪಂದ್ಯಗಳನ್ನ ಗೆದ್ರೂ ಕೂಡ ಪ್ಲೇ ಆಫ್​ ಡೋರ್​ ಓಪನ್​ ಆಗಬೇಕಂದ್ರೆ, ಅದೃಷ್ಟ ಕೈ ಹಿಡಿಯಬೇಕಿದೆ. ಇಡೀ ಆರ್​​ಸಿಬಿ ಕ್ಯಾಂಪ್​ ಸದ್ಯ ಅದೃಷ್ಟದ ಹುಡಕಾಟದಲ್ಲಿದೆ.

ಇದನ್ನೂ ಓದಿ: ಕರೆಂಟ್​ ಕಂಬಕ್ಕೆ ಕ್ರೂಸರ್​ ವಾಹನ ಭಯಾನಕ ಡಿಕ್ಕಿ.. ಸ್ಥಳದಲ್ಲೇ 3 ಸಾವು, ಇಬ್ಬರು ಗಂಭೀರ

ಹೋಮ್​​ಗ್ರೌಂಡ್​ನಲ್ಲಿ ಹ್ಯಾಟ್ರಿಕ್​ ಮುಖಭಂಗ.!

ಈ ಸೀಸನ್​ ಐಪಿಎಲ್​ನಲ್ಲಿ ಆರ್​​ಸಿಬಿ ಟೀಮ್​ ಹೋಮ್​​ಗ್ರೌಂಡ್​ನಲ್ಲಿ ಹೀನಾಯ ಪರ್ಫಾಮೆನ್ಸ್​​ ನೀಡಿದೆ. ಕಪ್​ ನಮ್ದೇ ಅಂತಾ ಸ್ಟೇಡಿಯಂಗೆ ಬಂದ ಫ್ಯಾನ್ಸ್​​ ತೀವ್ರ ನಿರಾಸೆಗೆ ಒಳಗಾಗಿದ್ದಾರೆ. ಚಿನ್ನಸ್ವಾಮಿಯಲ್ಲಿ ಈ ಸೀಸನ್​ನಲ್ಲಿ ಆಡಿದ ಮೊದಲ ಪಂದ್ಯ ಗೆದ್ದಿದ್ದು ಬಿಟ್ರೆ, ಉಳಿದ ಪಂದ್ಯಗಳಲ್ಲಿ ಸೋಲಿಗೆ ಶರಣಾಗಿದೆ. ಹ್ಯಾಟ್ರಿಕ್​ ಸೋಲಿನ ಮುಖಭಂಗ ಅಭಿಮಾನಿಗಳ ವಲಯದಲ್ಲಿ ಬೇಸರಕ್ಕೆ ಕಾರಣವಾಗಿದೆ.

ಅಭಿಮಾನಿಗಳಿಗಾಗಿ ಪಣ ತೊಟ್ಟ ಕಿಂಗ್​ ಕೊಹ್ಲಿ.!

ಹೈದ್ರಾಬಾದ್​ ಬಳಿಕ ಗುಜರಾತ್​ನಲ್ಲಿ ಭರ್ಜರಿ ಗೆಲುವು ಸಾಧಿಸಿದ ರಾಯಲ್​ ಚಾಲೆಂಜರ್ಸ್​, ಬೆಂಗಳೂರಿಗೆ ವಾಪಾಸ್ಸಾಗಿದೆ. ಹೋಮ್​ಗ್ರೌಂಡ್​​ ಚಿನ್ನಸ್ವಾಮಿ ಮೈದಾನದಲ್ಲಿ, ಮುಂದಿನ 3 ಪಂದ್ಯಗಳನ್ನ ಆಡಲಿದೆ. ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿರೋ ತಂಡ ಅಭ್ಯಾಸವನ್ನೂ ಆರಂಭಿಸಿದೆ. ಇದ್ರ ನಡುವೆ ಚಿನ್ನಸ್ವಾಮಿ ಚಿನ್ನ ಕಿಂಗ್​ ಕೊಹ್ಲಿ ಫ್ಯಾನ್ಸ್​ಗಾಗಿ ಶಪಥಗೈದಿದ್ದಾರೆ. ಹ್ಯಾಟ್ರಿಕ್​ ಸೋಲಿನ ನಿರಾಸೆ ಅನುಭವಿಸಿರೋ ಲಾಯಲ್​ ಫ್ಯಾನ್ಸ್​ ಬೇಸರಕ್ಕೆ ಬ್ರೇಕ್ ಹಾಕಲು ಕಿಂಗ್​ ಕೊಹ್ಲಿ ಮುಂದಾಗಿದ್ದಾರೆ.

