newsfirstkannada.com

ಕೊಹ್ಲಿ ಬ್ಯಾಟಿಂಗ್ ಸ್ಟ್ರೈಕ್​ ರೇಟ್​ ಟೀಕೆಗೆ ಖಡಕ್ ಉತ್ತರ.. ಮಾಜಿ ಕ್ಯಾಪ್ಟನ್ ಏನಂದ್ರು?​

Share :

Published May 5, 2024 at 6:21pm

    ವಿರಾಟ್ ಒಳ್ಳೆಯ ಪ್ರದರ್ಶನ ನೀಡುತ್ತಿದ್ದರು ಪಂದ್ಯ ಸೋಲು

    ಐಪಿಎಲ್​ ಟೂರ್ನಿಯಲ್ಲಿ ಆರೆಂಜ್ ಕ್ಯಾಪ್ ಪಡೆದಿರೋ ಕೊಹ್ಲಿ

    ಕೊಹ್ಲಿ ಬ್ಯಾಟಿಂಗ್ ಸ್ಟ್ರೈಕ್ ರೇಟ್ ಅನ್ನು ಟೀಕಿಸ್ತಿರುವ ಕೆಲವರು

ವಿರಾಟ್​ ಕೊಹ್ಲಿ ಕ್ರೀಸ್​ಗೆ ಬಂದರೆ ಸಾಕು ರನ್​ಗಳು ನಿರಂತರವಾಗಿ ಬರುತ್ತಿರುತ್ತಾವೆ. ಸಿಕ್ಸ್ ಬಾರಿಸುವುದು ಕಡಿಮೆ ಆದರೂ ರನ್​ಗೆ ಏನು ಬರ ಇರುವುದಿಲ್ಲ. ಆದ್ರೆ ವಿರಾಟ್ ಬ್ಯಾಟಿಂಗ್​ ಸ್ಟ್ರೈಕ್ ರೇಟ್ ಬಗ್ಗೆ ಹಲವರು ಮಾಜಿ ಕ್ರಿಕೆಟರ್ಸ್ ಹಾಗೂ ಇತರೆ ಜನ ಟೀಕೆ ಮಾಡುತ್ತಿರುತ್ತಾರೆ. ಸದ್ಯ ಇದಕ್ಕೆ ಪಾಕಿಸ್ತಾನದ ಮಾಜಿ ಕ್ಯಾಪ್ಟನ್​ ವಾಸಿಂ ಅಕ್ರಂ ಅವರು ಕಿಂಗ್ ಕೊಹ್ಲಿಯ ಸ್ಟ್ರೈಕ್ ರೇಟ್ ಅನ್ನು ಸಮರ್ಥಿಸಿಕೊಂಡಿದ್ದಾರೆ.

ಸದ್ಯ ಐಪಿಎಲ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಅದ್ಭುತ ಬ್ಯಾಟಿಂಗ್​ನಿಂದ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ. ಟೂರ್ನಿಯಲ್ಲಿ ಅತ್ಯಂತ ಹೆಚ್ಚು ರನ್ ಬಾರಿಸಿದ್ದರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೆಲ ಸವಾಲುಗಳನ್ನು ಎದುರಿಸುತ್ತಿದೆ. ಫ್ಲೇ ಆಫ್​ಗೆ ಹೋಗುತ್ತೋ, ಇಲ್ವೋ ಎನ್ನುವುದು ಇನ್ನು ಪ್ರಶ್ನೆಯಾಗಿಯೇ ಉಳಿದಿದೆ. ಇದೇ ಕೊಹ್ಲಿ ಬ್ಯಾಟಿಂಗ್ ಪ್ರದರ್ಶನದ ಸುತ್ತಲಿನ ಚರ್ಚೆಗೆ, ಟೀಕೆಗೆ ಕಾರಣವಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಧೋನಿ ಡಕೌಟ್​.. CSKಯನ್ನು ಅಲ್ಪಮೊತ್ತಕ್ಕೆ ಕಟ್ಟಿ ಹಾಕಿದ ಪಂಜಾಬ್ ಬೌಲರ್ಸ್; ಎಷ್ಟು ಟಾರ್ಗೆಟ್?