ಚಿನ್ನಸ್ವಾಮಿಯಲ್ಲಿ ಚಿನ್ನದಂತಾ ಇನ್ನಿಂಗ್ಸ್​ ಕಟ್ಟೋ ಹಠ..!

ಈ ಸೀಸನ್​ನಲ್ಲಿ ಚಿನ್ನಸ್ವಾಮಿ ಮೈದಾನದಲ್ಲಿ ಆರ್​​ಸಿಬಿ ಹೀನಾಯ ಪರ್ಫಾಮೆನ್ಸ್​​ ನೀಡಿದ್ದಾಗಿದೆ. ಕೆಕೆಆರ್​​, ಲಕ್ನೋ ಸೂಪರ್​ ಜೈಂಟ್ಸ್​​, ಸನ್​ರೈಸರ್ಸ್​ ಹೈದ್ರಾಬಾದ್​ ಮೂರೂ ತಂಡಗಳ ಎದುರು ಸೋಲಿಗೆ ಶರಣಾಗಿದೆ. ಹ್ಯಾಟ್ರಿಕ್​ ಸೋಲು ಕಂಡಿರುವ ಆರ್​​ಸಿಬಿ ಮುಂದೆ ಇದೀಗ ಮತ್ತೆ ಮೂರು ಸವಾಲುಗಳಿವೆ. ಆ ಸವಾಲುಗಳಲ್ಲಿ ಫ್ಯಾನ್ಸ್​ಗೆ ಗೆಲುವಿನ ಗಿಫ್ಟ್​​ ನೀಡಲು ಕೊಹ್ಲಿ ಪಣತೊಟ್ಟಿದ್ದಾರೆ. ಚಿನ್ನಸ್ವಾಮಿಯಲ್ಲಿ ಚಿನ್ನದಂತಾ ಇನ್ನಿಂಗ್ಸ್​ ಕಟ್ಟೋ ಲೆಕ್ಕಾಚಾರದಲ್ಲಿದ್ದಾರೆ. ಇದಕ್ಕಾಗಿ ಭರ್ಜರಿ ಅಭ್ಯಾಸ ಆರಂಭಿಸಿದ್ದಾರೆ.

ಇದನ್ನೂ ಓದಿ: ಸಚಿವ ಜಮೀರ್ ಅಹ್ಮದ್​​ಗೆ ಬಿಗ್ ಶಾಕ್​.. ಬೆಂಗಳೂರಿನ ಆಪ್ತನ ಮನೆ ಮೇಲೆ IT ದಾಳಿ​

ಕೊಹ್ಲಿ ಏನೋ ಅಭಿಮಾನಿಗಳಿಗಾಗಿ ತಂಡವನ್ನ ಗೆಲ್ಲಿಸಲು ಪಣ ತೊಟ್ಟಿದ್ದಾರೆ. ಆದ್ರೆ, ಅದು ಅಷ್ಟು ಸುಲಭದ ಟಾಸ್ಕ್​ ಅಲ್ಲ. ಬೌಲಿಂಗ್​ ವೈಫಲ್ಯ, ಬ್ಯಾಟಿಂಗ್​ ಇನ್​​ಕನ್ಸಿಸ್ಟೆನ್ಸಿ, ಕಳಪೆ ಫೀಲ್ಡಿಂಗ್​​ನ ಸಮಸ್ಯೆ ಆರ್​​​ಸಿಬಿಯನ್ನ ಕಾಡ್ತಿದೆ. ಆದ್ರೆ, ಆರ್​​ಸಿಬಿ ಎದುರಿಸೋ​​ ಗುಜರಾತ್​ ಟೈಟನ್ಸ್​, ಡೆಲ್ಲಿ ಕ್ಯಾಪಿಟಲ್ಸ್​, ಚೆನ್ನೈ ಸೂಪರ್​​ ಕಿಂಗ್ಸ್​​ ಈ ಮೂರೂ ತಂಡಗಳು ಬಲಿಷ್ಟವಾಗಿವೆ. ಆದ್ರೂ, ಕೊಹ್ಲಿ ಸಖತ್​ ಕಾನ್ಫಿಡೆಂಟ್​​​ ಆಗಿದ್ದಾರೆ. ಇದಕ್ಕೆ ಕಾರಣ ಇಲ್ಲಿ ನೀಡಿರುವ ಪರ್ಫಾಮೆನ್ಸ್​​.!