ಇದನ್ನೂ ಓದಿ: ಕೊಹ್ಲಿ ಕ್ರಿಕೆಟರ್​ ಆಗದಿದ್ರೆ, ಏನಾಗ್ತಿದ್ರು.. ಈ ಕುತೂಹಲದ ಪ್ರಶ್ನೆಗೆ ವಿರಾಟ್​ ಹೇಳಿದ್ದೇನು? 

ಪಾಕ್​ನ​ ವಾಸಿಂ ಅಕ್ರಂ, ಕೊಹ್ಲಿ ಬ್ಯಾಟಿಂಗ್​ನ ಸಮರ್ಥಿಸಿಕೊಂಡಿದ್ದು, ವಿರಾಟ್ ಕೊಹ್ಲಿ ನಾಯಕ ಆಗದಿದ್ದರೂ ಪಂದ್ಯದ ನಡೆಯುವಾಗ ಆರ್​ಸಿಬಿ ತಂಡದ ಒತ್ತಡವನ್ನು ಅವರ ಮೇಲೆ ಉಳಿಯುತ್ತಿದೆ. 148 ಸ್ಟ್ರೈಕ್​ ರೇಟ್​ನಲ್ಲಿ ಕೊಹ್ಲಿ ಬ್ಯಾಟಿಂಗ್ ಮಾಡುವುದು ತಪ್ಪು ಎನ್ನುವುದು ಸರಿಯಲ್ಲ. ಯಾವುದೇ ಬ್ಯಾಟ್ಸ್​​ಮನ್ ಆಗಲಿ ಸೆಂಚುರಿ ಸಿಡಿಸುವಾಗ 150 ಸ್ಟ್ರೈಕ್ ರೇಟ್‌ ಇದ್ರೆ ಒಳ್ಳೆಯದು. ಒಂದು ವೇಳೆ ತಂಡ ಗೆಲ್ಲುತ್ತಿದ್ದರೇ ಇದನ್ನು ಯಾರು ಟೀಕೆ ಮಾಡುತ್ತಿರಲಿಲ್ಲ ಎಂದಿದ್ದಾರೆ.

ಇದನ್ನೂ ಓದಿ: T20 ವಿಶ್ವಕಪ್​ ಆರಂಭಕ್ಕೂ ಮೊದಲೇ ವಿಘ್ನ.. ಕ್ಯಾಪ್ಟನ್​ ರೋಹಿತ್​ ಶರ್ಮಾ ಇಂಜುರಿಗೆ ಒಳಗಾದ್ರಾ?

ಒಂದು ಮ್ಯಾಚ್​​ನಲ್ಲಿ ವಿಫಲವಾದರೆ, ಇನ್ನೊಂದು ಪಂದ್ಯದಲ್ಲಿ ವಿರಾಟ್ ಕೊಹ್ಲಿ ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಆದರೆ ಒಬ್ಬ ಬ್ಯಾಟ್ಸ್​ಮನ್​ನಿಂದ ಪಂದ್ಯ ಗೆಲ್ಲಲು ಸಾಧ್ಯವಿಲ್ಲ. ಗೆಲುವಿಗಾಗಿ ಇಡೀ ಟೀಮ್ ಶ್ರಮಿಸಬೇಕಿದೆ. ಬೌಲರ್ಸ್​ಗಳ ಒಳ್ಳೆಯ ಆಟವು ಇಲ್ಲಿ ಮುಖ್ಯವಾಗುತ್ತದೆ. ಹೀಗಾಗಿ ಯಾವುದೇ ಕಾರಣ ವಿಲ್ಲದೇ ಕೊಹ್ಲಿಯನ್ನು ಟೀಕಿಸುವುದು ಸರಿಯಲ್ಲ. ಅವರ ಕೆಲಸವನ್ನು ಅವರು ಸರಿಯಾಗಿ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕೊಹ್ಲಿ ಬ್ಯಾಟಿಂಗ್ ಸ್ಟ್ರೈಕ್​ ರೇಟ್​ ಟೀಕೆಗೆ ಖಡಕ್ ಉತ್ತರ.. ಮಾಜಿ ಕ್ಯಾಪ್ಟನ್ ಏನಂದ್ರು?​

https://newsfirstlive.com/wp-content/uploads/2024/05/VIRAT_KOHLI-2.jpg

Load More