ಬೆಂಗಳೂರಿನಲ್ಲಿ ಕೊಹ್ಲಿ ಬೊಂಬಾಟ್​ ಪ್ರದರ್ಶನ

ಈ ಸೀಸನ್​ನಲ್ಲಿ ಚಿನ್ನಸ್ವಾಮಿ ಮೈದಾನದಲ್ಲಿ 3 ಪಂದ್ಯದಲ್ಲಿ ಆರ್​​ಸಿಬಿ ಸೋಲಿಗೆ ಶರಣಾಗಿದೆ. ಆದ್ರೆ, ಕಿಂಗ್​ ಕೊಹ್ಲಿ ಮಾತ್ರ ಬೊಂಬಾಟ್​ ಪರ್ಫಾಮೆನ್ಸ್​ ನೀಡಿದ್ದಾರೆ. ಚಿನ್ನಸ್ವಾಮಿ ಮೈದಾನ ಕೊಹ್ಲಿಯ ಕಿಂಗ್​ಡಮ್​ ಅನ್ನೋದನ್ನ ಪರ್ಫಾಮೆನ್ಸೇ ಸಾರಿ ಸಾರಿ ಹೇಳ್ತಿದೆ.

ಇದನ್ನೂ ಓದಿ: ಸಲ್ಮಾನ್​ ಖಾನ್ ನಿವಾಸದ ಮೇಲೆ ಫೈರಿಂಗ್ ಮಾಡಿದ್ದ ಓರ್ವ ವ್ಯಕ್ತಿ ಜೈಲಲ್ಲಿ ಆತ್ಮಹತ್ಯೆ.. ಏನಾಯಿತು ಗೊತ್ತಾ? 

ಚಿನ್ನಸ್ವಾಮಿ ಮೈದಾನದಲ್ಲಿ ಕೊಹ್ಲಿ

ಚಿನ್ನಸ್ವಾಮಿ ಮೈದಾನದಲ್ಲಿ ಈ ಸೀಸನ್​ನಲ್ಲಿ 4 ಪಂದ್ಯವನ್ನಾಡಿರುವ ಕೊಹ್ಲಿ 74.66ರ ಸರಾಸರಿಯಲ್ಲಿ 224 ರನ್​ ಸಿಡಿಸಿದ್ದಾರೆ. 23 ಬೌಂಡರಿ, 9 ಸಿಕ್ಸರ್​​​ ಸಿಡಿಸಿರುವ ಕೊಹ್ಲಿಯ ಸ್ಟ್ರೈಕ್​ರೇಟ್​​ 155.55 ಆಗಿದೆ.

ಇದನ್ನೂ ಓದಿ: ಹಾಸನ ಅಶ್ಲೀಲ ವಿಡಿಯೋ ಕೇಸ್​; ಇದು ದುರದೃಷ್ಟಕರ.. ಇನ್ನೇನು ಹೇಳಿದರು ನಟಿ ಶ್ರುತಿ?

ಕೊಹ್ಲಿ ಬೊಂಬಾಟ್​ ಪ್ರದರ್ಶನ ನೀಡಿದ್ದಾರೆ. ಆದ್ರೆ, ಅದರ ಹೊರತಾಗಿಯು ಆರ್​​ಸಿಬಿ ಚಿನ್ನಸ್ವಾಮಿ ಅಂಗಳದಲ್ಲಿ ಸೋತಿದೆ. ಮುಂದಿನ 3 ಪಂದ್ಯಗಳಲ್ಲಿ ಕೊಹ್ಲಿ ಸಾಲಿಡ್​ ಆಟವಾಡಿದ್ರೂ, ಉಳಿದ ಆಟಗಾರರು ಪರ್ಫಾಮ್​ ಮಾಡಬೇಕಿದೆ. ಇಲ್ಲದಿದ್ರೆ, ಅಭಿಮಾನಿಗಳಿಗೆ ನಿರಾಸೆ ಕಟ್ಟಿಟ್ಟ ಬುತ್ತಿಯೇ ಆಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

RCB ಫ್ಲೇ ಆಫ್​ಗೆ ಎಂಟ್ರಿ ಕೊಡುತ್ತೋ, ಇಲ್ವೋ.. ಫ್ಯಾನ್ಸ್​ಗಾಗಿ ಶಪಥಗೈದ ಕಿಂಗ್ ಕೊಹ್ಲಿ!

https://newsfirstlive.com/wp-content/uploads/2024/04/VIRAT_KOHLI_RCB-1.jpg

Load More